ದೆಹಲಿ: ಹೊಸ ಸಂಸತ್ ಭವನದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿರುವ ರಾಷ್ಟ್ರ ಲಾಂಛನವು (National Emblem) ವಿಪಕ್ಷಗಳು ಟೀಕೆಗೆ ಗುರಿಯಾಗಿದೆ. ಲಾಲು ಪ್ರಸಾದ್ ಯಾದವ್ ಅವರ ನೇತೃತ್ವದ ರಾಷ್ಟ್ರೀಯ ಜನತಾ ದಳ ಟ್ವೀಟ್ ಮಾಡಿದ್ದು, ರಾಷ್ಟ್ರೀಯ ಲಾಂಛನದಲ್ಲಿರುವ ಸಿಂಹಗಳು ಸೌಮ್ಯವಾದ ಅಭಿವ್ಯಕ್ತಿಯನ್ನು (National Emblem Expression) ಹೊಂದಿದ್ದವು. ಆದರೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅನಾವರಣಗೊಳಿಸಿದ ರಾಷ್ಟ್ರೀಯ ಲಾಂಛನದ ಹೊಸ ಶಿಲ್ಪವು ಉಗ್ರ ಸ್ವರೂಪವನ್ನು ಹೊಂದಿದೆ ಎಂದು ಟೀಕಿಸಿದೆ. ಆದರೆ ರಾಷ್ಟ್ರೀಯ ಲಾಂಛನದ ಹೊಸ ಶಿಲ್ಪದ ವಿನ್ಯಾಸಕರು ಮಾತ್ರ ಮೊದಲಿನಂತೆಯೇ ಹೊಸ ಶಿಲ್ಪವನ್ನು ನಿರ್ಮಿಸಲಾಗಿದೆ. ಹೊಸ ಸಂಸತ್ ಭವನದ (New Parliament Building) ಬಳಿ ಅನಾವರಣಗೊಳಿಸಿದ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದೇಶದ ಕಾರ್ಯಾಂಗದ ಮುಖ್ಯಸ್ಥರಾಗಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರ ಲಾಂಛನವನ್ನು ಏಕೆ ಅನಾವರಣಗೊಳಿಸಿದರು ಎಂದು ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿವೆ. ಅಲ್ಲದೇ ರಾಷ್ಟ್ರೀಯ ಲಾಂಛನವನ್ನು ಮಾರ್ಪಡಿಸಲಾಗಿದೆ ಮತ್ತು ಅವಮಾನಿಸಲಾಗಿದೆ ಎಂದು ಕೇಂದ್ರ ಸರ್ಕಾರವನ್ನು ವಿಪಕ್ಷಗಳು ಟೀಕಿಸಿವೆ.
मूल कृति के चेहरे पर सौम्यता का भाव तथा अमृत काल में बनी मूल कृति की नक़ल के चेहरे पर इंसान, पुरखों और देश का सबकुछ निगल जाने की आदमखोर प्रवृति का भाव मौजूद है।
हर प्रतीक चिन्ह इंसान की आंतरिक सोच को प्रदर्शित करता है। इंसान प्रतीकों से आमजन को दर्शाता है कि उसकी फितरत क्या है। pic.twitter.com/EaUzez104N
— Rashtriya Janata Dal (@RJDforIndia) July 11, 2022
Insult to our national symbol, the majestic Ashokan Lions. Original is on the left, graceful, regally confident. The one on the right is Modi’s version, put above new Parliament building — snarling, unnecessarily aggressive and disproportionate. Shame! Change it immediately! pic.twitter.com/luXnLVByvP
— Jawhar Sircar (@jawharsircar) July 12, 2022
ತೃಣಮೂಲ ಕಾಂಗ್ರೆಸ್ ನಾಯಕನಿಂದಲೂ ಟೀಕೆ
ರಾಷ್ಟ್ರೀಯ ಲಾಂಛನದ ಹೊಸ ಶಿಲ್ಪದ ಚಿತ್ರವನ್ನು ಹಂಚಿಕೊಂಡಿರುವ ತೃಣಮೂಲ ಕಾಂಗ್ರೆಸ್ನ ರಾಜ್ಯಸಭಾ ಸದಸ್ಯ ಜವ್ಹಾರ್ ಸಿರ್ಕಾರ್, ರಾಷ್ಟ್ರ ಲಾಂಛನದ ಹಳೆಯ ಮತ್ತು ಹೊಸ ಆವೃತ್ತಿಯ ಚಿತ್ರಗಳನ್ನು ಅಕ್ಕಪಕ್ಕದಲ್ಲಿ ಹಂಚಿಕೊಂಡಿರುವ ಅವರು ಟ್ವೀಟ್ ಮಾಡಿದ್ದಾರೆ, "ಎಡಭಾಗದಲ್ಲಿ ರಾಷ್ಟ್ರೀಯ ಲಾಂಛನದ ಮೊದಲ ರೂಪವಿದೆ. ಅದು ಆಕರ್ಷಕವಾಗಿದೆ. ಗೌರವಾನ್ವಿತ ಅನಿಸುವಂತಿದೆ. ಬಲಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ ರಾಷ್ಟ್ರೀಯ ಲಾಂಛನದ ಹೊಸ ಶಿಲ್ಪವಾಗಿದೆ. ಇದನ್ನು ತಕ್ಷಣ ಬದಲಾಯಿಸಬೇಕು ಎಂದು ಟೀಕಿಸಿ ಒತ್ತಾಯಿಸಿದ್ದಾರೆ.
ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿಯಿಂದ ಅನಾವರಣ
ರಾಷ್ಟ್ರೀಯ ಲಾಂಛನವನ್ನು ಕಂಚಿನಿಂದ ತಯಾರಿಸಲಾಗಿದೆ. ಇದು ಒಟ್ಟು 9500 ಕೆಜಿ ತೂಕ ಮತ್ತು 6.5 ಮೀ ಎತ್ತರವಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜುಲೈ 12 ರಂದು ಬೆಳಗ್ಗೆ ನೂತನ ಸಂಸತ್ ಭವನದ ಛಾವಣಿಯ ಮೇಲೆ ರಾಷ್ಟ್ರೀಯ ಲಾಂಛನವನ್ನು ಅನಾವರಣಗೊಳಿಸಿದ್ದರು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ತಿನ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಶ್ರಮಜೀವಿಗಳೊಂದಿಗೆ ಸಂವಾದ ನಡೆಸಿದ್ದರು.
ವಿಶೇಷತೆಗಳೇನು?
ರಾಷ್ಟ್ರೀಯ ಲಾಂಛನವನ್ನು ಕಂಚಿನಿಂದ ತಯಾರಿಸಲಾಗಿದೆ. ಇದು ಒಟ್ಟು 9500 ಕೆಜಿ ತೂಕ ಮತ್ತು 6.5 ಮೀ ಎತ್ತರವಿದೆ. ಹೊಸ ಪಾರ್ಲಿಮೆಂಟ್ ಕಟ್ಟಡದ ಸೆಂಟ್ರಲ್ ಫೋಯರ್ ಮೇಲ್ಭಾಗದಲ್ಲಿ ರಾಷ್ಟ್ರೀಯ ಲಾಂಛನವನ್ನು ಸ್ಥಾಪಿಸಲಾಗಿದೆ.
National Emblem: ಹೊಸ ಸಂಸತ್ ಭವನದ ಬಳಿ ರಾಷ್ಟ್ರೀಯ ಲಾಂಛನ; ಫೋಟೊ ನೋಡಿ
ರಾಷ್ಟ್ರೀಯ ಲಾಂಛನಕ್ಕೆ 6500 ಕೆ.ಜಿ ತೂಕದ ಉಕ್ಕಿನ ರಕ್ಷಣಾ ಕವಚವನ್ನು ನಿರ್ಮಿಸಲಾಗಿದೆ. ಹೊಸ ಸಂಸತ್ತಿನ ಕಟ್ಟಡದ ಛಾವಣಿಯ ಮೇಲೆ ರಾಷ್ಟ್ರೀಯ ಲಾಂಛನವನ್ನು ಬಿತ್ತರಿಸುವ ಪರಿಕಲ್ಪನೆಯ ರೇಖಾಚಿತ್ರ ಮತ್ತು ಪ್ರಕ್ರಿಯೆಯನ್ನು ಒಟ್ಟು 8 ಹಂತಗಳಲ್ಲಿ ನಡೆಸಲಾಗಿದೆ.
ಇದನ್ನೂ ಓದಿ: Supermoon 2022: ಸೂಪರ್ ಮೂನ್ ವೀಕ್ಷಿಸಲು ಸಿದ್ಧರಾಗಿ! ಯಾವಾಗ ಕಾಣಿಸುತ್ತೆ?
ಕ್ಲೇ ಮಾಡೆಲಿಂಗ್/ಕಂಪ್ಯೂಟರ್ ಗ್ರಾಫಿಕ್ನಿಂದ ಕಂಚಿನ ಎರಕಹೊಯ್ದ ಮತ್ತು ಪಾಲಿಶ್ ಮಾಡುವ ಹಂತವನ್ನು ಸಹ ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ