Narendra Modi: ಮೋದಿ ಭದ್ರತೆಯಲ್ಲಿ ಭಾರೀ ಲೋಪ, ಕಾಂಗ್ರೆಸ್ ನಾಯಕರು ಅರೆಸ್ಟ್

ಹೆಲಿಕಾಪ್ಟರ್ ಹತ್ತುತ್ತಿರುವ ಮೋದಿ

ಹೆಲಿಕಾಪ್ಟರ್ ಹತ್ತುತ್ತಿರುವ ಮೋದಿ

ಆಂಧ್ರಪ್ರದೇಶದ ವಿಮಾನ ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ಟೇಕಾಫ್ ಆಗುತ್ತಿದ್ದಂತೆ ಕಪ್ಪು ಬಲೂನ್‌ಗಳು ಇಂದು ಭದ್ರತಾ ಭೀತಿಗೆ ಕಾರಣವಾಗಿವೆ. 

  • Share this:

ದೆಹಲಿ(ಜು.05): ಪ್ರಧಾನಿ ಮೋದಿ ತೆಲಂಗಾಣದಲ್ಲಿ (Telangana) ಬಿಜೆಪಿ  (BJP) ಕಾರ್ಯಕಾರಿಣಿಗಾಗಿ (Executive Meeting) ಭಾಗವಹಿಸಲು ಬಂದಾಗ ಅಲ್ಲಿನ ಸಿಎಂ ಕೆಸಿಆರ್ ಸ್ವಾಗತಕ್ಕೆ ಬರದೆ ಚರ್ಚೆಗೆ ದಾರಿ ಮಾಡಿದ್ದರು. ಪ್ರಧಾನಿ (Prime Minister) ಬಂದಾಗ ಆಯಾ ರಾಜ್ಯದ ಸಿಎಂ ಬಂದು ಸ್ವಾಗತಿಸುವ ಪ್ರೊಟೋಕಾಲ್​ನ್ನು (Protocol) ಸತತ ಮೂರನೇ ಬಾರಿಗೆ ತಪ್ಪಿಸಿ ಚರ್ಚೆಗೆ ಗುರಿಯಾದ ಕೆಸಿಆರ್ ರಾಜ್ಯದಲ್ಲಿ ಈಗ ಮತ್ತೊಂದು ವಿಚಾರ ಸುದ್ದಿಯಾಗಿದೆ. ಆಂಧ್ರಪ್ರದೇಶದ (Andhra Pradesh) ವಿಮಾನ ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ಟೇಕಾಫ್ ಆಗುತ್ತಿದ್ದಂತೆ ಕಪ್ಪು ಬಲೂನ್‌ಗಳು ಇಂದು ಭದ್ರತಾ ಭೀತಿಗೆ  (Security Threat) ಕಾರಣವಾಗಿವೆ. ವಿಜಯವಾಡದ ಗನ್ನವರಂ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆದ ಕೂಡಲೇ ಪ್ರಧಾನಿ ಮೋದಿಯವರ ಹೆಲಿಕಾಪ್ಟರ್ ಬಳಿ ಬಲೂನ್‌ಗಳು (Baloon) ಹಾರುತ್ತಿರುವ ದೃಶ್ಯಗಳು ಕಂಡುಬಂದಿವೆ.


ಯಾವುದೇ ಭದ್ರತಾ ಲೋಪವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಿಮಾನ ನಿಲ್ದಾಣದಿಂದ 4.5 ಕಿಮೀ ದೂರದಲ್ಲಿ ಎರಡು ಬಲೂನ್‌ಗಳನ್ನು ಬಿಡುಗಡೆ ಮಾಡಲಾಯಿತು. ಹೆಲಿಕಾಪ್ಟರ್ ಹಾರಿದ ಐದು ನಿಮಿಷಗಳ ನಂತರ ಈ ಘಟನೆ ನಡೆದಿದೆ.


ಕಾಂಗ್ರೆಸ್ ಪ್ರತಿಭಟನೆ


ಪ್ರಧಾನಿ ಮೋದಿ ಅವರ ಹೆಲಿಕಾಪ್ಟರ್ ಟೇಕ್ ಆಫ್ ಆದ ವಿಮಾನ ನಿಲ್ದಾಣದಲ್ಲಿ ಕೆಲವು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದರು. ಅವರು ಕಪ್ಪು ಬಲೂನ್‌ಗಳು ಮತ್ತು ಫಲಕಗಳನ್ನು ಹಿಡಿದು ಪ್ರಧಾನಿಯನ್ನು ಗುರಿಯಾಗಿಸಿಕೊಂಡು ಘೋಷಣೆಗಳನ್ನು ಕೂಗಿದರು.


ನಾಲ್ವರು ಅರೆಸ್ಟ್


ನಾಲ್ವರು ಕಾಂಗ್ರೆಸ್ ಕಾರ್ಯಕರ್ತರು ಸಿಕ್ಕಿಬಿದ್ದಿದ್ದು, ಒಬ್ಬರು ನಾಪತ್ತೆಯಾಗಿದ್ದಾರೆ. ಕಪ್ಪು ಬಲೂನ್ ತೋರಿಸಿ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕರು ರಾಷ್ಟ್ರವ್ಯಾಪಿ ಕರೆ ನೀಡಿದ್ದರು.


ಹೈದರಾಬಾದ್‌ನಿಂದ ವಿಜಯವಾಡಕ್ಕೆ ವಿಶೇಷ ವಿಮಾನದಲ್ಲಿ ತೆರಳಿದ ಪ್ರಧಾನಿ, ಹೆಲಿಕಾಪ್ಟರ್ ಮೂಲಕ ಭೀಮಾವರಂಗೆ ತೆರಳಿದರು. ಪ್ರಧಾನಿ ಆಗಮನಕ್ಕೂ ಮುನ್ನ ಬೆಳಗ್ಗೆ 8:30ರ ಸುಮಾರಿಗೆ ಸುಂಕದರ ಪದ್ಮಶ್ರೀ, ಪಾರ್ವತಿ ಮತ್ತು ಕಿಶೋರ್ ಎಂಬ ಮೂವರು ಬಲೂನ್‌ಗಳೊಂದಿಗೆ ವಿಮಾನ ನಿಲ್ದಾಣದತ್ತ ತೆರಳುತ್ತಿರುವುದು ಕಂಡುಬಂದಿತು. ಅವರನ್ನು ತಡೆದರು ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: US Independence Day 2022: ಅಮೆರಿಕಾ ಯಾವ ದೇಶದಿಂದ ಸ್ವಾತಂತ್ರ್ಯ ಪಡೆದಿತ್ತು? ಸ್ವಾತಂತ್ರ್ಯ ದಿನದ ಸಂಭ್ರಮ ಹೀಗಿದೆ


ಪ್ರಧಾನಿ ಮೋದಿ ಟೇಕ್ ಆಫ್ ಆದ 5 ನಿಮಿಷಗಳಲ್ಲಿ, ಇಬ್ಬರು ಕಾಂಗ್ರೆಸ್ ಸದಸ್ಯರಾದ ರಾಜೀವ್ ರತನ್ ಮತ್ತು ರವಿ ಪ್ರಕಾಶ್ ಅವರು ನಿರ್ಮಾಣ ಹಂತದಲ್ಲಿರುವ ಕಟ್ಟಡವನ್ನು ಹತ್ತಿ ಬಲೂನ್‌ಗಳನ್ನು ರಿಲೀಸ್ ಮಾಡಿದರು. ರಾಜೀವ್ ರತನ್ ನಾಪತ್ತೆಯಾಗಿದ್ದು, ರವಿಪ್ರಕಾಶ್ ನನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


ಅಲ್ಲೂರಿ ಸೀತಾರಾಮ ರಾಜು ಅವರ ಕಂಚಿನ ಪ್ರತಿಮೆ ಉದ್ಘಾಟಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿಜಯವಾಡಕ್ಕೆ ಆಗಮಿಸಿದ್ದರು. ಆದರೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಸೇರಿದಂತೆ ನೀಡಿದ್ದ ಹಲವು ಭರವಸೆ ಈಡೇರಿಸಲು ಮೋದಿ ವಿಫಲವಾಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ಪ್ರತಿಭಟನೆಗೆ ಕರೆ ಕೊಟ್ಟಿತ್ತು. ನಂತರ ಈ ಬೆಳವಣಿಗೆಗಳೂ ನಡೆದಿವೆ.


ಇದನ್ನೂ ಓದಿ: Attack: ನಾಯಿ ಬೊಗಳಿದ್ದಕ್ಕೆ ಅದರ ಮಾಲೀಕರ ಮೇಲೆ ಹಲ್ಲೆ! ಕಬ್ಬಿಣದ ರಾಡ್‌ನಿಂದ ಥಳಿಸಿದ ಪಕ್ಕದ ಮನೆ ಪಾಪಿ


ಮೋದಿ ಕಾರ್ಯಕ್ರಮ ಮುಗಿಸಿ ವಿಜಯವಾಡ ಸಮೀಪದ ಗನ್ನಾವರಂ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ ಮೂಲಕ ಪ್ರಯಾಣ ಕೈಗೊಳ್ಳುವ ವೇಳೆ ಕೆಲ ಕಾಂಗ್ರೆಸ್‌ ನಾಯಕರು ಕಪ್ಪು ಬಲೂನ್‌ ಹಿಡಿದು ವಿಮಾನ ನಿಲ್ದಾಣಕ್ಕೆ ಪ್ರವೇಶಿಸಲು ಯತ್ನಿಸಿದ್ದಾರೆ. ಅವರನ್ನು ಬಂಧಿಸಿ, ಪ್ರಕರಣ ದಾಖಲಾಗಿದೆ. ಇನ್ನು ಕೆಲವು ಕಾಂಗ್ರೆಸ್‌ ಕಾರ್ಯಕರ್ತರು ಸಮೀಪದ ಕಟ್ಟಡಗಳ ಮೇಲೇರಿ ಹೈಡ್ರೋಜನ್‌ ತುಂಬಿದ ಬಲೂನ್‌ ಹಾರಿಬಿಟ್ಟಿದ್ದಾರೆ. ಅವು ಮೋದಿ ಸಾಗುವ ಹೆಲಿಕಾಪ್ಟರ್‌ ಮಾರ್ಗದಲ್ಲೇ ಹಾರಾಡುತ್ತಿದ್ದದ್ದು ಕಂಡುಬಂದಿದೆ. ಅದರೆ ಅದೃಷ್ಟವಶಾತ್‌ ಯಾವದು ತೊಂದರೆ ಇಲ್ಲದೆ ಮೋದಿ ಕಾಪ್ಟರ್‌ ಸಂಚಾರ ಮುಂದುವರೆಸಿದೆ.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು