ಪಶುವೈದ್ಯೆ ಅತ್ಯಾಚಾರ ಕೊಲೆ ಆರೋಪಿಗಳ ಎನ್​ಕೌಂಟರ್​; ಪೊಲೀಸರಿಗೆ ಧನ್ಯವಾದ ಅರ್ಪಿಸಿದ ಸಂತ್ರಸ್ತೆಯ ಕುಟುಂಬ

ಅತ್ಯಾಚಾರ ಆರೋಪಿಗಳು ಎನ್​ಕೌಂಟರ್​ನಲ್ಲಿ ಬಲಿಯಾದ ಸುದ್ದಿ ದೊಡ್ಡ ಮಟ್ಟದ ಸದ್ದು ಮಾಡುತ್ತಿದ್ದಂತೆ ಕುರಿತು ಪ್ರತಿಕ್ರಿಯೆ ನೀಡಿರುವ ಮೃತ ಪಶುವೈದ್ಯೆಯ ತಂದೆ, ಅತ್ಯಾಚಾರ ಆರೋಪಿಗಳನ್ನು ಹೊಡೆದುರುಳಿಸಿರುವ ಪೊಲೀಸರ ನಡೆಗೆ ಧನ್ಯವಾದಗಳು. ಇನ್ನಾದರೂ ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದಿದ್ದಾರೆ.

MAshok Kumar | news18-kannada
Updated:December 6, 2019, 9:02 AM IST
ಪಶುವೈದ್ಯೆ ಅತ್ಯಾಚಾರ ಕೊಲೆ ಆರೋಪಿಗಳ ಎನ್​ಕೌಂಟರ್​; ಪೊಲೀಸರಿಗೆ ಧನ್ಯವಾದ ಅರ್ಪಿಸಿದ ಸಂತ್ರಸ್ತೆಯ ಕುಟುಂಬ
ಅತ್ಯಾಚಾರಿಗಳ ಎನ್​ಕೌಂಟರ್​ಗೆ ಸಂತಸ ವ್ಯಕ್ತಪಡಿಸುತ್ತಿರುವ ಮಹಿಳೆಯರು.
  • Share this:
ಹೈದರಾಬಾದ್ (ಡಿಸೆಂಬರ್ 06); ತೆಲಂಗಾಣ ಪಶುವೈದ್ಯೆ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮುಂಜಾನೆ 3.30ರ ಸುಮಾರಿಗೆ ಎಲ್ಲಾ ನಾಲ್ವರು ಆರೋಪಿಗಳನ್ನು ಅತ್ಯಾಚಾರ ನಡೆದ ಸ್ಥಳದಲ್ಲೇ ಪೊಲೀಸರು ಎನ್​ಕೌಂಟರ್​ ಮಾಡಿ ಹೊಡೆದುರುಳಿಸಿದ್ದಾರೆ. ಪೊಲೀಸರ ಈ ಕಾರ್ಯಾಚರಣೆಗೆ ಇಡೀ ದೇಶವೇ ಮೆಚ್ಚುಗೆ ಸೂಚಿಸಿದೆ. ಇನ್ನೂ ಮೃತ ಸಂತ್ರಸ್ತೆಯ ತಂದೆ ಹಾಗೂ ತಂಗಿ ಸಹ ಕಾಮುಕರ ಸಾವಿಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಅತ್ಯಾಚಾರ ಆರೋಪಿಗಳು ಎನ್​ಕೌಂಟರ್​ನಲ್ಲಿ ಬಲಿಯಾದ ಸುದ್ದಿ ದೊಡ್ಡ ಮಟ್ಟದ ಸದ್ದು ಮಾಡುತ್ತಿದ್ದಂತೆ ಕುರಿತು ಪ್ರತಿಕ್ರಿಯೆ ನೀಡಿರುವ ಮೃತ ಪಶುವೈದ್ಯೆಯ ತಂದೆ, “ಅತ್ಯಾಚಾರ ಆರೋಪಿಗಳನ್ನು ಹೊಡೆದುರುಳಿಸಿರುವ ಪೊಲೀಸರ ನಡೆಗೆ ಧನ್ಯವಾದಗಳು. ಇನ್ನಾದರೂ ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗುತ್ತದೆ” ಎಂದಿದ್ದಾರೆ.

ಇನ್ನೂ ಘಟನೆಯ ಸಂಬಂಧ ಮೃತ ವೈದ್ಯೆಯ ತಂಗಿ ಪ್ರತಿಕ್ರಿಯಿಸಿದ್ದು, “ಅತ್ಯಾಚಾರಿಗಳ ಎನ್​ಕೌಂಟರ್​ನಿಂದ ನಮಗೆ ಈಗ ಸಮಾಧಾನವಾಗಿದೆ. ಇಂತಹ ಅತ್ಯಾಚಾರಿಗಳಿಗೆ ಈ ಘಟನೆ ಒಂದು ಉದಾಹರಣೆಯಾಗಲಿ. ಇಷ್ಟು ದಿನ ನಮಗೆ ಬೆಂಬಲವಾಗಿದ್ದ ಎಲ್ಲರಿಗೂ ಧನ್ಯವಾದಗಳು” ಎಂದು ತಿಳಿಸಿದ್ದಾರೆ.

ಹೈದರಾಬಾದ್​ನಲ್ಲಿ ಪಶುವೈದ್ಯೆ ಅತ್ಯಾಚಾರ ಕೊಲೆ ಪ್ರಕರಣದ ನಂತರ ದೇಶದ ಹೆಣ್ಣು ಮಕ್ಕಳು ಬೀದಿಗೆ ಇಳಿದು ಪ್ರತಿಭಟಿಸಿದ್ದರು. ಆರೋಪಿಗಳನ್ನು ಗುಂಡಿಟ್ಟು ಕೊಲ್ಲುವಂತೆ ಒತ್ತಾಯಿಸಿದ್ದರು. ಇದೀಗ ಮಹಿಳೆಯರ ಒತ್ತಾಯದಂತೆ ಆರೋಪಿಗಳು ಮೃತಪಟ್ಟಿರುವುದಕ್ಕೆ ದೇಶದ ಎಲ್ಲಾ ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Big Breaking: ಹೈದರಾಬಾದ್​ ಪಶುವೈದ್ಯೆ ಅತ್ಯಾಚಾರ ಪ್ರಕರಣದ ಎಲ್ಲ ಆರೋಪಿಗಳನ್ನು ಎನ್​ಕೌಂಟರ್​ ಮಾಡಿದ ಪೊಲೀಸರು
First published:December 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ