LIVE NOW

PM Narendra Modi Speech Live: ಹೊಸ ಭಾರತದ ಜೊತೆಗೆ ಹೊಸ ಜಮ್ಮು-ಕಾಶ್ಮೀರ ಮತ್ತು ಲಡಾಖ್​ ನಿರ್ಮಿಸೋಣ; ಪ್ರಧಾನಿ ಮೋದಿ

PM Modi Speech Live: ಕಣಿವೆ ರಾಜ್ಯದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್​​ ಅನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಲು ಸರ್ಕಾರ ಅಸ್ತು ನೀಡಿದೆ. ಈ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಜನತೆಯನ್ನು ಉದ್ದೇಶಿಸಿ ಮಾತಾಡುತ್ತಿದ್ದಾರೆ.

Kannada.news18.com | August 8, 2019, 9:09 PM IST
facebook Twitter Linkedin
Last Updated August 8, 2019
auto-refresh
PM Modi Speech Live: ಜಮ್ಮು-ಕಾಶ್ಮೀರದ ಪುನಾರಚನೆ ಮಸೂದೆಗೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲೂ  ಅಂಗೀಕಾರ ದೊರೆತಿದೆ. ಸಂವಿಧಾನದ ವಿಧಿ 370ರ ಸಂಬಂಧದ ಪ್ರಸ್ತಾವಕ್ಕೆ ಸಂಸತ್​​ನ ಎರಡು ಸದನಗಳು ಅನುಮೋದನೆ ನೀಡಿವೆ. ಕಣಿವೆ ರಾಜ್ಯಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್​​ ಅನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಲು ಸರ್ಕಾರ ಅಸ್ತು ನೀಡಿದೆ. ಈ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಜನತೆಯನ್ನು ಉದ್ದೇಶಿಸಿ ಮಾತಾಡಿದರು ಈ ಬಗ್ಗೆ ಕ್ಷಣ ಕ್ಷಣದ ಮಾಹಿತಿ ನಿಮ್ಮ ನ್ಯೂಸ್​18 ಕನ್ನಡದಲ್ಲಿ. Read More
8:38 pm (IST)

ಜಮ್ಮು ಕಾಶ್ಮೀರ, ಲದ್ದಾಖ್​ ಜನರ ಚಿಂತನೆ, ನಮ್ಮೆಲ್ಲರ ಚಿಂತನೆ
ಅವರ ಸುಖ-ದುಃಖದ ಜೊತೆ ನಾವೆಲ್ಲರೂ ಭಾಗಿಯಾಗ್ಬೇಕು
ಆರ್ಟಿಕಲ್ 370ಯಿಂದ ಮುಕ್ತಿ ಸತ್ಯ
ಬೆರಳೆಣಿಕೆಯಷ್ಟು ಜನ ಅಲ್ಲಿನ ಪರಿಸ್ಥಿತಿ ಬಿಗಡಾಯಿಸಲು ಯತ್ನಿಸಿದ್ದಾರೆ
ಪಾಕಿಸ್ತಾನದ ದುರುದ್ದೇಶದ ವಿರುದ್ಧ ಭಾರತೀಯರು ಒಂದಾಗಿ ನಿಲ್ತಾರೆ

ಭಯೋತ್ಪಾದಕರಿಗೆ ಪಾಕಿಸ್ತಾನ ಬೆಂಬಲ ನಿಡ್ತಿರೋದರ ವಿರುದ್ಧ ಜನ ಹೋರಾಡ್ತಾರೆ
ಈದ್ ಸಮೀಪದಲ್ಲಿದ್ದು, ನನ್ನ ಕಡೆಯಿಂದ ಎಲ್ಲರಿಗೂ ಶುಭಾಶಯಗಳು
ಜನರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು
ತಮ್ಮ ಮನೆಗಳಿಗೆ ಹೋಗುವವರಿಗೆ ಎಲ್ಲಾ ರೀತಿಯ ಸಹಕಾರ
ನಾನು ಭದ್ರತಾ ಸಿಬ್ಬಂದಿಗೂ ಅಭಿನಂದನೆ ಸಲ್ಲಿಸುತ್ತೇನೆ

ಸರ್ಕಾರಿ ಸಿಬ್ಬಂದಿ, ಪೊಲೀಸರ ಕರ್ತವ್ಯನಿರ್ವಹಣೆ ಪ್ರಶಂಸನೀಯ
ಬದಲಾವಣೆ ಸಾಧ್ಯ, ಜನರ ಅಭಿವೃದ್ಧಿ ಸಾಧ್ಯ
ಜಮ್ಮು ಕಾಶ್ಮೀರ ನಮ್ಮ ದೇಶದ ಮುಕುಟ
ಜಮ್ಮು ಕಾಶ್ಮಿರದ ವೀರ ಮಕ್ಕಳು ಬಲಿದಾನ ನೀಡಿದ್ದಾರೆ
ಮೌಲ್ವಿ ಗುಲಾಂ ಪಾಕ್ ನುಸುಳುಕೋರರ ಮಾಹಿತಿ ನೀಡಿದ್ರು

ಅವರಿಗೆ ಅಶೋಕ ಚಕ್ರದಿಂದ ಸನ್ಮಾನಿಸಲಾಗಿತ್ತು
ದೇಶಕ್ಕಾಗಿ ಬಲಿದಾನವಾದವರ ಪಟ್ಟಿ ದೊಡ್ಡದಿದೆ
ಉಗ್ರರ ವಿರುದ್ಧ ಹೋರಾಟದಲ್ಲಿ ಹಲವು ಯೋಧರು ಹುತಾತ್ಮರಾಗಿದ್ದಾರೆ
ಉಗ್ರರ ದಾಳಿ ವೇಳೆ ಹಲವು ಸಾರ್ವಜನಿಕರು ಪ್ರಾಣ ಕಳೆದುಕೊಂಡಿದ್ದಾರೆ
ಕಣಿವೆ ರಾಜ್ಯದ ಜನರ ಕನಸುಗಳನ್ನ ನಾವು ನನಸಾಗಿಸಬೇಕಿದೆ

 

 

 

 


 

 

 

8:28 pm (IST)

4-5 ತಿಂಗಳ ಹಿಂದೆ ಪಂಚಾಯತ್ ಚುನಾವಣೆಯಲ್ಲಿ ಗೆದ್ದಿದ್ದರು
ಅವರೆಲ್ಲರೂ ಅಭಿನಂದನೆಗೆ ಅರ್ಹರು
ಹೊಸ ಕನಸುಗಳೊಂದಿಗೆ ಮುನ್ನಡೆಯುವ ವಿಶ್ವಾಸವಿದೆ
ಜಮ್ಮು ಕಾಶ್ಮೀರದಲ್ಲಿ ಪಾರದರ್ಶಕತೆಯ ಆಡಳಿತ ನಡೆಯಲಿದೆ
ದಶಕಗಳ ಕುಟುಂಬ ರಾಜಕಾರಣದಿಂದ ಯುವಜನಾಂಗಕ್ಕೆ ಅಧಿಕಾರ ಸಿಕ್ಕಿಲ್ಲ

ಈಗ ಯುವಜನಾಂಗ ಜಮ್ಮು ಕಾಶ್ಮೀರದ ನೇತೃತ್ವ ವಹಿಸಲಿದೆ
ಜಮ್ಮು ಕಾಶ್ಮೀರದ ಯುವ ಜನಾಂಗ ಮುಂದೆ ಬರಬೇಕು
ಜಗತ್ತಿನ ಅತಿದೊಡ್ಡ ಪ್ರವಾಸಿ ತಾಣವಾಗುವ ಸಾಮರ್ಥ್ಯ ಇದೆ
ಈ ಕೆಲಸದಲ್ಲಿ ಪ್ರತಿಯೊಬ್ಬ ಭಾರತೀಯನ ಬೆಂಬಲ ಬೇಕಿದೆ
ಒಂದು ಕಾಲದಲ್ಲಿ ಬಾಲಿವುಡ್​ನ ಇಷ್ಟದ ಶೂಟಿಂಗ್ ಸ್ಪಾಟ್ ಆಗಿತ್ತು

ಆಗ ಬಹುತೇಕ ಸಿನಿಮಾಗಳ ಶೂಟಿಂಗ್ ನಡೀತಿತ್ತು
ಮುಂದಿನ ದಿನಗಳಲ್ಲಿ ವಿಶ್ವದೆಲ್ಲೆಡೆಯಿಂದ ಶೂಟಿಂಗ್​ಗೆ ಬರಲಿದ್ದಾರೆ
ಹಿಂದಿ, ತೆಲುಗು, ತಮಿಳು ಸಿನಿಮಾ ಇಂಡಸ್ಟ್ರಿಗೆ ಮನವಿ ಮಾಡ್ತೇನೆ
ಜಮ್ಮು ಕಾಶ್ಮೀರದಲ್ಲಿ ಶೂಟಿಂಗ್ ಕುರಿತು ಮುಂದೆ ಬನ್ನಿ
ತಂತ್ರಜ್ಞಾನ ವಲಯದವರಿಗೂ ನಾನು ಮನವಿ ಮಾಡುತ್ತೇನೆ

ಜಮ್ಮು ಕಾಶ್ಮೀರದಲ್ಲಿ ಹೇಗೆ ತಂತ್ರಜ್ಞಾನ ವೃದ್ಧಿಸಬಹುದು ಚಿಂತನೆ ನಡೆಸಿ
ತಂತ್ರಜ್ಞಾನ ಹೆಚ್ಚಾದಷ್ಟು ಜನರ ಬದುಕು ಹಸನಾಗಲಿದೆ
ಜಮ್ಮು ಕಾಶ್ಮೀರ ಜನರ ಅಭಿವೃದ್ಧಿ ಆಗಲಿದೆ
ಜಮ್ಮು ಕಾಶ್ಮೀರದ ಜನರಿಗಾಗಿ ಹೊಸ ಕ್ರೀಡಾಲೋಕ ಸೃಷ್ಟಿ
ಹೊಸ ಸ್ಟೇಡಿಯಂ ನಿರ್ಮಾಣ ಕೂಡ ಆಗಲಿದೆ

ಕ್ರೀಡಾಲೋಕದಲ್ಲಿ ಜಮ್ಮು ಕಾಶ್ಮೀರದವರು ಹೆಸರು ಮಾಡಲಿದ್ದಾರೆ
ಕಾಶ್ಮೀರದ ಶಾಲು, ಲದ್ದಾಖ್​ನ ಆರ್ಗ್ಯಾನಿಕ್ ವಸ್ತುಗಳು ಎಲ್ಲೆಡೆ ತಲುಪಬೇಕು
ಲದ್ದಾಖ್​ನಲ್ಲಿ ಸೋಲೋ ಹೆಸರಿನ ಗಿಡ ಬೆಳೆಯುತ್ತೆ
ಸೋಲೋ ಗಿಡ ಸಂಜೀವಿನಿಯ ಕೆಲಸ ಮಾಡುತ್ತದೆ
ಆಮ್ಲಜನಕ ಕಡಿಮೆ ಇರೋ ಜಾಗದಲ್ಲಿ ಸಹಕಾರಿ

 

8:20 pm (IST)

ಪ್ರಧಾನಿ ನರೇಂದ್ರ ಮೋದಿ ಮಾತು

ಭ್ರಷ್ಟಾಚಾರ ನಿರ್ಮೂಲನಾ ದಳದ ಸ್ಥಾಪನೆ ಆಗಲಿದೆ
ರಸ್ತೆ, ರೈಲು ಮಾರ್ಗಗಳು, ಏರ್​ಪೋರ್ಟ್ ಆಧುನೀಕರಣ
ಎಲ್ಲಾ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯುತ್ತಿವೆ
ಜಮ್ಮು ಕಾಶ್ಮೀರದಲ್ಲಿ ಸಾವಿರಾರು ಜನರಿಗೆ ಮತದಾನದ ಹಕ್ಕಿಲ್ಲ
ವಿಧಾನಸಭೆ, ಸ್ಥಳೀಯ ಸಂಸ್ಥೆಗಳಲ್ಲಿ ಮತದಾನದ ಹಕ್ಕಿರಲಿಲ್ಲ

ಸ್ಥಳೀಯ ಸಂಸ್ಥೆಗಳಲ್ಲಿ ಸ್ಪರ್ಧಿಸುವ ಅಧಿಕಾರವೂ ಇರಲಿಲ್ಲ
ದೇಶದ ಬೇರೆಲ್ಲಾ ರಾಜ್ಯಗಳಲ್ಲಿ ಈ ಅಧಿಕಾರ ಇದೆ
ಇದನ್ನ ಹಾಗೇ ಮುಂದುವರಿಸಬೇಕಿತ್ತಾ?
ನಿಮ್ಮ ಜನಪ್ರತಿನಿಧಿ ನಿಮ್ಮಿಂದಲೇ ಚುನಾಯಿತರಾಗ್ತಾರೆ
ಈ ಹಿಂದಿನಂತೆಯೇ ಶಾಸಕರು ಇರುತ್ತಾರೆ

ಹಿಂದಿನಂತೆಯೇ ಕ್ಯಾಬಿನೆಟ್, ಸಿಎಂ ಇರುತ್ತಾರೆ
ಮುಂದಿನ ದಿನಗಳಲ್ಲಿ ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ ಆಗ್ಬೇಕು
ಜಮ್ಮು ಕಾಶ್ಮೀರದಲ್ಲಿ ಹೊಸ ಸರ್ಕಾರ ಸ್ಥಾಪನೆ ಆಗ್ಬೇಕು
ಸಂಪೂರ್ಣ ಪಾರದರ್ಶಕ ವಾತಾವರಣದಲ್ಲಿ ಚುನಾವಣೆ
ನೀವು ನಿಮ್ಮ ಜನಪ್ರತಿನಿಧಿಯನ್ನು ಆಯ್ಕೆ ಮಾಡಬಹುದು

8:11 pm (IST)

ಪ್ರಧಾನಿ ನರೇಂದ್ರ ಮೋದಿ ಮಾತು
ಜಮ್ಮು ಕಾಶ್ಮೀರ, ಲದ್ದಾಖ್ ಬಗ್ಗೆ ಮಾತು
ಕಣಿವೆ ರಾಜ್ಯದ ಜನತೆಗೆ ಉದ್ದೇಶಿಸಿ ಮಾತು
ಅಂಬೇಡ್ಕರ್, ಶ್ಯಾಂ ಪ್ರಸಾದ್ ಮುಖರ್ಜಿ ಕನಸು
ವಾಜಪೇಯಿ ಅವರ ಕನಸು ಕೂಡ ಆಗಿತ್ತು

ಜಮ್ಮು ಕಾಶ್ಮೀರ ಲದ್ದಾಖ್ ಹೊಸ ಶಕೆ ಆರಂಭ
ಕಣಿವೆ ರಾಜ್ಯದ ಜನರಿಗೆ ಮೋದಿ ಅಭಿನಂದನೆ
ಏನೂ ಬದಲಾವಣೆ ಆಗಲ್ಲ ಅನ್ನೋ ಭಾವನೆ ಇತ್ತು
ಆರ್ಟಿಕಲ್ 370ರ ವಿಷಯದಲ್ಲೂ ಅದೇ ಆಗಿತ್ತು
ನಮ್ಮ ಮಕ್ಕಳಿಗೆ ಹಾನಿಯಾಗ್ತಿದ್ದ ಬಗ್ಗೆ ಚರ್ಚೆ ಆಗ್ತಿರ್ಲಿಲ್ಲ

ಆರ್ಟಿಕಲ್ 370ಯಿಂದ ಕಣಿವೆ ರಾಜ್ಯಕ್ಕೆ ಏನು ಸಿಕ್ಕಿದೆ?
ಜನರಿಗೆ ಏನು ಸಿಕ್ಕಿದೆ ಎಂದು ಯಾರೂ ಹೇಳ್ತಿರಲಿಲ್ಲ
370,35ಎಯಿಂದ ಭಯೋತ್ಪಾದನೆ ಸಿಕ್ಕಿದೆ
ಪ್ರತ್ಯೇಕತಾವಾದ ಮಾತ್ರ ಸಿಕ್ಕಿದೆ
ಕಳೆದ 3 ದಶಕಗಳಲ್ಲಿ 42 ಸಾವಿರ ನಿರ್ದೋಶಿಗಳು ಮೃತಪಟ್ಟಿದ್ದಾರೆ

ವೇಗವಾಗಿ ಅಭಿವೃದ್ಧಿ ಕೂಡ ಆಗಿಲ್ಲ
ಈಗ ಜಮ್ಮು ಕಾಶ್ಮೀರ, ಲದ್ದಾಖ್ ಜನರ ಭವಿಷ್ಯ ಸುರಕ್ಷಿತವಾಗಲಿದೆ
ಜಮ್ಮು ಕಾಶ್ಮೀರ, ಲದ್ದಾಖ್ನ ಅಭಿವೃದ್ಧಿ ಆಗಲಿದೆ
ಕಾನೂನು ಮಾಡಿ ದೇಶದ ಅಭಿವೃದ್ಧಿಗೆ ಕೆಲಸ
ಕಾನೂನು ಮಾಡುವಾಗ ಸಂಸತ್ನಲ್ಲಿ ಚರ್ಚೆ ಸಹಜ

ಸಂಸತ್ನ ಹೊರಗಡೆಯೂ ಚರ್ಚೆ ನಡೆಯುತ್ತೆ
ಕಾನೂನು ದೇಶದ ಒಂದು ಭಾಗದಲ್ಲಿ ಜಾರಿಯೇ ಆಗ್ತಿರ್ಲಿಲ್ಲ
ಅವರ ಕಾನೂನು ಜಮ್ಮು ಕಾಶ್ಮೀರದಲ್ಲಿ ಜಾರಿಯಾಗ್ತಿರಲಿಲ್ಲ
ಜಮ್ಮು ಕಾಶ್ಮೀರದ ಒಂದೂವರೆ ಕೋಟಿ ಜನ ವಂಚಿತರಾಗ್ತಿದ್ರು
ದೇಶದ ಬೇರೆಡೆ ಮಕ್ಕಳಿಗೆ ಶಿಕ್ಷಣದ ಹಕ್ಕು ಇದೆ

ಹೆಣ್ಣುಮಕ್ಕಳಿಗೆ ಇರುವ ಹಕ್ಕು ಜಮ್ಮು ಕಾಶ್ಮೀರದವರಿಗಿರಲಿಲ್ಲ
ಸಫಾಯಿ ಕರ್ಮಚಾರಿಗಳಿಗೂ ಹಕ್ಕು ಇರಲಿಲ್ಲ
ಬೇರೆ ರಾಜ್ಯಗಳಲ್ಲಿ ಇರುವ ಹಕ್ಕು ಜಮ್ಮು ಕಾಶ್ಮೀರದಲ್ಲಿ ಇರಲಿಲ್ಲ

 

 

 

Load More


corona virus btn
corona virus btn
Loading