Independence Day- ಸ್ವಾತಂತ್ರ್ಯದ ಶತಮಾನೋತ್ಸವ ವೇಳೆಗೆ ನಮ್ಮ ಗುರಿ ಮುಟ್ಟಿರಬೇಕು: ಪ್ರಧಾನಿ ಮೋದಿ

ಒಲಿಂಪಿಕ್ಸ್​ನಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ್ದ ಕ್ರೀಡಾಪಟುಗಳು ಇವತ್ತು ಇಲ್ಲಿದ್ದಾರೆ. ಅವರು ನಮ್ಮ ಹೃದಯ ಗೆದ್ದಿರುವುದಷ್ಟೇ ಅಲ್ಲ ಭವಿಷ್ಯದ ತಲೆಮಾರುಗಳಿಗೆ ಪ್ರೇರಣೆಯಾಗಿದ್ಧಾರೆ ಎಂದು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

ನರೇಂದ್ರ ಮೋದಿ

ನರೇಂದ್ರ ಮೋದಿ

  • News18
  • Last Updated :
  • Share this:
ನವದೆಹಲಿ, ಆ. 15: ಇದು ಭಾರತದ ವಿಕಾಸ ಯಾತ್ರೆಯಾಗಿದ್ದು ನಾವು ಸ್ವಾತಂತ್ರ್ಯದ ನೂರು ವರ್ಷಗಳ ಸಂಭ್ರಮ ಆಚರಿಸುವ ವೇಳೆ ಆತ್ಮ ನಿರ್ಭರ್ ಭಾರತ್ (ಸ್ವಾವಲಬನೆ ಭಾರತ) ನಿರ್ಮಿಸುವ ನಮ್ಮ ಗುರಿ ಈಡೇರಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ಭಾರತದ 75ನೇ ಸ್ವಾತಂತ್ರ್ಯೋತ್ಸವದಂದು ಐತಿಹಾಸಿಕ ರೆಡ್ ಫೋರ್ಟ್​ನಲ್ಲಿ ಧ್ವಜಾರೋಹಣ ಮಾಡಿ ನಂತರದ ಭಾಷಣದಲ್ಲಿ ಸ್ವಾವಲಂಬನೆ ದೇಶದ ಕನಸನ್ನ ಸಾಕಾರಗೊಳಿಸುವ ಬಗ್ಗೆ ಮಾತನಾಡಿದರು. “ ನಾವು ಕಾಲಕ್ಕೆ ತಕ್ಕಂತೆ ಬದಲಾಗುತ್ತಿರಬೇಕು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ (ಸರ್ವರ ಏಳ್ಗೆ, ಸರ್ವರ ವಿಶ್ವಾಸ) ಆಯಿತು. ಈಗ ಸಬ್ ಕಾ ಪ್ರಯಾಸ್ (ಎಲ್ಲರ ಪ್ರಯತ್ನ) ನಮ್ಮ ಸ್ವಾವಲಂಬನೆ ಭಾರತದ ಗುರಿ ಈಡೇರಿಕೆಗೆ ಬಹಳ ಮುಖ್ಯವಾಗಿದೆ. ಆಯುಷ್ಮಾನ್ ಭಾರತ, ಉಜ್ವಲ ಯೋಜನೆ, ಪಿಂಚಣಿ ಯೋಜನೆ, ಆವಾಸ್ ಯೋಜನೆ ಇತ್ಯಾದಿ ಯೋಜನೆಗಳಿಗೆ ನಮ್ಮೆಲ್ಲಾ ನಾಗರಿಕರನ್ನ ಜೋಡಿಸಬೇಕಿದೆ. ಭಾರತವನ್ನು ಇನ್ನೂ ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಓಬಿಸಿ ಮಸೂದೆಯನ್ನ ತಂದಿದೆ” ಎಂದು ಪ್ರಧಾನಿ ಮೋದಿ ತಿಳಿಸಿದರು.

ಒಲಿಂಪಿಕ್ಸ್​ನಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ್ದ ಕ್ರೀಡಾಪಟುಗಳು ಇವತ್ತು ಇಲ್ಲಿದ್ದಾರೆ. ಅವರು ನಮ್ಮ ಹೃದಯ ಗೆದ್ದಿರುವುದಷ್ಟೇ ಅಲ್ಲ ಭವಿಷ್ಯದ ತಲೆಮಾರುಗಳಿಗೆ ಪ್ರೇರಣೆಯಾಗಿದ್ಧಾರೆ ಎಂದು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿದರು. ಇದಕ್ಕೆ ಮುನ್ನ ಪ್ರಧಾನಿ ಮೋದಿ ಅವರು ಕೆಂಪು ಕೋಟೆಯಲ್ಲಿ ಗಾರ್ಡ್ ಆಫ್ ಆನರ್ ಸ್ವೀಕರಿಸಿದರು. ಬಳಿಕ ತ್ರಿವರ್ಣ ಧ್ವಜವನ್ನ ಹಾರಿಸಿದರು. ಈ ಸಂದರ್ಭದಲ್ಲಿ ನೌಕಾ ಪಡೆಯ 16 ಮಂದಿಯ ಬ್ಯಾಂಡ್​ನಿಂದ ರಾಷ್ಟ್ರಗೀತೆಯ ಸಂಗೀತ ವಾದ್ಯ ಜರುಗಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಆರು ಮಂದಿ ಯೋಧರಿಗೆ ಶೌರ್ಯ ಚಕ್ರ ನೀಡಲಾಯಿತು. ಇವರಲ್ಲಿ ಒಬ್ಬರಿಗೆ ಮರಣೋತ್ತರವಾಗಿ ಗೌರವ ಸಲ್ಲಿಸಲಾಯಿತು. ಭಾರತೀಯ ಸೇನೆಯ ಮೇಜರ್ ಅರುಣ್ ಕುಮಾರ್ ಪಾಂಡೆ, ಮೇಜರ್ ರವಿ ಕುಮಾರ್ ಚೌಧರಿ, ಕ್ಯಾಪ್ಟನ್ ಅಶುತೋಷ್ ಕುಮಾರ್ (ಮರಣೋತ್ತರ), ಕ್ಯಾಪ್ಟನ್ ವಿಕಾಸ್ ಖತ್ರಿ, ರೈಫಲ್​ಮ್ಯಾನ್ ಮುಕೇಶ್ ಕುಮಾರ್ ಮತ್ತು ಸಿಪಾಯಿ ನೀರಜ್ ಅಹ್ಲವಾತ್ ಅವರು ಶೌರ್ಯ ಚಕ್ರ ಪಡೆದ ವೀರಸೇನಾನಿಗಳು.

ಇದನ್ನೂ ಓದಿ: Haiti Earthquake- ಹೇತಿ ದೇಶದಲ್ಲಿ ಭಾರೀ ಭೂಕಂಪ; 300ಕ್ಕೂ ಹೆಚ್ಚು ಮಂದಿ ಸಾವು

ಇವತ್ತು ಭಾರತದ ಸ್ವಾತಂತ್ರ್ಯೋತ್ಸವ ಆದರೆ, ಪಾಕಿಸ್ತಾನಕ್ಕೆ ನಿನ್ನೆ ಆಗಸ್ಟ್ 14ರಂದು ಸ್ವಾತಂತ್ರ್ಯ ಸಿಕ್ಕ ದಿನ. ಆದರೆ, ಅಂದು ಭಾರತದ ವಿಭಜನೆ ಆದ ದಿನವೂ ಆಗಿದ್ದು, ಅದನ್ನು ವಿಭಜನಾ ದುರಂತದ ಕರಾಳ ನೆನಪಿನ ದಿನ (Partion Horrors Remembrance Day) ಆಗಿ ಸ್ಮರಿಸಲಾಗುವುದು ಎಂದು ನಿನ್ನೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. “ವಿಭಜನೆಯ ನೋವು ಯಾವತ್ತೂ ಮರೆಯಲು ಸಾಧ್ಯವಿಲ್ಲ. ವಿಭಜನೆಯ ಪರಿಣಾಮವಾಗಿ ನಡೆದ ದ್ವೇಷಪೂರತಿ ಹಿಂಸಾಚಾರಗಳಿಂದ ಲಕ್ಷಾಂತರ ಜನರು ಜೀವ ಕಳೆದುಕೊಂಡರು, ಮನೆ ಮಠ ಬಿಟ್ಟು ಹೋದರು. ನಮ್ಮ ಜನರ ನರಳಾಟ ಮತ್ತು ತ್ಯಾಗದ ನೆನಪಿಗಾಗಿ ಆಗಸ್ಟ್ 14ರಂದು ವಿಭಜನಾ ಕರಾಳತೆಯ ನೆನಪಿನ ದಿನ ಆಗಿ ಆಚರಿಸಲಾಗುವುದು” ಎಂದು ಪ್ರಧಾನಿಗಳು ತಿಳಿಸಿದ್ದರು.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಮುಂದಿನ ವರ್ಷಕ್ಕೆ 75 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ (ಆಜಾದಿ ಕಾ ಅಮೃತ್ ಮಹೋತ್ಸವ್) ಅನ್ನು ಆಚರಿಸುತ್ತಇದೆ. ಈಗಾಗಲೇ ಮಾರ್ಚ್ ತಿಂಗಳಲ್ಲೇ ಗುಜರಾತ್​ನ ಸಾಬರಮತಿ ಆಶ್ರಮದಲ್ಲಿ ಚಾಲನೆ ಪಡೆದಿರುವ ಅಮೃತ ಮಹೋತ್ಸವ 2023, ಆಗಸ್ಟ್ 15ರವರೆಗೆ ನಿರಂತರವಾಗಿ ದೇಶಾದ್ಯಂತ ನಡೆಯಲಿದೆ. ದೇಶದ ವಿವಿಧೆಡೆ ಅಲ್ಲಲ್ಲಿ ಮಹೋತ್ಸವ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Vijayasarthy SN
First published: