ದೆಹಲಿ ಚುನಾವಣೆ: ಆಪ್​​​ ವಿರುದ್ಧ ಗೆಲುವಿಗೆ ಟೊಂಕ ಕಟ್ಟಿ ನಿಂತ ಮೋದಿ; ಎರಡನೇ ದಿನವೂ ಮುಂದುವರಿದ ಮತಬೇಟೆ

ದೆಹಲಿಯ ಆರನೇ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟವಾಗಿದೆ. ಫೆಬ್ರವರಿ 8ರಂದು ಏಕ ಹಂತದಲ್ಲಿ ಚುನಾವಣೆ ನಡೆಯಲಿದೆ. ಇಲ್ಲಿನ 70 ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಮತದಾನವಾಗಲಿದ್ದು, ಫೆ. 11ರಂದು ಮತ ಎಣಿಕೆ ಆಗಲಿದೆ.

ಫೈಲ್​ ಫೋಟೋ: ನರೇಂದ್ರ ಮೋದಿ

ಫೈಲ್​ ಫೋಟೋ: ನರೇಂದ್ರ ಮೋದಿ

 • Share this:
  ನವದೆಹಲಿ(ಫೆ.03): ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಪೌರತ್ವ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಹೊತ್ತಲ್ಲೇ ದೆಹಲಿ ವಿಧಾನಸಭಾ ಚುನಾವಣೆ ನಿಗದಿಯಾಗಿದೆ. ಮುಖ್ಯಮಂತ್ರಿ ಅರವಿಂದ್​​ ಕೇಜ್ರಿವಾಲ್​​​​​ ನೇತೃತ್ವದ ಆಪ್ ಪಕ್ಷವನ್ನು ಸೋಲಿಸಲು ಕಾಂಗ್ರೆಸ್​ ಸೇರಿದಂತೆ ಬಿಜೆಪಿ ಭಾರೀ ಸರ್ಕಸ್​​ ನಡೆಸುತ್ತಿವೆ. ಈಗಾಗಲೇ ಆಪ್​​ ವಿರುದ್ಧ ಸಮರ ಸಾರಲು ಬಿರುಸಿನ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಎರಡನೇ ದಿನವೂ ಬಿಜೆಪಿ ಪರ ಮತಬೇಟೆ ಮುಂದುವರಿಸಲಿದ್ಧಾರೆ.

  ಹೌದು, ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಆರಂಭಿಸಿದ್ಧಾರೆ. ನಿನ್ನೆಯಿಂದಲೂ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ಧಾರೆ. ಈಗಾಗಲೇ ಮಂಗಳವಾರ(ಫೆ.3) ಮಧ್ಯಾಹ್ನ 2.30ರ ವೇಳೆಗೆ ಕರ್ಕೊಡೂಮಾದ ಸಿಬಿಡಿ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿದ್ದರು. ಇಂದು ಅಂದರೆ ಫೆ.4ರಂದು ದ್ವಾರಕದ ರಾಮ್ ಲೀಲಾ ಮೈದಾನದಲ್ಲಿ ನಡೆಯಲಿದೆ. ಇಲ್ಲಿಯೂ ಬಿಜೆಪಿ ಮತ ನೀಡುವಂತೆ ಪ್ರಧಾನಿ ಮೋದಿ ಸಾರ್ವಜನಿಕರಿಗೆ ಮನವಿ ಮಾಡಲಿದ್ಧಾರೆ.

  ಮಂಗಳವಾರ ದೆಹಲಿಗರ ಸುಗಮ ಜೀವನಕ್ಕಾಗಿ ಬಿಜೆಪಿಗೆ ಮತ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ದೆಹಲಿ ವಿಧಾನಸಭೆ ಚುನಾವಣೆಯ ತಮ್ಮ ಮೊದಲ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ್ದ ಪ್ರಧಾನಿ, ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ತಿಳಿಸಿದರು. ಇದೇ ವೇಳೆ ಈ ಚುನಾವಣೆ ದೆಹಲಿಗರ ಭವಿಷ್ಯ ನಿರ್ಧರಿಸುತ್ತದೆ. ನೀವು ನೆಮ್ಮದಿಯಿಂದ ಬದುಕಬೇಕು ಎಂದುಕೊಂಡಿದ್ದರೆ ಬಿಜೆಪಿಗೆ ಮತ ನೀಡಿ ಎಂದರು.

  ಇದನ್ನೂ ಓದಿ: ‘ನಿತ್ಯಾನಂದ ಆಧ್ಯಾತ್ಮ ಪ್ರವಾಸದಲ್ಲಿದ್ದಾರೆ; ಹೀಗಾಗಿ ನೋಟಿಸ್​​ ತಲುಪಿಸಲು ಸಾಧ್ಯವಿಲ್ಲ‘: ಹೈಕೋರ್ಟ್​ಗೆ ಪೊಲೀಸರು

  ಇನ್ನು, ಕಳೆದ ಲೋಕಸಭೆ ಚುನಾವಣೆಯಲ್ಲಿ ದೆಹಲಿ ಜನ ಅಭಿವೃದ್ಧಿಗೆ ಪೂರಕವಾಗಿ ಮತ ನೀಡಿದ್ದರು. ಅದರಂತೆಯೇ ಈಗ ತಮ್ಮ ವೈಯಕ್ತಿಕ ಅಭಿವೃದ್ಧಿಗೆ ಒತ್ತು ನೀಡಿ ಬಿಜೆಪಿಗೆ ವೋಟ್​ ಮಾಡಬೇಕು ಎಂದರು. ಹಾಗೆಯೇ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆಗಳನ್ನು ವಿತರಿಸಲು ದೆಹಲಿ ಸರ್ಕಾರ ಬಿಡುತ್ತಿಲ್ಲ. ಬಿಜೆಪಿ ಧನಾತ್ಮಕ ರಾಜಕೀಯದಲ್ಲಿ ನಂಬಿಕೆ ಇದೆ. ದೆಹಲಿ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ಚಲಾಯಿಸಿ ಎಂದು ಕರೆ ನೀಡಿದರು.

  ದೆಹಲಿಯ ಆರನೇ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟವಾಗಿದೆ. ಫೆಬ್ರವರಿ 8ರಂದು ಏಕ ಹಂತದಲ್ಲಿ ಚುನಾವಣೆ ನಡೆಯಲಿದೆ. ಇಲ್ಲಿನ 70 ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಮತದಾನವಾಗಲಿದ್ದು, ಫೆ. 11ರಂದು ಮತ ಎಣಿಕೆ ಆಗಲಿದೆ.
  First published: