Nupur Sharma: ಪ್ರವಾದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಕೇಸ್‌ನಲ್ಲಿ ನೂಪುರ್‌ಗೆ ಸಮನ್ಸ್ , ಅತ್ತ ಬಿಜೆಪಿ ಮಾಜಿ ವಕ್ತಾರೆಯಿಂದಲೂ ದೂರು

ನೂಪುರ್ ಶರ್ಮಾ ವಿರುದ್ದ ಮಹಾರಾಷ್ಟ್ರದ ಮುಂಬ್ರ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಮತ್ತೊಂದೆಡೆ ತಮಗೆ ಜೀವ ಬೆದರಿಕೆ ಬರುತ್ತಿದೆ ಅಂತ ನೂಪುರ್ ಶರ್ಮಾ ಕೂಡ ಕೇಸ್ ದಾಖಲಿಸಿದ್ದಾರೆ.  

ನೂಪುರ್ ಶರ್ಮಾ

ನೂಪುರ್ ಶರ್ಮಾ

  • Share this:
ಮಹಾರಾಷ್ಟ್ರ: ಪ್ರವಾದಿ ಮಹಮ್ಮದ್ ಪೈಗಂಬರ್ (Prophet Muhammad Paigambar) ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ (offensive statement) ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ (Former BJP Spokesperson) ನೂಪುರ್ ಶರ್ಮಾಗೆ (Nupur Sharma) ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಿದೆ. ಪ್ರವಾದಿ ವಿರುದ್ಧ ಹೇಳಿಕೆ ನೀಡುತ್ತಿದ್ದಂತೆ ಅವರನ್ನು ಪಕ್ಷದಿಂದ ವಜಾ (dismissed) ಮಾಡಿದ ಬಿಜೆಪಿ (BJP), ಅವರಿಂದ ಅಂತರ ಕಾಯ್ದಕೊಂಡಿತ್ತು. ಮತ್ತೊಂದೆಡೆ ಮುಸ್ಲಿಂ ರಾಷ್ಟ್ರಗಳೂ (Muslim Countries) ಸಹ ನೂಪುರ್ ಹೇಳಿಕೆ ವಿರೋಧಿಸಿ, ಭಾರತೀಯ ವಸ್ತುಗಳನ್ನು ಬಹಿಷ್ಕರಿಸೋದಾಗಿ ಎಚ್ಚರಿಸಿತ್ತು. ಇದೀಗ ನೂಪುರ್ ಶರ್ಮಾ ವಿರುದ್ದ ಮಹಾರಾಷ್ಟ್ರದ ಮುಂಬ್ರ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಮತ್ತೊಂದೆಡೆ ತಮಗೆ ಜೀವ ಬೆದರಿಕೆ ಬರುತ್ತಿದೆ ಅಂತ ನೂಪುರ್ ಶರ್ಮಾ ಕೂಡ ಕೇಸ್ ದಾಖಲಿಸಿದ್ದಾರೆ.  

ನೂಪುರ್ ಶರ್ಮಾಗೆ ಪೊಲೀಸರಿಂದ ಸಮನ್ಸ್

ನೂಪುರ್ ಶರ್ಮಾ ಅವರ ವಿರುದ್ಧ ಮಹಾರಾಷ್ಟ್ರದ ಮುಂಬ್ರಾ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಶರ್ಮಾ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುಂಬ್ರಾ ಪೊಲೀಸರು ಶರ್ಮಾ ಅವರಿಗೆ ಸಮನ್ಸ್‌ ಜಾರಿ ಮಾಡಿದ್ದಾರೆ. ಈ ತಿಂಗಳ 22 ರಂದು ತಮ್ಮ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.

ಪ್ರವಾದಿ ಮಹಮ್ಮದ್‌ರ ವಿರುದ್ಧ ಅವಹೇಳನ ಆರೋಪ

ಖಾಸಗಿ ಟಿವಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನೂಪುರ್ ಶರ್ಮಾ, ಪ್ರವಾದಿ ಮಹಮ್ಮದ್ ಅವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಈ ಮೂಲಕ ಮುಸ್ಲಿಂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಎದುರಿಸುತ್ತಿದ್ದಾರೆ. ಅವರ ವಿರುದ್ಧ ಎಫ್ಐಆರ್‌ ದಾಖಲಿಸಿದ್ದ ಪೊಲೀಸರು, ಇದೀಗ ಅವರಿಗೆ ಸಮನ್ಸ್ ನೀಡಿದ್ದಾರೆ. ಈ ಪ್ರಕರಣ ಸಂಬಂಧ ಜೂನ್ 22 ರಂದು ತನಿಖಾಧಿಕಾರಿಯ ಮುಂದೆ ಹೇಳಿಕೆಯನ್ನು ದಾಖಲಿಸುವಂತೆ ಶರ್ಮಾ ಅವರಿಗೆ ಮುಂಬ್ರಾ ಪೊಲೀಸರು ಸಮನ್ಸ್ ನೀಡಿದ್ದಾರೆ ಎಂದು ಥಾಣೆ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: Navjot Singh Sidhu: ಲಿವರ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ಸಿಧು!

ಇಮೇಲ್, ಸ್ಪೀಡ್‌ ಪೋಸ್ಟ್ ಮೂಲಕ ಸಮನ್ಸ್ ಜಾರಿ

ಪೊಲೀಸರು ಶರ್ಮಾ ಅವರಿಗೆ ಇಮೇಲ್ ಮತ್ತು ಸ್ಪೀಡ್ ಪೋಸ್ಟ್ ಮೂಲಕ ಸಮನ್ಸ್ ಕಳುಹಿಸಲಾಗಿದೆ. ಇದರ ಜೊತೆಗೆ ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನ ವಿವರಗಳನ್ನು ಸಹ ಅದರಲ್ಲಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೀವ ಬೆದರಿಕೆ ವಿರುದ್ಧ ದೂರು ದಾಖಲಿಸಿದ ನೂಪುರ್ ಶರ್ಮಾ

ಅತ್ತ ನೂಪುರ್ ಶರ್ಮಾ ಕೂಡ ಜೀವ ಬೆದರಿಕೆ ದೂರು ದಾಖಲಿಸಿದ್ದಾರೆ.  ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ನೂಪುರ್ ಶರ್ಮಾ, ನನಗೆ ನಿರಂತರವಾಗಿ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಹೀಗಾಗಿ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಸೂಕ್ತ ಭದ್ರತೆ ಕಲ್ಪಿಸುವಂತೆ ದೆಹಲಿ ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ನೂಪುರ್ ಶರ್ಮಾ ನೀಡಿರುವ ದೂರನ್ನು ಸ್ವೀಕರಿಸಿರುವ ದೆಹಲಿ ಪೊಲೀಸರು, ಈ ಕುರಿತು ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Pro Khalistan Slogans: ಪಂಜಾಬ್​ನ ಸ್ವರ್ಣ ಮಂದಿರದಲ್ಲಿ ಖಲಿಸ್ತಾನ ಪರ ಘೋಷಣೆ

ತಮ್ಮ ಹೇಳಿಕೆಗೆ ಕ್ಷಮೆ ಕೋರಿರುವ ನೂಪುರ್ ಶರ್ಮಾ

ಪ್ರವಾದಿ ವಿರುದ್ಧ ನೀಡಿರುವ ಹೇಳಿಕೆ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಇಷ್ಟಾದ ಬಳಿಕ ನೂಪುರ್ ಶರ್ಮಾ ಹಾಗೂ ನವೀನ್ ಕುಮಾರ್ ಜಿಂದಾಲ್ ಇಬ್ಬರೂ ಕ್ಷಮೆ ಕೇಳಿದ್ದರು. ನಾನು ನನ್ನ ಹೇಳಿಕೆ ಬಗ್ಗೆ ಈಗಾಗಲೇ ಸ್ಪಷ್ಟೀಕರಣ ನೀಡಿದ್ದೇನೆ. ಆದರೆ ನನಗೆ ನಿರಂತರವಾಗಿ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಸೂಕ್ತ ಭದ್ರತೆ ಒದಗಿಸಿ ಅಂತ ಮನವಿ ಮಾಡಿದ್ದಾರೆ.
Published by:Annappa Achari
First published: