UNGC: ಭಯೋತ್ಪಾದನೆಯನ್ನು ರಾಜಕೀಯ ದಾಳವಾಗಿ ಬಳಕೆ; ವಿಶ್ವಸಂಸ್ಥೆ ಸಭೆಯಲ್ಲಿ ಪಾಕ್​ಗೆ ಮೋದಿ ತಿರುಗೇಟು

ಜಗತ್ತಿನಲ್ಲಿ ಉಗ್ರವಾದದ ಅಪಾಯ ಹೆಚ್ಚುತ್ತಿದೆ. ಈ ಭಯೋತ್ಪಾದನೆ ಎದುರಾಳಿ ದೇಶಕ್ಕೆ ಮಾತ್ರವಲ್ಲ, ಅವರಿಗೂ ಅಪಾಯ ಎಂಬುದನ್ನು ಅವರು ಮರೆಯಬಾರದು

ಯುಎನ್​ಜಿಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ

ಯುಎನ್​ಜಿಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ

 • Share this:
  ಅಮೆರಿಕ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra modi speech in UNGC) ಇಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ನಡೆಸಿದರು. ಈ ವೇಳೆ ಪಾಕಿಸ್ತಾನದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರು, ಕೆಲವು ರಾಷ್ಟ್ರಗಳು ಭಯೋತ್ಪಾದನೆಯನ್ನು (terrorism) ರಾಜಕೀಯ ದಾಳವಾಗಿ ಬಳಕೆ ಮಾಡುತ್ತಿದೆ. ಜಗತ್ತಿನಲ್ಲಿ ಉಗ್ರವಾದದ ಅಪಾಯ ಹೆಚ್ಚುತ್ತಿದೆ. ಈ ಭಯೋತ್ಪಾದನೆ ಎದುರಾಳಿ ದೇಶಕ್ಕೆ ಮಾತ್ರವಲ್ಲ, ಅವರಿಗೂ ಅಪಾಯ ಎಂಬುದನ್ನು ಅವರು ಮರೆಯಬಾರದು ಎಂದು ಇದೇ ವೇಳೆ ಕಿವಿಮಾತು ಹೇಳಿದರು.

  ಇದೇ ವೇಳೆ ಅಫ್ಘಾನ್ ನೂತನ ಸರ್ಕಾರದ ಕುರಿತು ಮಾತನಾಡಿದ ಅವರು, ಅಫ್ಘಾನಿಸ್ತಾನವೂ ಭಯೋತ್ಪಾದನೆಯನ್ನು ಪ್ರಚೋದಿಸಬಾರರು. ಕೆಲವರು ಅಫ್ಘಾನಿಸ್ತಾನದ ಪರಿಸ್ತಿತಿ ಲಾಭ ಪಡೆಯಲು ಮುಂದಾಗಿದ್ದಾರೆ. ಪ್ರಾಕ್ಸಿ ಯುದ್​ಧ, ಭಯೋತ್ಸಾದನೆ ಮತ್ತು ಅಫ್ಘಾನಿಸ್ತಾನದ ಪರಿಸ್ಥಿತಿ ನಮಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಿದೆ. ವಿಶ್ವಸಂಸ್ಥೆ ಕೂಡ ಅದರ ಪ್ರಸ್ತುತತೆಗೆ ತಕ್ಕಂತೆ ವರ್ತಿಸಬೇಕು ಎಂದರು  ಲಸಿಕೆ ಉತ್ಪಾದನೆಗೆ ಆಹ್ವಾನ
  ಭಾರತವು ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನೆಯಲ್ಲಿ ಹೆಚ್ಚು ತೊಡಗಿಸಿಕೊಂಡಿದೆ. ಭಾರತವು ಈಗಾಗಲೇ ಡಿಎನ್ಎ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಇದನ್ನು 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ನೀಡಬಹುದು. ಸದ್ಯ ನಾವು ನಾವು MRNA ಲಸಿಕೆಯನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿದ್ದೇವೆ. ಮೂಗಿನ ಮೂಲಕ ಲಸಿಕೆ ನೀಡುವುದನ್ನು ಅಭಿವೃದ್ಧಿ ಪಡಸಿದ್ದೇವೆ. ನಾವು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಲಸಿಕೆಗಳನ್ನು ಒದಗಿಸುತ್ತಿದ್ದೇವೆ. ಭಾರತದಲ್ಲಿ ಲಸಿಕೆ ತಯಾರಿಸಲು ಎಲ್ಲಾ ಲಸಿಕೆ ತಯಾರಕರನ್ನು ಆಹ್ವಾನಿಸುತ್ತೇನೆ. ನಮ್ಮಲ್ಲಿ ತಂತ್ರಜ್ಞಾನ ಆಧಾರಿತ ಪ್ರಜಾಪ್ರಭುತ್ವವಿದೆ ಎಂದು ತಿಳಿಸಿದರು

  ಇದೇ ವೇಳೆ ಕೋವಿಡ್​ ನಿಂದ ಜಗತ್ತಿನಲ್ಲಿ ಪ್ರಾಣಕಳೆದು ಕೊಂಡವರಿಗೆ ಅವರು ಸಾಮಾನ್ಯ ಸಭೆಯಲ್ಲಿ ಗೌರವ ಸಂತಾಪ ಸೂಚಿಸಿದರು.

  ಭಾರತ ಅಭಿವೃದ್ದಿ ಹೊಂದಿದರೆ ಜಗತ್ತು ಸುಧಾರಣೆ 

  ಪ್ರಜಾಪ್ರಭುತ್ವಕ್ಕೆ ತಾಯಿಯಾಗಿ  ಭಾರತ ಇದೆ. ಭಾರತ ಬೆಳೆದಾಗ ಜಗತ್ತು ಬೆಳೆಯುತ್ತದೆ. ಭಾರತವು ಸುಧಾರಣೆಯಾದಾಗ, ಪ್ರಪಂಚದ ಬೆಳವಣಿಗೆಯಲ್ಲಿ ಬದಲಾಗುತ್ತದೆ. ಭಾರತ ಈ ವರಷ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದೆ. ನಮ್ಮ ವೈವಿಧ್ಯತೆಯೇ ನಮ್ಮ ಪ್ರಬಲ ಪ್ರಜಾಪ್ರಭುತ್ವದ ಗುರುತು. ಎಲ್ಲರನ್ನು ಒಳಗೊಂಡು ಅಭಿವೃದ್ದಿಯತ್ತಾ ಸಾಗಿ ಸರ್ವವ್ಯಾಪ್ತಿಯಾಗಬೇಕು ಎಂಬುದು ನಮ್ಮ ಪ್ರಮುಖ ಉದ್ದೇಶ ಎಂದರು.

  ಟೀ ಮಾರಾಟ ಮಾಡುತ್ತಿದ್ದ ನಾನು ಇಂದು  ನಾಲ್ಕನೇ ಬಾರಿಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತಿದ್ದೇನೆ. ಇದೇ  ಭಾರತದ ಪ್ರಜಾಪ್ರಭುತ್ವದ ಶಕ್ತಿ.  ಭಾರತ ಇಂದು ಸಮಗ್ರ ಅಭಿವೃದ್ಧಿಯನ್ನು ನೋಡುತ್ತಿದೆ

  ಇದನ್ನು ಓದಿ: ವಿಶ್ವಸಂಸ್ಥೆಯ ಸಭೆಯಲ್ಲಿ ಪಾಕ್​ ಬೆವರಿಳಿಸಿದ ಸ್ನೇಹಾ ದುಬೆ: ಯುವ ಐಎಫ್​ಎಸ್​ ಅಧಿಕಾರಿ ಮಾತಿಗೆ ಮೆಚ್ಚುಗೆ ಮಹಾಪೂರ

  ಇಡೀ ವಿಶ್ವವೇ ವಿಜ್ಞಾನ ಆಧಾರಿತ ವೈಚಾರಿಕ ಮತ್ತು ಪ್ರಗತಿಪರ ಚಿಂತನೆಯನ್ನು ಅಭಿವೃದ್ಧಿ ಪಡಿಸಬೇಕು. ವಿಜ್ಞಾನ ಆಧಾರಿತ ವಿಧಾನವನ್ನು ಬಲಪಡಿಸುವ ಸಲುವಾಗಿ, ಭಾರತವು ಅನುಭವ ಆಧಾರಿತ ಕಲಿಕೆಯನ್ನು ಉತ್ತೇಜಿಸುತ್ತಿದೆ

  ಇದನ್ನು ಓದಿ: 2016ರ ಟಾಪರ್ ಟೀನಾ ಡಾಬಿ ತಂಗಿ ರಿಯಾಗೆ ಯುಪಿಎಸ್​ಸಿಯಲ್ಲಿ 15ನೇ rank

  ಎನ್​ಡಿಎ ಸರ್ಕಾರದ ಸಾಧನೆ ಅನಾವರಣ
  ಕಳೆದ ಏಳು ವರ್ಷಗಳಲ್ಲಿ ನಮ್ಮ ಸರ್ಕಾರ 43 ಕೋಟಿ ಜನರು ಬ್ಯಾಂಕ್ ಖಾತೆಗಳನ್ನು ಪಡೆದಿದ್ದಾರೆ. 36 ಕೋಟಿ ಜನರಿಗೆ ವಿಮೆ ಮಾಡಿಸಲಾಗಿದೆ. ನಾವು 3 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಾಣ ಮಾಡಿದ್ದೇವೆ. ಇದರಿಂದ ಸೂರಿಲ್ಲದವರು ಈಗ ಮನೆ ಮಾಲೀಕರಾಗಿದ್ದಾರೆ. 17 ಕೋಟಿ ಮನೆಗಳಿಗೆ ಪೈಪ್ ನೀರು ಒದಗಿಸಲು ನೋಡುತ್ತಿದ್ದೇವೆ ಎಂದು ಎನ್​ಡಿಎ ಸರ್ಕಾರದ ಸಾಧನೆ ತಿಳಿಸಿದರು.
  Published by:Seema R
  First published: