ಪುಣೆಯಲ್ಲಿ ಸೆಕ್ಸ್​ ರಾಕೆಟ್​​: ಹೊರ ಜಗತ್ತಿಗೆ ಇದು ಸ್ಪಾ ಸೆಂಟರ್​; ಒಳಗೆ ಮಾತ್ರ ಸಂಪೂರ್ಣ ವೇಶ್ಯಾವಾಟಿಕೆ

ಫೇಶಿಯಲ್ ಮಸಾಜ್, ಹೇರ್ ಕಟ್ ಹೆಸರಿನಲ್ಲಿ ಹೆಣ್ಣುಮಕ್ಕಳನ್ನು ಕೆಲಸಕ್ಕೆ ತೆಗೆದುಕೊಂಡು ವೇಶ್ಯಾವಾಟಿಕೆಗೆ ತಳ್ಳಲಾಗುತ್ತಿತ್ತು. ಬಳಿಕ ಬಲವಂತವಾಗಿ ಸೆಕ್ಸ್​ ದಂಧೆಗೆ ಈ ಹೆಣ್ಣುಮಕ್ಕಳನ್ನು ಬಳಸಿಕೊಳ್ಳಲಾಗಿತ್ತು.

news18
Updated:August 21, 2019, 3:38 PM IST
ಪುಣೆಯಲ್ಲಿ ಸೆಕ್ಸ್​ ರಾಕೆಟ್​​: ಹೊರ ಜಗತ್ತಿಗೆ ಇದು ಸ್ಪಾ ಸೆಂಟರ್​; ಒಳಗೆ ಮಾತ್ರ ಸಂಪೂರ್ಣ ವೇಶ್ಯಾವಾಟಿಕೆ
ಸಾಂದರ್ಭಿಕ ಚಿತ್ರ
news18
Updated: August 21, 2019, 3:38 PM IST
ನವದೆಹಲಿ(ಆಗಸ್ಟ್​​.21): ಪುಣೆಯಲ್ಲಿ ಸ್ಪಾ ಸೆಂಟರ್​​ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದವರೀಗ ಪೊಲೀಸರ ಅತಿಥಿಯಾಗಿದ್ದಾರೆ. ಟೂರಿಸ್ಟ್​​ ವೀಸಾ ಮೇಲೆ ಭಾರತಕ್ಕೆ ಬಂದ ಥೈಲ್ಯಾಂಡ್​​ ಮೂಲದ ಐವರು ಹೆಣ್ಣುಮಕ್ಕಳನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಿ ಸೆಕ್ಸ್​ ದಂಧೆ ನಡೆಸುತ್ತಿದ್ದರು. ಹೇಗೋ ಈ ವಿಚಾರ ತಿಳಿಯುತ್ತಿದ್ದಂತೆ ಸ್ಪಾ ಸೆಂಟರ್​​ ಮೇಲೆ ದಾಳಿ ಮಾಡಿದ ಪೊಲೀಸರಿಗೆ, ವೇಶ್ಯಾವಾಟಿಕೆ ನಡೆಸುತ್ತಿದ್ದ ಕಿಡಿಗೇಡಿಗಳ ತಂಡ ಸಿಕ್ಕಿಬಿದ್ದಿದೆ.

ಕಳೆದ ಒಂದು ವರ್ಷದಿಂದಲೂ ಸ್ಪಾ ಹೆಸರಿನಲ್ಲಿಯೇ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎನ್ನಲಾಗಿದೆ. ಪೊಲೀಸರು ಐವರು ಹೆಣ್ಣು ಮಕ್ಕಳನ್ನು ರಕ್ಷಿಸಿದ್ದಾರೆ. ಜತೆಗೆ ಸ್ಥಳದಲ್ಲಿ 13 ಸಾವಿರ ಹಣ ಮೊಬೈಲ್ ಪೋನ್ ಮತ್ತು ಕಾಂಡೋಮ್ ಪ್ಯಾಕೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಫೇಶಿಯಲ್ ಮಸಾಜ್, ಹೇರ್ ಕಟ್ ಹೆಸರಿನಲ್ಲಿ ಹೆಣ್ಣುಮಕ್ಕಳನ್ನು ಕೆಲಸಕ್ಕೆ ತೆಗೆದುಕೊಂಡು ವೇಶ್ಯಾವಾಟಿಕೆಗೆ ತಳ್ಳಲಾಗುತ್ತಿತ್ತು. ಬಳಿಕ ಬಲವಂತವಾಗಿ ಸೆಕ್ಸ್​ ದಂಧೆಗೆ ಈ ಹೆಣ್ಣುಮಕ್ಕಳನ್ನು ಬಳಸಿಕೊಳ್ಳಲಾಗಿತ್ತು.

ಇದನ್ನೂ ಓದಿ: ಕ್ಲಾಸ್​​ ರೂಮ್​​ನಲ್ಲಿ ವಿದ್ಯಾರ್ಥಿ ಜತೆ ಲೈಂಗಿಕ ಕ್ರಿಯೆ​​ ನಡೆಸುತ್ತಾ ಸಿಕ್ಕಿಬಿದ್ದ ಶಿಕ್ಷಕಿ​; 20 ವರ್ಷ ಜೈಲು

ಈ ಹಿಂದೆಯೇ ಇದೇ ಸ್ಪಾ ಸೆಂಟರ್​​​ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಈ ಸಂದರ್ಭದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಕಿಡಿಗೇಡಿಗಳನ್ನು ಬಂಧಿಸಲಾಗಿತ್ತು. ಮತ್ತೀಗ ಅದೇ ತಂಡ ಬೇರೆ ಸ್ಪಾ ಹೆಸರಿನಲ್ಲಿ ಸೆಕ್ಸ್​ ದಂಧೆಗಿಳಿದು ಜೈಲು ಕಂಬಿ ಎಣಿಸುತ್ತಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ

------------
Loading...

First published:August 21, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...