• Home
  • »
  • News
  • »
  • national-international
  • »
  • PM Narendra Modi: ದೇಶದ ಜನರಿಗೆ ಮೋದಿ ಶುಭಾಶಯ; ಧೈರ್ಯ ಹೆಚ್ಚಿಸಿಕೊಳ್ಳಲು ಕರೆ

PM Narendra Modi: ದೇಶದ ಜನರಿಗೆ ಮೋದಿ ಶುಭಾಶಯ; ಧೈರ್ಯ ಹೆಚ್ಚಿಸಿಕೊಳ್ಳಲು ಕರೆ

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

ಹಬ್ಬವು ವಿಜಯದ ಸಂಕೇತವಾಗಿದೆ ಎಂದು ಹೇಳಿದ ಪ್ರಧಾನಿ ಮೋದಿ ಈ ಶುಭ ಸಂದರ್ಭದಲ್ಲಿ ಧೈರ್ಯ, ಸಂಯಮ ಮತ್ತು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವಂತೆ ಕೋರಿದ್ದಾರೆ. 

  • Share this:

ದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ದಸರಾ ಹಬ್ಬಕ್ಕೆ ದೇಶದ ಜನರಿಗೆ ಶುಭಕೋರಿದ್ದಾರೆ. ವಿಜಯದಶಮಿಯಂದು ಜನರಿಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಶುಭಾಶಯ (PM Narendra Modi Wishes Dasara) ಕೋರಿದ್ದು ಹಬ್ಬವು ವಿಜಯದ ಸಂಕೇತವಾಗಿದೆ ಎಂದು ಹೇಳಿದರು. ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಧೈರ್ಯ, ಸಂಯಮ ಮತ್ತು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ನಲ್ಲಿ ಕೋರಿದ್ದಾರೆ.  ಇಂದು ಪ್ರಧಾನಿ ನರೇಂದ್ರ ಮೋದಿ ಬಿಲಾಸ್‌ಪುರದಲ್ಲಿ ಏಮ್ಸ್ ಅನ್ನು ಉದ್ಘಾಟಿಸಲಿದ್ದಾರೆ. ಹಿಮಾಚಲ ಪ್ರದೇಶದ ಕುಲು ದಸರಾ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ.ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಸಹ ಬುಧವಾರ ದಸರಾ ಶುಭಾಶಯಗಳನ್ನು ಕೋರಿದ್ದಾರೆ. ಹಬ್ಬವು ಸದಾಚಾರದಲ್ಲಿ ನಂಬಿಕೆಯನ್ನು ಬಲಪಡಿಸುತ್ತದೆ. ಕೆಟ್ಟ ವಿಷಯಗಳ ಮೇಲೆ ಒಳ್ಳೆಯದರ ವಿಜಯವನ್ನು ಸಂಕೇತಿಸುವ ದಸರಾವು 'ಧರ್ಮ' ಅಥವಾ ಸದಾಚಾರದಲ್ಲಿ ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.


ಜಮ್ಮು ಕಾಶ್ಮೀರದ ಕುರಿತು ಮಹತ್ವದ ಘೋಷಣೆ ಮಾಡಿದ ಗೃಹ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ (Home Minister Amit Shah) ಅವರು ಇಂದು ಜಮ್ಮು ಮತ್ತು ಕಾಶ್ಮೀರದ (Jammu Kashmir) ರಾಜೌರಿಯಲ್ಲಿ ಗುಜ್ಜರ್ ಮತ್ತು ಬಕರ್‌ವಾಲ್‌ಗಳ ಸಮುದಾಯದ ಜೊತೆಗೆ ಪಹಾರಿ ಸಮುದಾಯಕ್ಕೆ (Pahari Community) ಶೀಘ್ರದಲ್ಲೇ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಪರಿಶಿಷ್ಟ ಪಂಗಡ (ST) ಮೀಸಲಾತಿ ಸಿಗಲಿದೆ ಎಂದು ಘೋಷಿಸಿದ್ದಾರೆ. ಈ ಮೀಸಲಾತಿ ಪಡೆಯಲು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರಬೇಕಿದೆ. ಹೀಗೆ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತಂದು ಪಹಾರಿ ಸಮುದಾಯಕ್ಕೆ ST ಸ್ಥಾನಮಾನ ದೊರೆತರೆ ಇದು ಭಾರತದಲ್ಲಿ ಭಾಷಾವಾರು ಗುಂಪು ಮೀಸಲಾತಿಯನ್ನು ಗಳಿಸಿದ ಮೊದಲ ನಿದರ್ಶನವಾಗಲಿದೆ.


ಇದನ್ನೂ ಓದಿ: Satyanarayan Puja: ಸತ್ಯನಾರಾಯಣ ಪೂಜೆ ಮಾಡಿಸಿದ್ರೂ ಹೆಣ್ಣು ಸಿಕ್ಕಿಲ್ಲ! ಅರ್ಚಕರಿಗೆ ಹಿಗ್ಗಾಮುಗ್ಗಾ ಥಳಿತ!


ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಸ್ಥಾಪಿಸಿದ ಆಯೋಗವು ಈ ಮೀಸಲಾತಿಯ ಕುರಿತು ವರದಿಯನ್ನು ಕಳುಹಿಸಿದೆ. ವರದಿಯಲ್ಲಿ ಗುಜ್ಜರ್, ಬಕರ್ವಾಲ್ ಮತ್ತು ಪಹಾರಿ ಸಮುದಾಯಗಳಿಗೆ ಮೀಸಲಾತಿಯನ್ನು ಶಿಫಾರಸು ಮಾಡಲಾಗಿದೆ. ಈ ಶಿಫಾರಸನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.


ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಲು ಕರೆ
ಆಗಸ್ಟ್ 5, 2019 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಕೆಲವು ಸ್ವಾಯತ್ತತೆಯನ್ನು ನೀಡಿದ ಸಾಂವಿಧಾನಿಕ ನಿಬಂಧನೆಗಳಾದ 35 ಎ ಮತ್ತು 370 ರ ಟೊಳ್ಳಾದ ಕ್ರಮಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಬೇಕೆಂದು ಗೃಹ ಸಚಿವ ಅಮಿತ್ ಶಾ ಅವರು ಸಭೆಯಲ್ಲಿ ನೆರೆದಿದ್ದ ಜನರಿಗೆ ಕರೆ ನೀಡಿದ್ದಾರೆ.


ಇದನ್ನೂ ಓದಿ: Gaucher Disease: ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಒಂದು ಕೋಟಿ ಮೊತ್ತ ನೀಡಿದ ಸಿಎಂ ಜಗನ್!


ನಡೆಯಲಿದೆ ವಿಧಾನಸಭಾ ಚುನಾವಣೆ
ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ವಿಧಾನಸಭಾ ಕ್ಷೇತ್ರಗಳನ್ನು ಗುರುತಿಸಲಾಗಿದೆ. ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯು ಬಹುತೇಕ ಮುಗಿದಿದೆ ಎಂದು ವರದಿಯಾಗಿದೆ. ಮೊದಲ ವಿಧಾನಸಭಾ ಚುನಾವಣೆಯು ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿದೆ.


ಜಮ್ಮು ಕಾಶ್ಮೀರದಲ್ಲಿ ಗುಲಾಂ ನಬಿ ಆಜಾದ್ ಗುರಿಯೇನು?
ಗುಲಾಂ ನಬಿ ಆಜಾದ್ (Ghulam Nabi Azad) ಕೊನೆಗೂ ತಮ್ಮ ಹೊಸ ಪಕ್ಷಕ್ಕೆ ಹೆಸರು ಘೋಷಿಸಿದ್ದಾರೆ. ಹೊಸ ಪಕ್ಷಕ್ಕೆ ಡೆಮಾಕ್ರಟಿಕ್ ಆಜಾದ್ ಪಾರ್ಟಿ ( Democratic Azad Party) ಎಂದು ಅವರು ಹೆಸರಿಟ್ಟಿದ್ದಾರೆ. ಅಲ್ಲದೇ ಈ ಹೊಸ ಪಕ್ಷದ ಧ್ವಜವನ್ನೂ ಅವರು ಅನಾವರಣಗೊಳಿಸಿದ್ದಾರೆ. ಸ್ವತಂತ್ರ ಆಲೋಚನೆ ಮತ್ತು ಸಿದ್ಧಾಂತಕ್ಕೆ ಡೆಮಾಕ್ರಟಿಕ್ ಆಜಾದ್ ಪಾರ್ಟಿ ಒತ್ತು ನೀಡಲಿದೆ ಎಂದು ಗುಲಾಂ ನಬಿ ಆಜಾದ್ ಘೋಷಿಸಿದ್ದಾರೆ. ಕಾಂಗ್ರೆಸ್ ತೊರೆದು ಹೊಸ ಪಕ್ಷದ ಮೂಲಕ ಜಮ್ಮು ಕಾಶ್ಮೀರದಲ್ಲಿ ಚುನಾವಣೆಗೆ ಸ್ಪರ್ಧೆ ನಡೆಸುವುದಾಗಿ ಅವರು ಈ ಮುನ್ನವೇ ಘೋಷಣೆ ಮಾಡಿದ್ದರು.

Published by:ಗುರುಗಣೇಶ ಡಬ್ಗುಳಿ
First published: