Viral News : ಲಡಾಖ್‌ನಲ್ಲಿ ಪ್ರವಾಸಿಗರಿಂದ ಹೆಚ್ಚಿದ ಮಾಲಿನ್ಯ : ಸ್ವಚ್ಛತೆಗಾಗಿ ಮನವಿ ಮಾಡಿದ ಪೊಲೀಸ್​ ವಿಡಿಯೋ ವೈರಲ್!

Viral News : ಸೌಂದರ್ಯದ ಕಣಜವಾದ ಪ್ಯಾಂಗೊಂಗ್ ಸರೋವರ ಕಸದ ರಾಶಿಯಂತೆ ಆಗುತ್ತಿದೆ. ಹೀಗಾಗಿ ಇದರಿಂದ ಬೇಸತ್ತಿರುವ ಲಡಾಖ್‌ನ ಪೊಲೀಸ್ ಸಿಬ್ಬಂದಿಯೊಬ್ಬರು ಪ್ಯಾಂಗೊಂಗ್ ಸರೋವರದ ರಕ್ಷಣೆ ಹಾಗೂ ಅದರ ಸೌಂದರ್ಯವನ್ನು ಕಾಪಾಡುವಂತೆ ಪ್ರವಾಸಿಗರಿಗೆ ಮನವಿ ಮಾಡಿದ್ದಾರೆ.

ಸ್ವಚ್ಛತೆಗಾಗಿ  ಮನವಿ ಮಾಡಿದ ಪೊಲೀಸ್​

ಸ್ವಚ್ಛತೆಗಾಗಿ ಮನವಿ ಮಾಡಿದ ಪೊಲೀಸ್​

  • Share this:
ಸಿಂಧೂ ನದಿ(Sindhu River) ದಂಡೆಯ ಮೇಲಿರುವ ಅತ್ಯಂತ ಸುಂದರ ತಾಣಗಳಲ್ಲೊಂದು.  ಲಡಾಖ್‌(Ladakh)ನ ಸುಂದರ ತಾಣಗಳು ಪದೇ ಪದೇ ಪ್ರವಾಸಿಗರ ಮನಸ್ಸಿನ ಪಟಲದೊಳಗೆ ಮೂಡುತ್ತಲೇ ಇರುತ್ತದೆ. ಭೂಲೋಕದ ಸ್ವರ್ಗದಂತಿರುವ ಲಡಾಖ್‌ನ ಸೌಂದರ್ಯ ಸವಿಯಲು ಪ್ರವಾಸಿಗರು(Tourist) ಸದಾ ತುದಿಗಾಲಲ್ಲಿ ನಿಂತಿರುತ್ತಾರೆ. ಹೀಗಾಗಿ ಪ್ರತಿನಿತ್ಯ(Everyday) ಪ್ರವಾಸಿಗರಿಂದ ಸದಾ ಗಿಜಿಗುಡುತ್ತಲೆ ಇರುತ್ತದೆ. ಅದ್ರಲ್ಲೂ ಲಡಾಖ್‌ನ ಪ್ರತಿಯೊಂದು ಪ್ರೇಕ್ಷಣೀಯ ಸ್ಥಳಗಳು ಪ್ರವಾಸಿಗರನ್ನ, ಬೇರೊಂದು ಲೋಕಕ್ಕೆ ಕರೆದೊಯ್ಯುವಂತೆ ಮಾಡುತ್ತವೆ. ಇಂತಹ ಲಡಾಖ್‌ನ ಪ್ರಸಿದ್ಧ ಸ್ಥಳಗಳಲ್ಲಿ ಒಂದು ಅಂದರೆ ಪ್ಯಾಂಗೊಂಗ್(Pangong) ಸರೋವರ. ಸಿನಿಮಾ ಶೂಟಿಂಗ್, ಹಾಗೂ ಪ್ರವಾಸಿಗರ ನೆಚ್ಚಿನ ಹಾಟ್​ಸ್ಪಾಟ್​(HotSpot) ಆಗಿರುವ ಪ್ಯಾಂಗೊಂಗ್​ ಸರೋವರದ ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ. ಅಮೀರ್ ಖಾನ್(Amir Khan) ನಟನೆಯ ತ್ರೀ ಈಡಿಯಟ್ಸ್(3 idiots) ಸಿನಿಮಾದಿಂದ, ಪ್ರವಾಸಿಗರಿಗೆ ಚಿರಪರಿಚಿತವಾದ ಪ್ಯಾಂಗೊಂಗ್ ಸರೋವರದ ಸೌಂದರ್ಯ ಇತ್ತೀಚಿಗೆ ಪ್ರವಾಸಿಗರಿಂದ ಹಾಳಾಗುತ್ತಿದೆ.

ಸರೋವರದ ರಕ್ಷಣೆ ಕಾಪಾಡುವಂತೆ ಕಾಪ್​ ಮನವಿ!

ಕೊರೋನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ದೇಶದಲ್ಲಿ ಇಳಿಕೆ ಕಂಡ ಬಳಿಕ, ಲಡಾಖ್‌ನತ್ತ ಬರುತ್ತಿರುವ ಪ್ರವಾಸಿಗರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.. ಈ ರೀತಿ ಪ್ರವಾಸಕ್ಕೆಂದು ಬರುವ ಪ್ರವಾಸಿಗರು, ಪ್ಯಾಂಗೊಂಗ್ ಸರೋವರದ ತೀರದಲ್ಲಿ ಸ್ವಚ್ಛತೆ ಮರೆತು ಪ್ಲಾಸ್ಟಿಕ್ ಸೇರಿ ಅನುಪಯುಕ್ತ ವಸ್ತುಗಳನ್ನು ಬಿಸಾಡಿ ಹೋಗುತ್ತಿದ್ದಾರೆ. ಇದರಿಂದಾಗಿ ಸೌಂದರ್ಯದ ಕಣಜವಾದ ಪ್ಯಾಂಗೊಂಗ್ ಸರೋವರ ಕಸದ ರಾಶಿಯಂತೆ ಆಗುತ್ತಿದೆ. ಹೀಗಾಗಿ ಇದರಿಂದ ಬೇಸತ್ತಿರುವ ಲಡಾಖ್‌ನ ಪೊಲೀಸ್ ಸಿಬ್ಬಂದಿಯೊಬ್ಬರು ಪ್ಯಾಂಗೊಂಗ್ ಸರೋವರದ ರಕ್ಷಣೆ ಹಾಗೂ ಅದರ ಸೌಂದರ್ಯವನ್ನು ಕಾಪಾಡುವಂತೆ ಪ್ರವಾಸಿಗರಿಗೆ ಮನವಿ ಮಾಡಿದ್ದಾರೆ.


ಅತಿಥಿ ದೇವೋಭವ ಎಂಬ ಮನಸ್ಥಿತಿಯಿಂದ ಇಲ್ಲಿಗೆ ಬನ್ನಿ

ವಿಡಿಯೋ ಮೂಲಕ ಮನವಿ ಮಾಡಿಕೊಂಡಿರುವ ಲಡಾಖ್‌ನ ಪೊಲೀಸ್ ಸಿಬ್ಬಂದಿ ಸೋನಮ್, ವಿಶ್ವದಲ್ಲಿ ಇರುವ ಅತ್ಯಂತ ಸ್ವಚ್ಛ ಸರೋವರಗಳಲ್ಲಿ  ಪ್ಯಾಂಗೊಂಗ್ ಸರೋವರ ಒಂದು. ಅತಿಥಿ ದೇವೋಭವ ಎಂಬ ಮನಸ್ಥಿತಿಯಿಂದ ಇಲ್ಲಿಗೆ ಬನ್ನಿ, ಪುಣ್ಯಭೂಮಿ ಋಷಿಮುನಿಗಳು ಇದ್ದ ಜಾಗ. ಪ್ರತಿ ನಿತ್ಯ ಇಲ್ಲಿಗೆ ಬರುತ್ತಿರುವ ನೂರಾರು ಪ್ರವಾಸಿಗರು ಇದರ ಸೌಂದರ್ಯ ಸವಿಯುವುದರ ಜೊತೆಗೆ, ಇದನ್ನ ಹಾಳು ಮಾಡುತ್ತಿದ್ದಾರೆ. ಪ್ಲಾಸ್ಟಿಕ್ ನಂತಹ ವಸ್ತುಗಳನ್ನು ಸರೋವರದಲ್ಲಿ ಎಸೆಯುತ್ತಿದ್ದಾರೆ, ಇದರಿಂದ ಸರೋವರದ ಸೌಂದರ್ಯ ಹಾಳಾಗುತ್ತಿರುವ ಬಗ್ಗೆ ನನಗೆ ತುಂಬಾ ದುಃಖವಾಗಿದೆ. ಹೀಗಾಗಿ ಪ್ಯಾಂಗೊಂಗ್ ಸರೋವರ ವೀಕ್ಷಣೆಗೆ ಬರುವ ಪ್ರವಾಸಿಗರು , ಪ್ಲಾಸ್ಟಿಕ್ ನಂತಹ ಅನುಪಯುಕ್ತ ವಸ್ತುಗಳನ್ನು ಎಸೆಯದೆ, ಸರೋವರದ ಸ್ವಚ್ಛತೆ ಕಾಪಾಡುವಂತೆ ವಿಡಿಯೋದಲ್ಲಿ ಸೋನಮ್ ಮನವಿ ಮಾಡಿಕೊಂಡಿದ್ದಾರೆ.

ಇಂಟರ್​ನೆಟ್​ನಲ್ಲಿ ಸೋನಮ್​ ಟ್ವೀಟ್​ ವೈರಲ್

ಇನ್ನು ಸೋನಮ್ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಂತೆ,  ಇದಕ್ಕೆ ಪ್ರತಿಕ್ರಿಯೆ ನೀಡಿರುವ ನೂರಾರು ನೆಟ್ಟಿಗರು, ಪ್ಯಾಂಗೊಂಗ್ ಸರೋವರದ ಸೌಂದರ್ಯ ಹಾಳು ಮಾಡುತ್ತಿರುವವರ ವಿರುದ್ಧ ಕಿಡಿಕಾರಿದ್ದಾರೆ. ಅದರಲ್ಲೂ ಓರ್ವ ಮಹಿಳೆಯ ಸರೋವರದ ಸೌಂದರ್ಯ ಹಾಳು ಮಾಡುತ್ತಿರುವವರಿಗೆ ಐದು ವರ್ಷಗಳ ಕಾಲ ಸರೋವರದ ತೀರಕ್ಕೆ ನಿಷೇಧ ವಿಧಿಸುವಂತೆ ಆಗ್ರಹಿಸಿದ್ದಾರೆ. ಇನ್ನು ಪತ್ರಕರ್ತ ಆದಿತ್ಯ ರಾಜ್ ಕೌಲ್ ಸಹ ಸೋನಂ ಅವರ ವಿಡಿಯೋವನ್ನು ರೀಟ್ವೀಟ್ ಮಾಡಿ, ಲೇಹ್ ಪೊಲೀಸರು ನಿಮಗಾಗಿ ಒಂದು ಸಂದೇಶವನ್ನು ತಂದಿದ್ದಾರೆ ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷ ಮಾಡಬೇಡಿ ಎಂದು ಬರೆದುಕೊಂಡಿದ್ದಾರೆ.

ಇನ್ನು ಪೂರ್ವ ಲಡಾಖ್​ನ ಪ್ಯಾಂಗೊಂಗ್ ಸರೋವರದ ಬಳಿ ಕಳೆದ ವರ್ಷ ನೆರೆಯ ರಾಷ್ಟ್ರ ಚೀನಾ ತನ್ನ ಸೈನಿಕರನ್ನು ಜಮಾಯಿಸಿ ಭಾರತದ ವಿರುದ್ಧ ಕಾಲುಕೆರೆದುಕೊಂಡು ಜಗಳಕ್ಕೆ ಬಂದಿತ್ತು. ಇದಕ್ಕೆ ತಕ್ಕ ಪ್ರತ್ಯುತ್ತರವನ್ನು ಭಾರತೀಯ ಸೇನೆ ನೀಡಿ, ಪ್ಯಾಂಗೊಂಗ್ ಸರೋವರದಿಂದ ಚೀನಿ ಸೈನಿಕರು ಹಿಮ್ಮೆಟ್ಟಿ ಹೋಗುವಂತೆ ಮಾಡಿತ್ತು.
Published by:Vasudeva M
First published: