ಕುಡಿತದ ಅಮಲಲ್ಲಿ ಯಾರದೋ ಕೈಗೆ ಹಸುಗೂಸು ಕೊಟ್ಟುಹೋದ ಅಮ್ಮ; ನಂತರ ಏನಾಯ್ತು ಗೊತ್ತಾ?

ನನಗೂ ಒಂದು ಚಿಕ್ಕ ಮಗುವಿದೆ. ಹಾಗಾಗಿ, ಅದಕ್ಕೆ ಹಸಿವಾದ ಬಗ್ಗೆ ನನಗೆ ಗೊತ್ತಾಯಿತು. ಮಗು ಯಾರದಾದರೇನು.. ಹಸಿದಾಗ ಹಾಲುಣಿಸುವುದು ಮಾನವೀಯತೆ ಎಂದುಕೊಂಡು ಎದೆಹಾಲು ನೀಡಿದೆ ಎಂದು ಕಾನ್​ಸ್ಟೆಬಲ್​ ಪ್ರಿಯಾಂಕಾ ಹೇಳಿದ್ದಾರೆ.

sushma chakre | news18
Updated:January 1, 2019, 5:18 PM IST
ಕುಡಿತದ ಅಮಲಲ್ಲಿ ಯಾರದೋ ಕೈಗೆ ಹಸುಗೂಸು ಕೊಟ್ಟುಹೋದ ಅಮ್ಮ; ನಂತರ ಏನಾಯ್ತು ಗೊತ್ತಾ?
ಕಾನ್​ಸ್ಟೆಬಲ್ ಪ್ರಿಯಾಂಕಾ
  • News18
  • Last Updated: January 1, 2019, 5:18 PM IST
  • Share this:
ಹೈದರಾಬಾದ್ (ಜ. 1):ಕಂಠಪೂರ್ತಿ ಕುಡಿದು ಎಳೆ ಹಸುಳೆಯನ್ನು ಬೇರೆಯವರ ಕೈಗೆ ಕೊಟ್ಟು ಹೋಗಿದ್ದ ಮಹಿಳೆಯ ಮಗುವನ್ನು ಕಾನ್​ಸ್ಟೆಬಲ್ ದಂಪತಿ ಕಾಪಾಡಿದ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

ಉಸ್ಮಾನಿಯಾ ಆಸ್ಪತ್ರೆ ಬಳಿ 2 ತಿಂಗಳ ಮಗುವನ್ನು ವ್ಯಕ್ತಿಯೊಬ್ಬರ ಕೈಗೆ ಕೊಟ್ಟು ಸ್ವಲ್ಪ ಮಗುವನ್ನು ನೋಡಿಕೊಳ್ಳುತ್ತಿರಿ, ಕೂಡಲೇ ವಾಪಾಸ್​ ಬರುತ್ತೇನೆ ಎಂದು ಹೋದ ಮಹಿಳೆ ವಾಪಾಸ್​ ಬರಲೇ ಇಲ್ಲ. ಮಹಿಳೆ ಎಷ್ಟು ಹೊತ್ತಾದರೂ ವಾಪಾಸ್​ ಬಾರದ ಕಾರಣ ಆ ಮಗುವನ್ನು ಮನೆಗೆ ಕರೆದುಕೊಂಡು ಹೋದ ವ್ಯಕ್ತಿ ಮಗುವಿಗೆ ಹಾಲು ಕುಡಿಸಲು ಪ್ರಯತ್ನಿಸಿದ್ದಾರೆ. ಆದರೆ, ಮಗು ಹಾಲು ಕುಡಿಯದೆ ಒಂದೇ ಸಮನೆ ಅಳಲಾರಂಭಿಸಿದೆ. ಬಳಿಕ, ಸ್ನೇಹಿತರು ಮತ್ತು ಕುಟುಂಬಸ್ಥರ ಸಲಹೆಯಂತೆ ಮಗುವನ್ನು ಅಫ್ಜಾಲ್​ಗುಂಜ್​ ಪೊಲೀಸ್​ ಠಾಣೆಗೆ ನೀಡಿದ್ದಾರೆ.

ಪೊಲೀಸ್​ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದು, ಠಾಣೆಯಲ್ಲಿಯೂ ಮಗು ಅಳುವುದನ್ನು ನಿಲ್ಲಿಸಿಲ್ಲ. ಮಗುವಿನ ಅಳುವನ್ನು ನೋಡಲಾಗದೆ ಅದೇ ಠಾಣೆಯ ಎಂ. ರವೀಂದರ್ ಎಂಬ ಕಾನ್​ಸ್ಟೆಬಲ್ ತನ್ನ ಹೆಂಡತಿ ಪ್ರಿಯಾಂಕಾಗೆ ಫೋನ್​ ಮಾಡಿ ವಿಷಯ ತಿಳಿಸಿದ್ದಾರೆ.

ರವೀಂದರ್​ ಅವರ ಹೆಂಡತಿ ಪ್ರಿಯಾಂಕಾ ಕೂಡ ಇನ್ನೊಂದು ಠಾಣೆಯಲ್ಲಿ ಕಾನ್​ಸ್ಟೆಬಲ್​ ಆಗಿದ್ದು, ಕೆಲವು ತಿಂಗಳ ಹಿಂದಷ್ಟೇ ಹೆರಿಗೆಯಾಗಿತ್ತು. ಹಾಗಾಗಿ, ಆಕೆಯಿಂದ ಮಗುವನ್ನು ಸಮಾಧಾನ ಮಾಡಲು ಏನಾದರೂ ಸಲಹೆ ಸಿಗಬಹುದು ಎಂದು ಫೋನ್​ ಮಾಡಿ ವಿಷಯ ತಿಳಿಸಿದ್ದಾರೆ ರವೀಂದರ್​.

ಇದನ್ನೂ ಓದಿ: ಶಬರಿಮಲೆ ಪ್ರವೇಶ ಕುರಿತ ತೀರ್ಪು ಜಾರಿಗೆ ಆಗ್ರಹ; ಕೇರಳದಲ್ಲಿ 650 ಕಿ.ಮೀ. 'ವಿಮೆನ್ಸ್ ವಾಲ್' ನಿರ್ಮಿಸಲಿರುವ ಮಹಿಳೆಯರು

ಹೆರಿಗೆ ರಜೆಯ ಮೇಲೆ ಮನೆಯಲ್ಲಿದ್ದ ಪ್ರಿಯಾಂಕಾ  ವಿಷಯ ತಿಳಿಯುತ್ತಿದ್ದಂತೆ ತಾನೇ ಬಂದು ನೋಡುವುದಾಗಿ ಹೇಳಿ ಪೊಲೀಸ್​ ಠಾಣೆಗೆ ಬಂದಿದ್ದಾರೆ. ಹಸಿವಿನಿಂದ ಜೋರಾಗಿ ಅಳುತ್ತಿದ್ದ ಮಗುವನ್ನು ಎತ್ತಿಕೊಂಡು ಎದೆಹಾಲು ಕುಡಿಸಿದ ರವೀಂದರ್​ ಅವರ ಹೆಂಡತಿ ಮಗುವನ್ನು ಸಮಾಧಾನಪಡಿಸಿದ್ದಾರೆ. ಅವರ ಈ ಕಾರ್ಯಕ್ಕೆ ಪೊಲೀಸ್​ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ನನಗೂ ಒಂದು ಚಿಕ್ಕ ಮಗುವಿದೆ. ಹಾಗಾಗಿ, ಅದಕ್ಕೆ ಹಸಿವಾದ ಬಗ್ಗೆ ನನಗೆ ಗೊತ್ತಾಯಿತು. ಮಗು ಯಾರದಾದರೇನು.. ಹಸಿದಾಗ ಹಾಲುಣಿಸುವುದು ನನ್ನ ಕರ್ತವ್ಯ ಎಂದುಕೊಂಡು ಎದೆಹಾಲು ನೀಡಿದೆ. ಹಾಲು ಕುಡಿದ ನಂತರ ಮಗು ಸುಮ್ಮನಾಯಿತು ಎಂದು ಪ್ರಿಯಾಂಕಾ ಎಎನ್​ಐಗೆ ತಿಳಿಸಿದ್ದಾರೆ.ಇದನ್ನೂ ಓದಿ: ಲೋಕಸಭಾ ಸಮರಕ್ಕೆ ತಯಾರಿ: 20 ರಾಜ್ಯಗಳಲ್ಲಿ ಮೋದಿ ಶತದಿನ ಯಾತ್ರೆ; ಮತದಾರರ ಮೇಲೆ ಬಿಜೆಪಿ ಕಣ್ಣು!

ಮಗು ಅಳುವುದನ್ನು ನಿಲ್ಲಿಸಿದ ಬಳಿಕ ಮಗುವನ್ನು ಪೆಟ್ಲಾಬರ್ಜ್​ನಲ್ಲಿರುವ ಸರ್ಕಾರಿ ಹೆರಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ, ಆ ಮಗುವಿನ ತಾಯಿಯನ್ನು ಪತ್ತೆಹಚ್ಚಲಾಗಿದ್ದು, ಚಂಚಲ್​ಗುಡ ಪ್ರದೇಶದಲ್ಲಿ ಆಕೆ ಅಳುತ್ತಾ ಕುಳಿತಿದ್ದರು. ನನ್ನ ಮಗುವನ್ನು ಯಾವ ಜಾಗದಲ್ಲಿ ಯಾರಿಗೆ ಕೊಟ್ಟು ಹೋಗಿದ್ದೆ ಎಂದು ಮರೆತುಬಿಟ್ಟಿದ್ದೆ. ಆ ಸಂದರ್ಭದಲ್ಲಿ ನಾನು ಮದ್ಯಪಾನ ಮಾಡಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾಳೆ. ನಂತರ ಆಕೆಯನ್ನು ಮಗುವಿದ್ದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮಗುವನ್ನು ಹಸ್ತಾಂತರಿಸಲಾಯಿತು.

First published:January 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ