HOME » NEWS » National-international » PM NARENDRA MODI TO GET VACCINATED IN 2ND PHASE OF INOCULATION DRIVE MAK

COVID-19 Vaccination: ಎರಡನೇ ಹಂತದ ಕೋವಿಡ್​ ಲಸಿಕೆ ಅಭಿಯಾನದ ವೇಳೆ ಪ್ರಧಾನಿ ಮೋದಿಗೂ ಲಸಿಕೆ

ಶೀಘ್ರದಲ್ಲೇ ಭಾರತದಾದ್ಯಂತ ಎರಡನೇ ಹಂತದ ಲಸಿಕೆ ಅಭಿಯಾನವೂ ಆರಂಭವಾಗಲಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಹಂತದ ಲಸಿಕೆ ಅಭಿಯಾನದ ವೇಳೆ ಲಸಿಕೆಯನ್ನು ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

news18-kannada
Updated:January 21, 2021, 11:50 AM IST
COVID-19 Vaccination: ಎರಡನೇ ಹಂತದ ಕೋವಿಡ್​ ಲಸಿಕೆ ಅಭಿಯಾನದ ವೇಳೆ ಪ್ರಧಾನಿ ಮೋದಿಗೂ ಲಸಿಕೆ
ಪ್ರಧಾನಿ ನರೇಂದ್ರ ಮೋದಿ.
  • Share this:
ನವ ದೆಹಲಿ (ಜನವರಿ 21); ಭಾರತದಲ್ಲಿ ಕೊರೋನಾ ಸೋಂಕಿನಿಂದಾಗಿ ಈವರೆಗೆ 1.5 ಲಕ್ಷ ಜನ ಮೃತಪಟ್ಟಿದ್ದಾರೆ. ಕೋಟ್ಯಾಂತರ ಜನ ಈ ಸೋಂಕಿಗೆ ತುತ್ತಾಗಿದ್ದಾರೆ. ಹೀಗಾಗಿ ಕಳೆದ ಒಂದು ವರ್ಷದಿಂದ ನಾನಾ ಕಂಪೆನಿಗಳು ಕೊರೋನಾಗೆ ಲಸಿಕೆಯನ್ನು ಸಂಶೋಧಿಸಲು ಸಾಕಷ್ಟು ಪ್ರಯತ್ನಿಸಿವೆ. ಈ ನಡುವೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಕಳೆದ ವಾರ ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಮತ್ತು ಪುಣೆ ಮೂಲದ-ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಎಂಬ ಎರಡು ಲಸಿಕೆಗಳನ್ನು ಕೊರೋನಾ ವಿರುದ್ಧದ ಹೋರಾಟಕ್ಕೆ ತುರ್ತಾಗಿ ಬಳಸಲು ಅನುಮತಿ ನೀಡಿದೆ. ಇದರ ಬೆನ್ನಿಗೆ ಜನವರಿ 16 ರಿಂದ ಭಾರತದಾದ್ಯಂತ ಕೇಂದ್ರ ಸರ್ಕಾರ ವಿಶ್ವದ ಅತಿದೊಡ್ಡ ಕೊರೋನಾ ವೈರಸ್ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಆರಂಭಿಸಿದೆ. ಲಕ್ಷಾಂತರ ಜನರಿಗೆ ಲಸಿಕೆ ನೀಡಿದೆ. ಆದರೆ, ಪ್ರಧಾನಿ ಮೋದಿ ಲಸಿಕೆ ಸ್ವೀಕರಿಸದೇ ಇದ್ದದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡೆನ್​, ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್​ ಸೇರಿದಂತೆ ವಿಶ್ವದ ಅನೇಕ ನಾಯಕರು ಆಯಾ ದೇಶದಲ್ಲಿ ಕೊರೋನಾ ಲಸಿಕೆಯನ್ನು ಅನ್ವೇಷಿಸಿದ ಬಳಿಕ ತಾವೇ ಅದನ್ನು ಮೊದಲು ಸ್ವೀಕರಿಸುವ ಮೂಲಕ ಜನರಲ್ಲಿ ಧೈರ್ಯ ತುಂಬಿದ್ದರು. ಆ ಮೂಲಕ ಮಾದರಿಯಾಗಿದ್ದರು, ಅಲ್ಲದೆ ಕೊರೋನಾ ವಿರುದ್ಧದ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಇದನ್ನೂ ಓದಿ: ಟ್ವಿಟರ್​ನಲ್ಲಿ 2019ರಲ್ಲಿ ವೈರಲಾಗಿದ್ದ ಪೋಟೋದಿಂದಾಗಿ ಗ್ರಾಮಕ್ಕೆ ನಿರ್ಮಾಣವಾಯಿತು ಸೇತುವೆ!

ಆದರೆ, ಭಾರತದಲ್ಲಿ ಮೊದಲ ಹಂತದ ಕೊರೋನಾ ಲಸಿಕೆ ಅಭಿಯಾನ ಆರಂಭವಾಗಿದ್ದರೂ ಸಹ ಪ್ರಧಾನಿ ಮೋದಿಯಾಗಲಿ ಅಥವಾ ಅವರ ಕ್ಯಾಬಿನೆಟ್​ನ ಯಾವುದೇ ಸಚಿವರಾಗಲಿ ಈವರೆಗೆ ಕೊರೋನಾ ಲಸಿಕೆಯನ್ನು ಸ್ವೀಕರಿಸಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಈ ನಡೆ ಸಾಮಾಜಿಕ ವಲಯದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕೊನೆಗೂ ಮೋದಿ ಲಸಿಕೆ ಸ್ವೀಕರಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಇದೀಗ ಭಾರತದಾದ್ಯಂತ ಮೊದಲ ಹಂತದ ಕೊರೋನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಶೀಘ್ರದಲ್ಲೇ ಎರಡನೇ ಹಂತದ ಲಸಿಕೆ ಅಭಿಯಾನವೂ ಆರಂಭವಾಗಲಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಹಂತದ ಲಸಿಕೆ ಅಭಿಯಾನದ ವೇಳೆ ಲಸಿಕೆಯನ್ನು ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Published by: MAshok Kumar
First published: January 21, 2021, 11:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories