• Home
 • »
 • News
 • »
 • national-international
 • »
 • PM Modi: ಪ್ರಧಾನಿ ಮೋದಿ ಟ್ವಿಟರ್ ಖಾತೆಗೆ ಕನ್ನ ಹಾಕಿದ ಕಿಡಿಗೇಡಿಗಳು; ಬಿಟ್​ ಕಾಯಿನ್ ಬಗ್ಗೆ ನಕಲಿ ಪೋಸ್ಟ್

PM Modi: ಪ್ರಧಾನಿ ಮೋದಿ ಟ್ವಿಟರ್ ಖಾತೆಗೆ ಕನ್ನ ಹಾಕಿದ ಕಿಡಿಗೇಡಿಗಳು; ಬಿಟ್​ ಕಾಯಿನ್ ಬಗ್ಗೆ ನಕಲಿ ಪೋಸ್ಟ್

ಪ್ರಧಾನಿ ಮೋದಿ (ಫೈಲ್​ ಫೋಟೋ)

ಪ್ರಧಾನಿ ಮೋದಿ (ಫೈಲ್​ ಫೋಟೋ)

Modi Twitter: ಪ್ರಧಾನಿ ನರೇಂದ್ರಮೋದಿಯವರ ಟ್ವಿಟರ್ ಹ್ಯಾಂಡಲ್ ತೀರಾ ಅಲ್ಪಾವಧಿಗೆ ಹ್ಯಾಕ್ ಆಗುತ್ತಿದ್ದಂತೆ ಈ ವಿಷಯವನ್ನು ತಕ್ಷಣ ಟ್ವಿಟರ್ ಗಮನಕ್ಕೆ ತರಲಾಗಿದ್ದು, ತಕ್ಷಣವೇ ಖಾತೆಯನ್ನು ಸುರಕ್ಷಿತವಾಗಿ ಮಾಡಲಾಯಿತು

 • Share this:

  ಇತ್ತೀಚಿಗೆ ಕಿಡಿಗೇಡಿಗಳು ದೇಶದ ಉನ್ನತ, ಅಧಿಕಾರಿಗಳು(Officer) ಜನನಾಯಕರ ಸೋಶಿಯಲ್ ಮೀಡಿಯಾ(Social Media) ಖಾತೆಗಳ ಮೇಲೆ ವಕ್ರದೃಷ್ಟಿ ಬೀರಿದ್ದಾರೆ.. ದಾಖಲೆ ಹಲವು ದೇಶದ ನಾಯಕರ ಟ್ವಿಟರ್(Twitter) ಖಾತೆಗಳು ಹ್ಯಾಕ್(Hack) ಆದ ಬೆನ್ನಲ್ಲೇ ದುಷ್ಕರ್ಮಿಗಳು ಇಂದು ಪ್ರಧಾನಿ ನರೇಂದ್ರ ಮೋದಿಯವರ ಟ್ವಿಟರ್ ಖಾತೆ ಮೇಲೆ ವಕ್ರದೃಷ್ಟಿ ಬೀರಿದ್ದಾರೆ.. ಹೌದು ಇಂದು ಬೆಳಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ(PM Modi) ಅವರ ಟ್ವಿಟರ್​ ಖಾತೆ ಇಂದು ಹ್ಯಾಕ್​ ಆಗಿದೆ. ಕಿಡಿಗೇಡಿಗಳಿಂದ ಕೆಲ ಹೊತ್ತು ಪ್ರಧಾನಿ ಅವರ ಖಾತೆ ನಿಯಂತ್ರಣ ಕಳೆದುಕೊಂಡಿದ್ದು, ಬಳಿಕ ಸರಿಪಡಿಸಲಾಯಿತು ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ.


  ಕೆಲವೇ ಗಂಟೆಗಳಲ್ಲಿ ಸರಿಯಾದ ಟ್ವಿಟರ್ ಹ್ಯಾಕ್


  ಇನ್ನು ಪ್ರಧಾನಿ ನರೇಂದ್ರಮೋದಿಯವರ ಟ್ವಿಟರ್ ಹ್ಯಾಂಡಲ್ ತೀರಾ ಅಲ್ಪಾವಧಿಗೆ ಹ್ಯಾಕ್ ಆಗುತ್ತಿದ್ದಂತೆ, ಈ ವಿಷಯವನ್ನು ತಕ್ಷಣ ಟ್ವಿಟರ್ ಗಮನಕ್ಕೆ ತರಲಾಗಿದ್ದು, ತಕ್ಷಣವೇ ಖಾತೆಯನ್ನು ಸುರಕ್ಷಿತವಾಗಿ ಮಾಡಲಾಯಿತು. ಹ್ಯಾಕ್ ಆದ ಅಲ್ಪಾವಧಿಯಲ್ಲಿ ಶೇರ್ ಆದ ಟ್ವೀಟ್‍ಗಳನ್ನು ಕಡೆಗಣಿಸಬೇಕು ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಮನವಿ ಮಾಡಿದೆ..  ಇದನ್ನೂ ಓದಿ: ಇದೇ ಮೊದಲ ಬಾರಿಗೆ ಸಂಸತ್ತಿನ ಹೊರಗೆ ಸಂಸದೀಯ ಸಭೆ ನಡೆಸಲಿರುವ ಬಿಜೆಪಿ


  ಬಿಟ್ ಕಾಯಿನ್ ಅಧಿಕೃತ ಎಂದು ಟ್ವೀಟ್ ಮಾಡಿದ್ದ ಕಿಡಿಗೇಡಿಗಳು


  ದೇಶದಲ್ಲಿ ಬಿಟ್ ಕಾಯಿನ್ ಹಗರಣ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿಯವರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿರುವ ಕಿಡಿಗೇಡಿಗಳು, ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆಗೆ ಕಾನೂನು ಬದ್ದಗೊಳಿಸಲಾಗಿದೆ. ಸರ್ಕಾರ ಅಧಿಕೃತವಾಗಿ 500 ಬಿಟ್ ಕಾಯಿನ್ ಗಳನ್ನು ಖರೀದಿಸಿದೆ. ಇವುಗಳನ್ನು ದೇಶದ ಪ್ರಜೆಗಳಿಗೆ ಹಂಚುವುದಾಗಿ ಪ್ರಧಾನಿ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿತ್ತು.


  PM Narendra Modi's Twitter handle gets hacked


  2020ರಲ್ಲೂ ಮೋದಿ ಟ್ವಿಟ್ಟರ್ ಹ್ಯಾಕ್..


  ಇನ್ನು ಪ್ರಧಾನಿ ಮೋದಿ ಟ್ವಿಟ್ಟರ್ ಖಾತೆ ಹ್ಯಾಕ್ ಆಗುತ್ತಿರುವುದು ಇದೆ ಮೊದಲೇನಲ್ಲ.ಸೆಪ್ಟೆಂಬರ್ 2020 ರಲ್ಲಿ, ಪಿಎಂ ಮೋದಿ ಅವರ ವೈಯಕ್ತಿಕ ವೆಬ್‌ಸೈಟ್‌ನ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು. ಆಗ ಕೂಡ ಕ್ರಿಪ್ಟೋಕರೆನ್ಸಿಯನ್ನು ಬಗ್ಗೆ ಟ್ವೀಟ್‌ಗಳನ್ನು ಮಾಡಲಾಗಿತ್ತು. ಟ್ವೀಟ್‌ಗಳ ಸರಣಿಯಲ್ಲಿ, ಪ್ರಧಾನಿ ಮೋದಿಯವರ ವೈಯಕ್ತಿಕ ವೆಬ್‌ಸೈಟ್‌ನ ಟ್ವಿಟರ್ ಖಾತೆಯಿಂದ "ಕೋವಿಡ್ -19 ಗಾಗಿ PM ರಾಷ್ಟ್ರೀಯ ಪರಿಹಾರ ನಿಧಿಗೆ ಉದಾರವಾಗಿ ದೇಣಿಗೆ ನೀಡಲು ನಾನು ನಿಮ್ಮೆಲ್ಲರಿಗೂ ಮನವಿ ಮಾಡುತ್ತೇನೆ. ಈಗ ಭಾರತದಲ್ಲಿ ಈಗ ಕ್ರಿಪ್ಪೋ ವ್ಯವಹಾರ ಪ್ರಾರಂಭವಾಗಿದೆ. ಕ್ರಿಪ್ಟೋ ಕರೆನ್ಸಿ, ದಯವಿಟ್ಟು ದೇಣಿಗೆ ನೀಡಿ." ಎಂದು ಟ್ವೀಟ್‌ ಮಾಡಲಾಗಿತ್ತು.


  ಇದನ್ನೂ ಓದಿ: ಇಂಡೋ-ರಷ್ಯಾ ಸ್ನೇಹವನ್ನು ಬಣ್ಣಿಸಿದ ಮೋದಿ- ಶೃಂಗಸಭೆಯಲ್ಲಿ ಹಲವಾರು ಒಪ್ಪಂದಕ್ಕೆ ಸಹಿ


  ಟ್ವಿಟರ್‌ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ವಿಶ್ವದ ಪ್ರಮುಖ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಒಬ್ಬರು. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಮೋದಿ ಹಲವಾರು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ.2009ರಲ್ಲಿ ನರೇಂದ್ರ ಮೋದಿ ಟ್ವಿಟರ್‌ಗೆ ಜಾಯಿನ್ ಆಗಿದ್ದಾರೆ. 73.4 ಮಿಲಿಯನ್ ಹಿಂಬಾಲಕರು ಅವರಿಗಿದ್ದಾರೆ. 2,367 ಜನರನ್ನು ಮೋದಿ ಫಾಲೋ ಮಾಡುತ್ತಿದ್ದಾರೆ.

  Published by:ranjumbkgowda1 ranjumbkgowda1
  First published: