Mann Ki Baat: ಇಂದು ಮನ್​ ಕಿ ಬಾತ್​ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ

ದೇಶದಲ್ಲಿ ಕೊರೋನಾ ವೈರಸ್ ಹೆಚ್ಚುತ್ತಿದೆ. ಈ ಭಯದ ವಾತಾರವರಣದ ಮಧ್ಯೆಯೇ ಪರೀಕ್ಷೆಗಳು ನಡೆಯುತ್ತಿವೆ. ಹೀಗಾಗಿ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡುವ ಸಾಧ್ಯತೆ ಇದೆ.

news18-kannada
Updated:June 28, 2020, 9:25 AM IST
Mann Ki Baat: ಇಂದು ಮನ್​ ಕಿ ಬಾತ್​ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ
ನರೇಂದ್ರ ಮೋದಿ
  • Share this:
ನವದೆಹಲಿ (ಜೂ.28): ದೇಶದಲ್ಲಿ ಕೊರೋನಾ ವೈರಸ್ ಹೆಚ್ಚುತ್ತಿದೆ. ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳು ವಿಫಲವಾಗುತ್ತಿವೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ 11 ಗಂಟೆಗೆ ಮನ್​ ಕಿ ಬಾತ್​ನಲ್ಲಿ ಮಾತನಾಡಲಿದ್ದಾರೆ.

ಮೋದಿ ಇಂದು ಬೆಳಗ್ಗೆ 11 ಗಂಟೆಗೆ ಮಾತನಾಡಲಿದ್ದಾರೆ. ಆಕಾಶವಾಣಿಯ ಎಲ್ಲಾ ಜಾಲಗಳಲ್ಲಿ, ದೂರದರ್ಶನ ಮತ್ತು ವೆಬ್​ಸೈಟ್​, ನ್ಯೂಸ್​​ ಆನ್​​ ಎಐಆರ್​ ಆ್ಯಪ್​​ನಲ್ಲೂ ಪ್ರಧಾನಿಯವರ ಭಾಷಣ ಪ್ರಸಾರವಾಗಲಿದೆ.  ಇದು 66ನೇ ಮನ್​ ಕಿ ಬಾತ್​ ಕಾರ್ಯಕ್ರಮವಾಗಿದೆ.

ದೇಶದಲ್ಲಿ ಕೊರೋನಾ ವೈರಸ್ ಹೆಚ್ಚುತ್ತಿದೆ. ಈ ಭಯದ ವಾತಾರವರಣದ ಮಧ್ಯೆಯೇ ಪರೀಕ್ಷೆಗಳು ನಡೆಯುತ್ತಿವೆ. ಹೀಗಾಗಿ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಜ್ಯದಲ್ಲಿ ಕೊರೋನಾ ಬಾಂಬ್; ಒಂದೇ ದಿನ 918 ಪಾಸಿಟಿವ್ ಪ್ರಕರಣ, 11 ಸಾವು!

ಸರ್ಕಾರದ ಜೊತೆಗೂಡಿ ದೇಶದ ಜನತೆ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿದೆ. ದೇಶದ ಪ್ರತಿಯೊಬ್ಬರೂ ಇದರಲ್ಲಿ ಭಾಗಿಯಾಗಿದ್ದಾರೆ. ಕೊರೋನಾ ವಿರುದ್ಧ ಹೋರಾಡುತ್ತಿರುವ ದೇಶದ ಪ್ರತಿಯೊಬ್ಬನೂ ಸೈನಿಕನೇ ಎಂದು ಮೋದಿ ಈ ಮೊದಲು ಹೇಳಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಮನ್​ ಕಿ ಬಾತ್​ ಕಾರ್ಯಕ್ರಮ ಆರಂಭಿಸಿದ್ದರು. ಇದಕ್ಕೆ ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.
First published: June 28, 2020, 9:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading