• Home
 • »
 • News
 • »
 • national-international
 • »
 • ಲೈಂಗಿಕ ದೌರ್ಜನ್ಯ ಆರೋಪದಡಿ ಟಿಆರ್​ಎಸ್ ಸಂಸದರ ಪುತ್ರನ ಮೇಲೆ ಪ್ರಕರಣ ದಾಖಲು

ಲೈಂಗಿಕ ದೌರ್ಜನ್ಯ ಆರೋಪದಡಿ ಟಿಆರ್​ಎಸ್ ಸಂಸದರ ಪುತ್ರನ ಮೇಲೆ ಪ್ರಕರಣ ದಾಖಲು

 • News18
 • Last Updated :
 • Share this:

  ನ್ಯೂಸ್ 18 ಕನ್ನಡ

  ನಿಜಾಮಬಾದ್  (ಆ.4): ನರ್ಸಿಂಗ್ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಮೇಲೆ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್) ಪಕ್ಷದ ಸಂಸದ ಡಿ. ಶ್ರೀನಿವಾಸ ಅವರ ಪುತ್ರ ಸಂಜಯ್ ಮೇಲೆ ಪ್ರಕರಣ ದಾಖಲಾಗಿದೆ.

  ಸಂಜಯ್ ವಿರುದ್ಧ 11 ಮಂದಿ ನರ್ಸಿಂಗ್ ವಿದ್ಯಾರ್ಥಿನಿಯರು ದೂರು ನೀಡಿದ್ದಾರೆ. ದೂರು ನೀಡಿದವರು ಯುವತಿಯರು ಸಂಜಯ್ ಮಾಲೀಕತ್ವದ ಶಂಕರ್ಯ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರಾಗಿದ್ದಾರೆ. ಸಂಜಯ್ ವಿರುದ್ಧ ಐಪಿಸಿ ಸೆಕ್ಷನ್ 354, 506, 509 ಹಾಗೂ 342 ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ನಿಜಾಮಬಾದ್ (ಉತ್ತರ)ನ ಸಹಾಯಕ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

  ಸಂಜಯ್ ನಿಜಾಮಬಾದ್​ನ ಮಾಜಿ ಮೇಯರ್ ಕೂಡ. ಸಂಜಯ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಹಲವು ದೂರುಗಳು ಈತನ ವಿರುದ್ಧ ದಾಖಲಾಗಿದ್ದವು.

  First published: