ನೀರವ್​ ಮೋದಿ ಬಳಿ ಆರಕ್ಕಿಂತಲೂ ಹೆಚ್ಚು ಪಾಸ್​ಪೋರ್ಟ್​ಗಳು​: ದಾಖಲಾಗಲಿದೆ ಹೊಸ FIR


Updated:June 18, 2018, 10:21 AM IST
ನೀರವ್​ ಮೋದಿ ಬಳಿ ಆರಕ್ಕಿಂತಲೂ ಹೆಚ್ಚು ಪಾಸ್​ಪೋರ್ಟ್​ಗಳು​: ದಾಖಲಾಗಲಿದೆ ಹೊಸ FIR

Updated: June 18, 2018, 10:21 AM IST
ನ್ಯೂಸ್ 18 ಕನ್ನಡ

ನವದೆಹಲಿ(ಜೂ.18): PNB ಹಗರಣದ ಪ್ರಕರಣದ ತನಿಖೆ ನಡೆಸುತ್ತಿರುವ ಏಜೆನ್ಸಿಗಳಿಗೆ ಶಾಕಿಂಗ್ ಮಾಹಿತಿಯೊಂದು ಲಭ್ಯವಾಗಿದೆ. ವಿದೇಶಕ್ಕೆ ಪರಾರಿಯಾದ ವಜ್ರದ ವ್ಯಾಪಾರಿ ನೀರವ್​ ಮೋದಿಯ ಬಳಿ ಕಡಿಮೆ ಎಂದರೂ ಆರು ಭಾರತೀಯ ಪಾಸ್​ಪೋರ್ಟ್​ಗಳಿದ್ದವು ಎಂಬ ಬೆಚ್ಚಿ ಬೀಳಿಸುವ ಮಾಹಿತಿ ಲಭಿಸಿದೆ.

ನೀರವ್​ ಮೋದಿಯವರ ಪಾಸ್​ಪೋರ್ಟ್​ ರದ್ದುಗೊಳಿಸಿದ ಬಳಿಕವೂ ಅವರು ಸತತವಾಗಿ ಪ್ರಯಾಣಿಸುತ್ತಿದ್ದರು. ಹೀಗಿರುವಾಗ ಅವರ ಬಳಿ ಆರು ಪಾಸ್​ಪೋರ್ಟ್​ಗಳಿರುವ ವಿಚಾರ ಬಯಲಾಗಿದೆ. ಇವುಗಳಲ್ಲಿ ಎರಡು ಪಾಸ್​ಪೋರ್ಟ್​ಗ:ಳು ಕಳೆದ ಕೆಲ ಸಮಯದಿಂದ ಸಕ್ರಿಯವಾಗಿವೆ ಎಂದು ಹೇಳಲಾಗಿದೆ. ಲಭ್ಯವಾದ ಮಾಹಿತಿ ಅನ್ವಯ ಉಳಿದ ನಾಲ್ಕು ಪಾಸ್​ಪೋರ್ಟ್​ಗಳು ಸಕ್ರಿಯವಾಗಿಲ್ಲ ಎಂದು ತಿಳಿದು ಬಂದಿದೆ. ಇನ್ನು ಸಕ್ರಿಯವಾಗಿರುವ ಪಾಸ್​ಪೋರ್ಟ್​ಗಳಲ್ಲಿ ಒಂದರಲ್ಲಿ ನೀರವ್​ ಮೋದಿಯ ಸಂಪೂರ್ಣ ಹೆಸರನ್ನು ನಮೂದಿಸಲಾಗಿದ್ದು, ಮತ್ತೊಂದರಲ್ಲಿ ಕೇವಲ ಮೊದಲ ಹೆಸರಷ್ಟೇ ಮುದ್ರಿಸಲಾಗಿದೆ. ಈ ಪಾಸ್​ಪೋರ್ಟ್​ನಲ್ಲಿ ಅವರಿಗೆ ಬ್ರಿಟನ್​ನ 40 ತಿಂಗಳ ವೀಜಾ ಕೂಡಾ ನೀಡಲಾಗಿದೆ.

ಸಾಧ್ಯತೆಗಳು: ಈ ಮೂಲಕ ನೀರವ್​ ಮೋದಿ ಭಾರತೀಯ ಅಧಿಕಾರಿಗಳ ಗಮನಕ್ಕೆ ಬಂದಿದ್ದ ಅಧಿಕೃತ ಪಾಸ್​ಪೋರ್ಟ್​ ರದ್ದಾದ ಬಳಿಕವೂ ಸತತವಾಗಿ ಪ್ರಯಾಣಿಸುತ್ತಿದ್ದಾರೆ. ಸರ್ಕಾರವು ವಿದೇಶಾಂಗ ಸಚಿವಾಲಯದ ಮೂಲಕ ಇಂಟರ್ಪೋಲ್​ಗೆ ನೀರವ್​ ಮೋದಿಯ ರದ್ದುಗೊಳಿಸಲಾಗಿರುವ ಎರಡು ಪಾಸ್​ಪೋರ್ಟ್​ಗಳ ಮಾಹಿತಿ ನೀಡಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಪರಾರಿಯಾದ ವಜ್ರದ ವ್ಯಾಪಾರಿ ಇದನ್ನೇ ಉಪಯೋಗಿಸಿಕೊಂಡು ವಾಯು ಮಾರ್ಗ ಹಾಗೂ ಸಮುದ್ರ ಮಾರ್ಗದ ಮೂಲಕ ಪ್ರಯಾಣಿಸುತ್ತಿದ್ದ ಸಾಧ್ಯತೆಗಳಿವೆ. ಭದ್ರತಾ ಸಂಸ್ಥೆಯ ಅಧಿಕಾರಿಯೊಬ್ಬರು ಈ ಕುರಿತಾಗಿ ಮಾತನಾಡುತ್ತಾ ನೀರವ್​ ಮೋದಿಯ ವಿರುದ್ಧ ಮತ್ತೊಂದು ಎಫ್​ಐಆರ್​ ದಾಖಲಿಸುವ ಸಾಧ್ಯತೆಗಳಿವೆ ಹಾಗೂ ಆಂತರಿಕ ತನಿಖೆ ಮುಗಿದ ಬಳಿಕ ಅವರ ವಿರುದ್ಧ ಮೊಕದ್ದಮೆ ಹೂಡುವ ಸಾಧ್ಯತೆಗಳೂ ಇವೆ ಎಂದು ಹೇಳಿದ್ದಾರೆ.
First published:June 18, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ