Shocking News: ಹೊರಗೆ ಮಸಾಜ್ ಪಾರ್ಲರ್, ಒಳಗೆ 'ಆ' ದಂಧೆ! ಮಾಡೆಲ್‌ ಆಗೋಕೆ ಬಂದವರು ಮೈ ಮಾರಿಕೊಂಡರು!

ಮಾಡೆವ್ ಆಗಬೇಕು, ಸಿನಿಮಾದಲ್ಲಿ ಮಿಂಚಬೇಕು ಅಂತ ಹಲವು ಯುವತಿಯರು ಕನಸು ಕಾಣುತ್ತಿರುತ್ತಾರೆ. ಅಂಥವರನ್ನೇ ಈ ಕಿರಾತಕರು ಟಾರ್ಗೆಟ್ ಮಾಡುತ್ತಿದ್ದರು. “ನಿಮ್ಮನ್ನು ಮಾಡೆಲ್‌ಗಳನ್ನಾಗಿ ಮಾಡ್ತೀವಿ, ಮಾಡೆಲಿಂಗ್ ಜೊತೆಗೆ ಬಣ್ಣದ ಜಗತ್ತನ್ನೂ ಆಳಬಹುದು” ಅಂತ ಆಸೆ ಹುಟ್ಟಿಸಿ ಗಾಳ ಹಾಕುತ್ತಿದ್ದರು. ಅವರ ಮಾತನ್ನು ನಂಬಿ ಇಲ್ಲಿ ಬಂದ್ರೆ ನಡೆಯುತ್ತಾ ಇದ್ದುದ್ದೇ ಬೇರೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತಮಿಳುನಾಡು: ಅವರೆಲ್ಲ ಇನ್ನೂ ಹದಿ ಹರೆಯದ ಯುವತಿಯರು (Teenage girls), ಮಾಡೆಲ್‌ಗಳಾಗಿ (Model) ಮಿಂಚಬೇಕು, ಮಾಡೆಲಿಂಗ್‌ನಲ್ಲಿ (Modeling) ಸಾಕಷ್ಟು ಹೆಸರು ಮಾಡಬೇಕು, ಕ್ಯಾಟ್‌ ವಾಕ್ (Cat Walk), ರ್ಯಾಂಪ್ ವಾಕ್ (Ramp Walk) ಮಾಡಿ ಸುದ್ದಿಯಾಗಬೇಕು ಅಂತ ಕನಸು ಕಂಡವರು. ಅಂಥವರನ್ನೇ ಈ ಕಿರಾತಕರು ಟಾರ್ಗೆಟ್ (Target)  ಮಾಡುತ್ತಿದ್ದರು. “ನಿಮ್ಮನ್ನು ಮಾಡೆಲ್‌ಗಳನ್ನಾಗಿ ಮಾಡ್ತೀವಿ, ಮಾಡೆಲಿಂಗ್ ಜೊತೆಗೆ ಬಣ್ಣದ ಜಗತ್ತನ್ನೂ ಆಳಬಹುದು” ಅಂತ ಆಸೆ ಹುಟ್ಟಿಸಿ ಗಾಳ ಹಾಕುತ್ತಿದ್ದರು. ಅವರ ಮಾತನ್ನು ನಂಬಿ ಇಲ್ಲಿ ಬಂದ್ರೆ ನಡೆಯುತ್ತಾ ಇದ್ದುದ್ದೇ ಬೇರೆ! ಹಾಗಿದ್ರೆ ಏನಿದು ವಿಚಿತ್ರ ಕಥೆ? ಈ ಘಟನೆ ನಡೆದಿರುವುದು ಎಲ್ಲಿ? ಮಾಡೆಲ್ ಆಗುವುದಕ್ಕೆ ಅಂತ ಬಂದ ಹುಡುಗಿಯರು ಏನಾದರು? ಇಲ್ಲಿದೆ ನೋಡಿ ನೀವು ಬೆಚ್ಚಿ ಬೀಳುವ ಸ್ಟೋರಿ, ಮಾಡೆಲ್‌ಗಳಾಗಬೇಕು ಅಂತ ಕನಸು ಕಾಣುವವರು ಒಮ್ಮೆ ಓದಲೇ ಬೇಕಾದ ಸುದ್ದಿ…

 ಮಹಾನಗರದಲ್ಲಿ ಬಹುದೊಡ್ಡ ಸೆಕ್ಸ್ ರಾಕೆಟ್

ತಮಿಳುನಾಡಿನ ಚೆನ್ನೈನಲ್ಲಿ ಬಿಗ್ ಸೆಕ್ಸ್ ರಾಕೆಟ್‌ ಜಾಲವನ್ನು ಪೊಲೀಸರ ಭೇದಿಸಿದ್ದಾರೆ. ತೆನಾಂಪೇಟೆಯ ಪಂಚತಾರಾ ಹೋಟೆಲ್‌ನಲ್ಲಿ ದಾಳಿ ನಡೆಸಿ ವೇಶ್ಯಾವಾಟಿಕೆ ಜಾಲ ಪತ್ತೆ ಮಾಡಿದ್ದಾರೆ. ಪೊಲೀಸರು ಇಬ್ಬರು ಪಿಂಪ್‌ಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ತಿರುಮುಲ್ಲೈ ವೋಯಲ್ ನಿವಾಸಿ ಸೆಂಥಿಲ್ ಮತ್ತು ಕೊಟ್ಟಿವಕ್ಕಂ ನಿವಾಸಿ ಸರವಣನ್ ಎಂದು ಗುರುತಿಸಲಾಗಿದೆ. ಇನ್ನು ಇವರೊಂದಿಗೆ ಶಾಮೀಲಾಗಿದ್ದ ದೆಹಲಿ ಮೂಲದ ಸೂರಜ್ ಮಲ್ಹೋತ್ರಾ ಮತ್ತು ರಾಹುಲ್ ಎಂಬುವರು ನಾಪತ್ತೆಯಾಗಿದ್ದಾರೆ.

ನೀವು ಮಾಡೆಲ್‌ಗಳಾಗಿ ಮಿಂಚಬೇಕಾ? ಹಾಗಿದ್ರೆ ಇಲ್ಲಿ ಬನ್ನಿ…

ಮಾಡೆಲಿಂಗ್ ಹಾಗೂ ಸಿನಿಮಾದಲ್ಲಿ ಅವಕಾಶ ನೀಡುತ್ತೇನೆ ಎಂದು ಮಹಿಳೆಯರನ್ನು ಕರೆದುತಂದು ಅವರನ್ನು ದಂಧೆಗೆ ದೂಡಲಾಗುತ್ತಿತ್ತು.  ತಮಿಳು ಸಿನಿಮಾದಲ್ಲಿ ಪ್ರಮುಖ ಪಾತ್ರಗಳ ಭರವಸೆ ನೀಡಿ ದೆಹಲಿ ಸೇರಿದಂತೆ ವಿವಿಧ ನಗರಕ್ಕೆ ಕರೆತಂದ ಮಹಿಳೆಯರನ್ನು, ವೇಶ್ಯಾವಾಟಿಕೆಗೆ ಬಳಸಿಕೊಳ್ಳುತ್ತಿದ್ದರು.

ಇದನ್ನೂ ಓದಿ: Breaking News: ಭಾರತದ ಮೇಲೆ ಕ್ಷಿಪಣಿ ದಾಳಿಗೆ ಸಜ್ಜಾಗಿತ್ತಾ ಪಾಕಿಸ್ತಾನ? ಇಲ್ಲಿದೆ ನೋಡಿ shocking ರಿಪೋರ್ಟ್

ಅದು ಹೊರಗಿನಿಂದ ನೋಡಿದರೆ ಸ್ಪಾ, ಮಸಾಜ್ ಸೆಂಟರ್!

ಇದು ಅಂಥದ್ದೇ ಮತ್ತೊಂದು ಕೇಸ್. ಚೆನ್ನೈ ನಗರದ ವೆಲಾಚೇರಿ ಪ್ರದೇಶದಲ್ಲಿ ಸುಸಜ್ಜಿತ ಬಿಲ್ಡಿಂಗ್ ಒಂದಿತ್ತು. ಅದರಲ್ಲಿ ಸ್ಪಾ, ಮಸಾಜ್ ಪಾರ್ಲರ್ ಅಂತ ಬೋರ್ಡ್ ಹಾಕಲಾಗಿತ್ತು. ಸ್ಪಾ ಸೆಂಟರ್‌ ಸೋಗಿನಲ್ಲಿ ಅಲ್ಲಿ ಬೇರೆಯದ್ದೇ ನಡೆಯುತ್ತಾ ಇತ್ತು.

ಹೊರಗೆ ಸ್ಪಾ, ಒಳಗಡೆ ವೇಶ್ಯಾವಾಟಿಕೆ ಅಡ್ಡೆ!

ತುಂಬಾ ದಣಿದಿದ್ದೀನಿ, ಮೈ ಕೈ ಎಲ್ಲಾ ನೋವಾಗಿದೆ. ಸ್ವಲ್ಪ ಮಸಾಜ್‌ ಮಾಡಿಸ್ಕೊಂಡು ರಿಲ್ಯಾಕ್ಸ್ ಆಗೋಣ ಅಂತ ನೀವೇನಾದ್ರೂ  ಆ ಸ್ಪಾಗೆ ಹೋದ್ರೋ ಅಲ್ಲಿ ಒಳಕ್ಕೆ ನಡೆಯುತ್ತಾ ಇದ್ದೀದ್ದೇ ಬೇರೆಯಾಗಿತ್ತು. ಯಾಕೆಂದ್ರೆ ಅಲ್ಲಿ ಒಳಗೆ ವೇಶ್ಯಾವಾಟಿಕೆ ನಡೆಸಲಾಗ್ತಾ ಇತ್ತು.

ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರಿಂದ ದಾಳಿ

ತಮಿಳುನಾಡಿ ಚೆನ್ನೈ ನಗರದ ವೆಲಾಚೇರಿ ಪ್ರದೇಶದಲ್ಲಿ ಸ್ಪಾ ಸೆಂಟರ್‌ನ ಸೋಗಿನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಪೊಲೀಸರು ಭೇದಿಸಿದ್ದಾರೆ.  ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ರೇಡ್ ಮಾಡಿದ್ದಾರೆ. ಈ ವೇಳೆ ಅಲ್ಲಿದ್ದ ಮೂವರು  ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.

ಇಬ್ಬರು ಕಿಂಗ್ ಪಿನ್‌ಗಳ ಬಂಧನ

ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರು ಇಬ್ಬರು ಕಿಂಗ್ ಪಿನ್‌ಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಸ್ಪಾ ಮ್ಯಾನೇಜರ್, 30 ವರ್ಷದ ಎಂ ಮೊಹಮ್ಮದ್ ಅಸಿಮ್  ಹಾಗೂ ನಿತ್ಯನ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಪೊಲೀಸರು, ಅಲ್ಲಿದ್ದ ಮೂವರು ಮಹಿಳೆಯರನ್ನು ಸರ್ಕಾರಿ ರಕ್ಷಣಾ ಗೃಹಕ್ಕೆ ಕಳುಹಿಸಿದ್ದಾರೆ.

ಇದನ್ನೂ ಓದಿ: Bengaluru: ಮದುವೆಯಾಗುವಂತೆ ಕೇಳಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟು ಕೊಂದೇ ಬಿಟ್ಟ!

ಉದ್ಯೋಗ ಹುಡುಕಿಕೊಂಡು ಬಂದ ಮಹಿಳೆಯರೇ ಟಾರ್ಗೆಟ್

ಬೇರೆ ಬೇರೆ ನಗರ, ಹಳ್ಳಿಗಳಿಂದ ಕೆಲಸ ಹುಡುಕಿಕೊಂಡು ಬರುವ ಮಹಿಳೆಯರು, ಎಳೆ ವಯಸ್ಸಿನ ಯುವತಿಯರೇ ಈ ಕಿರಾತಕರ ಟಾರ್ಗೆಟ್ ಆಗಿದ್ದರು. ಅವರ ಸ್ನೇಹ ಸಂಪಾದಿಸಿ, ಅವರನ್ನು ನಂಬಿಸಿ, ಕೆಲಸ ಕೊಡಿಸುವುದಾಗಿ ಕರೆದೊಯ್ಯುತ್ತಿದ್ದರು. ಬಳಿಕ ಬೆದರಿಸಿ, ಆಮಿಷವೊಡ್ಡಿ ಅವರನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳುತ್ತಿದ್ದರು ಎನ್ನುವುದು ವಿಚಾರಣೆ ವೇಳೆ ತಿಳಿದು ಬಂದಿದೆ.
Published by:Annappa Achari
First published: