ಪಬ್​ಜಿ ಗೇಮ್ ಆಡುತ್ತಿದ್ದ 10 ಮಂದಿ ಬಂಧನ: ನೀವು ಆಡುತ್ತೀರಾ ಹಾಗಿದ್ರೆ ಎಚ್ಚರ..!

ವಿಶ್ವದಾದ್ಯಂತ ಹೊಸ ಕ್ರೇಜ್ ಹುಟ್ಟು ಹಾಕಿರುವ ಮೊಬೈಲ್ ಗೇಮ್ ಹೆಸರು ಪಬ್​ಜಿ. ಇದನ್ನು ಮೊಬೈಲ್​, ಕಂಪ್ಯೂಟರ್ ಮತ್ತು ಗೇಮ್​​ ಅಡ್ಡಗಳಲ್ಲಿಯೂ ಆಡಲಾಗುತ್ತದೆ.

zahir | news18
Updated:March 14, 2019, 5:49 PM IST
ಪಬ್​ಜಿ ಗೇಮ್ ಆಡುತ್ತಿದ್ದ 10 ಮಂದಿ ಬಂಧನ: ನೀವು ಆಡುತ್ತೀರಾ ಹಾಗಿದ್ರೆ ಎಚ್ಚರ..!
ಪಬ್​ಜಿ
zahir | news18
Updated: March 14, 2019, 5:49 PM IST
ಜನಪ್ರಿಯ ಮೊಬೈಲ್ ಗೇಮ್​ ಪಬ್​ಜಿ(PUBG) ಆಡುತ್ತಿದ್ದ 10 ಮಂದಿಯನ್ನು ಬಂಧಿಸಿರುವುದಾಗಿ ರಾಜ್​ಕೋಟ್​ ಪೊಲೀಸರು ತಿಳಿಸಿದ್ದಾರೆ. ಗುಜರಾತ್​ ರಾಜ್ಯದ ಸೂರತ್​ ಮತ್ತು ರಾಜ್​ಕೋಟ್​ನಲ್ಲಿ ಪಬ್​ಜಿ ಆಡುವುದನ್ನು ಇತ್ತೀಚೆಗೆ ನಿಷೇಧಿಸಲಾಗಿತ್ತು. ಇದಾಗ್ಯೂ ಪೊಲೀಸರ ಆದೇಶವನ್ನು ಪಾಲಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದರಲ್ಲಿ 6 ಮಂದಿ ಕಾಲೇಜು ವಿದ್ಯಾರ್ಥಿಗಳಾಗಿದ್ದು, ಉಳಿದವರು ನಾಲ್ವರು ಯುವಕರು ಎಂದು ತಿಳಿದು ಬಂದಿದೆ. ಮಾರ್ಚ್ 9 ರಿಂದ ಏಪ್ರಿಲ್ 30 ರವರೆಗೆ ಸೂರತ್ ಮತ್ತು ರಾಜ್​ಕೋಟ್​ನಲ್ಲಿ ಈ ಗೇಮ್​ಗೆ ನಿರ್ಬಂಧ ವಿಧಿಸಲಾಗಿದೆ. ಇದನ್ನು ಆಡುವವರ ವಿರುದ್ಧ ಯಾರು ಬೇಕಾದರೂ ದೂರು ನೀಡಬಹುದು ಎಂದು ರಾಜ್​ಕೋಟ್​ ಪೊಲೀಸ್ ಕಮಿಷನರ್ ಮನೋಜ್ ಅಗರ್ವಾಲ್ ಅಧಿಸೂಚನೆ ಹೊರಡಿಸಿದ್ದಾರೆ.

ಈ ಕುರಿತು ಈಗಾಗಲೇ ಪೊಲೀಸರು ನೊಟೀಸ್​ ಜಾರಿಗೊಳಿಸಿದ್ದು, ಈ ಆದೇಶಕ್ಕೆ ವಿರುದ್ಧವಾಗಿ ಗೇಮ್ ಆಡಿದರೆ, ಕೇಂದ್ರೀಯ ಕಾಯ್ದೆ 188ರ ಅಡಿಯಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

ಗುಜರಾತ್​ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ದೂರಿನ ಅನ್ವಯ ಪೊಲೀಸ್​ ಇಲಾಖೆ, ಪಬ್​ಜಿ ಆಟಗಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಪಬ್​ಜಿ ಆಟದಿಂದ ವಿದ್ಯಾರ್ಥಿಗಳ ಅಧ್ಯಯನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಪೋಷಕರಿಂದ ಆಯೋಗಕ್ಕೆ ವ್ಯಾಪಕ ದೂರುಗಳು ಬರುತ್ತಿದೆ. ಹೀಗಾಗಿ ಅದಕ್ಕೆ ನಿರ್ಬಂಧ ವಿಧಿಸಲು ನಿರ್ಧರಿಸಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಆಕ್ರಮಣಕಾರಿ ಆಟವನ್ನು ನಿಷೇಧಿಸಬೇಕೆಂದು ಇತ್ತೀಚೆಗೆ ತಮಿಳುನಾಡು ವಿಧಾನಸಭೆಯಲ್ಲೂ ಚರ್ಚೆ ನಡೆಸಲಾಗಿತ್ತು. ಅಲ್ಲದೆ ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ​ ಪಬ್​ಜಿ ಆಟದ ವ್ಯಸನಕ್ಕೆ ಸಿಲುಕಿದ್ದ 19 ವರ್ಷದ ಯುವಕನೊಬ್ಬ ಹೆತ್ತ ತಂದೆ, ತಾಯಿ ಹಾಗೂ ತಂಗಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧನಕ್ಕಿಡಾಗಿದ್ದನು.

ಪಬ್​ಜಿ ಗೇಮ್ ಎಂದರೇನು?ವಿಶ್ವದಾದ್ಯಂತ ಹೊಸ ಕ್ರೇಜ್ ಹುಟ್ಟು ಹಾಕಿರುವ ಮೊಬೈಲ್ ಗೇಮ್ ಹೆಸರು ಪಬ್​ಜಿ. ಇದನ್ನು ಮೊಬೈಲ್​, ಕಂಪ್ಯೂಟರ್ ಮತ್ತು ಗೇಮ್​​ ಅಡ್ಡಗಳಲ್ಲಿಯೂ ಆಡಲಾಗುತ್ತದೆ. ಈ ಆ್ಯನಿಮೇಷನ್​ ಗೇಮ್​ನಲ್ಲಿ ಒಂದಷ್ಟು ಜನರನ್ನು ಒಂದು ನಿರ್ದಿಷ್ಟ ಸ್ಥಳದಲ್ಲಿ ವಿಮಾನದ ಮೂಲಕ ಇಳಿಸಲಾಗುತ್ತದೆ. ಅಲ್ಲಿ ಸಿಗುವ ಶಸ್ತ್ರಾಸ್ತ್ರಗಳನ್ನು ಬಳಸಿ ಎದುರಾಳಿಗಳನ್ನು ಹೊಡೆದುರುಳಿಸುವ ರೋಮಾಂಚಕಾರಿ ಗೇಮ್.

ಇದನ್ನು ಒಬ್ಬರು, ಇಬ್ಬರು ಅಥವಾ ನಾಲ್ಕು ಜನರ ತಂಡವಾಗಿ ಕೂಡ ಆಡಬಹುದು. ಅದ್ಭುತ ಗ್ರಾಫಿಕ್ಸ್ ಮತ್ತು ಸೌಂಡ್ ಎಫೆಕ್ಟ್​ನಿಂದ ಅತಿ ಕಡಿಮೆ ಸಮಯದಲ್ಲಿ ವಿಶ್ವದ ಗೇಮ್​ ಪ್ರಿಯರನ್ನು ಪಬ್​ಜಿ ತನ್ನತ್ತ ಸೆಳೆದುಕೊಳ್ಳಲು ಯಶಸ್ವಿಯಾಗಿದೆ.​ ಈ ಗೇಮ್​ನ ಜನಪ್ರಿಯತೆ ಮತ್ತು ಮತ್ತಷ್ಟು ಮಾರ್ಕೆಟಿಂಗ್​ ದೃಷ್ಟಿಯಿಂದ ಟೆನ್​ಸೆಂಟ್ ಗೇಮ್ಸ್​ ಮತ್ತು ಪಬ್​ಜಿ ಕಾರ್ಪೋರೇಷನ್ ವಿಶ್ವದ ಮೊದಲ ಇ-ಸ್ಪೋರ್ಟ್ಸ್​ ಟೂರ್ನಮೆಂಟ್ ಅನ್ನು ಕೂಡ ಆಯೋಜಿಸಿತ್ತು.

ಇದನ್ನೂ ಓದಿ: ಕ್ಯಾಲಿಫೋರ್ನಿಯಾದಲ್ಲೂ ಕೆ.ಜಿ.ಎಫ್ ಕ್ರೇಜ್? ಕೆಟಿಎಂ ಡ್ಯೂಕ್​ ಆಯ್ತು ರಾಕಿ ಬೈಕ್

First published:March 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ