HOME » NEWS » National-international » PM TO CHAIR VIRTUAL GLOBAL INVESTOR ROUNDTABLE ON 5TH NOVEMBER RH

ನ.5ರಂದು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ವರ್ಚುವಲ್ ಜಾಗತಿಕ ಹೂಡಿಕೆದಾರರ ಸಮಾವೇಶ

ಈ ಹಣಕಾಸು ವರ್ಷದಲ್ಲಿ ಭಾರತದಲ್ಲಿ ವಿದೇಶಿ ಹೂಡಿಕೆಗಳು ಆರ್ಥಿಕ ವರ್ಷದ ಮೊದಲ ಐದು ತಿಂಗಳಲ್ಲಿ ಅತೀ ಹೆಚ್ಚಾಗಿದೆ. ವಿಜಿಐಆರ್ 2020 ಎಲ್ಲಾ ಬಾಧ್ಯಸ್ಥರಿಗೆ ರೂಪಿಸಲಾಗಿರುವ ಬಲವಾದ ಸಹಭಾಗಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲು ಮತ್ತು ತಮ್ಮ ಭಾರತೀಯ ಹೂಡಿಕೆಗಳನ್ನು ಹೆಚ್ಚಿಸಲು ಬಯಸುವ ಅಂತಾರಾಷ್ಟ್ರೀಯ ಸಾಂಸ್ಥಿಕ ಹೂಡಿಕೆದಾರರೊಂದಿಗೆ ಮಾತುಕತೆ ಹೆಚ್ಚಿಸಲು ಅವಕಾಶ ಒದಗಿಸುತ್ತದೆ. 

news18-kannada
Updated:November 3, 2020, 8:55 PM IST
ನ.5ರಂದು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ವರ್ಚುವಲ್ ಜಾಗತಿಕ ಹೂಡಿಕೆದಾರರ ಸಮಾವೇಶ
ಪ್ರಧಾನಿ ನರೇಂದ್ರ ಮೋದಿ.
  • Share this:
ನವದೆಹಲಿ; ನವೆಂಬರ್ 5ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಧ್ಯಕ್ಷತೆಯಲ್ಲಿ ಜಾಗತಿಕ ಹೂಡಿಕೆದಾರರ ವರ್ಚುವಲ್ ದುಂಡುಮೇಜಿನ (ವಿಜಿಐಆರ್) ಸಮಾವೇಶ ನಡೆಯಲಿದೆ. ಈ ಸಮಾವೇಶವನ್ನು ಭಾರತ ಸರ್ಕಾರದ ಹಣಕಾಸು ಸಚಿವಾಲಯ ಮತ್ತು ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ ಆಯೋಜಿಸಿದೆ. ಇದು ಪ್ರಮುಖ ಜಾಗತಿಕ ಸಾಂಸ್ಥಿಕ ಹೂಡಿಕೆದಾರರು, ಭಾರತೀಯ ವಾಣಿಜ್ಯ ಮುಖಂಡರು ಹಾಗೂ ಹಣಕಾಸು ಮಾರುಕಟ್ಟೆ ನಿಯಂತ್ರಕರು ಮತ್ತು ಭಾರತ ಸರ್ಕಾರದ ಉನ್ನತ ನಿರ್ಧಾರ ತೆಗೆದುಕೊಳ್ಳುವವರ ನಡುವಿನ ವಿಶೇಷ ಸಂವಾದವಾಗಲಿದೆ. ಈ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವರು, ಕೇಂದ್ರ ಹಣಕಾಸು ರಾಜ್ಯ ಸಚಿವರು, ಆರ್.ಬಿ.ಐ ಗೌವರ್ನರ್ ಹಾಗೂ ಉದ್ಯಮಿಗಳಾದ ಮುಖೇಶ್ ಅಂಬಾನಿ, ರತನ್ ಟಾಟಾ, ನಂದನ್ ನಿಲೇಕಣಿ, ದೀಪಕ್ ಪಾರೇಖ್ ಮತ್ತು ಇತರೆ ಗಣ್ಯರು ಭಾಗಿಯಾಗಲಿದ್ದಾರೆ.

ದುಂಡು ಮೇಜಿನ ಸಭೆಯು ನಿರ್ವಹಣೆಯಡಿಯಲ್ಲಿ ಒಟ್ಟು ಸುಮಾರು 6 ಟ್ರಿಲಿಯನ್ ಅಮೆರಿಕನ್ ಡಾಲರ್‌ ಆಸ್ತಿ ಹೊಂದಿರುವ ಇಪ್ಪತ್ತು ಅತಿದೊಡ್ಡ ಪಿಂಚಣಿ ಮತ್ತು ಸಾರ್ವಭೌಮ ಸಂಪತ್ತು ನಿಧಿಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ. ಈ ಜಾಗತಿಕ ಸಾಂಸ್ಥಿಕ ಹೂಡಿಕೆದಾರರು ಅಮೆರಿಕ, ಯುರೋಪ್, ಕೆನಡಾ, ಕೊರಿಯಾ, ಜಪಾನ್, ಮಧ್ಯಪ್ರಾಚ್ಯ, ಆಸ್ಟ್ರೇಲಿಯಾ ಮತ್ತು ಸಿಂಗಾಪುರ ಸೇರಿದಂತೆ ಪ್ರಮುಖ ಪ್ರದೇಶಗಳನ್ನು ಪ್ರತಿನಿಧಿಸುತ್ತಾರೆ. ಹಾಗೆಯೇ ಸಿಇಓಗಳು ಮತ್ತು ಸಿಐಓಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ. ಈ ಹೂಡಿಕೆದಾರರಲ್ಲಿ ಕೆಲವರು ಇದೇ ಮೊದಲ ಬಾರಿಗೆ ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಜಾಗತಿಕ ಹೂಡಿಕೆದಾರರ ಹೊರತಾಗಿ, ದುಂಡು ಮೇಜಿನ ಸಭೆಯಲ್ಲಿ ಹಲವು ಭಾರತೀಯ ವಾಣಿಜ್ಯ ನಾಯಕರೂ ಪಾಲ್ಗೊಳ್ಳಲಿದ್ದಾರೆ.

ವಿಜಿಐಆರ್ 2020 ಭಾರತದ ಆರ್ಥಿಕ ಮತ್ತು ಹೂಡಿಕೆ ದೃಷ್ಟಿಕೋನ, ರಚನಾತ್ಮಕ ಸುಧಾರಣೆಗಳು ಮತ್ತು 5 ಟ್ರಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕತೆಯ ಹಾದಿಯ ಬಗ್ಗೆ ಸರ್ಕಾರದ ನಿಲುವುಗಳ ಬಗ್ಗೆ ಚರ್ಚೆ ನಡೆಯಲಿದೆ. ಈ ಕಾರ್ಯಕ್ರಮವು ಪ್ರಮುಖ ಜಾಗತಿಕ ಹೂಡಿಕೆದಾರರು ಮತ್ತು ಭಾರತೀಯ ವ್ಯಾಪಾರ ಮುಖಂಡರಿಗೆ ಹಿರಿಯ ನೀತಿ ನಿರೂಪಕರೊಂದಿಗೆ ತೊಡಗಿಸಿಕೊಳ್ಳಲು ಮತ್ತು ಭಾರತದಲ್ಲಿ ಅಂತಾರಾಷ್ಟ್ರೀಯ ಹೂಡಿಕೆಗಳ ಬೆಳವಣಿಗೆಯನ್ನು ಹೇಗೆ ವೇಗಗೊಳಿಸುವುದು ಎಂಬುದರ ಕುರಿತು ಚರ್ಚಿಸಲು ಒಂದು ಅವಕಾಶವನ್ನು ಒದಗಿಸುತ್ತದೆ.
Youtube Video

ಈ ಹಣಕಾಸು ವರ್ಷದಲ್ಲಿ ಭಾರತದಲ್ಲಿ ವಿದೇಶಿ ಹೂಡಿಕೆಗಳು ಆರ್ಥಿಕ ವರ್ಷದ ಮೊದಲ ಐದು ತಿಂಗಳಲ್ಲಿ ಅತೀ ಹೆಚ್ಚಾಗಿದೆ. ವಿಜಿಐಆರ್ 2020 ಎಲ್ಲಾ ಬಾಧ್ಯಸ್ಥರಿಗೆ ರೂಪಿಸಲಾಗಿರುವ ಬಲವಾದ ಸಹಭಾಗಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲು ಮತ್ತು ತಮ್ಮ ಭಾರತೀಯ ಹೂಡಿಕೆಗಳನ್ನು ಹೆಚ್ಚಿಸಲು ಬಯಸುವ ಅಂತಾರಾಷ್ಟ್ರೀಯ ಸಾಂಸ್ಥಿಕ ಹೂಡಿಕೆದಾರರೊಂದಿಗೆ ಮಾತುಕತೆ ಹೆಚ್ಚಿಸಲು ಅವಕಾಶ ಒದಗಿಸುತ್ತದೆ.
Published by: HR Ramesh
First published: November 3, 2020, 8:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories