2019ರಲ್ಲೂ ನಾವೇ ಗೆಲ್ಲೋದು, ವಿರೋಧ ಪಕ್ಷಗಳ ಒಗ್ಗಟ್ಟು ಕ್ಷಣಿಕ: ಪ್ರಧಾನಿ ಮೋದಿ


Updated:August 12, 2018, 8:44 PM IST
2019ರಲ್ಲೂ ನಾವೇ ಗೆಲ್ಲೋದು, ವಿರೋಧ ಪಕ್ಷಗಳ ಒಗ್ಗಟ್ಟು ಕ್ಷಣಿಕ: ಪ್ರಧಾನಿ ಮೋದಿ

Updated: August 12, 2018, 8:44 PM IST
ನ್ಯೂಸ್​ 18 ಕನ್ನಡ

ನವದೆಹಲಿ(ಆ.12): ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಎಲ್ಲಾ ರಾಜಕಿಯ ಪಕ್ಷಗಳೂ ಚುನಾವಣೆ ಅಣಿಯಾಗುತ್ತಿದ್ದು, ಕಾಂಗ್ರೆಸ್​​ ಸೇರಿದಂತೆ ಮೋದಿಯನ್ನು ಸೋಲಿಸಲು ಮಹಾಮೈತ್ರಿ​​ ರಚನೆ ಮಾಡುತ್ತಿವೆ. ಆದರೆ ಪ್ರಧಾನಿ ಮೋದಿ ಮಾತ್ರ 2019 ನಮ್ಮದೇ ಎಂದಿದ್ದಾರೆ. ರಾಹುಲ್​ ಗಾಂಧಿ, ಮೀಸಲಾತಿ, ಧರ್ಮ ಸಂಘರ್ಷದ ಬಗ್ಗೆ ಮೋದಿಯವರು ಸಂದರ್ಶನದಲ್ಲಿ ಏನು ಹೇಳಿದ್ದಾರೆ? ಇಲ್ಲಿದೆ ವಿವರ

 • ಪತ್ರಕರ್ತ-ರಾಹುಲ್​ ಗಾಂಧಿ ಬಗ್ಗೆ ನಿಮ್ಮ ಅಭಿಪ್ರಾಯವೇನು..?ಮೋದಿ - ನಾನು ವಿನಮ್ರ ಕೆಲಸಗಾರ( ಕಾಮ್​ದಾರ್). ನನ್ನನ್ನು ನಾಮ್​ದಾರ್​(ವಂಶಪಾರಂಪರ್ಯ ನಾಯಕರು)ಗಳ ಜೊತೆ ಹೋಲಿಕೆ ಮಾಡಬೇಡಿ. ಅವರಿಗೆ ಯಾರನ್ನ ದ್ವೇಷಿಸಬೇಕು. ಯಾರನ್ನ ಯಾವಾಗ ಪ್ರೀತಿಸಬೇಕು ಅಂತ ಗೊತ್ತಿದೆ. ಅವರಂತೆ ನಾನಲ್ಲ.

  Loading...

 • ಪತ್ರಕರ್ತ - ಸಂಸತ್​ ಕಲಾಪದ ವೇಳೆ ರಾಹುಲ್​ ಕಣ್ಣು ಹೊಡೆದಿದ್ದು ಸುದ್ದಿಯಾಯ್ತು..? ಈ ಬಗ್ಗೆ ಏನಂತೀರಾ..?


ಮೋದಿ - ರಾಹುಲ್​ಗಾಂಧಿ ಅವರು ನನ್ನನ್ನ ಲೋಕಸಭೆಯಲ್ಲಿ ಅಪ್ಪಿಕೊಂಡಿದ್ದು ಬಾಲಿಶತನ ಅನ್ನಿಸುತ್ತಾ.. ಇಲ್ವಾ.. ಈ ಬಗ್ಗೆ ನಿರ್ಧಾರ ನಿಮಗೆ ಬಿಟ್ಟದ್ದು. ನಿಮಗೆ ಉತ್ತರ ಸಿಗಲಿಲ್ಲ ಅಂದ್ರೆ ಅವರು ಕಣ್ಣು ಹೊಡೆದಿದ್ದನ್ನ ನೋಡಿದ್ರೆ ನಿಮಗೆ ಉತ್ತರ ಸಿಗಬಹುದು.

 • ಪತ್ರಕರ್ತ - 2019ರವರೆಗೆ ವಿರೋಧಪಕ್ಷಗಳ ಮಹಾಮೈತ್ರಿ ಆಗುತ್ತಿದೆ.. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು..?


ಮೋದಿ - ಪ್ರತಿಪಕ್ಷಗಳ ಮಹಾಮೈತ್ರಿಕೂಟ ಇಂದು ನಿನ್ನೆಯದಲ್ಲ.. ವಂಶಪಾರಂಪರ್ಯವಾಗಿ ಬಂದಿದೆ. ಅದರಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಅಷ್ಟಕ್ಕೂ ಮಹಾಮೈತ್ರಿ ಯಾವಾಗ ಮುರಿದು ಬೀಳುತ್ತೋ ಏನೋ..? ಚುನಾವಣೆವರೆಗೂ ಇರಬಹುದು. ಇಲ್ಲಾ ಚುನಾವಣೆಗೂ ಮೊದಲೇ ಮೈತ್ರಿ ಮುರಿದು ಹೋಗಬಹುದು

 • ಪತ್ರಕರ್ತ - ಎನ್​ಡಿಎ ಮೈತ್ರಿಕೂಟದಿಂದ ನಿಮ್ಮ ಸ್ನೇಹಿತರು ಹೊರಗೆ ಹೋಗಿದ್ದಾರೆ.. ಇದು ನಿಮ್ಮ ಸರ್ಕಾರ ವಿಶ್ವಾಸ ಕಳೆದುಕೊಂಡಿದೆ ಅನಿಸ್ತಿಲ್ವಾ..?


ಮೋದಿ - ಹಾಗೇನಿಲ್ಲ.. ರಾಜ್ಯಸಭೆಯಲ್ಲಿ ಉಪಸಭಾಪತಿ ಆಯ್ಕೆ ಮತ್ತು ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅವರಿಗಾದ ಸೋಲು.. ಈ ಎರಡು ಘಟನೆಗಳೇ ನಿಮ್ಮ ಪ್ರಶ್ನೆಗೆ ಉತ್ತರ ನೀಡುತ್ತೆ.

 • ಪತ್ರಕರ್ತ - ರಫೆಲ್​ ಹಗರಣ, ಬೋಫೋರ್ಸ್​ ಹಗರಣದ ಬಗ್ಗೆ ಆರೋಪಗಳು ಕೇಳಿಬರುತ್ತಿವೆಯಲ್ಲಾ..?


ಮೋದಿ - ಬೋಫೋರ್ಸ್ ಭೂತವನ್ನು ಉಚ್ಛಾಟನೆ ಮಾಡೋದು ಕಾಂಗ್ರೆಸ್ ಪ್ರಯತ್ನ. ಆದ್ದರಿಂದ ಅವರು ಸುಳ್ಳು ಹೇಳ್ತಾರೆ. ರಫೆಲ್ ಡೀಲ್ ಸರ್ಕಾರದಿಂದ ಸರ್ಕಾರಕ್ಕೆ ನಡೆದಿರುವ ಒಪ್ಪಂದ. ಇದೊಂದು ಪಾರದರ್ಶಕ ಮತ್ತು ಪ್ರಾಮಾಣಿಕವಾಗಿ ನಡೆದಿರುವ ವ್ಯವಹಾರ. ಕಾಂಗ್ರೆಸ್‌ ನಡೆಸ್ತಿರೋ ಪ್ರಯತ್ನದಿಂದ ರಾಷ್ಟ್ರೀಯ ಹಿತಾಸಕ್ತಿಯೇ ಹಾಳಾಗ್ತಿದೆ.

 • ಪತ್ರಕರ್ತ - 1 ಕೋಟಿ ಉದ್ಯೋಗ ಸೃಷ್ಟಿ ಆಗಿಲ್ಲ ಎಂದು ಪ್ರತಿಪಕ್ಷಗಳ ಆರೋಪದ ಬಗ್ಗೆ ಏನಂತೀರಾ..?


ಮೋದಿ - ನಮ್ಮ ಸರ್ಕಾರ ಬಂದ ಮೇಲೆ 1 ಕೋಟಿ ಉದ್ಯೋಗ ಸೃಷ್ಟಿಯಾಗಿದೆ. ಸ್ವ ಉದ್ಯೋಗ ನಡೆಸಲು ಕೇಂದ್ರದಿಂದ ಎಲ್ಲಾ ಸಹಕಾರ ಸಿಗುತ್ತಿದೆ. ಆದ್ರೆ ಪ್ರತಿಪಕ್ಷಗಳು ಮೋದಿ ಸರ್ಕಾರ ಉದ್ಯೋಗ ಸೃಷ್ಟಿಸಿಲ್ಲ ಎಂದು ಅಪಪ್ರಚಾರ ಮಾಡುತ್ತಿವೆ.

 • ಪತ್ರಕರ್ತ - ಧರ್ಮದ ಹೆಸರಲ್ಲಿ ನಡೆಯುವ ಹಲ್ಲೆ ಬಗ್ಗೆ ನೀವು ಮಾತನಾಡಲ್ಲ ಅನ್ನೋ ಆರೋಪವಿದೆ ಇದಕ್ಕೆ ನಿಮ್ಮ ಉತ್ತರ..?


ಮೋದಿ - ನಾನು ಹಲವು ಬಾರಿ ಈ ಬಗ್ಗೆ ಮಾತನಾಡಿದ್ದೀನಿ. ಧರ್ಮದ ಹೆಸರಲ್ಲಿ ನಡೆಸುವ ಹಲ್ಲೆ ದುರದೃಷ್ಟಕರ.. ಮಹಿಳೆಯರ ಮೇಲಿನ ದೌರ್ಜನ್ಯಗಳು ಕಳವಳಕಾರಿ ಮತ್ತು ಅಪಾಯಕಾರಿ. ಸಮಾಜದ ಪ್ರತಿಯೊಬ್ಬರೂ ಶಾಂತಿ ಮತ್ತು ಏಕತೆ ಕಾಪಾಡಲು ಪಕ್ಷಾತೀತವಾಗಿ ಕೈ ಜೋಡಿಸಬೇಕು.

 • ಪತ್ರಕರ್ತ - 2019ರ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಗೆಲ್ಲುವ ವಿಶ್ವಾಸ ಇದ್ಯಾ..?


ಮೋದಿ - ಖಂಡಿತಾ ನಾವೇ ಗೆಲ್ತೀವಿ.. ಮತ್ತೆ ಅಧಿಕಾರಕ್ಕೆ ಬರುತ್ತೇವೆ. 2019 ನಮ್ಮದೇ.. 2014ಕ್ಕಿಂತಲೂ ಹೆಚ್ಚು ಸ್ಥಾನವನ್ನ ಈ ಬಾರಿ ಬಿಜೆಪಿ ಗೆಲ್ಲಲಿದೆ.

 • ಪತ್ರಕರ್ತ - ರಾಷ್ಟ್ರೀಯ ಪೌರತ್ವ ನೋಂದಣಿ ಸಮಸ್ಯೆಯಿಂದ ದೇಶ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ..? ಈ ಬಗ್ಗೆ ನಿಮ್ಮ ಉತ್ತರವೇನು..?


ಮೋದಿ - ಈ ದೇಶದ ಯಾವೊಬ್ಬ ನಾಗರಿಕರೂ ದೇಶ ಬಿಡುವ ಪ್ರಶ್ನೆಯೇ ಉದ್ಭವಿಸಲ್ಲ.. ಯಾರೂ ದೇಶವನ್ನ ತ್ಯಜಿಸಬೇಕಿಲ್ಲ ಎಂದು ನಾನು ಭರವಸೆ ಕೊಡುತ್ತೇನೆ. ಅಸ್ಸಾಂ ಜನರ ಕಳವಳ ನಿವಾರಿಸಲು ಎಲ್ಲಾ ರೀತಿಯ ಅವಕಾಶಗಳನ್ನೂ ನೀಡಲಾಗುತ್ತೆ. ಭಯಬೇಡ.

 • ಪತ್ರಕರ್ತ - ಮೀಸಲಾತಿ ರದ್ದುಗೊಳಿಸುವ ಬಗ್ಗೆ ಚಿಂತನೆ ಇದೆಯಾ..?


ಮೋದಿ - ಖಂಡಿತ ಇಲ್ಲ.. ಜಾತಿವಾರು ಮೀಸಲಾತಿ ಇರುತ್ತೆ. ಇದರಲ್ಲಿ ಸಂದೇಹವೇ ಬೇಡ.
First published:August 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...