HOME » NEWS » National-international » POLICE RELEASE FIRST PHOTO OF MURDER ACCUSED OLYMPIAN SUSHIL KUMAR AFTER ARREST IN MURDER CASE SKTV

Olympian Arrest: ಬಂಧನದ ನಂತರ ಕುಸ್ತಿಪಟು Sushil Kumar ಮೊದಲ ಚಿತ್ರ ಬಿಡುಗಡೆ

ಸಾಗರ್ ರಾಣಾ ಕೊಲೆ ಪ್ರಕರಣದಲ್ಲಿ ಸುಶೀಲ್ ಕುಮಾರ್ ಕಳೆದ ಕೆಲವು ದಿನಗಳಿಂದ ಪರಾರಿಯಾಗಿದ್ದರು. ಆತನನ್ನು ಸೆರೆಹಿಡಿಯುವುದಕ್ಕಾಗಿ ಪೊಲೀಸರು ಬಹುಮಾನವನ್ನೂ ಘೋಷಿಸಿದ್ದರು. ಸುಶೀಲ್ ಕುಮಾರ್ ಸುಳಿವು ನೀಡಿದವರಿಗೆ ಒಂದು ಲಕ್ಷ ರೂಪಾಯಿ ಮತ್ತು ಅಜಯ್ ಕುಮಾರ್ ಸುಳಿವು ಕೊಟ್ಟವರಿಗೆ 50,000 ರೂಪಾಯಿ ಬಹುಮಾನ ಘೋಷಿಸಲಾಗಿತ್ತು.

Soumya KN | news18-kannada
Updated:May 23, 2021, 2:27 PM IST
Olympian Arrest: ಬಂಧನದ ನಂತರ ಕುಸ್ತಿಪಟು Sushil Kumar ಮೊದಲ ಚಿತ್ರ ಬಿಡುಗಡೆ
ಸುಶೀಲ್ ಕುಮಾರ್
  • Share this:
ನವದೆಹಲಿ: ಒಲಿಂಪಿಕ್ ಕುಸ್ತಿಪಟು ಸುಶೀಲ್ ಕುಮಾರ್​ನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೋಲೀಸರು ನಿನ್ನೆ ಬಂಧಿಸಿದ್ದಾರೆ. ಬಂಧನದ ನಂತರ ಇದೇ ಮೊದಲ ಬಾರಿಗೆ ಸುಶೀಲ್ ಕುಮಾರ್ ಚಿತ್ರವನ್ನು ಪೋಲೀಸರು ಬಿಡುಗಡೆ ಮಾಡಿದ್ದಾರೆ. ದೆಹಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ 23 ವರ್ಷದ ಸಾಗರ್ ರಾಣಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಬಂಧನಕ್ಕೊಳಗಾಗಿದ್ದಾರೆ. ದೆಹಲಿ ಪೋಲೀಸರು ಪಂಜಾಬಿನಲ್ಲಿ ಸುಶೀಲ್ ಕುಮಾರ್​ನ್ನು ಬಂಧಿಸಿದ್ದು ಆತನ ಖಾಸಗಿ ಕಾರ್ಯದರ್ಶಿ ಅಜಯ್ ಕುಮಾರ್ ಕೂಡಾ ಅರೆಸ್ಟ್ ಆಗಿದ್ದಾರೆ. ಪಂಜಾಬ್ ಮತ್ತು ಹರಿಯಾಣದಲ್ಲಿ ಪೋಲೀಸರು ಸುಶೀಲ್ ಕುಮಾರ್​ಗಾಗಿ ಹುಡುಕಾಡುತ್ತಿದ್ದರು. ಬಂಧನದ ನಂತರ ಅವರ ಮೊದಲ ಚಿತ್ರವನ್ನೂ ಬಿಡುಗಡೆ ಮಾಡಿದ್ದಾರೆ. ಮಾಸ್ಕ್ ಧರಿಸಿದ ಆರೋಪಿ ಸುಶೀಲ್ ಕುಮಾರ್ ಚಿತ್ರ ಎಲ್ಲೆಡೆ ಹರಿದಾಡುತ್ತಿದೆ.

ಸಾಗರ್ ರಾಣಾ ಕೊಲೆ ಪ್ರಕರಣದಲ್ಲಿ ಸುಶೀಲ್ ಕುಮಾರ್ ಕಳೆದ ಕೆಲವು ದಿನಗಳಿಂದ ಪರಾರಿಯಾಗಿದ್ದರು. ಆತನನ್ನು ಸೆರೆಹಿಡಿಯುವುದಕ್ಕಾಗಿ ಪೊಲೀಸರು ಬಹುಮಾನವನ್ನೂ ಘೋಷಿಸಿದ್ದರು. ಸುಶೀಲ್ ಕುಮಾರ್ ಸುಳಿವು ನೀಡಿದವರಿಗೆ ಒಂದು ಲಕ್ಷ ರೂಪಾಯಿ ಮತ್ತು ಅಜಯ್ ಕುಮಾರ್ ಸುಳಿವು ಕೊಟ್ಟವರಿಗೆ 50,000 ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಸಾಗರ್ ರಾಣಾ ಹತ್ಯೆಯಾದಾಗಿನಿಂದ ಕುಸ್ತಿಪಟು ಸುಶೀಲ್ ಕುಮಾರ್ ಪರಾರಿಯಲ್ಲಿದ್ದರು.

ಇದನ್ನೂ ಓದಿ: Corona Lockdown: ಬೆನ್ಜ್ ಕಾರ್, ಹಲಸಿನಕಾಯಿ ಬೈಕ್, ಎಲ್ಲಾ ಸೀಜ್ ! ಭಾನುವಾರ ಬೀದಿ ಸುತ್ತೋರಿಗೆ ಪೋಲೀಸರ ಟ್ರೀಟ್ಮೆಂಟ್ ಹೇಗಿದೆ ನೋಡಿ !

ಆತನ ಮತ್ತು ಇತರ ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿತ್ತು. ಜಾಮೀನು ರಹಿತ ವಾರಂಟ್ ಹೊರಡಿಸಿದ ನಂತರ ಸುಶೀಲ್ ಕುಮಾರ್ ಮತ್ತು ಅವರ ಸಹಚರರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ ಎಂದು ಪೊಲೀಸರು ಊಹಿಸಿದ್ದರು. ಅದೇ ಸಮಯದಲ್ಲಿ, ಸುಶೀಲ್ ಕುಮಾರ್ ಬಂಧನವನ್ನು ತಪ್ಪಿಸಲು ನ್ಯಾಯಾಲಯದಲ್ಲಿ ಆಂಟಿಸಿಪೇಟರಿ ಬೇಲ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಸುಶೀಲ್ ಕುಮಾರ್ ಅವರ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು.


ಕೊಲೆಯ ಆ ದಿನ ನಡೆದಿದ್ದೇನು?

ಕುಸ್ತಿಪಟು ಸಾಗರ್ ರಾಣಾ ತನ್ನ ಸ್ನೇಹಿತರೊಂದಿಗೆ ಛತ್ರಸಾಲ್ ಕ್ರೀಡಾಂಗಣದ ಬಳಿಯ ಮಾಡೆಲ್ ಟೌನ್ ಪ್ರದೇಶದ ಮನೆಯಲ್ಲಿ ವಾಸಿಸುತ್ತಿದ್ದ. ಸ್ಥಳದ ವಿಚಾರವಾಗಿ ಮೇ 4ರ ಮಧ್ಯರಾತ್ರಿ ಎರಡು ಗುಂಪುಗಳ ನಡುವೆ ಜಗಳ ಮತ್ತು ಗುಂಡಿನ ಚಕಮಕಿ ನಡೆದಿತ್ತು. ಆ ಸಮಯದಲ್ಲಿ ಸುಶೀಲ್ ಕುಮಾರ್ ಕೂಡ ಹಾಜರಿದ್ದರು ಎಂದು ಸಂತ್ರಸ್ತರು ಹೇಳಿದ್ದಾರೆ.ಗಾಯಗೊಂಡ ಕುಸ್ತಿಪಟುಗಳಲ್ಲಿ ಸಾಗರ್ ರಾಣಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರೆ, ಇತರರು ಗಾಯಗೊಂಡಿದ್ದಾರೆ. ಘಟನಾ ಸ್ಥಳದಿಂದ ಪೊಲೀಸರು ಸ್ಕಾರ್ಪಿಯೋ ಕಾರು ಮತ್ತು ಬಂದೂಕು ಮತ್ತು ಲೈವ್ ಕಾರ್ಟ್ರಿಜ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಹಿಂದೆಯೂ ಕುಸ್ತಿಪಟುಗಳ ಗುಂಪು ಆಸ್ತಿಯ ಬಗ್ಗೆ ಸಾಕಷ್ಟು ವಿವಾದ ಸೃಷ್ಟಿಸಿತ್ತು ಎನ್ನಲಾಗಿದೆ.


Youtube Videoಎರಡು ವೈಯಕ್ತಿಕ ಒಲಿಂಪಿಕ್ ಪದಕಗಳನ್ನು ಗೆದ್ದ ಏಕೈಕ ಭಾರತೀಯ ಕ್ರೀಡಾಪಟು ಸುಶೀಲ್ ಕುಮಾರ್. 37 ವರ್ಷದ ಸುಶೀಲ್ ಕುಮಾರ್ ಅವರು 2012 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಮತ್ತು 2008 ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. 2008 ರಲ್ಲಿ ಸುಶೀಲ್ ಕುಮಾರ್  ಗೆದ್ದ ಪದಕವು ಖಶಾಬಾ ಜಾಧವ್ ನಂತರ ಒಲಿಂಪಿಕ್ಸ್‌ನಲ್ಲಿ ಕುಸ್ತಿಯಲ್ಲಿ ಭಾರತ ಗೆದ್ದ ಎರಡನೇ ಪದಕವಾಗಿದೆ. ಅವರಿಗೆ 2009 ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಲಾಗಿದೆ.


Published by: Soumya KN
First published: May 23, 2021, 1:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories