Accident: Audi ಕಾರಿನಲ್ಲಿ ಪೊಲೀಸ್​ ಮಗನ ಹುಚ್ಚಾಟ: ಓರ್ವ ಸವಾರ ಸಾವು, ಹಲವರಿಗೆ ಗಾಯ

Car Accident : ಇನ್ನೂ ಅಪಘಾತವಾಗುತ್ತಿದ್ದಂತೆ ಆಡಿ ಕಾರನ್ನು ಸಾರ್ವಜನಿಕರು ಸುತ್ತುವರೆದಿದ್ದರು. ಯಾವ ಕಡೆಯಿಂದಲೂ ಎಸ್ಕೇಪ್​ ಆಗದಂತೆ ಲಾಕ್​ ಮಾಡಿಕೊಂಡಿದ್ದರು. ಕಾರ್​ನಿಂದ ಕೆಳಗಿಳಿದ ಜಾಯಿದಿಗೆ ಸಾರ್ವಜನಕರು ತರಾಟೆಗೆ ತೆಗೆದುಕೊಂಡರು.

ಅಪಘಾತದ ದೃಶ್ಯ

ಅಪಘಾತದ ದೃಶ್ಯ

 • Share this:
  ದೊಡ್ಡವರ ಮಕ್ಕಳಿಗೆ ಬಡವರು(Poor People) ಅಥವಾ ಅವರಿಗಿಂತ ಕೆಳ ಹಂತದಲ್ಲಿ ಜೀವನ ನಡೆಸುತ್ತಿರುವವರನ್ನ ಕಂಡರೆ ಅಸಡ್ಡೆ. ಬಡವರ ಪ್ರಾಣಕ್ಕೆ ನಿಜಕ್ಕೂ ಈ ಜಗತ್ತಿನಲ್ಲಿ ಬೆಲೆ ಇಲ್ವಾ?  ಶ್ರೀಮಂತರ ಮಕ್ಕಳು ಏನೇ ತಪ್ಪು ಮಾಡಿದರು ನಡೆಯುತ್ತಾ? ಅವರ ಹುಚ್ಚಾಟಕ್ಕೆ ಕೊನೆಯೆ ಇಲ್ವಾ? ಹಲವಾರು ಅಪಘಾತ(Accident) ಪ್ರಕರಣಗಳೇ ಇದಕ್ಕೆ ಸಾಕ್ಷಿ. ಶ್ರೀಮಂತ(Rich)ರ ಮಕ್ಕಳು ಅಥವಾ ಪ್ರಭಾವಿಗಳ ಮಕ್ಕಳು ಅಪಘಾತ ಮಾಡಿ, ಸಾಮಾನ್ಯರ ಬದುಕನ್ನು ಕಸಿದುಬಿಡುತ್ತಾರೆ. ಆದರೆ ಅವರ ಮೇಲೆ ಮಾತ್ರ ಯಾವುದೇ ಕೇಸ್​ ಆಗದೆ ಪೊಲೀಸರು(Police) ಬಿಟ್ಟು ಕಳುಹಿಸಿತ್ತಾರೆ. ಅಪಘಾತವಾದಾಗ ಅವರು ಗಾಡಿ ಚಾಲನೆ ಮಾಡುತ್ತಿರಲಿಲ್ಲ ಎಂದು ಹೇಳಿ ಡ್ರೈವರ್(Driver)​ನನ್ನ ಜೈಲಿಗೆ ಹಾಕಿ ಕೇಸ್(Case)​ ಕ್ಲೋಸ್(Close)​ ಮಾಡುತ್ತಾರೆ ಪೊಲೀಸರು.

  ಆದರೆ ರಾಜಸ್ಥಾನ(Rajasthan)ದಲ್ಲಿ ಪೊಲೀಸ್​ ಅಧಿಕಾರಿಯ ಮಗನೊಬ್ಬ ಅಪಘಾತ ಮಾಡಿ ಸಾರ್ವಜನಿಕರ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ. ತನ್ನ ಆಡಿ(Audi)ಕಾರನ್ನು ಅತಿ ವೇಗ(Over speed)ದಿಂದ ಓಡಿಸಿ ಅಪಘಾತ ಮಾಡಿದ್ದಾನೆ. ಘಟನೆಯಲ್ಲಿ ಸ್ಕೂಟಿ(Scootu) ಓಡಿಸಿಕೊಂಡು ಹೋಗುತ್ತಿದ್ದ ಸವಾರ ಮೃತಪಟ್ಟಿದ್ದಾನೆ. ಇನ್ನೂ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಅತಿ ವೇಗದ ಚಾಲನೆಯಿಂದಲೇ ಅಪಘಾತ
  ರಾಜಸ್ಥಾನದ ಜೋಧ್​ಪುರದ ಚೊಪ್ಸಾನಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸ್​ ಇನ್ಸ್​ಪೆಕ್ಟರ್​ ಜುಲ್ಫಿಕರ್ ಅಲಿ ಎಂಬಾತನ ಮಗ ಜಾಯಿದಿ ಆಡಿ ಕಾರಿನಲ್ಲಿ ತನ್ನ ಇಬ್ಬರು ಸ್ನೇಹಿತರ ಜತೆ ಜಾಲಿ ರೈಡ್​ ಮಾಡುತ್ತಿದ್ದ. ಇದೇ ವೇಳೆ ಹಿಂದೆ ಸೀಟಿನಲ್ಲಿ ಕೂತಿದ್ದ ಸ್ನೇಹಿತರು ಆಡಿ ಕಾರನ್ನು ಇಷ್ಟು ನಿಧಾನವಾಗಿ ಚಲಿಸಿದರೇ ಹೇಗೆ ಇನ್ನೂ ಸ್ವಲ್ಪ ವೇಗವಾಗಿ ಓಡಿಸು ಎಂದು ಜಾಯಿದಿಗೆ ಹೇಳಿದ್ದಾರೆ. ಸ್ನೇಹಿತರ ಮಾತು ಕೇಳಿ ಜಾಯಿದಿ ಜನನಿಬಿಡ ಪ್ರದೇಶದಲ್ಲಿ ವೇಗದಿಂದ ಕಾರು ಓಡಿಸಿದ್ದಾನೆ. ಇದೇ ವೇಳೆ ನಿಯಂತ್ರಣ ತಪ್ಪಿ ಹಿಂದೆಯಿಂದ ಸ್ಕೂಟಿ ಹಾಗೂ ಬುಲೆಟ್​ ಗಾಡಿಗೆ ಗುದ್ದಿದ್ದಾನೆ. ಗುದ್ದಿದ ರಭಸಕ್ಕೆ ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನು ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ.

  ಇದನ್ನೂ ಓದಿ: ಎರಡು ವಾರದ ಬಳಿಕ ಏರಿಕೆ ಕಾಣದ ತೈಲ ಬೆಲೆ; ನಿಮ್ಮ ಜಿಲ್ಲೆಯಲ್ಲಿ ಇಂದು ಬೆಲೆ ಎಷ್ಟು?

  ಪೊಲೀಸ್​ ಮಗನ ಕಪಾಳಕ್ಕೆ ಬಾರಿಸಿದ ಮಹಿಳೆ
  ಇನ್ನೂ ಅಪಘಾತವಾಗುತ್ತಿದ್ದಂತೆ ಆಡಿ ಕಾರನ್ನು ಸಾರ್ವಜನಿಕರು ಸುತ್ತುವರೆದಿದ್ದರು. ಯಾವ ಕಡೆಯಿಂದಲೂ ಎಸ್ಕೇಪ್​ ಆಗದಂತೆ ಲಾಕ್​ ಮಾಡಿಕೊಂಡಿದ್ದರು. ಕಾರ್​ನಿಂದ ಕೆಳಗಿಳಿದ ಜಾಯಿದಿಗೆ ಸಾರ್ವಜನಕರು ತರಾಟೆಗೆ ತೆಗೆದುಕೊಂಡರು. ಇದರಲ್ಲಿ ಮಹಿಳೆಯೊಬ್ಬಳು ಆತನ ಕಪಾಳಕ್ಕೆ ಬಾರಿಸಿ ನಿಮ್ಮಂತವರಿಂದಲೇ ಈ ದೇಶ ಹಾಳಾಗುತ್ತಿದೆ. ನಿಧನವಾಗಿ ಬರಲು ನಿಮಗೆ ಏನು ರೋಗ. ಸುಮ್ಮನೆ ಒಂದು ಜೀವವನ್ನು ಬಲಿ ಪಡೆದಿದ್ದೀರಾ ಎಂದು ಕೂಗಾಡಿದ್ದಾಳೆ.ಸ್ಥಳದಲ್ಲೇ ಇದ್ದ ಪೊಲೀಸರು ಆ ಮಹಿಳೆಯನ್ನ ಸಮಾಧಾನಪಡಿಸಿ ಕೂರಿಸಿದ್ದಾರೆ.

  ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಕರು ಸ್ಥಳಕ್ಕೆ ಜಮಾಯಿಸಿದ್ದಾರೆ. ಕೂಡಲೇ ಪೊಲೀಸರು ಆತ ಹಾಗೂ ಇಬ್ಬರು ಸ್ನೇಹಿತರನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಈ ವೇಳೆ ಗಾಯಗೊಂಡಿದ್ದ ಜಾಯಿದ್​ 2 ನಿಮಿಷ ಸ್ಥಳದಲ್ಲೇ ಕೂರುತ್ತೇನೆ ಎಂದು ಪೊಲೀಸರ ಬಳಿ ಕೇಳಿಕೊಳ್ಳುತ್ತಿರುವ ದೃಶ್ಯ ವೈರಲ್​ ಆಗಿದೆ.

  ಇದನ್ನೂ ಓದಿ: ಶಿಕ್ಷಕನಿಂದಲೇ 11 ವರ್ಷದ ಬಾಲಕಿ ಮೇಲೆ ರೇಪ್​; ಚೈಲ್ಡ್​ ಹೆಲ್ಪ್​ಲೈನ್​ ನಂಬರ್​ಗೆ ಕರೆ ಮಾಡಿದ ವಿದ್ಯಾರ್ಥಿನಿ

  ಕಾರು ಚಲಾಯಿಸುವಾಗ 2 ನಿಮಿಷ ಯೋಚನೆ ಮಾಡಿದ್ದರೇ, ಸವಾರನ ಪ್ರಾಣ ಉಳಿಯುತ್ತಿತ್ತು. ಈಗ ನಿನಗೆ ಕೂರಲು 2 ನಿಮಿಷ ಬೇಕಾ? ಅಂತಾ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಸದ್ಯಕ್ಕೆ ಜಾಯಿದ್ ಹಾಗೂ ಇಬ್ಬರು ಸ್ನೇಹಿತರನ್ನ ಪೊಲೀಸರು ವಶಕ್ಕೆ ಪಡೆದು ಎಫ್​ಐಆರ್​ ದಾಖಲಿಸಿದ್ದಾರೆ. ಅವರ ಮೇಲೆ ಯಾವ ಕ್ರಮ ಜರುಗಿಸುತ್ತಾರೋ? ಅಥವಾ ಪೊಲೀಸರ ಮಗನೆಂದು ಕಾಪಾಡಿಕೊಳ್ಳುತ್ತಾರೋ? ದೇವರೇ ಬಲ್ಲ

  ವರದಿ - ವಾಸುದೇವ್​.ಎಂ
  Published by:Sandhya M
  First published: