PM-DHM: ಪ್ರಧಾನ ಮಂತ್ರಿ ಡಿಜಿಟಲ್ ಆರೋಗ್ಯ ಮಿಷನ್​ಗೆ ಇಂದು ಚಾಲನೆ -ಏನಿದು ಯೋಜನೆ? ಯಾರಿಗೆ ಉಪಯೋಗ ?

Narendra Modi: ಮೂಲಸೌಕರ್ಯ ಸೇವೆಗಳು, ಆರೋಗ್ಯಕ್ಕೆ ಸಂಬಂಧಿಸಿದ ವೈಯಕ್ತಿಕ ಮಾಹಿತಿಯ ಭದ್ರತೆ, ಮತ್ತು ಗೌಪ್ಯತೆಯನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ಮುಕ್ತ, ಪರಸ್ಪರ ಕಾರ್ಯನಿರ್ವಹಿಸುವ, ಮಾನದಂಡ ಆಧಾರಿತ ಡಿಜಿಟಲ್ ವ್ಯವಸ್ಥೆಗಳನ್ನು ಸರಿಯಾಗಿ ಬಳಸಿಕೊಳ್ಳುತ್ತವೆ ಎಂದು PMO ಹೇಳಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi) ಅವರು  ಸೋಮವಾರ ಪ್ರಧಾನ ಮಂತ್ರಿ ಡಿಜಿಟಲ್ ಆರೋಗ್ಯ ಮಿಷನ್ ಅನ್ನು((PM-DHM) ವಿಡಿಯೋ ಕಾನ್ಫರೆನ್ಸ್ ಮೂಲಕ ಆರಂಭಿಸಲಿದ್ದಾರೆ ಎಂದು  ಪ್ರಧಾನಿ ಕಚೇರಿ ತಿಳಿಸಿದೆ. ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್‌ನ ಪೈಲಟ್ ಯೋಜನೆಯನ್ನು ಪ್ರಧಾನ ಮಂತ್ರಿಯವರು ಆಗಸ್ಟ್ 15, 2020 ರಂದು ಕೆಂಪು ಕೋಟೆಯಲ್ಲಿ ಘೋಷಿಸಿದ್ದರು.  ಪ್ರಸ್ತುತ, ಪ್ರಧಾನ ಮಂತ್ರಿ ಡಿಜಿಟಲ್ ಆರೋಗ್ಯ ಮಿಷನ್ (PM-DHM) ಅನ್ನು ಆರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕಚೇರಿ ತಿಳಿಸಿದೆ.  

ಇದೊಂದು ಐತಿಹಾಸಿಕ ಹೆಜ್ಜೆಯಾಗಿದ್ದು,  ಪ್ರಧಾನಿ ಮೋದಿ ಅವರು PM-DHM ಅನ್ನು ಸೆಪ್ಟೆಂಬರ್ 27, 2021 ರಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಾರಂಭಿಸಲಿದ್ದು, ನಂತರ ಈ ಸಂದರ್ಭದಲ್ಲಿ ಅವರು ದೇಶವನುದ್ದೇಶಿಸಿ  ಭಾಷಣವನ್ನು ಮಾಡಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ (PMO) ಹೇಳಿಕೆಯಲ್ಲಿ ತಿಳಿಸಿದೆ.

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು (NHA) ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB PM-JAY) ಯ ಮೂರನೇ ವಾರ್ಷಿಕೋತ್ಸವವನ್ನು ರಾಷ್ಟ್ರವ್ಯಾಪಿ  ಆಚರಿಸುತ್ತಿದೆ ಎಂದು PM-DHM ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ನ್ಯಾಯ ವಿತರಣೆಯಲ್ಲಿ ವಿಳಂಬ ಉಂಟಾಗಲು ನ್ಯಾಯಾಲಯಗಳು ಕಾರಣವಾಗಬಾರದು; ಸುಪ್ರೀಂಕೋರ್ಟ್

ಈ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾದವಿಯವರು ಸಹ ಭಾಗವಹಿಸಲಿದ್ದಾರೆ.  ಜನ್ ಧನ್, ಆಧಾರ್ ಮತ್ತು ಮೊಬೈಲ್ (JAM)  ಸೆರಿದಂತೆ ಸರ್ಕಾರದ ಇತರ ಡಿಜಿಟಲ್ ಯೋಜನೆಗಳ  ರೂಪದಲ್ಲಿ ಸ್ಥಾಪಿಸಲಾದ ಅಡಿಪಾಯಗಳ ಆಧಾರದ ಮೇಲೆ, PM-DHM  ಹೆಚ್ಚು ಮಹತ್ವದ ಡೇಟಾ ಮತ್ತು ಮಾಹಿತಿ  ಒದಗಿಸುವ ಮೂಲಕ ತಡೆರಹಿತ ಆನ್‌ಲೈನ್ ಸೇವೆಯನ್ನು ನೀಡುತ್ತಿದೆ.

ಮೂಲಸೌಕರ್ಯ ಸೇವೆಗಳು, ಆರೋಗ್ಯಕ್ಕೆ ಸಂಬಂಧಿಸಿದ ವೈಯಕ್ತಿಕ ಮಾಹಿತಿಯ ಭದ್ರತೆ, ಮತ್ತು ಗೌಪ್ಯತೆಯನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ಮುಕ್ತ, ಪರಸ್ಪರ ಕಾರ್ಯನಿರ್ವಹಿಸುವ, ಮಾನದಂಡ ಆಧಾರಿತ ಡಿಜಿಟಲ್ ವ್ಯವಸ್ಥೆಗಳನ್ನು ಸರಿಯಾಗಿ ಬಳಸಿಕೊಳ್ಳುತ್ತವೆ ಎಂದು PMO ಹೇಳಿದೆ.

ಈ ಯೋಜನೆಯು ನಾಗರಿಕರ ಆರೋಗ್ಯ ದಾಖಲೆಗಳ ವಿನಿಮಯವನ್ನು ಅವರ ಒಪ್ಪಿಗೆಯೊಂದಿಗೆ ಸಕ್ರಿಯಗೊಳಿಸುತ್ತದೆ ಎಂದು  ಪ್ರಧಾನಿ ಕಾರ್ಯಲಯ ಹೇಳಿದೆ.  PM-DHM ನ ಪ್ರಮುಖ ಅಂಶಗಳೆಂದರೆ, ಅದು ಪ್ರತಿಯೊಬ್ಬ ನಾಗರಿಕನಿಗೂ ಒಂದು ಆರೋಗ್ಯ ID ಯನ್ನು ನೀಡುತ್ತದೆ. ಅದು ಅವರ ಆರೋಗ್ಯ ಖಾತೆಯಾಗಿ ಕೆಲಸ ಮಾಡುತ್ತದೆ, ವೈಯಕ್ತಿಕ ಆರೋಗ್ಯ ದಾಖಲೆಗಳನ್ನು ಮೊಬೈಲ್ ಅಪ್ಲಿಕೇಶನ್, ಹೆಲ್ತ್‌ಕೇರ್ ಪ್ರೊಫೆಷನಲ್ಸ್ ರಿಜಿಸ್ಟ್ರಿ (HPR) ಮತ್ತು ಹೆಲ್ತ್‌ಕೇರ್ ಸಹಾಯದಿಂದ ಲಿಂಕ್ ಮಾಡಬಹುದು ಮತ್ತು  ಮಾಹಿತಿಯನ್ನು ನೋಡಬಹುದು.

ಇದು ವೈದ್ಯರು ಮತ್ತು ಆಸ್ಪತ್ರೆಗಳಿಗೆ ಹಾಗೂ ಆರೋಗ್ಯ ಸೇವಾ ಪೂರೈಕೆದಾರರಿಗೆ ಸುಲಭವಾಗಿ ವ್ಯವಹಾರ ಮಾಡಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ಕಚೆರಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: 65 ಗಂಟೆ- 20 ಸಭೆ, ದೀರ್ಘ ವಿಮಾನ ಪ್ರಯಾಣ ಇದ್ರೂ ಮೋದಿ ಸುಸ್ತಾಗದಿರಲು ಕಾರಣವೇನು? ಇಲ್ಲಿದೆ ಪ್ರಧಾನಿ ಎನರ್ಜಿ ಸೀಕ್ರೆಟ್..

ಯೋಜನೆಯ ಭಾಗವಾಗಿ ರಚಿಸಲಾದ PM-DHM ಸ್ಯಾಂಡ್‌ಬಾಕ್ಸ್, ತಂತ್ರಜ್ಞಾನವು ಯೋಜನೆಗೆ ಪೂರಕವಾಗುವಂತೆ ಕಾರ್ಯನಿರ್ವಹಿಸುತ್ತದೆ, ಇದು ಖಾಸಗಿ ಸಂಸ್ಥೆಗಳಿಗೆ ಸಹಾಯ ಮಾಡುತ್ತದೆ, ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಯ ಭಾಗವಾಗಲು ಉದ್ದೇಶಿಸಿ ಆರೋಗ್ಯ ಮಾಹಿತಿ ಒದಗಿಸುವವರು ಅಥವಾ ಆರೋಗ್ಯ ಮಾಹಿತಿ ಪಡೆಯಲು ಬಯಸುವವರು ಯೋಜನೆಯ ಲಾಭ ಪಡೆಯಬಹುದು.
Published by:Sandhya M
First published: