ನಿಮಗೆ ಬೇಕಾದ 5 ಟೀಕಾಕಾರರೊಂದಿಗಾದರೂ ಪ್ರಶ್ನೋತ್ತರ ನಡೆಸಿ: ಮೋದಿಗೆ ಚಿದಂಬರಮ್ ಸವಾಲು

ಪ್ರಧಾನಿಗಳು ತಮಗೆ ಬೇಕಾದ ವೇದಿಕೆಯಲ್ಲಿ ಸಿಎಎ ಬಗ್ಗೆ ಮಾತನಾಡುತ್ತಾರೆ. ಪ್ರಶ್ನೆ ಕೇಳದ ಸಭಿಕರನ್ನುದ್ದೇಶಿಸಿ ಅವರು ಭಾಷಣ ಮಾಡುತ್ತಾರೆ. ತಮ್ಮ ಟೀಕಾಕಾರರೊಂದಿಗೆ ಅವರು ಮಾತನಾಡುವುದಿಲ್ಲ. ಪ್ರಧಾನಿ ಜೊತೆ ಮಾತನಾಡಲು ಅವರ ಟೀಕಾಕಾರರಿಗೆ ಅವಕಾಶವೇ ದೊರೆಯುವುದಿಲ್ಲ ಎಂದು ಚಿದಂಬರಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

news18
Updated:January 13, 2020, 11:57 AM IST
ನಿಮಗೆ ಬೇಕಾದ 5 ಟೀಕಾಕಾರರೊಂದಿಗಾದರೂ ಪ್ರಶ್ನೋತ್ತರ ನಡೆಸಿ: ಮೋದಿಗೆ ಚಿದಂಬರಮ್ ಸವಾಲು
ಪಿ. ಚಿದಂಬರಮ್
  • News18
  • Last Updated: January 13, 2020, 11:57 AM IST
  • Share this:
ನವದೆಹಲಿ(ಜ. 13): ದೇಶಾದ್ಯಂತ ಬಿರುಗಾಳಿ ಎಬ್ಬಿಸುತ್ತಿರುವ ಪೌರತ್ವ ಕಾಯ್ದೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂವಾದಕ್ಕೆ ಮುಂದಾಗಬೇಕೆಂದು ಮಾಜಿ ಕೇಂದ್ರ ಸಚಿವ ಪಿ. ಚಿದಂಬರಮ್ ಸಲಹೆ ನೀಡಿದ್ಧಾರೆ. ಇಂದು ಸರಣಿ ಟ್ವೀಟ್​ಗಳನ್ನು ಮಾಡಿರುವ ಹಿರಿಯ ಕಾಂಗ್ರೆಸ್ ಮುಖಂಡರು, ಮೋದಿ ತಮ್ಮ ಟೀಕಾಕಾರರೊಂದಿಗೆ ಚರ್ಚೆ ನಡೆಸಲಿ ಎಂದು ಕರೆ ನೀಡಿದ್ದಾರೆ.

ಸಿಎಎ ಎಂಬುದು ಪೌರತ್ವ ಕಿತ್ತುಕೊಳ್ಳುವುದಲ್ಲ. ಪೌರತ್ವ ಕೊಡುವುದಾಗಿದೆ ಎಂದು ಪ್ರಧಾನಿಗಳು ಹೇಳುತ್ತಾರೆ. ಆದರೆ, ಹಲವು ಮಂದಿ ಪೌರತ್ವ ಕಳೆದುಕೊಳ್ಳುತ್ತಾರೆ ಎಂಬುದು ನಮ್ಮ ಅನೇಕರ ಆತಂಕವಾಗಿದೆ ಎಂದು ಚಿದಂಬರಮ್ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರೊಂದಿಗೆ ಸಿಕ್ಕಿಬಿದ್ದ ಹಿರಿಯ ಪೊಲೀಸ್ ಅಧಿಕಾರಿ; ತೀವ್ರ ವಿಚಾರಣೆ

ಪ್ರಧಾನಿಗಳು ತಮಗೆ ಬೇಕಾದ ವೇದಿಕೆಯಲ್ಲಿ ಸಿಎಎ ಬಗ್ಗೆ ಮಾತನಾಡುತ್ತಾರೆ. ಪ್ರಶ್ನೆ ಕೇಳದ ಸಭಿಕರನ್ನುದ್ದೇಶಿಸಿ ಅವರು ಭಾಷಣ ಮಾಡುತ್ತಾರೆ. ತಮ್ಮ ಟೀಕಾಕಾರರೊಂದಿಗೆ ಅವರು ಮಾತನಾಡುವುದಿಲ್ಲ. ಪ್ರಧಾನಿ ಜೊತೆ ಮಾತನಾಡಲು ಅವರ ಟೀಕಾಕಾರರಿಗೆ ಅವಕಾಶವೇ ದೊರೆಯುವುದಿಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.“ಉತ್ತಮ ಟೀಕಾಕಾರರಲ್ಲಿ ಮೋದಿ ಅವರು ತಮಗೆ ಬೇಕಾದ ಐವರನ್ನು ಆರಿಸಿಕೊಂಡು ಅವರ ಜೊತೆ ಪ್ರಶ್ನೋತ್ತರವನ್ನಾದರೂ ನಡೆಸಬೇಕು. ಜನರು ಈ ಸಂವಾದವನ್ನು ಆಲಿಸಿ ಸಿಎಎ ಬಗ್ಗೆ ಒಂದು ನಿಲುವಿಗೆ ಬರಬಹುದು. ಪ್ರಧಾನಿ ಅವರು ಈ ಸಲಹೆಯನ್ನಾದರೂ ಸ್ವೀಕರಿಸುತ್ತಾರೆಂದು ಆಶಿಸುತ್ತೇನೆ” ಎಂದು ಚಿದಂಬರಮ್ ತಿಳಿಸಿದ್ಧಾರೆ.

ಇದನ್ನೂ ಓದಿ: ಕಾಶಿ ವಿಶ್ವನಾಥನ ಭಕ್ತರಿಗೆ ಡ್ರೆಸ್​ಕೋಡ್; ಪ್ಯಾಂಟ್​ ಧರಿಸಿ ಬಂದರೆ ದೇವರ ದರ್ಶನವಿಲ್ಲ

ಪ್ರಧಾನಿ ಮೋದಿ ಅವರು ನಿನ್ನೆ ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆಯ ಅಂಗವಾಗಿ ಕೋಲ್ಕತಾದ ಬೇಲುರ್ ಮಠದಲ್ಲಿ ಭಾಷಣ ಮಾಡುತ್ತಾ ಸಿಎಎ ವಿಚಾರದ ಬಗ್ಗೆ ಮಾತನಾಡಿದ್ದರು. ಪೌರತ್ವ ಕಾಯ್ದೆ ಎಂಬುದು ಪೌರತ್ವ ಕಸಿದುಕೊಳ್ಳುವುದಲ್ಲ, ಪೌರತ್ವ ದಯಪಾಲಿಸುವುದಾಗಿದೆ ಎಂದು ಹೇಳಿದ್ದರು.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನದಿಂದ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ವಲಸೆ ಬಂದಿರುವ ಅಲ್ಪಸಂಖ್ಯಾತ ಹಿಂದೂ, ಬೌದ್ಧ, ಸಿಖ್, ಕ್ರೈಸ್ತ, ಪಾರ್ಸಿ ಧರ್ಮೀಯರಿಗೆ (ಮುಸ್ಲಿಮ್ ಹೊರತುಪಡಿಸಿ) ಭಾರತೀಯ ಪೌರತ್ವ ನೀಡುವ ಸಲುವಾಗಿ ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಈ ಸಿಎಎ ನಂತರ ರಾಷ್ಟ್ರೀಯ ನಾಗರಿಕ ನೊಂದಣಿ (ಎನ್​ಆರ್​ಸಿ), ರಾಷ್ಟ್ರೀಯ ಜನಸಂಖ್ಯಾ ನೊಂದಣಿ (ಎನ್​ಪಿಆರ್) ಯೋಜನೆಗಳು ಚಾಲನೆಗೆ ಬರಲಿವೆ. ಇಲ್ಲಿ ಭಾರತದಲ್ಲಿರುವ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯಗಳನ್ನು ಗುರಿಯಾಗಿಸುವ ಸಾಧ್ಯತೆ ಇದೆ ಎಂಬುದು ವಿಪಕ್ಷಗಳ ಆತಂಕವಾಗಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: January 13, 2020, 11:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading