ಅಮ್ಮ - ಮಗಳು ಇಬ್ಬರ ಜೊತೆಗೂ ಲೈಂಗಿಕ ಸಂಬಂಧ: ತಾಯಿ ಜೊತೆ ಮಲಗಿದ್ದಾಗ ಮಗಳಿಗೆ ರೆಡ್​ ಹ್ಯಾಂಡಾಗಿ ಸಿಕ್ಕಿಬಿದ್ದ ಪೊಲೀಸ್​

Constable shares physical relationship with both mother and daughter: ಮಗಳು ಇಲ್ಲದಿದ್ದರೆ ಅಮ್ಮ, ಅಮ್ಮ ಇಲ್ಲದಿದ್ದರೆ ಮಗಳು..! ಹೀಗೇ ನವೀನ್​ ಇಬ್ಬರ ಜೊತೆಯೂ ಒಟ್ಟಿಗೇ ಲೈಂಗಿಕ ಮತ್ತು ಮಾನಸಿಕ ಸಂಬಂಧ ಹೊಂದಿದ್ದ. ಈ ವಿಚಾರ ಹುಡುಗಿಗೆ ಗೊತ್ತೇ ಇರಲಿಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ರಾಂಚಿ: ಇತ್ತೀಚೆಗೆ ಜಾರ್ಖಂಡ್​ನ ರಾಂಚಿಯಲ್ಲಿ ಪೊಲೀಸ್​ ಕಾನ್ಸ್​ಟೇಬಲ್​ ಒಬ್ಬ ತನ್ನ ಪ್ರೇಯಸಿಯ ಮೇಲೆ ಗುಂಡು ಹಾರಿಸಿದ ಘಟನೆ ನಡೆದಿತ್ತು. ಘಟನೆಯ ನಂತರ ಕಾನ್ಸ್​ಟೇಬಲ್​ ಬಂಧಿಸಲಾಗಿತ್ತು ಮತ್ತು ಯುವತಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಇದೀಗ ಪ್ರಕರಣ ಸಂಬಂಧ ಹೊಸ ವಿಚಾರಗಳು ಮುನ್ನೆಲೆಗೆ ಬಂದಿದ್ದು, ಅಕ್ರಮ ಸಂಬಂಧವೇ ಈ ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ನವೀನ್​ ಕಚ್ಚಪ್​ ಎಂಬಾತ ತನ್ನ ಪ್ರೇಯಸಿಯ ಮೇಲೆಗೇ ಗುಂಡು ಹಾರಿಸುವ ಮೂಲಕ ಬಂಧನಕ್ಕೊಳಗಾಗಿದ್ದ. ವಿಚಾರಣೆ ವೇಳೆ, ಅಚಾನಕ್ಕಾಗಿ ಗುಂಡು ಸಿಡಿದಿದೆ ಎಂದು ಸುಳ್ಳು ಹೇಳಿದ್ದ. ಆದರೆ ಈಗ ಸತ್ಯ ಸಂಗತಿ ಆಚೆ ಬಂದಿದೆ.

  ಕಳೆದ ಶನಿವಾರ, ಪ್ರೇಯಸಿ ಮನೆಯಲ್ಲಿ ಇಲ್ಲದ ವೇಳೆ ಅವಳ ಅಮ್ಮನನ್ನು ನೋಡಲು ಮನೆಗೆ ಹೋಗಿದ್ದ. ಆ ವೇಳೆ ಬೇರಾವುದೋ ಕೆಲಸದ ಮೇಲೆ ಗರ್ಲ್​ಫ್ರೆಂಡ್​ ಆಚೆ ಹೋಗಿದ್ದಳು. ಇದನ್ನು ಅರಿತಿದ್ದೇ ನವೀನ್​ ಆಕೆಯ ಮನೆಗೆ ತೆರಳಿದ್ದ. ಆದರೆ ಕೊಂಚ ಹೊತ್ತಿನ ಬಳಿಕ ಯುವತಿ ಮನೆಗೆ ವಾಪಸ್ಸಾಗಿದ್ದಾಳೆ. ಆಗ ತನ್ನ ಅಮ್ಮನ ಜೊತೆ ಬಾಯ್​ಫ್ರೆಂಡ್​ ನವೀನ್​ ಸರಸವಾಡುತ್ತಿರುವುದನ್ನು ಕಣ್ಣಾರೆ ಕಂಡಿದ್ದಾಳೆ. ಇದರಿಂದ ಕೋಪದಿಂದ ನವೀನ್​ ಮೇಲೆ ಹರಿಹಾಯ್ದಿದ್ದಾಳೆ. ಮೊದಲಿಗೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಅಮ್ಮ ಮತ್ತು ನವೀನ್​ ಸರ್ಕಸ್​ ಮಾಡಿದರೂ ಕೂಡ, ಮಗಳು ಬಗ್ಗದಿದ್ದಾಗ, ನವೀನ್​ ಸರ್ಕಾರಿ ಬಂದೂಕಿನಿಂದ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ ಎಂಬ ಅಂಶ ವಿಚಾರಣೆಯಿಂದ ಬೆಳಕಿಗೆ ಬಂದಿದೆ.

  ಇದನ್ನೂ ಓದಿ: Crime News: ಮತ್ತು ಬರುವ ಔಷಧಿ ನೀಡಿ ಏಳು ವರ್ಷಗಳಿಂದ ಯುವತಿಯ ಅತ್ಯಾಚಾರ ಮಾಡುತ್ತಿದ್ದ ಫೋಟೊಗ್ರಾಫರ್​ ಬಂಧನ

  ಕಾನ್ಸ್​ಟೇಬಲ್​ ನವೀನ್​ ಹಾರಿಸಿದ ಗುಂಡು ಅದೃಷ್ಟವಶಾತ್​ ಗೋಡೆಗೆ ಬಡಿದಿದೆ ಆದರೆ ಕಾಡತೂಸಿನ ಸೀಸಗಳು ಆಕೆಗೆ ಸ್ವಲ್ಪ ಗಾಯ ಮಾಡಿತ್ತು. ಗುಂಡಿನ ಶಬ್ದ ಕೇಳಿದ ನೆರೆಹೊರೆಯವರು ತಕ್ಷಣ ಚುತಿಯಾ ಪೊಲೀಸ್​ ಠಾಣೆಗೆ ಕರೆಮಾಡಿ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಕಾನ್ಸ್​ಟೇಬಲ್​ ನವೀನ್​ನನ್ನು ವಶಕ್ಕೆ ಪಡೆದಿದ್ದಾರೆ. ಮೊದಮೊದಲು ನವೀನ್​ ಅಕಸ್ಮಾತ್ತಾಗಿ ಗುಂಡು ಹಾರಿದೆ ಎಂದು ಕತೆ ಹೇಳಿದ್ದ. ಇದಕ್ಕೆ ಪೂರಕವಾಗಿ ಹುಡುಗಿಯ ಅಮ್ಮನೂ ಸಾಕ್ಷಿ ಹೇಳಿದ್ದಳು. ಆದರೆ ಹುಡುಗಿ ಈ ಬಗ್ಗೆ ವಿವರವನ್ನು ನೀಡಿದ್ದು. ಪ್ರೇಯಸಿಯ ಅಮ್ಮನ ಜೊತೆಗಿನ ಅಕ್ರಮ ಲೈಂಗಿಕ ಸಂಬಂಧವೇ ಈ ಘಟನೆಗೆ ಮೂಲ ಕಾರಣ ಎಂಬ ವಿಚಾರ ಬೆಳಕಿಗೆ ಬಂದಿದೆ.

  ಅಮ್ಮ - ಮಗಳು ಇಬ್ಬರ ಜತೆಗೂ ಲೈಂಗಿಕ ಸಂಬಂಧ:

  ಜಾರ್ಖಂಡ್​ನ ಧುಮ್ಸಾ ಟೋಲಿ ಏರಿಯಾದಲ್ಲಿ ಅಮ್ಮ ಮಗಳು ವಾಸವಾಗಿದ್ದರು. ಅಮ್ಮ ಸಾರಾಯಿ ವ್ಯಾಪಾರ ಮಾಡುತ್ತಿದ್ದರು ಮತ್ತು ಆಕೆಯ ಮಗಳು ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಮ್ಮನ ಗಂಡ ಏಳು ವರ್ಷಗಳ ಹಿಂದೆಯೇ ತೀರಿಹೋಗಿದ್ದ ಮತ್ತು ಮಗಳು ಮದುವೆಯಾಗಿ ಡಿವೋರ್ಸ್​ ಪಡೆದಿದ್ದಳು. ಕೆಲ ವರ್ಷಗಳ ಹಿಂದೆ ಕಾನ್ಸ್​ಟೇಬಲ್​ ನವೀನ್​ ಮತ್ತು ಸಾರಾಯಿ ವ್ಯಾಪಾರಸ್ಥೆಯ ಮಗಳ ನಡುವೆ ಪ್ರೇಮ ಉಂಟಾಗಿದೆ. ಪ್ರೇಮ ದೈಹಿಕ ಸಂಪರ್ಕವಾಗಿಯೂ ಮಾರ್ಪಟ್ಟಿದೆ. ಆದರೆ ಇದೇ ವೇಳೆ ಆಕೆಯ ಅಮ್ಮ ಕೂಡ ಕಾನ್ಸ್​ಟೇಬಲ್​ ಕಡೆಗೆ ವಾಲಿದ್ದಾಳೆ. ಮಗಳು ಇಲ್ಲದಿದ್ದರೆ ಅಮ್ಮ, ಅಮ್ಮ ಇಲ್ಲದಿದ್ದರೆ ಮಗಳು..! ಹೀಗೇ ನವೀನ್​ ಇಬ್ಬರ ಜೊತೆಯೂ ಒಟ್ಟಿಗೇ ಲೈಂಗಿಕ ಮತ್ತು ಮಾನಸಿಕ ಸಂಬಂಧ ಹೊಂದಿದ್ದ. ಈ ವಿಚಾರ ಹುಡುಗಿಗೆ ಗೊತ್ತೇ ಇರಲಿಲ್ಲ. ಆದರೆ ತಾಯಿಗೆ, ಮಗಳು ನವೀನ್​ನನ್ನು ಪ್ರೀತಿಸುತ್ತಿದ್ದಾಳೆ ಎಂಬ ವಿಚಾರ ತಿಳಿದಿತ್ತು ಎನ್ನಲಾಗಿದೆ.

  ಇದನ್ನೂ ಓದಿ: ಅಪ್ರಾಪ್ತೆಯ ತಲೆಕೆಡಿಸಿ ಒಂದೇ ಹುಡುಗಿಯ ಜೊತೆ ಲೈಂಗಿಕ ಸಂಬಂಧ ಹೊಂದಿದ್ದ ಹುಡುಗರು: ನಾಲ್ವರ ಬಂಧನ

  ಕಳೆದ ಶನಿವಾರ ಅಮ್ಮನ ಜೊತೆ ಮಲಗಿದ್ದ ಬಾಯ್​ಫ್ರೆಂಡ್​ ನವೀನ್​ನನ್ನು ನೋಡಿದಾಗ ಇಬ್ಬರ ನಡುವೆಯೂ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ, ನವೀನ್​ ತನ್ನ ಅಕ್ರಮ ಸಂಬಂಧದ ವಿಚಾರ ಯಾರಿಗೂ ತಿಳಿಯಬಾರದು ಎಂಬ ಕಾರಣಕ್ಕೆ ಪ್ರೇಯಸಿಯ ಕೊಲೆಗೆ ಯತ್ನಿಸಿದ್ದಾನೆ. ಇದೀಗ ಪ್ರಕರಣದ ಸಂಪೂರ್ಣ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ನವೀನ್​ನನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ. ಹುಡುಗಿಯ ಅಮ್ಮನನ್ನೂ ವಿಚಾರಣೆಗೆ ಒಳಪಡಿಸಲಾಗಿದ್ದು, ಇಬ್ಬರೂ ಪೊಲೀಸ್​ ಕಸ್ಟಡಿಯಲ್ಲಿದ್ದಾರೆ.
  Published by:Sharath Sharma Kalagaru
  First published: