• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಸಿನಿಮೀಯ ಮಾದರಿಯಲ್ಲಿ ಛತ್ತೀಸ್​ಘಡದ 7 ತಿಂಗಳ ಮಗುವನ್ನು ಮಧ್ಯಪ್ರದೇಶದಲ್ಲಿ ರಕ್ಷಿಸಿದ ಪೊಲೀಸರು

ಸಿನಿಮೀಯ ಮಾದರಿಯಲ್ಲಿ ಛತ್ತೀಸ್​ಘಡದ 7 ತಿಂಗಳ ಮಗುವನ್ನು ಮಧ್ಯಪ್ರದೇಶದಲ್ಲಿ ರಕ್ಷಿಸಿದ ಪೊಲೀಸರು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಸಂತ್ರಸ್ತ ದಂಪತಿಯನ್ನು ಭೇಟಿಯಾಗಿದ್ದರು. ಹಣಕಾಸಿನ ಸಹಾಯ ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ನೀಡುವುದಾಗಿ ಅವರಿಗೆ ಯಾಮಾರಿಸಿದ್ದರು, ರೀಟಾ ಯಾದವ್ ಪುಷ್ಪೇಂದ್ರನ ಸಹಾಯದಿಂದ ಇಶಾಕ್ ಬೆ ಮತ್ತು ಅವಳ ಮಗುವನ್ನು ಸಿಐಎಂಎಸ್‌ ಆಸ್ಪತ್ರೆಗೆ ಕರೆದೊಯ್ದು ಅಂತಿಮವಾಗಿ ಮಗುವಿನೊಂದಿಗೆ ತಪ್ಪಿಸಿಕೊಂಡಿದ್ದರು.

ಮುಂದೆ ಓದಿ ...
  • Share this:

     ಬಿಲಾಸಪುರ ಜಿಲ್ಲೆಯ ಛತ್ತೀಸ್‌ಗಡ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ (ಸಿಐಎಂಎಸ್) ಕಳವಾದ ಏಳು ತಿಂಗಳ ಮಗುವನ್ನು ಮಧ್ಯಪ್ರದೇಶದ ಉಮಾರಿಯಾ ಜಿಲ್ಲೆಯ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಕ್ಕಳ ಕಳ್ಳರಿಂದ ರಕ್ಷಿಸಲಾಗಿದೆ. ಈ ಪ್ರಕರಣದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಛತ್ತೀಸ್‌ಗಡ ಪೊಲೀಸರು ಭಾನುವಾರ ತಿಳಿಸಿದ್ದಾರೆ.

    ಪ್ರಮುಖ ಆರೋಪಿ ರೀಟಾ ಯಾದವ್, ಸಿಐಎಂಎಸ್ ನಿಂದ ಗಂಡು ಮಗುವನ್ನು ಅಪಹರಿಸಿ ತನ್ನ ಗೆಳೆಯನನ್ನು ಭೇಟಿ ಮಾಡಲು ದೆಹಲಿಗೆ ಪ್ರಯಾಣಿಸುತ್ತಿದ್ದಳು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಧ್ಯಪ್ರದೇಶದ ಉಮಾರಿಯಾ ರೈಲ್ವೇ ನಿಲ್ದಾಣದಿಂದ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಸಹಾಯದಿಂದ ಬಿಲಾಸ್ಪುರ್ ಜಿಲ್ಲೆಯ ರೀಟಾ ಯಾದವ್ ಅವರನ್ನು ಬಂಧಿಸಿ ಬಿಲಾಸ್ಪುರ್ ಪೊಲೀಸರು ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ನಿಮೇಶ್ ಬರಯ್ಯ ಸುದ್ದಿಗಾರರಿಗೆ ತಿಳಿಸಿದರು . ಬಂಧಿತ ಇನ್ನಿಬ್ಬರನ್ನು ಯಾದವ್‌ನ ಗೆಳೆಯ ಪುಷ್ಪೇಂದ್ರ ಮತ್ತು ಒಬ್ಬ ಹೇಮಾ ಕೌಶಿಕ್ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದರು.


    ರಕ್ಷಿಸಿದ ಮಗುವನ್ನು ಆತನ ಪೋಷಕರಾದ ಇಶಕ್ ಬಿ ಮತ್ತು ಶಫರ್ ಶಾಗೆ ಹಸ್ತಾಂತರಿಸಲಾಗಿದೆ ಎಂದು ಎಎಸ್ಪಿ ಯಾದವ್ ಅವರು ಹೇಳಿದರು. ಈಗಾಗಲೇ ಮದುವೆಯಾಗಿದ್ದ ರೀಟಾ, ಪುಷ್ಪೇಂದ್ರ ಮತ್ತು ಮುಂಬೈ ನಿವಾಸಿಯಾದ ಸಾಹಿಲ್ ಜೊತೆ ಸಂಬಂಧ ಹೊಂದಿದ್ದಳು "ಅವಳು ಸಾಹಿಲ್‌ನಿಂದ ತಾನು ಮಗುವನ್ನು ಪಡೆದಿರುವುದಾಗಿ ಸುಳ್ಳು ಹೇಳಿದ್ದಳು, ನಂತರ ಆಕೆಯನ್ನು ದೆಹಲಿಗೆ ಬರುವಂತೆ ಅವನು ಹೇಳಿದ್ದನು.


    ನಂತರ ರೀಟಾ ಯಾದವ್ ಮಗುವನ್ನು ಹುಡುಕಲು ಆರಂಭಿಸಿದ್ದಳು (ಸಾಹಿಲ್ ನನ್ನು ಮನವೊಲಿಸಲು ಇದೆಲ್ಲಾ ಮಾಡಿದ್ದಳು) ಮತ್ತು ಸಂತ್ರಸ್ತ ದಂಪತಿಯನ್ನು ಭೇಟಿಯಾಗಿದ್ದರು. ಹಣಕಾಸಿನ ಸಹಾಯ ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ನೀಡುವುದಾಗಿ ಅವರಿಗೆ ಯಾಮಾರಿಸಿದ್ದರು, ರೀಟಾ ಯಾದವ್ ಪುಷ್ಪೇಂದ್ರನ ಸಹಾಯದಿಂದ ಇಶಾಕ್ ಬೆ ಮತ್ತು ಅವಳ ಮಗುವನ್ನು ಸಿಐಎಂಎಸ್‌ ಆಸ್ಪತ್ರೆಗೆ ಕರೆದೊಯ್ದು ಅಂತಿಮವಾಗಿ ಮಗುವಿನೊಂದಿಗೆ ತಪ್ಪಿಸಿಕೊಂಡಿದ್ದರು. "ಘಟನೆಯ ಹಿನ್ನೆಲೆಯಲ್ಲಿ ಬಿಲಾಸ್ಪುರ್ ಪೊಲೀಸರಿಗೆ ದೂರು ನೀಡಲಾಗಿತ್ತು ಮತ್ತು ಶೋಧ ಆರಂಭಿಸಲಾಯಿತು , "ಎಂದು ಪೊಲೀಸ್​ ಅಧಿಕಾರಿ ಬರಯ್ಯ ಹೇಳಿದರು.


    ಆಗಸ್ಟ್ 21 ರಂದು ಮಗುವಿನೊಂದಿಗೆ ರೀಟಾ ಯಾದವ್ ದೆಹಲಿಗೆ ತೆರಳುತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕಿತು ಎಂದು ಪೊಲೀಸರು ಹೇಳಿದರು.  ಸಿಐಎಂಎಸ್ ಮತ್ತು ಇತರ ಸಾಕ್ಷ್ಯಗಳು ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಪೊಲೀಸರು ಪುಷ್ಪೇಂದ್ರ ಮತ್ತು ಹೇಮಾ ಅವರನ್ನು ಹಿಡಿದಿದ್ದಾರೆ.


    ಇವರಿಬ್ಬರು ನೀಡಿದ ಮಾಹಿತಿಯ ಆಧಾರದ ಮೇಲೆ, ಆರ್​ಪಿಎಫ್​ ಸಹಾಯದಿಂದ ಪೋಲಿಸ್ ತಂಡವು ಮಧ್ಯಪ್ರದೇಶದ ಉಮರಿಯಾ ಜಿಲ್ಲೆಯಲ್ಲಿ ರೀಟಾ ಯಾದವ್ ನನ್ನು ರೈಲಿನಿಂದ ಬಂಧಿಸಲಾಗಿದೆ ಎಂದು ಖಚಿತಪಡಿಸಿತು ಮಗುವನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು, "ಎಂದು ಎಎಸ್ಪಿ ಹೇಳಿದರು. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.


    ಇದನ್ನೂ ಓದಿ: ಸಿಎಎ ಜಾರಿಗೆ ಇದೇ ಸರಿಯಾದ ಸಮಯ; ಆಫ್ಘನ್​ ಸಿಖ್​ ಮತ್ತು ಹಿಂದುಗಳಿಗೆ ಉಪಯೋಗ ಎಂದ ಕೇಂದ್ರ ಸಚಿವ


    ಮಧ್ಯಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದಂತೆ ಉಮರಿಯಾ ಆರ್‌ಪಿಎಫ್ ಸಿಬ್ಬಂದಿ ಮಹಿಳೆಯನ್ನು (ಯಾದವ್) ಹಿಡಿದು ವಿಚಾರಿಸಿದಾಗ, ಅವರು ಸರಿಯಾದ ಉತ್ತರ ನೀಡಲು ಸಾಧ್ಯವಾಗಲಿಲ್ಲ ಆಗ ಅನುಮಾನ ಬಂದು ಮಗುವಿನೊಂದಿಗೆ ರೈಲಿನಿಂದ ಕೆಳಗಿಳಿಸಲಾಯಿತು. ನಂತರ ಬಾಯಿ ಬಿಡಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.


    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

    Published by:HR Ramesh
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು