ಕೇರಳದಲ್ಲಿ ಜೀಪ್​ನಿಂದ ಬಿದ್ದು ಬಚಾವಾದ ಮಗು; ಹಸುಳೆಯ ತಂದೆ-ತಾಯಿ ವಿರುದ್ಧ ಕೇಸ್ ದಾಖಲು

ರಾತ್ರಿ ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಈ ಮಗು ಆಕಸ್ಮಿಕವಾಗಿ ಜೀಪ್​ನಿಂದ ಕೆಳಗೆ ಬಿದ್ದಿತ್ತು. 50 ಕಿ.ಮೀ ದೂರ ಹೋದ ನಂತರ  ಎಚ್ಚರಗೊಂಡ ಪೋಷಕರಿಗೆ ತಮ್ಮ ಮಗು ಇಲ್ಲದಿರುವುದು ಗೊತ್ತಾಗಿತ್ತು.

ಜೀಪ್​ನಿಂದ ಕೆಳಗೆ ಬಿದ್ದಿದ್ದ ಮಗು

ಜೀಪ್​ನಿಂದ ಕೆಳಗೆ ಬಿದ್ದಿದ್ದ ಮಗು

  • Share this:
ತಿರುವನಂತಪುರಂ (ಸೆ.10): ಕೇರಳದ ಇಡುಕ್ಕಿ ಜಿಲ್ಲೆಯ ರಾಜಮಾಲ ಅರಣ್ಯದಲ್ಲಿ ರಾತ್ರಿ ವೇಳೆ ಸಾಗುತ್ತಿದ್ದ ಜೀಪ್​ನಿಂದ ಆಕಸ್ಮಿಕವಾಗಿ 1 ವರ್ಷದ ಮಗು ಕೆಳಗೆ ಬಿದ್ದಿತ್ತು. ರಸ್ತೆಗೆ ಬಿದ್ದ ಮಗು ತೆವಳಿಕೊಂಡು ಬದಿಯಲ್ಲಿ ಕುಳಿತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆ ಮಗುವನ್ನು ಸ್ಥಳೀಯರು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಮಗು ಸದ್ಯಕ್ಕೆ ಸುರಕ್ಷಿತವಾಗಿದ್ದು, ಪೋಷಕರ ನಿರ್ಲಕ್ಷ್ಯಕ್ಕೆ ಪೊಲೀಸರು ಕೇಸ್ ದಾಖಲಿಸಿದ್ದಾರೆ. 

1 ವರ್ಷದ ಹೆಣ್ಣು ಮಗುವಿನ ಪೋಷಕರು ಪಳನಿ ಯಾತ್ರೆ ಮುಗಿಸಿ ಇಡುಕ್ಕಿಯ ಕಂಬಿಳಿಕಾಂಡಮ್ ಎಂಬಲ್ಲಿರುವ ತಮ್ಮ ಊರಿಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿತ್ತು. ರಾತ್ರಿ ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಈ ಮಗು ಆಕಸ್ಮಿಕವಾಗಿ ವಾಹನದಿಂದ ಕೆಳಗೆ ಬಿದ್ದಿತ್ತು. 50 ಕಿ.ಮೀ ದೂರ ಹೋದ ನಂತರ  ಎಚ್ಚರಗೊಂಡ ಪೋಷಕರಿಗೆ ತಮ್ಮ ಮಗು ಕಾಣೆಯಾಗಿರುವುದು ಗೊತ್ತಾಗಿತ್ತು.

ಮಹಾರಾಷ್ಟ್ರದ ಮಹಾತಾಯಿ; 20ನೇ ಬಾರಿ ಗರ್ಭಿಣಿಯಾದ 38 ವರ್ಷದ ಮಹಿಳೆ!

ಕೆಳಗೆ ಬಿದ್ದ ಮಗು ತಾನೇ ರಸ್ತೆಯಲ್ಲಿ ತೆವಳಿಕೊಂಡು ಸುರಕ್ಷಿತವಾಗಿತ್ತು. ಇಲ್ಲವಾದರೆ, ಮಧ್ಯರಸ್ತೆಯಲ್ಲಿ ಬಿದ್ದಿದ್ದರಿಂದ ಬೇರಾವುದಾದರೂ ವಾಹನ ಆ ಮಗುವಿನ ಮೇಲೆ ಹಾದುಹೋಗುವ ಅಪಾಯವಿತ್ತು. ಟಾರ್ ರಸ್ತೆಯ ಮೇಲೆ ರಭಸವಾಗಿ ಬಿದ್ದಿದ್ದರಿಂದ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಅರಣ್ಯ ಇಲಾಖೆಯ ಚೆಕ್​ಪೋಸ್ಟ್ ಸಮೀಪ ಘಟನೆ ನಡೆದಿದ್ದು, ಸ್ಥಳೀಯರು ಮಗುವನ್ನು ರಕ್ಷಿಸಿ ಚಿಕಿತ್ಸೆ ಕೊಡಿಸಿದ್ದರು.

ಬಳಿಕ, ತಮ್ಮ ಮಗುವನ್ನು ಹುಡುಕಿಕೊಂಡು ಬಂದ ಪೋಷಕರಿಗೆ ಆ ಮಗು ಪೊಲೀಸರ ಬಳಿ ಇರುವ ವಿಷಯ ತಿಳಿಸಿ ಮಗುವನ್ನು ಸುರಕ್ಷಿತವಾಗಿ ಹೆತ್ತವರಿಗೆ ಒಪ್ಪಿಸಲಾಗಿತ್ತು. ಆದರೆ, ನಿರ್ಲಕ್ಷ್ಯದಿಂದ ಮಗುವನ್ನು ಸರಿಯಾಗಿ ನೋಡಿಕೊಳ್ಳದ ಪೋಷಕರಾದ ಸತೀಶ್ ಮತ್ತು ಸತ್ಯಭಾಮಾ ವಿರುದ್ಧ ಸೆಕ್ಷನ್ 75 ಹಾಗೂ 308ರ ಅಡಿಯಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿದೆ.

First published: