PMC Bank Scam: ಮತ್ತೋರ್ವ ಠೇವಣಿದಾರ ಸಾವು: ಇಲ್ಲಿಯವರೆಗೂ 8 ಮಂದಿ ಬಲಿ

ಅವ್ಯವಹಾರ ಹಗರಣಕ್ಕೆ ಸಿಲುಕಿರುವ ಪಿಎಂಸಿ ಬ್ಯಾಂಕ್ ಇದೀಗ ಭಾರೀ ನಷ್ಟದಲ್ಲಿದೆ. ಆರ್​ಬಿಐನ ನಿರ್ದೇಶನದ ಅಡಿಯಲ್ಲಿರುವ ಈ ಬ್ಯಾಂಕಲ್ಲಿ ಠೇವಣಿದಾರರು ಇಟ್ಟಿರುವ ಹಣದ ಮೊತ್ತ 11,000 ಕೋಟಿ ಇದೆ. ತಮ್ಮ ಹಣ ವಾಪಸ್ ನೀಡುವಂತೆ ಠೇವಣಿದಾರರು ಹಲವಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ಧಾರೆ.

news18-kannada
Updated:November 5, 2019, 5:45 PM IST
PMC Bank Scam: ಮತ್ತೋರ್ವ ಠೇವಣಿದಾರ ಸಾವು: ಇಲ್ಲಿಯವರೆಗೂ 8 ಮಂದಿ ಬಲಿ
ಪ್ರತಿಭಟನೆ ಮಾಡುತ್ತಿರುವ ಗ್ರಾಹಕರು
  • Share this:
ಮುಂಬೈ(ನ.05): ಪಿಎಂಸಿ ಬ್ಯಾಂಕ್ ಹಗರಣಕ್ಕೆ ಮತ್ತೋರ್ವ ಗ್ರಾಹಕ ಬಲಿಯಾಗಿದ್ದಾನೆ. ಪಂಜಾಬ್ ಅಂಡ್ ಮಹಾರಾಷ್ಟ್ರ (ಪಿಎಂಸಿ) ಬ್ಯಾಂಕ್​​ನಲ್ಲಿ ಹಣ ಠೇವಣಿ ಇಟ್ಟಿದ್ದ ಆಂಡ್ರ್ಯೂ ಲೋಬೋ (74) ಎಂಬುವವರು ಸಾವನ್ನಪ್ಪಿದ್ದಾರೆ. ಈ ಸಾವಿನಿಂದ ಇಲ್ಲಿಯವರೆಗೂ ಮೃತಪಟ್ಟ ಠೇವಣಿದಾರರ ಸಂಖ್ಯೆ 8ಕ್ಕೆ ಏರಿದೆ. ಆಂಡ್ರ್ಯೂ ಲೋಬೋ ಸುಮಾರು 26 ಲಕ್ಷ ರೂ.ಗಳನ್ನು ಠೇವಣಿ ಇಟ್ಟಿದ್ದು, ಇದರಿಂದ ಬಂದ ಬಡ್ಡಿಯಲ್ಲಿ ಜೀವನ ನಡೆಸುತ್ತಿದ್ದರು. ಆದರೀಗ ತನ್ನ ಆರೋಗ್ಯ ಕೆಟ್ಟಿದ್ದು, ಚಿಕಿತ್ಸೆಗೆ ದುಡ್ಡಿಲ್ಲದ ಕಾರಣದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇತ್ತೀಚೆಗಷ್ಟೇ ಸಂಕಷ್ಟದಲ್ಲಿರುವ ಪಂಜಾಬ್ ಮತ್ತು ಮಹಾರಾಷ್ಟ್ರ ಕೋಆಪರೇಟಿವ್ (ಪಿಎಂಸಿ) ಬ್ಯಾಂಕ್​ನ ಗ್ರಾಹಕರು ದಕ್ಷಿಣ ಮುಂಬೈಯಲ್ಲಿರುವ ರಿಸರ್ವ್ ಬ್ಯಾಂಕ್ ಕೇಂದ್ರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದರು. ಬ್ಯಾಂಕ್​​ನಲ್ಲಿ ತಾವು ಜಮಾ ಮಾಡಿರುವ ಹಣವನ್ನು ಹಿಂಪಡೆಯಲು ಆರ್‌ಬಿಐ ಮಿತಿ ವಿಧಿಸಿದೆ. ಈ ಮಿತಿತನ್ನು ಮತ್ತಷ್ಟು ಹೆಚ್ಚಿಸುವಂತೆ ಆಗ್ರಹಿಸಿ ಪ್ರತಿಭಟಿಸಿದ್ದರು.

ಅವ್ಯವಹಾರ ಹಗರಣಕ್ಕೆ ಸಿಲುಕಿರುವ ಪಿಎಂಸಿ ಬ್ಯಾಂಕ್ ಇದೀಗ ಭಾರೀ ನಷ್ಟದಲ್ಲಿದೆ. ಆರ್​ಬಿಐನ ನಿರ್ದೇಶನದ ಅಡಿಯಲ್ಲಿರುವ ಈ ಬ್ಯಾಂಕಲ್ಲಿ ಠೇವಣಿದಾರರು ಇಟ್ಟಿರುವ ಹಣದ ಮೊತ್ತ 11,000 ಕೋಟಿ ಇದೆ. ತಮ್ಮ ಹಣ ವಾಪಸ್ ನೀಡುವಂತೆ ಠೇವಣಿದಾರರು ಹಲವಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ಧಾರೆ.

ಪಂಜಾಬ್ ಮಹಾರಾಷ್ಟ್ರ ಕೋಆಪರೇಟಿವ್ ಬ್ಯಾಂಕ್ ಅಥವಾ ಪಿಎಂಸಿ ಬ್ಯಾಂಕ್ ಈಗ್ಗೆ ಕೆಲವಾರು ದಿನಗಳಿಂದ ಜೋರು ಸದ್ದು ಮಾಡುತ್ತಿದೆ. ಆ ಸಹಕಾರಿ ಬ್ಯಾಂಕಲ್ಲಿ ಠೇವಣಿ ಇಟ್ಟಿದ್ದ ಎಂಟು ವ್ಯಕ್ತಿಗಳು ನಿಧನರಾಗಿರುವ ಶಾಕಿಂಗ್ ನ್ಯೂಸ್ ಕೂಡ ಕೇಳಿಬಂದಿದೆ. ಬ್ಯಾಂಕಿಂಗ್ ವಲಯದಲ್ಲಿ ನಡೆದಿರುವ ಹಲವು ಹಗರಣಗಳ ಪಟ್ಟಿಗೆ ಪಿಎಂಸಿಯೂ ಸೇರ್ಪಡೆಯಾಗಿದೆ. 6 ಸಾವಿರ ಕೋಟಿಗೂ ಅಧಿಕ ಹಣದ ಹಗರಣ ಇದಾಗಿದೆ. ಪಿಎಂಸಿ ಬ್ಯಾಂಕ್​ನ ಕೋಟ್ಯಂತರ ಹಣವನ್ನು ಸಂಚು ರೂಪಿಸಿ ಲಪಟಾಯಿಸಿದ ಹೆಚ್​ಡಿಐಎಲ್ ಬ್ಯಾಂಕ್​ನ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೆಚ್​​ಡಿಐಎಲ್ ಕಂಪನಿಗೆ ಸೇರಿದ ಆಸ್ತಿಗಳನ್ನು ಗುರುತಿಸಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಯತ್ನ ನಡೆದಿದೆ.

ಇದನ್ನೂ ಓದಿ: ಇನ್ಫೋಸಿಸ್​ನಲ್ಲೂ ಉದ್ಯೋಗ ಬಿಕ್ಕಟ್ಟು; ಮಧ್ಯಮ, ಹಿರಿಯ ಶ್ರೇಣಿಯ ಸಾವಿರಾರು ಉದ್ಯೋಗಿಗಳ ವಜಾಗೆ ನಿರ್ಧಾರ

ಹಗರಣಗಳ ಮೇಲೆ ಹಗರಣ ಕಾಣುತ್ತಿರುವ ಬ್ಯಾಂಕಿಂಗ್ ವಲಯದ ವಸ್ತು ಸ್ಥಿತಿಗೆ ಪಿಎಂಸಿ ಕೈಗನ್ನಡಿ ಹಿಡಿದಿದೆ. ಕೆಲವಾರು ವರ್ಷಗಳಿಂದ ಎನ್​ಪಿಎ ಅಥವಾ ಅನುತ್ಪಾದಕ ಸಾಲಗಳ ಪ್ರಮಾಣ ತೀವ್ರತರವಾಗಿ ಏರುತ್ತಿದೆ. ಪಿಎಂಸಿ ಬ್ಯಾಂಕ್ ನೀಡಿದ ಶೇ. 70ಕ್ಕಿಂತಲೂ ಹೆಚ್ಚು ಸಾಲ ಎನ್​ಪಿಎ ಆಗಿದೆ. ಇದು ಸಾವಿರಾರು ಬ್ಯಾಂಕ್ ಗ್ರಾಹಕರಿಗೆ ಬರಸಿಡಿಲಿನಂತೆ ಬಡಿದಿದೆ.

ಪಂಜಾಬ್ ಅಂಡ್ ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ 1984ರ ಫೆ. 13ರಂದು ಪ್ರಾರಂಭವಾದಾಗ ಒಂದೇ ಬ್ರ್ಯಾಂಚ್ ಇದ್ದದ್ದು. 35 ವರ್ಷಗಳಲ್ಲಿ ಅದು ಕರ್ನಾಟಕ ಸೇರಿದಂತೆ ಏಳು ರಾಜ್ಯಗಳಲ್ಲಿ 137 ಬ್ರ್ಯಾಂಚ್​ಗಳನ್ನ ಸ್ಥಾಪಿಸುವ ಮಟ್ಟಕ್ಕೆ ಬೆಳೆದಿದೆ. 1,800ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ಬರೋಬ್ಬರಿ 11 ಸಾವಿರ ಕೋಟಿ ರೂ ಠೇವಣಿಗಳನ್ನ ಗ್ರಾಹಕರಿಂದ ಶೇಖರಿಸಿದೆ. ಭಾರತದ ಸಹಕಾರಿ ಬ್ಯಾಂಕುಗಳಲ್ಲೇ ಪಿಎಂಸಿ ನಂಬರ್ ಒನ್ ಎನಿಸಿದೆ. 19 ವರ್ಷಗಳ ಹಿಂದ ಆರ್​ಬಿಐ ಈ ಸಹಕಾರಿ ಬ್ಯಾಂಕನ್ನ ಶೆಡ್ಯೂಲ್ಡ್ ಕಮರ್ಷಿಯಲ್ ಪಟ್ಟಿಗೆ ಸೇರ್ಪಡೆ ಮಾಡಿತು.
Loading...

ಪಿಎಂಸಿ ಬ್ಯಾಂಕ್​ನ ಸಾಲ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕೆಲ ಮಹಿಳಾ ಉದ್ಯೋಗಿಗಳಿಗೆ ಅದೇನೋ ಅನುಮಾನ ಬಂದಿದೆ. ಲೋನ್ ಅಕೌಂಟ್ ಹೆಸರಲ್ಲಿ ಗುಪ್ತ ಖಾತೆಗಳಿವೆ. ಇತ್ತ ಗಮನ ಹರಿಸಿ ಎಂದು ಈ ಮಹಿಳೆಯರು ಆರ್​ಬಿಐಗೆ ತಿಳಿಸಿದ್ದಾರೆ. ಆಗ ಘೋಸ್ಟ್ ಅಕೌಂಟ್​ಗಳ ಕರ್ಮಕಾಂಡ ಮತ್ತು ಸಾವಿರಾರು ಕೋಟಿ ರೂ ವಂಚನೆಯ ಪ್ರಕರಣಗಳು ಬೆಳಕಿಗೆ ಬಂದವು.
-----------
First published:November 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...