• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಸರ್ದಾರ್​ ವಲ್ಲಭಾಯಿ ಪಟೇಲರ 145ನೇ ಹುಟ್ಟುಹಬ್ಬ; ಏಕತಾ ಪ್ರತಿಮೆಯ ಬಳಿ ತೆರಳಿ ಗೌರವ ಅರ್ಪಿಸಿದ ಪ್ರಧಾನಿ ಮೋದಿ

ಸರ್ದಾರ್​ ವಲ್ಲಭಾಯಿ ಪಟೇಲರ 145ನೇ ಹುಟ್ಟುಹಬ್ಬ; ಏಕತಾ ಪ್ರತಿಮೆಯ ಬಳಿ ತೆರಳಿ ಗೌರವ ಅರ್ಪಿಸಿದ ಪ್ರಧಾನಿ ಮೋದಿ

ನರೇಂದ್ರ ಮೋದಿ.

ನರೇಂದ್ರ ಮೋದಿ.

ಕೆವಾಡಿಯಾದಲ್ಲಿರುವ ಭಾರತದ ಮೊದಲ ಉಪ ಪ್ರಧಾನಿಯೂ ಆಗಿದ್ದ ಸರ್ದಾರ್ ವಲ್ಲಭಾಯಿ ಪಟೇಲ್ ಅವರು ಏಕತಾ ಪ್ರತಿಮೆಯ ಬಳಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ಪ್ರಧಾನಿ ನರೇಂದ್ರ ಮೋದಿ ಹೂವವನ್ನು ಅರ್ಪಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ.

  • Share this:

    ಸಬರಮತಿ (ಅಕ್ಟೋಬರ್ 31); ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಪಡೆದಿರುವ ಮಾಜಿ ಗೃಹ ಸಚಿವ ದಿವಂಗತ ಸರ್ದಾರ್ ವಲ್ಲಭಾಯಿ ಪಟೇಲ್ ಅವರಿಗೆ ಇಂದು ಹುಟ್ಟುಹಬ್ಬ. ಅವರ 145ನೇ ಹುಟ್ಟುಹಬ್ಬದ ಪ್ರಯುಕ್ತ ಇಂದು ಎರಡು ದಿನಗಳ ಗುಜರಾತ್ ಪ್ರವಾಸಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ, ಪಟೇಲ್ ಅವರ ಸ್ಟಾಚು ಆಫ್ ಯೂನಿಟಿಗೆ ತೆರಳಿ ಅವರಿಗೆ ಗೌರವಪೂರ್ಣ ನಮನಗಳನ್ನು ಸಲ್ಲಿಸಿದ್ದಾರೆ. ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಹುಟ್ಟುಹಬ್ಬವನ್ನು ಭಾರತದಲ್ಲಿ “ರಾಷ್ಟ್ರೀಯ ಏಕತಾ ದಿನ” ಎಂದು ಆಚರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಪಟೇಲರ ನೆನಪಿನಲ್ಲಿ ಕೇವಡಿ-ಸಬರಮತಿ ಸೀಪ್ಲೇನ್ ಸೇವೆಯನ್ನೂ ಉದ್ಘಾಟಿಸಿದ್ದಾರೆ ಎಂದು ವರದಿಯಾಗಿದೆ.


    ಕೆವಾಡಿಯಾದಲ್ಲಿರುವ ಭಾರತದ ಮೊದಲ ಉಪ ಪ್ರಧಾನಿಯೂ ಆಗಿದ್ದ ಸರ್ದಾರ್ ವಲ್ಲಭಾಯಿ ಪಟೇಲ್ ಅವರು ಏಕತಾ ಪ್ರತಿಮೆಯ ಬಳಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ಪ್ರಧಾನಿ ನರೇಂದ್ರ ಮೋದಿ ಹೂವವನ್ನು ಅರ್ಪಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ. ತದನಂತರ ಅವರು ರಾಷ್ಟ್ರದ ಐಕ್ಯತೆ ಮತ್ತು ಆಂತರಿಕ ಭದ್ರತೆಯನ್ನು ಬಲಪಡಿಸುವ ಮತ್ತು ಕಾಪಾಡುವ ಪ್ರತಿಜ್ಞೆಯನ್ನು ಓದಿದ್ದಾರೆ ಎಂದು ವರದಿಯಾಗಿದೆ.


    ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ಪರಿಷತ್​ ಸ್ಥಾನಕ್ಕೆ ನಾಮನಿರ್ದೇಶನಗೊಳ್ಳಲಿದ್ದಾರಾ ನಟಿ ಊರ್ಮಿಳಾ ಮಾತೋಂಡ್ಕರ್?


    ಇದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತು ನಾಳೆ ಗುಜರಾತ್​ನಲ್ಲಿ ಅನೇಕ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಭಾಗಿಯಾಗಲಿದ್ದಾರೆ. ಅಲ್ಲದೆ, ಕೆಲವು ಅಭಿವೃದ್ಧಿ ಯೋಜನೆಗಳಿಗೂ ಚಾಲನೆ ನೀಡಲಿದ್ದಾರೆ ಎನ್ನಲಾಗುತ್ತಿದೆ.

    Published by:MAshok Kumar
    First published: