ಶ್ರೀನಗರದಲ್ಲಿ ಜೈಷ್ ಇ ಮೊಹಮ್ಮದ್ ಸಂಘಟನೆ ಘಟಕ ನಾಶ; ಗಣರಾಜ್ಯೋತ್ಸವಕ್ಕೂ ಮುನ್ನ ತಪ್ಪಿದ ಭಾರೀ ಅನಾಹುತ

ಜೈಷ್ ಘಟಕದ ನಾಶ ದೊಡ್ಡ ಯಶಸ್ಸಾಗಿದೆ. ಹಜರತ್​ಬಲ್​ನಲ್ಲಿ ಎರಡು ಗ್ರನೈಡ್ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದರು. ಇದರೊಂದಿಗೆ ಗಣರಾಜ್ಯೋತ್ಸವ ದಿನದಂದು ಉಗ್ರರು ನಡೆಸಲು ಉದ್ದೇಶಿಸಿದ್ದ ಬಹುದೊಡ್ಡ ದಾಳಿಯನ್ನು ಪೊಲೀಸರು ಆರಂಭದಲ್ಲೇ ನಾಶಪಡಿಸಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆ ಟ್ವೀಟ್ ಮಾಡಿದೆ.

HR Ramesh | news18-kannada
Updated:January 16, 2020, 8:28 PM IST
ಶ್ರೀನಗರದಲ್ಲಿ ಜೈಷ್ ಇ ಮೊಹಮ್ಮದ್ ಸಂಘಟನೆ ಘಟಕ ನಾಶ; ಗಣರಾಜ್ಯೋತ್ಸವಕ್ಕೂ ಮುನ್ನ ತಪ್ಪಿದ ಭಾರೀ ಅನಾಹುತ
ಶ್ರೀನಗರದಲ್ಲಿ ಭದ್ರತಾ ಸಿಬ್ಬಂದಿ (ಸಂಗ್ರಹ ಚಿತ್ರ)
  • Share this:
ನವದೆಹಲಿ: ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಶ್ರೀನಗರದಲ್ಲಿ ಸಂಘಟಿಸಿದ್ದ ದಾಳಿ ಘಟಕವನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಾಶಪಡಿಸಿದ್ದಾರೆ ಮತ್ತು ಗಣರಾಜ್ಯೋತ್ಸವದಂದು ಭಾರೀ ಪ್ರಮಾಣದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಹೊಂಚು ಹಾಕುತ್ತಿದ್ದ ಐವರನ್ನು ಬಂಧಿಸಿದ್ದಾರೆ.

ಉಗ್ರ ಚಟುವಟಿಕೆ ನಡೆಸಿ ಬಂಧನಕ್ಕೆ ಒಳಗಾಗಿರುವ ಐವರಿಂದ ಭಾರೀ ಪ್ರಮಾಣದ ಸ್ಫೋಟಕ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಭಯೋತ್ಪಾದನಾ ಘಟಕವೂ ಈ ಹಿಂದೆ ಗ್ರನೈಡ್ ದಾಳಿ ಸಹ ನಡೆಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಜೈಷ್ ಘಟಕದ ನಾಶ ದೊಡ್ಡ ಯಶಸ್ಸಾಗಿದೆ. ಹಜರತ್​ಬಲ್​ನಲ್ಲಿ ಎರಡು ಗ್ರನೈಡ್ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದರು. ಇದರೊಂದಿಗೆ ಗಣರಾಜ್ಯೋತ್ಸವ ದಿನದಂದು ಉಗ್ರರು ನಡೆಸಲು ಉದ್ದೇಶಿಸಿದ್ದ ಬಹುದೊಡ್ಡ ದಾಳಿಯನ್ನು ಪೊಲೀಸರು ಆರಂಭದಲ್ಲೇ ನಾಶಪಡಿಸಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆ ಟ್ವೀಟ್ ಮಾಡಿದೆ.ಸದರ್​ಬಾಲ್ ಹಜರತ್​ಬಲ್​ನ ಏಜಾಜ್​ ಶೈಖ್, ಅಸಾರ್ ಕಾಲೊನಿ ಹಜರತ್​ಬಲ್​ನ ಉಮರ್ ಹಮೀದ್ ಶೈಖ್,ಅಮೀದ್ ಚಿಕ್ಲಾ ಅಲಿಯಾಸ್ ಇಮ್ರಾನ್, ಎಲ್ಲಾಹಿಬಾಗ್​ ಸೌರಾದ ಸಾಹಿಲ್ ಫಾರೂಖ್ ಗೋಜ್ರಿ ಮತ್ತು ಸದರ್​ಬಲ್ ಹಜರತಬಲ್​ನ ನಾಸೀರ್ ಅಹ್ಮದ್​ ಬಂಧಿತ ಶಂಕಿತ ಉಗ್ರರಾಗಿದ್ದಾರೆ.

ಇದನ್ನು ಓದಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ‘ಕಾಶ್ಮೀರ’ ಕಿರಿಕ್​ಗೆ ಯತ್ನ: ಪಾಕ್, ಚೀನಾಗೆ ಮತ್ತೆ ಮುಖಭಂಗ
Published by: HR Ramesh
First published: January 16, 2020, 8:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading