‘ಸಿಎಎ’ ಜಾರಿಗೆ ಬಂದದ್ದು ತಪ್ಪು ಎಂಬ ಜನರನ್ನು ದೂರವಿಡಿ; ಪ್ರಧಾನಿ ನರೇಂದ್ರ ಮೋದಿ ಕರೆ
ದೇಶದ ಅಭಿವೃದ್ಧಿಗೆ ಮಂದಗತಿಯ ಕೆಸಲ ಸೂಕ್ತವಲ್ಲ. ಈ ಕಾರಣಕ್ಕಾಗಿಯೇ ನಾವು ಅಭಿವೃದ್ಧಿಗೆ ಪೂರಕವಾದ ಅನೇಕ ಕಾನೂನುಗಳನ್ನು ಕಾಯ್ದೆಗಳನ್ನು ಜಾರಿಗೆ ತರುತ್ತಿದ್ದೇವೆ ಹೀಗಾಗಿ ‘ಸಿಎಎ’ ಕಾಯ್ದೆಯನ್ನು ಎದ್ದು ನಿಂತು ಗೌರವಿಸಿ ಹಾಗೂ ಈ ಕಾಯ್ದೆ ಜಾರಿಯಾದದ್ದು ತಪ್ಪು ಎನ್ನುವವರ ವಿರುದ್ಧ ಜನ ದೂರ ಇಡಿ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.
ದೆಹಲಿ (ಡಿಸೆಂಬರ್ 22); ದೇಶದ ಒಳಿತಿಗಾಗಿ ‘ಪೌರತ್ವ ತಿದ್ದುಪಡಿ ಕಾಯ್ದೆ’ಯನ್ನು ಜಾರಿಗೆ ತರಲಾಗಿದೆ. ಹೀಗಾಗಿ ಸಿಎಎ ಜಾರಿಗೆ ಬಂದದ್ದು ತಪ್ಪು ಎಂಬ ಜನರನ್ನು ದೂರವಿಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಇಂದು ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ನಡೆದ ಬಿಜೆಪಿ ಪಕ್ಷದ ರ್ಯಾಲಿಯಲ್ಲಿ ಮಾತನಾಡಿದ ಅವರು, “ದೇಶದ ಭವಿಷ್ಯದ ದೃಷ್ಟಿಯಿಂದ ನಾವು ಸಿಎಎ ಅನ್ನು ಜಾರಿಗೆ ತಂದಿದ್ದೇವೆ. ಇಷ್ಟು ವರ್ಷ ಕಾಂಗ್ರೆಸ್ ಪಕ್ಷದವರಿಂದ ಆಗದ ಕೆಲಸವನ್ನು ನಾವು ಮಾಡಿದ್ದೇವೆ. ಈ ಕಾಯ್ದೆ ಲಕ್ಷಾಂತರ ಜನ ಹೊಸ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ.
ಆದರೆ, ಈ ಕಾಯ್ದೆಯ ನಡುವೆ ಜಾತಿ ಧರ್ಮದ ವಿಚಾರವನ್ನು ಬೆರೆಸಲಾಗುತ್ತಿದೆ. ಇದರ ಕುರಿತು ಸುಳ್ಳು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿದೆ. ನಾವು ಕೋಟ್ಯಾಂತರ ಜನರಿಗೆ ಸಹಕಾರಿಯಾಗಲು ‘ಉಜ್ವಲ’ ದಂತಹ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಆದರೆ, ಇದ್ಯಾವ ಯೋಜನೆಯಲ್ಲೂ ನಾವು ಜಾತಿ ಧರ್ಮದ ಭೇದ ನೋಡಿಲ್ಲ. ಹೀಗಿದ್ದ ಮೇಲೆ ಸಿಎಎ ನಲ್ಲಿ ಜಾತಿ-ಧರ್ಮ ಹುಡುಕುವುದು ಸರಿಯಲ್ಲ. ಇದೆಲ್ಲಾ ಗೊತ್ತಿದ್ರೂ ವಿರೋಧ ಪಕ್ಷಗಳು ಸುಳ್ಳು ಹೇಳುತ್ತಿವೆ" ಎಂದು ನರೇಂದ್ರ ಮೋದಿ ಆರೋಪಿಸಿದರು.
"ದೇಶದ ಅಭಿವೃದ್ಧಿಗೆ ಮಂದಗತಿಯ ಕೆಸಲ ಸೂಕ್ತವಲ್ಲ. ಈ ಕಾರಣಕ್ಕಾಗಿಯೇ ನಾವು ಅಭಿವೃದ್ಧಿಗೆ ಪೂರಕವಾದ ಅನೇಕ ಕಾನೂನುಗಳನ್ನು ಕಾಯ್ದೆಗಳನ್ನು ಜಾರಿಗೆ ತರುತ್ತಿದ್ದೇವೆ ಹೀಗಾಗಿ ‘ಸಿಎಎ’ ಕಾಯ್ದೆಯನ್ನು ಎದ್ದು ನಿಂತು ಗೌರವಿಸಿ ಹಾಗೂ ಈ ಕಾಯ್ದೆ ಜಾರಿಯಾದದ್ದು ತಪ್ಪು ಎನ್ನುವವರ ವಿರುದ್ಧ ಜನ ದೂರ ಇಡಿ" ಅವರುತಿಳಿಸಿದ್ದಾರೆ.