ಕಾರಿನಲ್ಲಿ ಕುಳಿತುಕೊಂಡ ಪ್ರಧಾನಿ ಮೋದಿ ಮಾಡುವುದೇನು ಗೊತ್ತಾ? ನೋಡಿದ್ರೆ ನೀವೂ ಫಾಲೋ ಮಾಡ್ತೀರಾ


Updated:August 23, 2018, 12:26 PM IST
ಕಾರಿನಲ್ಲಿ ಕುಳಿತುಕೊಂಡ ಪ್ರಧಾನಿ ಮೋದಿ ಮಾಡುವುದೇನು ಗೊತ್ತಾ? ನೋಡಿದ್ರೆ ನೀವೂ ಫಾಲೋ ಮಾಡ್ತೀರಾ

Updated: August 23, 2018, 12:26 PM IST
ನ್ಯೂಸ್​ 18 ಕನ್ನಡ

ನವದೆಹಲಿ(ಆ.23): ಪ್ರಧಾನಿ ಮೋದಿ ಸಾಮಾಜಿಕ ಜಾಲಾತಾಣಗಳಲ್ಲಿ ಬಹಳಷ್ಟು ಸಕ್ರಿಯರಾಗಿರುತ್ತಾರೆ. ಈ ಮೂಲಕ ಜನರೊಂದಿಗೆ ಬೆರೆತುಕೊಳ್ಳುತ್ತಾರೆ. ಸದ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿಡಿಯೋ ಒಂದು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್​ ಆಗಿದ್ದು, ಅದನ್ನು ನೋಡಿದರೆ ನಿಮ್ಮ ಮುಖದಲ್ಲೂ ಒಂದು ಮಂದಹಾಸ ಮೂಡುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. PIB(Press Information Bureau of India) ಯು ಪ್ರಧಾನಿ ಮೋದಿಯ ವಿಡಿಯೋ ಒಂದನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದು, ಇದರಲ್ಲಿ ಅವರು ಕಾರಿನಲ್ಲಿ ಕುಳಿತುಕೊಳ್ಳುವ ದೃಶ್ಯಗಳಿವೆ. ಹಾಗಾದ್ರೆ ಮೋದಿ ಕಾರಿನಲ್ಲಿ ಕುಳಿತ ಕೂಡಲೇ ಏನು ಮಾಡುತ್ತಾರೆ? ಇಲ್ಲಿದೆ ಉತ್ತರ

ಮೋದಿಯವರು ಕಾರಿನಲ್ಲಿ ಕುಳಿತುಕೊಳ್ಳುವ ಮೊದಲೇ ಅಲ್ಲಿ ನೆರೆದಿದ್ದ ಅಭಿಮಾನಿಗಳೆಡೆ ಕೈಬೀಸಿ ಧನ್ಯವಾದ ಸ್ವೀಕರಿಸುತ್ತಾರೆ. ಇದಾದ ಬಳಿಕ ಕಾರಿನೊಳಗೆ ಕುಳಿತುಕೊಳ್ಳುವ ಮೋದಿ ಎಲ್ಲಕ್ಕಿಂತ ಮೊದಲು ತಮ್ಮ ಸೀಟ್​ ಬೆಲ್ಟ್​ ಹಾಕಿಕೊಳ್ಳುತ್ತಾರೆ. ಈ ವಿಚಾರವಾಗಿ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದ್ದು, ಪಿಐಬಿಯು ಈ ವಿಡಿಯೋವನ್ನು ರಸ್ತೆ ಸುರಕ್ಷತಾ ಅಭಿಯಾನದ ಅಡಿಯಲ್ಲಿ ಶೇರ್​ ಮಾಡಿಕೊಂಡಿದೆ.

Loading...ಈ ವಿಡಿಯೋ ಹಂವಚಿಕೊಂಡಿರುವ ಪಿಐಬಿಯು ಇದರೊಂದಿಗೆ "ಪ್ರಧಾನ ಮಂತ್ರಿ ಮೋದಿ ಕಾರಿನಲ್ಲಿ ಕುಳಿತುಕೊಂಡ ಬಳಿಕ ಎಲ್ಲಕ್ಕಿಂತ ಮೊದಲು ಸೀಟ್ ಬೆಲ್ಟ್​​ ಹಾಕಿಕೊಳ್ಳುತ್ತಾರೆ. ನೀವೂ ಹೀಗೆ ಮಾಡುತ್ತೀರಾ?. ನೀವೂ ಇದನ್ನು ತಪ್ಪದೇ ಮಾಡಿ" ಎಂದು ಬರೆದುಕೊಂಡಿದೆ. ಈ ಮೂಲಕ ಸುರಕ್ಷತಾ ನಿಯಮಗಳನ್ನು ಪಾಲಿಸಲು ತನ್ನದೇ ಆದ ರೀತಿಯಲ್ಲಿ ಮನವಿ ಮಾಡಿಕೊಂಡಿದೆ.

ಈ ವಿಡಿಯೋವನ್ನು ಈಗಾಗಲೇ 5 ಸಾವಿರಕ್ಕಿಂತಲೂ ಅಧಿಕ ಮಂದಿ ಶೇರ್​ ಮಾಡಿಕೊಂಡಿದ್ದು, 2 ಸಾವಿರಕ್ಕೂ ಅಧಿಕ ಮಂದಿ ಕಮೆಂಟ್​ ಮಾಡಿದ್ದಾರೆ.  World Health Organization ಅನ್ವಯ ಸೀಟ್​ ಬೆಲ್ಟ್​ ಧರಿಸುವುದು, ಪ್ರಥಮಿಕ ಸಂಯಮ ವ್ಯವರ್ಸತೆಯಾಗಿದೆ. ಈ ಮೂಲಕ ಶೇ 45 ರಿಂದ 65ರಷ್ಟು ಸಾವು ಸಂಭವಿಸುವ ಅಪಾಯ ಕಡಿಮೆಯಾಗುತ್ತದೆ.
First published:August 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ