PM Modi America Tour: ಇಂದು ಅಮೇರಿಕಾ, ಜಪಾನ್ ಪಿಎಂಗಳ ಜೊತೆ ಪ್ರಧಾನಿ ಮೋದಿ‌ ದ್ವಿಪಕ್ಷೀಯ ಮಾತುಕತೆ

ಇಂದು ಭಾರತ, ಅಮೇರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಜಪಾನ್ ದೇಶಗಳ ಒಕ್ಕೂಟವಾಗಿರುವ ಕ್ವಾಡ್ ದೇಶಗಳ ಮಹತ್ವದ ಶೃಂಗಸಭೆ ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೋದಿಯನ್ನು ಸ್ವಾಗತಿಸುತ್ತಿರುವ ಅನಿವಾಸಿ ಭಾರತೀಯರು.

ಮೋದಿಯನ್ನು ಸ್ವಾಗತಿಸುತ್ತಿರುವ ಅನಿವಾಸಿ ಭಾರತೀಯರು.

  • Share this:
ನವದೆಹಲಿ (ಸೆಪ್ಟೆಂಬರ್ 24): ನಾಲ್ಕು ದಿನಗಳ ಪ್ರವಾಸಕ್ಕಾಗಿ ಅಮೆರಿಕಾ ಪ್ರವಾಸ ಕೈಗೊಂಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು (Prime Minister Narendra Modi) ಇಂದು ಭಾರತ (India), ಅಮೇರಿಕಾ (America), ಆಸ್ಟ್ರೇಲಿಯಾ (Australia), ಇಂಗ್ಲೆಂಡ್ (England) ಮತ್ತು ಜಪಾನ್ (Japan) ದೇಶಗಳ ಒಕ್ಕೂಟವಾಗಿರುವ ಕ್ವಾಡ್ (Quad) ದೇಶಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಅವರು ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ (America President Jo Biden) ಹಾಗೂ ಜಪಾನ್ ಪ್ರಧಾನ ಮಂತ್ರಿ ಯೊಶಿಹಿಡೆ ಸುಗ (Japan Prime Minister Yoshihide Suga) ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಇದಲ್ಲದೆ ಮೋದಿ ಇಂದು ಅಮೆರಿಕದ ಉಪಾಧ್ಯಕ್ಷರಾಗಿರುವ ಭಾರತ ಮೂಲದ ಕಮಲಾ ಹ್ಯಾರಿಸ್ (American Vice President Kamala Harris) ಅವರನ್ನು ಭೌತಿಕವಾಗಿ ‌ಮೊದಲ ಬಾರಿಗೆ ಭೇಟಿಯಾಗಿ ಈಗಾಗಲೇ ಚರ್ಚೆ ನಡೆಸಿದ್ದಾರೆ. ನಾಳೆ (ಸೆಪ್ಟೆಂಬರ್ 25ರಂದು) ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ‌ ಕೂಡ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು‌ ನಾಲ್ಕು ದಿನಗಳ ಅಮೇರಿಕಾ ಪ್ರವಾಸಕ್ಕಾಗಿ ಸೆಪ್ಟೆಂಬರ್ 22 ದೆಹಲಿಯಿಂದ ವಾಷಿಂಗ್ಟನ್ ಡಿಸಿಗೆ (Washington DC) ತೆರಳಿದ್ದಾರೆ. ಕೋವಿಡ್ ಸಾಂಕ್ರಾಮಿಕ (Covid Pandemic) ಬಳಿಕ ಇದು ಅವರ ಮೊದಲ ಅಮೇರಿಕಾ ಪ್ರವಾಸವಾಗಿದೆ (America‌ Tour). ನಿನ್ನೆ (ಸೆಪ್ಟೆಂಬರ್ 23ರಂದು) ಅಮೇರಿಕಾದ ಉನ್ನತ ಸಂಸ್ಥೆಗಳ ಸಿಇಓ (CEO)ಗಳ ಜೊತೆ ಸಭೆ ನಡೆಸಲಿದ್ದಾರೆ.

ಇಂದು ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ. ಕ್ವಾಡ್ ದೇಶಗಳಾದ ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್ ಮೋರಿಸನ್ (Australian Prime Minister Scott Morrison), ಜಪಾನ್ ಪ್ರಧಾನ ಮಂತ್ರಿ ಯೊಶಿಹಿಡೆ ಸುಗ (Japan Prime Minister Yoshihide Suga) ಮತ್ತು ಇಂಗ್ಲೆಂಡ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ (England Prime Minister Boris Johnson) ಅವರು ಕೂಡ ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳ ಲಿದ್ದಾರೆ. ಶೃಂಗಸಭೆಯ ಬಳಿಕ‌ ಕ್ವಾಡ್ ದೇಶಗಳ ನಾಯಕರ‌ ಭೋಜನಕೂಟ ಇರಲಿದೆ.

ಇದೇ ವೇಳೆ ಕೊರೊನಾ ನಂತರ ಅವರು ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ ಮತ್ತು ಜಪಾನ್ ಪ್ರಧಾನ ಮಂತ್ರಿ ಯೊಶಿಹಿಡೆ ಸುಗ ಅವರನ್ನು ಭೌತಿಕವಾಗಿ ಮೊದಲ ಭಾರಿಗೆ ಭೇಟಿ ಆಗುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಇಬ್ಬರು ನಾಯಕರ ಜೊತೆ ಪ್ರತ್ಯೇಕವಾಗಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ಮಾತುಕತೆ ವೇಳೆ ಪರಸ್ಪರ ವ್ಯಾಪಾರ-ವ್ಯವಹಾರ ವೃದ್ಧಿ, ತಂತ್ರಜ್ಞಾನ ವಿನಿಮಯ, ಭದ್ರತೆ ಬಗ್ಗೆ ಚರ್ಚೆ ನಡೆಯಲಿದೆ.

ನಾಳೆ ಸಂಜೆ‌ ವಾಷಿಂಗ್ಟನ್ ಡಿಸಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನ್ಯೂಯಾರ್ಕ್‌‌ (New York)ಗೆ ಪ್ರಯಾಣ ಬೆಳಸಲಿದ್ದಾರೆ. ಸೆಪ್ಟೆಂಬರ್ 25ರಂದು ನ್ಯೂಯಾರ್ಕ್ ನಗರದಲ್ಲಿ ನಡೆಯುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿ ಭಾಷಣ ಮಾಡಲಿದ್ದಾರೆ. ಸೆಪ್ಟೆಂಬರ್‌ 26ಕ್ಕೆ ನ್ಯೂಯಾರ್ಕ್ ನಿಂದ ನವದೆಹಲಿಗೆ ವಾಪಸ್ ಆಗಲಿದ್ದಾರೆ.

ಕಳೆದ ಕೆಲವು ದಿನಗಳಿಂದ ನರೇಂದ್ರ ಮೋದಿ ಮತ್ತು ಜೋ ಬಿಡೆನ್ ನಿಯಮಿತವಾಗಿ ಸಂಪರ್ಕದಲ್ಲಿದ್ದರು.‌ ಕೆಲವು ವರ್ಚ್ಯುಯಲ್ ‌ಮಿಟಿಂಗ್ ಗಳು (Verchual Meeting)ಗಳು ಆಗಿದ್ದವು. ಈಗ ಭೌತಿಕವಾಗಿ ಭೇಟಿ (Physical Meeting) ಆಗುತ್ತಿದ್ದು ಭದ್ರತೆ, ರಕ್ಷಣೆ ಮತ್ತು ವ್ಯಾಪಾರ ವೃದ್ಧಿ ಬಗ್ಗೆ ಉಭಯ ನಾಯಕರು ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.

ಇದನ್ನೂ ಓದಿ: PM Cares ಭಾರತ ಸರ್ಕಾರದ ನಿಧಿಯಲ್ಲ, RTI ಅಡಿಯಲ್ಲಿ ತರಲು ಸಾಧ್ಯವೇ ಇಲ್ಲ; ಕೇಂದ್ರ ಸರ್ಕಾರ

ಅಫ್ಘಾನಿಸ್ತಾನದ ಬಿಕ್ಕಟ್ಟಿನ (Afghanistan Crisis) ಬಗ್ಗೆ ಸಮಾಲೋಚನೆ ನಡೆಸುತ್ತಾರೆ. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಭೇಟಿ ಮಾಡಿ ಎರಡು ದೇಶಗಳ ನಡುವಿನ ವ್ಯಾಪಾರ ಮಟ್ಟದ ಸಂವಾದಗಳನ್ನು ನಡೆಸುತ್ತಾರೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ಶೃಂಗ್ಲಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನರೇಂದ್ರ ಮೋದಿ ನೇತೃತ್ವದಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳುತ್ತಿರುವ ಭಾರತದ ನಿಯೋಗದಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ (Foreign Affairs Minister S. Jaishankar), ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (National Security Adviser Ajith Doel) ಮತ್ತು ವಿದೇಶಾಂಗ ಕಾರ್ಯದರ್ಶಿ ಹರ್ಷ ಶ್ರಿಂಗ್ಲಾ (Foreign Security Harsha Sringla) ಮತ್ತಿತರರು ಇರಲಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ; ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ, ಇಬ್ಬರು ಬಾಲಕರೂ ಸೇರಿ 33 ಜನರ ಬಂಧನ!

ಬಾಂಗ್ಲಾ ದೇಶ (Bangladesh) ವಿಮೋಚನೆಯ ಸ್ವರ್ಣ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು 2020ರ ಮಾರ್ಚ್​ನಲ್ಲಿ ಢಾಕಾಕ್ಕೆ (Dhaka) ಭೇಟಿ ನೀಡಿದ್ದು ನರೇಂದ್ರ ಮೋದಿಯವರ ಕೊರೊನಾ ಕಾಲದ ಮೊದಲ ವಿದೇಶ ಪ್ರವಾಸವಾಗಿತ್ತು. 2019ರ ಸೆಪ್ಟೆಂಬರ್​ನಲ್ಲಿ ಹ್ಯೂಸ್ಟನ್ (Huston)ನಲ್ಲಿ ಆಯೋಜಿಸಲಾಗಿದ್ದ ಹೌಡಿ-ಮೋದಿ‌ (Howdy Modi)  ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಅಮೆರಿಕಕ್ಕೆ ಭೇಟಿಕೊಟ್ಟಿದ್ದರು. ಅದು ಮೋದಿ ಅವರ ಕೊನೆಯ ಅಮೆರಿಕ ಭೇಟಿಯಾಗಿತ್ತು.
Published by:MAshok Kumar
First published: