ಪಿಎನ್​ಬಿ ಹಗರಣ: ನೀರವ್ ಮೋದಿ ವಿರುದ್ಧ ಇಂಟರ್ಪೋಲ್​ನಿಂದ ರೆಡ್ ಕಾರ್ನರ್ ನೋಟಿಸ್


Updated:July 2, 2018, 11:03 AM IST
ಪಿಎನ್​ಬಿ ಹಗರಣ: ನೀರವ್ ಮೋದಿ ವಿರುದ್ಧ ಇಂಟರ್ಪೋಲ್​ನಿಂದ ರೆಡ್ ಕಾರ್ನರ್ ನೋಟಿಸ್
ನೀರವ್ ಮೋದಿ

Updated: July 2, 2018, 11:03 AM IST
- ನ್ಯೂಸ್18 ಕನ್ನಡ

ನವದೆಹಲಿ(ಜುಲೈ 02): ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ ವಂಚನೆ ಎಸಗಿದ ಪ್ರಕರಣ ಸಂಬಂಧ ಇಂಟರ್​ಪೋಲ್ ಸಂಘಟನೆಯು ನೀರವ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟೀಸ್ ಜಾರಿಗೊಳಿಸಿದೆ. ಇದರೊಂದಿಗೆ ಆಭರಣ ಉದ್ಯಮಿ ನೀರವ್ ಮೋದಿ ಯಾವಾಗ ಬೇಕಾದರೂ ಬಂಧನಕ್ಕೊಳಗಾಗುವ ಸಾಧ್ಯತೆ ಇದೆ. ಇದೇ ವೇಳೆ, ಬ್ರಿಟನ್ ದೇಶದಲ್ಲಿರುವ ನೀರವ್ ಮೋದಿಯನ್ನು ಭಾರತಕ್ಕೆ ಗಡೀಪಾರು ಮಾಡುವಂತೆ ಜಾರಿ ನಿರ್ದೇಶನಾಲಯವು ವಿದೇಶಾಂಗ ಸಚಿವಾಲಯದ ಮೂಲಕ ಬ್ರಿಟನ್ ಸರಕಾರಕ್ಕೆ ಮನವಿ ಮಾಡಿದೆ.

ಕೆಲ ತಿಂಗಳ ಹಿಂದಷ್ಟೇ ಪಿಎನ್​ಬಿ ಹಗರಣದ ಆರೋಪಿಗಳಾದ ನೀರವ್ ಮೋದಿ, ಮೆಹುಲ್ ಚೋಕ್ಸಿ ಮತ್ತು ನಿಶಾಲ್ ವಿರುದ್ಧ ಇಂಟರ್​ಪೋಲ್ ಫೆ. 15ರಂದು ಡಿಫ್ಯೂಶನ್ ನೋಟೀಸ್ ನೀಡಿತ್ತು. ಆ ಮೂಲಕ ಬ್ರಿಟನ್ ದೇಶದಲ್ಲಿರುವ ನೀರವ್ ಮೋದಿಯ ಸ್ಥಳ ಮತ್ತು ಚಲನವಲನ ತಿಳಿದುಕೊಳ್ಳಲು ಭಾರತೀಯ ತನಿಖಾ ಸಂಸ್ಥೆಗಳು ಪ್ರಯತ್ನಿಸುತ್ತಲೇ ಇವೆ. ಆದರೆ, ಮೋದಿಯ ಸ್ಥಳ ನಿಖರವಾಗಿ ಇನ್ನೂ ಗೊತ್ತಾಗಿಲ್ಲ.

ನೀರವ್ ಮೋದಿ ಆರೋಪಿಯಾಗಿರುವ ಪಿಎನ್​ಬಿ ಹಗರಣವು ದೇಶದ ಅತಿದೊಡ್ಡ ಬ್ಯಾಂಕಿಂಗ್ ಹಗರಣಗಳಲ್ಲೊಂದಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್​ನಲ್ಲಿ 200 ಕೋಟಿ ಡಾಲರ್ ಹಣದ ಹಗರಣ ಇದಾಗಿದೆ. ಮುಂಬೈನ ವಿಶೇಷ ಸಿಬಿಐ ಕೋರ್ಟ್​ನಲ್ಲಿ ಪ್ರಕರಣದ ಚಾರ್ಜ್​ಶೀಟ್ ಸಲ್ಲಿಕೆಯಾಗಿದೆ. ನೀರವ್ ಮೋದಿ, ಅವರ ಸಹೋದರ ನಿಶಾಲ್, ಸಂಬಂಧಿ ಮೆಹುಲ್ ಚೋಕ್ಸಿ ಮತ್ತು ಗೀತಾಂಜಲಿ ಗ್ರೂಪ್​ನ ಅಧಿಕಾರಿ ಸುಭಾಷ್ ಪರಬ್ ವಿರುದ್ಧ ಆರೋಪಪಟ್ಟಿ ದಾಖಲಾಗಿದೆ. ಆದರೆ, ಹಗರಣ ಬೆಳಕಿಗೆ ಬರುವ ಕೆಲ ದಿನಗಳ ಮೊದಲೇ ನೀರವ್ ಮೋದಿ ಮತ್ತಿತರ ಕೆಲ ಆರೋಪಿಗಳು ಭಾರತ ಬಿಟ್ಟು ವಿದೇಶಕ್ಕೆ ಪರಾರಿಯಾಗಿದ್ದರು.
First published:July 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...