ವೈವಿಧ್ಯಮಯ ಭಾರತ; ವಿದೇಶಿ ನಾಯಕರಿಗೆ ದೇಸಿ ಸಂಸ್ಕೃತಿ ಪರಿಚಯಿಸಿದ ಪ್ರಧಾನಿ ಮೋದಿ

ಪ್ರಧಾನಿ ಮೋದಿ ಬೇರೆ ದೇಶಗಳ ನಾಯಕರ ಜೊತೆ ಭಾರತದ ಕೇಂದ್ರ ಸ್ಥಳಗಳಾದ ದೆಹಲಿ, ಆಗ್ರಾ ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಮಾತುಕತೆ ನಡೆಸುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮೊದಲು ಹಲವು ಬಾರಿ ನಾನಾ ರಾಜ್ಯಗಳಿಗೆ ವಿದೇಶಿ ನಾಯಕರ ಜೊತೆ ಮೋದಿ ಭೇಟಿ ನೀಡಿದ್ದರು.

Sushma Chakre | news18-kannada
Updated:October 10, 2019, 3:16 PM IST
ವೈವಿಧ್ಯಮಯ ಭಾರತ; ವಿದೇಶಿ ನಾಯಕರಿಗೆ ದೇಸಿ ಸಂಸ್ಕೃತಿ ಪರಿಚಯಿಸಿದ ಪ್ರಧಾನಿ ಮೋದಿ
ನರೇಂದ್ರ ಮೋದಿ
  • Share this:
ಚೆನ್ನೈ (ಅ. 10): ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ- ಜಿನ್​ಪಿಂಗ್ ತಮಿಳುನಾಡಿನ ಮಹಾಬಲಿಪುರಂನಲ್ಲಿ ಅನೌಪಚಾರಿಕ ಮಾತುಕತೆ ನಡೆಸಲಿದ್ದಾರೆ. ಅ. 11 ಮತ್ತು 12ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತಮಿಳುನಾಡಿನಲ್ಲಿ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ದಕ್ಷಿಣ ಭಾರತದ ಯುನೆಸ್ಕೋ ಮಾನ್ಯತೆ ಪಡೆದ ಪಾರಂಪರಿಕ ಸ್ಥಳಗಳಿಗೆ ಉಭಯ ದೇಶಗಳ ನಾಯಕರು ಭೇಟಿ ನೀಡಲಿದ್ದಾರೆ.

ಪ್ರಧಾನಿ ಮೋದಿ ಬೇರೆ ದೇಶಗಳ ನಾಯಕರ ಜೊತೆ ಭಾರತದ ಕೇಂದ್ರ ಸ್ಥಳಗಳಾದ ದೆಹಲಿ, ಆಗ್ರಾ ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಮಾತುಕತೆ ನಡೆಸುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮೊದಲು ಹಲವು ಬಾರಿ ನಾನಾ ರಾಜ್ಯಗಳಿಗೆ ವಿದೇಶಿ ನಾಯಕರ ಜೊತೆ ಮೋದಿ ಭೇಟಿ ನೀಡಿದ್ದರು. ಜಗತ್ತಿಗೆ ಭಾರತದ ವೈವಿಧ್ಯತೆಯನ್ನು ಸಾರುವ ಸಲುವಾಗಿ ಈ ರೀತಿಯ ಪ್ರಯೋಗಗಳನ್ನು ಪ್ರಧಾನಿ ಮೋದಿ ಮಾಡುತ್ತಿದ್ದಾರೆ.

2018ರಲ್ಲಿ ಚೀನಾದಲ್ಲಿ ನಡೆದ ಅನೌಪಚಾರಿಕ ಸಭೆಯಂತೆಯೇ ಮಹಾಬಲಿಪುರಂನಲ್ಲಿ ನಡೆಯುವ ಸಭೆಯೂ ಇರಲಿದೆ. ನಾಳೆ ಮಧ್ಯಾಹ್ನ ಭಾರತಕ್ಕೆ ಆಗಮಿಸಲಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಅವರನ್ನು ಪ್ರಧಾನಿ ಮೋದಿ ತಮಿಳುನಾಡಿಗೆ ಕರೆದೊಯ್ಯಲಿದ್ದಾರೆ. ಅಲ್ಲಿ ತಮಿಳುನಾಡು ಮತ್ತು ದಕ್ಷಿಣ ಭಾರತದ ವಿಶೇಷ ಔತಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು.

ಹಣದಾಸೆಗೆ ಬ್ಯಾಗ್​ ಕದ್ದ ಕಳ್ಳರಿಗೆ ಕಾದಿತ್ತು ದೊಡ್ಡ ಶಾಕ್!; ಅಷ್ಟಕ್ಕೂ ಅದರಲ್ಲಿ ಇದ್ದಿದ್ದೇನು?

ಕ್ಸಿ ಜಿನ್​ಪಿಂಗ್ ಕಳೆದ ಬಾರಿ ಭಾರತಕ್ಕೆ ಭೇಟಿ ನೀಡಿದಾಗ ಪ್ರಧಾನಿ ಮೋದಿ ಜೊತೆ ಉತ್ತರಪ್ರದೇಶದ ವಾರಾಣಸಿ, ಮಿರ್ಜಾಪುರ್ ಮುಂತಾದ ಸ್ಥಳಗಳಿಗೆ ತೆರಳಿದ್ದರು. ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಭಾರತಕ್ಕೆ ಬಂದಾಗ ಬೆಂಗಳೂರಿನ ಬಾಷ್ ರಿಸರ್ಚ್​ ಸೆಂಟರ್​ಗೆ ಭೇಟಿ ನೀಡಿದ್ದರು. ಇಸ್ರೇಲ್ ಪಿಎಂ ನೆತಾನ್ಯುಹು ಭಾರತಕ್ಕೆ ಭೇಟಿ ನೀಡಿದಾಗ ಅಹಮದಾಬಾದ್​ಗೆ ಭೇಟಿ ನೀಡಿದ್ದರು.

ಕೇರಳದಲ್ಲೊಂದು ದುರಂತ ಘಟನೆ; ಮದುವೆಗೆ ಒಪ್ಪದ ಪ್ರೇಯಸಿಗೆ ಬೆಂಕಿ ಹಚ್ಚಿದ ಯುವಕ ತಾನೂ ಶವವಾದ

ಫ್ರೆಂಚ್ ಅಧ್ಯಕ್ಷ ಹೊಳ್ಳಾಂಡೆ ಅವರನ್ನು ಪಿಎಂ ಮೋದಿ ಛಂಡೀಗಢಕ್ಕೆ ಕರೆದೊಯ್ದಿದ್ದರು. ಆಸ್ಟ್ರೇಲಿಯಾದ ಮಾಜಿ ಪಿಎಂ ಟ್ರನ್​ಬುಲ್ ಅವರನ್ನು ದೆಹಲಿಯ ಸಕ್ಷರಧಾಮ ದೇಗುಲಕ್ಕೆ ಕರೆದೊಯ್ಯಲಾಗಿತ್ತು. ದಕ್ಷಿಣ ಕೊರಿಯಾ ಅಧ್ಯಕ್ಷ ಜೈ-ಇನ್ ಅವರನ್ನು ನೊಯ್ಡಾಗೆ ಕರೆದೊಯ್ಯಲಾಗಿತ್ತು. ಟ್ರಂಪ್ ಮಗಳು ಇವಾಂಕಾ ಭಾರತದ ಅನೇಕ ಧಾರ್ಮಿಕ, ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡಿದ್ದರು.ಈ ರೀತಿ ವಿದೇಶಗಳಿಂದ ನಾಯಕರು ಭಾರತಕ್ಕೆ ಭೇಟಿ ನೀಡಿದಾಗ ಪ್ರಧಾನಿ ಮೋದಿ ದೇಶದ ಹಲವು ರಾಜ್ಯಗಳ ವಿಶೇಷ ಸ್ಥಳಗಳಿಗೆ ಅವರನ್ನು ಕರೆದೊಯ್ದು ಅಲ್ಲಿನ ಸಂಸ್ಕೃತಿಯನ್ನು ಪರಿಚಯ ಮಾಡಿಸುವ ಮೂಲಕ ಜಗತ್ತಿನಲ್ಲಿ ಭಾರತದ ವೈವಿಧ್ಯತೆ ಸಾರುವ ಕೆಲಸ ಮಾಡಿದ್ದರು. ಅದೇ ರೀತಿ ಈ ಬಾರಿ ಕೂಡ ಕ್ಸಿ- ಜಿನ್​ಪಿಂಗ್ ಅವರನ್ನು ದಕ್ಷಿಣ ಭಾರತದ ಸಂಸ್ಕೃತಿಯ ಪರಿಚಯ ಮಾಡಿಸಲು ತಮಿಳುನಾಡಿಗೆ ಕರೆದುಕೊಂಡು ಬರಲಾಗುತ್ತಿದೆ.

First published:October 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading