Sheep Arrested: ಇನ್ನೊಬ್ಬರ ಜಮೀನಿನಲ್ಲಿ ಮೇಯುತ್ತಿದ್ದ ಕುರಿಯನ್ನು ಅರೆಸ್ಟ್ ಮಾಡಿದ ಪೊಲೀಸ್, ವಿಡಿಯೋ ವೈರಲ್

ಓಲ್ಡ್ ಟೌನ್ ಪೊಲೀಸ್ ಇಲಾಖೆಯ ವರದಿ ಪ್ರಕಾರ, ಇಂದು ಬೆಳಿಗ್ಗೆ ನಮಗೆ ವ್ಯಕ್ತಿ ಒಬ್ಬರಿಂದ ನಮಗೆ ಕರೆ ಬಂತು. ಫೋನ್ ಮಾಡಿದ ವ್ಯಕ್ತಿ ನನ್ನ ವೈಯಕ್ತಿಕ ಆಸ್ತಿಯ ಜಾಗದಲ್ಲಿ ಬೀದಿ ಕುರಿಯೊಂದು ಅಲೆದಾಡುತ್ತಿದೆ ಎಂದು ಹೇಳಿದರು. ಕುರಿಯನ್ನು ಹಿಡಿದು ಅದನ್ನು ಪೊಲೀಸ್ ಕಾರಿನ ಹಿಂದಿನ ಸೀಟಿನಲ್ಲಿ ಕುಳ್ಳಿರಿಸಿ ಠಾಣೆಗೆ ಕರೆದುಕೊಂಡು ಬರಲಾಗಿದೆ.

ಪೊಲೀಸ್ ವಾಹನದಲ್ಲಿ ಕುಳಿತಿರುವ ಕುರಿ

ಪೊಲೀಸ್ ವಾಹನದಲ್ಲಿ ಕುಳಿತಿರುವ ಕುರಿ

 • Share this:
  ನಾವು ಹಲವಾರು ಹಾಸ್ಯಮಯ (Comedy) ವಿಡಿಯೋಗಳನ್ನು (Video) ನೋಡಿದ್ದೇವೆ. ಅದರಲ್ಲಿ ಹಲವು ಥರದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ವೈರಲ್ (Viral) ಆಗುತ್ತವೆ. ಹೆಚ್ಚು ವೀವ್ಸ್ (Views) ಕೂಡ ಪಡೆದುಕೊಂಡಿವೆ. ಆದರೆ ಇಂದು ನಾವು ತುಂಬಾ ತಮಾಷೆಯ ಸುದ್ದಿಯೊಂದನ್ನು ಇಲ್ಲಿ ನೋಡೋಣ. ಅಷ್ಟೊಂದು ಸೀರಿಯಸ್ ಮತ್ತು ತಮಾಷೆಯಾಗಿರುವ ಸುದ್ದಿ ಏನಪ್ಪಾ ಅಂದ್ರೆ ಕುರಿಯೊಂದನ್ನ ಬಂಧಿಸಲಾಗಿದ್ದು, ಆರಾಧ್ಯ ವಿಡಿಯೋ ಆನ್ ಲೈನ್ ನಲ್ಲಿ ವೈರಲ್ ಆಗಿದೆ. ಅರೇ.. ಕುರಿಯನ್ನ ಬಂಧಿಸಿದ್ರಾ? ಅದೇನಪ್ಪಾ ಮಾಡಿತ್ತು? ಮನುಷ್ಯರಷ್ಟೇ ಅಲ್ಲ, ಕುರಿಯನ್ನು ಪೊಲೀಸರು ಬಂಧಿಸಿದ್ದಾರೆ ಅಂದ್ರೆ ಸೀರಿಯಸ್ ಇಶ್ಯು ಏನೋ ಇದೆ..

  ಇಲ್ಲ ರೀ ಇಂಟ್ರೋದಲ್ಲೇ ಎಲ್ಲಾನೂ ಹೇಳಿ ಬಿಡೋಕೆ ಆಗುತ್ತಾ? ಹಾಗಾದ್ರೆ ನಾವು ಕುರಿಯನ್ನು ಯಾಕೆ ಬಂಧಿಸಿದ್ರು, ಎಲ್ಲಿ ಬಂಧಿಸಿದ್ರು ಅನ್ನೋ ವಿಷಯವನ್ನಾ ಈ ಕೆಳಗೆ ನೋಡೋಣ.

  ಕುರಿಯನ್ನು ಬಂಧಿಸಿದ ವಿಡಿಯೋ ವೈರಲ್

  ಓಲ್ಡ್ ಟೌನ್ ಪೊಲೀಸ್ ಇಲಾಖೆಯ ವರದಿ ಪ್ರಕಾರ, ಇಂದು ಬೆಳಿಗ್ಗೆ ನಮಗೆ ವ್ಯಕ್ತಿ ಒಬ್ಬರಿಂದ ನಮಗೆ ಕರೆ ಬಂತು. ಫೋನ್ ಮಾಡಿದ ವ್ಯಕ್ತಿ ನನ್ನ ವೈಯಕ್ತಿಕ ಆಸ್ತಿಯ ಜಾಗದಲ್ಲಿ ಬೀದಿ ಕುರಿಯೊಂದು ಅಲೆದಾಡುತ್ತಿದೆ ಎಂದು ಹೇಳಿದರು.

  ಇದನ್ನೂ ಓದಿ: ನವವಧು ಹೇಳಿದ್ದಕ್ಕೆ ಒಪ್ಪಂದಕ್ಕೆ ಸಹಿ ಹಾಕಿದ! ಆಮೇಲೆ ಓದಿ ನೋಡಿದ್ರೆ ಶಾಕ್

  ವ್ಯಕ್ತಿಯ ಕರೆಯ ಬೆನ್ನಲ್ಲೇ ಸಾರ್ಜೆಂಟ್ ಬೈಲಿ ಮತ್ತು ಉಪಮುಖ್ಯಸ್ಥ ಮಿಲ್ಲರ್ ಅವರು ಸ್ಥಳಕ್ಕೆ ಹೋದರು. ನಂತರ ಕುರಿಯನ್ನು ಹಿಡಿದು ಅದನ್ನು ಪೊಲೀಸ್ ಕಾರಿನ ಹಿಂದಿನ ಸೀಟಿನಲ್ಲಿ ಕುಳ್ಳಿರಿಸಿ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.  ನಗೆಗಡಲಲ್ಲಿ ತೇಲಿದ ಪೊಲೀಸರು

  ವೈರಲ್ ವಿಡಿಯೋದಲ್ಲಿ, ಪೊಲೀಸ್ ಕ್ರೂಸರ್‌ನಲ್ಲಿ ಕುರಿಯೊಂದು ಕುಳಿತಿರುವುದನ್ನು ಕಂಡು ದಾರಿ ಹೋಕರು, ಹಲವು ಜನರು ನಕ್ಕಿದ್ದಾರೆ. ಅಲ್ಲದೇ ಕುರಿ ಕಾರಿನೊಳಗಿನಿಂದ ತನ್ನ ತಲೆಯನ್ನು ಹೊರಗೆ ಹಾಕಲು ಆರಂಭಿಸಿತ್ತು. ಕುರಿಯ ಒದ್ದಾಟ ಹಾಗೂ ಆಟವನ್ನು ಕಂಡ ಪೊಲೀಸರು ನಕ್ಕು ನಕ್ಕು ಸುಸ್ತಾಗಿದ್ದಾರೆ.

  "ಕುರಿ ಕ್ರೂಸರ್‌ನಲ್ಲಿ ಸವಾರಿ ಮಾಡುತ್ತಿದೆ"

  "ಕುರಿ ಕ್ರೂಸರ್‌ನಲ್ಲಿ ಸವಾರಿ ಮಾಡುತ್ತಿದೆ" ಎಂದು ಓಲ್ಡ್ ಟೌನ್ ಪೊಲೀಸ್ ಇಲಾಖೆ, ಫೇಸ್‌ಬುಕ್‌ನಲ್ಲಿ ಶೀರ್ಷಿಕೆ ನೀಡಿ ಸುದ್ದಿಯನ್ನು ಶೇರ್ ಮಾಡಿದೆ. ಅಧಿಕಾರಿಗಳು ಮತ್ತಷ್ಟು ಶೀರ್ಷಿಕೆಯೊಂದಿಗೆ ವಿಷಯವನ್ನು ವಿವರಿಸಿದ್ದಾರೆ. “ಇಂದು ಬೆಳಿಗ್ಗೆ ನಾವು, ವ್ಯಕ್ತಿಯೊಬ್ಬರ ಖಾಸಗಿ ಜಮೀನಿನಲ್ಲಿ ಅಥವಾ ಆಸ್ತಿಯಿರುವ ಜಾಗದಲ್ಲಿ ಮೇಯುತ್ತಾ, ಅಲೆದಾಡುತ್ತಿದ್ದ ಕುರಿಯನ್ನು ಬಂಧಿಸಿ ತಂದಿದ್ದೇವೆ ಎಂದು ಬರೆದುಕೊಂಡಿದ್ದಾರೆ.

  ಸಾರ್ಜೆಂಟ್ ಬೈಲಿ ಮತ್ತು ಡೆಪ್ಯೂಟಿ ಚೀಫ್ ಮಿಲ್ಲರ್

  ಸಾರ್ಜೆಂಟ್ ಬೈಲಿ ಮತ್ತು ಡೆಪ್ಯೂಟಿ ಚೀಫ್ ಮಿಲ್ಲರ್ ಅವರು ಕುರಿಯನ್ನು ಪೊಲೀಸ್ ವಾಹನದಲ್ಲಿ ಕೂರಿಸಿದ್ದಾರೆ. ಕುರಿಯನ್ನು ಪೊಲೀಸ್ ವಾಹನದ ಹಿಂಭಾಗದ ಸೀಟಿನಲ್ಲಿ ಕೂರಿಸಿದರು. ಡಿಸಿ ಮಿಲ್ಲರ್ ಅವರು ಜಮೀನಿನಲ್ಲಿ ವಾಸ ಮಾಡಿದವರು. ಅವರಿಗೆ ಪ್ರಾಣಿಗಳನ್ನು ಪಳಗಿಸಿ ಹಾಗೂ ಅವುಗಳೊಂದಿಗೆ ಒಡನಾಟ ಹೊಂದಿ ಅಭ್ಯಾಸವಿದೆ.

  ಹೀಗಾಗಿ ಅವರು ಕೃಷಿ ಮತ್ತು ಪ್ರಾಣಿಗಳನ್ನು ಸಂಭಾಳಿಸುವುದು ಗೊತ್ತಿದೆ. ಅವರಿಗಿರುವ ಪ್ರಾಣಿಗಳ ಒಡನಾಟದ ಅನುಭವ ಕುರಿಯನ್ನು ವಾಹನದಲ್ಲಿ ಕರೆದೊಯ್ಯಲು ಸಹಕಾರಿ ಆಗಿದೆ ಎಂದು ಹೇಳಲಾಗಿದೆ. ಪ್ರಾಣಿಗಳನ್ನು ನಿರ್ವಹಿಸುವಲ್ಲಿ ವ್ಯಾಪಕ ಅನುಭವ ಹೊಂದಿದ್ದಾರೆ. ನೆರೆಹೊರೆಯ ಸುತ್ತಲೂ ಸ್ವಲ್ಪ ದೂರ ಅಡ್ಡಾಡಿದ ನಂತರ, ಅವರು ಕುರಿಯನ್ನು ಪತ್ತೆ ಹಚ್ಚಲು ಮತ್ತು ಅವರ ಮಾಲೀಕರಿಗೆ ಹಿಂತಿರುಗಿಸಲು ಸಾಧ್ಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

  ವೀಡಿಯೊದಲ್ಲಿ, ಕುರಿಯು ಪೊಲೀಸ್ ವಾಹನದಲ್ಲಿ ಕುಳಿತು ತಲೆಯನ್ನು ಸಣ್ಣ ಕಿಟಕಿಯಲ್ಲಿ ಹೊರಗೆ ತೂರಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಜೊತೆಗೆ ಇತರೆ ಕುರಿಗಳು ಒದರುವ ಸದ್ದು ಕೂಡ ಕೇಳಿ ಬಂದಿದೆ. ಇದನ್ನು ಕಂಡ ಪೊಲೀಸರು ಬಿದ್ದು ಬಿದ್ದು ನಕ್ಕಿದ್ದಾರೆ. ಇನ್ನು ಅರೆಸ್ಟ್ ಆಗಿದ್ದ ಕುರಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

  ಇದನ್ನೂ ಓದಿ: ಇದಕ್ಕಿಂತಲೂ ಬ್ಯಾಡ್ ಲಕ್ ಇರಲಾರದು, ಫೋಟೋ ನೋಡಿದ್ರೆ ಕಚಗುಳಿ ಇಟ್ಟಂಗೆ ಆಗುತ್ತೆ!

  ಈ ಪೋಸ್ಟ್ ಹಂಚಿಕೊಂಡ ನಂತರ, ಪೋಸ್ಟ್ 34k ವೀಕ್ಷಣೆ ಮತ್ತು ಸಾಕಷ್ಟು ಕಮೆಂಟ್ ಪಡೆದುಕೊಂಡಿದೆ. ವಿಡಿಯೋವನ್ನು ನೆಟ್ಟಿಗರು ಸಾಕಷ್ಟು ತಮಾಷೆಯಾಗಿ ನೋಡಿದ್ದಾರೆ. ಜೊತೆಗೆ ಕುರಿಗಾಗಿ ಲೈಕ್ ಒತ್ತಿದ್ದಾರೆ. ಸಾಕಷ್ಟು ತಮಾಷೆಯ ಕಾಮೆಂಟ್ ಗಳು ಕೂಡ ಬಂದಿವೆ.
  Published by:renukadariyannavar
  First published: