ಕೋವಿಡ್​​-19: ಸದ್ಯದ ದೇಶದ ಪರಿಸ್ಥಿತಿ ಕುರಿತಂತೆ ಇಂದು ಸಂಸದರ ಜತೆ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ

ಕೊವಿಡ್-19 ರೋಗದ ಸೋಂಕು ಪಸರುವಿಕೆ ಮೂರನೇ ಹಂತಕ್ಕೆ ಅಡಿ ಇಡುವ ಸೂಚನೆ ಸಿಗುತ್ತಿದ್ದಂತೆಯೇ ಮಾರ್ಚ್ 24ರಂದು ಪ್ರಧಾನಿ ನರೇಂದ್ರ ಮೋದಿ ಅವರು 21 ದಿನ ದೇಶವ್ಯಾಪಿ ಲಾಕ್ ಡೌನ್ ಘೋಷಣೆ ಮಾಡಿದರು. ಬ್ರಿಟನ್, ಪೊಲೆಂಡ್, ಕೊಲಂಬಿಯಾ ಸೇರಿದಂತೆ ಹಲವು ದೇಶಗಳೂ ಕೂಡ ಲಾಕ್ ಡೌನ್ ಕ್ರಮ ಜಾರಿಗೆ ತಂದಿವೆ.

ನರೇಂದ್ರ ಮೋದಿ

ನರೇಂದ್ರ ಮೋದಿ

 • Share this:
  ನವದೆಹಲಿ(ಏ.08): ಇಂದು ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದ ದೇಶದಲ್ಲಿ ಎದುರಾಗಿರುವ ಪರಿಸ್ಥಿತಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಲೋಕಸಭೆ ಹಾಗೂ ರಾಜ್ಯಸಭೆಯ ವಿವಿಧ ಪಕ್ಷಗಳ ನಾಯಕ ಜತೆ ಸಂವಾದ ನಡೆಸಲಿದ್ದಾರೆ. ಇತ್ತೀಚೆಗಷ್ಟೇ ದೇಶಾದ್ಯಂತ ತೀವ್ರಗತಿಯಲ್ಲಿ ಹರಡುತ್ತಿರುವ ಕೋವಿಡ್​​-19 ಸೋಂಕಿನ ಬಗ್ಗೆ ಮೋದಿ ಹಲವು ರಾಜ್ಯಕೀಯ ಗಣ್ಯರೊಂದಿಗೆ ಚರ್ಚಿಸಿದರು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮನ್ ಮೋಹನ್ ಸಿಂಗ್, ಮುಲಾಯಂ ಸಿಂಗ್ ಯಾದವ್, ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ, ಡಿಎಂಕೆ ನಾಯಕ ಎಂ. ಕೆ. ಸ್ಟಾಲಿನ್, ಮತ್ತಿತರ ನಾಯಕರೊಂದಿಗೆ ಇಂದು ಪ್ರಧಾನಿ ಮಾತುಕತೆ ನಡೆಸಿದರು. ಈ ಬೆನ್ನಲ್ಲೀಗ ಸಂಸದರೊಂದಿಗೆ ಸಂವಾದಕ್ಕೆ ಮುಂದಾಗಿದ್ದಾರೆ ಪ್ರಧಾನಿ ನರೇಂದ್ರ ಮೋದಿ.

  ಪ್ರಧಾನಿ ನರೇಂದ್ರ ಮೋದಿ ಘೋಷಿಸಿದಂತೆ ಏಪ್ರಿಲ್ 14ರವರೆಗೆ ದೇಶವ್ಯಾಪಿ ಲಾಕ್​ಡೌನ್ ಇದೆ. ಇದು ಮುಗಿಯಲು ಇನ್ನು 10 ದಿನ ಇದೆ. ಲಾಕ್​ಡೌನ್ ತೆರವುಗೊಳಿಸಲು ಕೇಂದ್ರ ಸರ್ಕಾರ ವಿವಿಧ ಮಾರ್ಗೋಪಾಯಗಳನ್ನ ಶೋಧಿಸುತ್ತಿದೆ. ಈ ಹೊತ್ತಿನಲ್ಲಿ ಅಮೆರಿಕದ ಸಂಸ್ಥೆಯೊಂದು ನಡೆಸಿದ ಅಧ್ಯಯನದ ಪ್ರಕಾರ ಭಾರತದಲ್ಲಿ ಇನ್ನೂ ಹಲವು ದಿನಗಳ ಕಾಲ ನಿರ್ಬಂಧಗಳನ್ನು ಮುಂದುವರಿಸಬೇಕಾಗಬಹುದು. ಜೂನ್ 4ನೇ ವಾರದಿಂದ ಸೆಪ್ಟೆಂಬರ್ ಮೊದಲ ವಾರದವರೆಗಿನ ಅವಧಿಯಲ್ಲಿ ಲಾಕ್ ಡೌನ್ ತೆರವು ಕಾರ್ಯ ಪ್ರಾರಂಭವಾಗಬಹುದು ಎಂದು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (ಬಿಎಸ್​ಜಿ) ಅಭಿಪ್ರಾಯಪಟ್ಟಿದೆ.

  ಲಾಕ್ ಡೌನ್ ಯಾಕೆ ಮುಂದುವರಿಸಬೇಕಾಗಬಹುದು ಎಂಬುದಕ್ಕೆ ಈ ಸಂಸ್ಥೆ ಕಾರಣಗಳನ್ನ ಪತ್ತೆ ಮಾಡಿದೆ. ಭಾರತದ ಆರೋಗ್ಯ ಕ್ಷೇತ್ರದ ಪರಿಸ್ಥಿತಿ ಮತ್ತು ಸರ್ಕಾರದ ನೀತಿ ಎಷ್ಟು ಸಮರ್ಪಕವಾಗಿ ಅನುಷ್ಠಾನವಾಗಬಹುದು ಎಂಬುದನ್ನು ಪರಿಗಣಿಸಿ ಒಂದು ಅಂದಾಜಿಗೆ ಬಂದಿದೆ. ಈ ಸಂಸ್ಥೆಯ ಪ್ರಕಾರ, ಜೂನ್ 3ನೇ ವಾರದಂದು ಅತಿ ಹೆಚ್ಚು ಕೊರೋನಾ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.

  ಇದನ್ನೂ ಓದಿ: ಕೊರೋನಾ ಎಫೆಕ್ಟ್​: ಶಾಸಕರ ಸಂಬಳ ಕಡಿತಕ್ಕೆ ಸಿಎಂ ಬಿ.ಎಸ್​ ಯಡಿಯೂರಪ್ಪ ಚಿಂತನೆ

  ಕೊವಿಡ್-19 ರೋಗದ ಸೋಂಕು ಪಸರುವಿಕೆ ಮೂರನೇ ಹಂತಕ್ಕೆ ಅಡಿ ಇಡುವ ಸೂಚನೆ ಸಿಗುತ್ತಿದ್ದಂತೆಯೇ ಮಾರ್ಚ್ 24ರಂದು ಪ್ರಧಾನಿ ನರೇಂದ್ರ ಮೋದಿ ಅವರು 21 ದಿನ ದೇಶವ್ಯಾಪಿ ಲಾಕ್ ಡೌನ್ ಘೋಷಣೆ ಮಾಡಿದರು. ಬ್ರಿಟನ್, ಪೊಲೆಂಡ್, ಕೊಲಂಬಿಯಾ ಸೇರಿದಂತೆ ಹಲವು ದೇಶಗಳೂ ಕೂಡ ಲಾಕ್ ಡೌನ್ ಕ್ರಮ ಜಾರಿಗೆ ತಂದಿವೆ.
  First published: