Bitcoin Scam ಬಗ್ಗೆ ಪ್ರಧಾನಿ ಮೋದಿ ಮೊದಲು ಪ್ರತಿಕ್ರಿಯೆ ನೀಡಲೇಬೇಕು: ರಣದೀಪ್ ಸುರ್ಜೆವಾಲಾ ಆಗ್ರಹ

ಸುಪ್ರೀಂ ಕೋರ್ಟ್ ಹಾಲಿ ಜಡ್ಜ್ ಮೇಲ್ವಿಚಾರಣೆಯಲ್ಲಿ SIT ರಚಿಸಿ ತನಿಖೆ ಆಗಬೇಕು. ಆಗ ಮಾತ್ರ ಸತ್ಯ ಹೊರ ಬರಲು ಸಾಧ್ಯ. ಪ್ರಧಾನಿ ಮೋದಿ ಅಮೇರಿಕಾಕ್ಕೆ ತೆರಳಿದ್ದಾಗ ಈ ಬಗ್ಗೆ ಪ್ರಸ್ತಾಪವಾಗಿದೆ. ಇದರಿಂದ ಅವರು ಮುಜುಗರ ಅನುಭವಿಸಬೇಕಾಯಿತು ಎಂದರು.

 ರಣದೀಪ್​ ಸುರ್ಜೇವಾಲಾ

ರಣದೀಪ್​ ಸುರ್ಜೇವಾಲಾ

  • Share this:
    ನವದೆಹಲಿ: ಬಿಟ್ ಕಾಯಿನ್ ಹಗರಣ (Bitcoin Scam) ಅತ್ಯಂತ ದೊಡ್ಡ ಹಗರಣ. ಈ‌ ಹಗರಣದ ನಾಯಕ, ಖಳನಾಯಕ ಇಬ್ವರೂ ಬಿಜೆಪಿಯವರೇ. ಭಾರತದ ರೂಪಾಯಿ ಪ್ರಕಾರ ಒಂದು ಬಿಟ್ ಕಾಯಿನ್ 51 ಲಕ್ಷ ರೂಪಾಯಿ. ಯಾಕೆ ಈ ಹಗರಣದ ಬಗ್ಗೆ ಇಡಿ, ಎನ್ ಐಎ ಮತ್ತು ಇಂಟರ್ ಪೋಲ್ ಸುಮ್ಮನಿವೆ. ರಾಜ್ಯದ ಬಿಜೆಪಿ ಸರ್ಕಾರ ಬಿಟ್ ಕಾಯಿನ್ ಹಗರಣದಲ್ಲಿ ಶಾಮೀಲಾಗಿದೆ. ಅತ್ಯಂತ ಷಡ್ಯಂತ್ರ ರೂಪಿಸಿ ಮಾಡಿರುವ ಹಗರಣ. ತನಿಖಾ ಸಂಸ್ಥೆಗಳ ದಿಕ್ಕು ತಪ್ಪಿಸಿ ಮಾಡಿರುವ ಹಗರಣ. ಇಡಿ, ಎನ್ ಐಎ, ಇಂಟರ್ ಪೋಲ್ ಗೆ ತಿಳಿಸಿಲ್ಲ ಎಂದು ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ (State Congress In charge Randeep Surjewala) ಗಂಭೀರ ಆರೋಪ ಮಾಡಿದರು.

    ದೆಹಲಿಯ ಎಐಸಿಸಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಣದೀಪ್ ಸುರ್ಜೆವಾಲಾ ಅವರು, ನವೆಂಬರ್ 14 ಶ್ರೀಕಿಯನ್ನು ಬಂಧಿಸಲಾಗಿದೆ.  120 ದಿನ ಕಸ್ಟಡಿಯಲ್ಲಿ ಇದ್ದ. ಅವನ ವಿರುದ್ಧ 5 ದೂರು ದಾಖಲಿಸಲಾಗಿತ್ತು. ಒಂದು ಕೇಸಿನಲ್ಲಿ ಕಸ್ಟಡಿ ಮುಗಿಯುತ್ತಿದ್ದಂತೆ ಇನ್ನೊಂದು ಕೇಸ್ ಮೇಲೆ ಬಂಧಿಸಲಾಗಿದೆ. ಶ್ರೀಕಿ ಬೆಂಗಳೂರು ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾನೆ. ಈತ ಬೇರೆ ಬೇರೆ ದೇಶಗಳ ಕಂಪನಿ, ಸರ್ಕಾರಿ ಖಾತೆಗಳನ್ನು ಹ್ಯಾಕ್ ಮಾಡಿದ್ದಾನೆ. ಅದನ್ನು ವಿಚಾರಣೆ ವೇಳೆ ತಿಳಿಸಿದ್ದಾನೆ. ಆದರೆ ಕರ್ನಾಟಕ ಸರ್ಕಾರ ಇಂಟರ್ ಪೋಲ್ ಗೆ ಮಾಹಿತಿ ನೀಡಿಲ್ಲ. ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಹಿಂದೆ ಗೃಹ ಸಚಿವರಾಗಿದ್ದಾಗಲೇ ಈ ಹಗರಣ ಬೆಳಕಿಗೆ ಬಂದಿದೆ. ಶ್ರೀಕಿಯನ್ನು ಬಂಧಿಸಿದಾಗ, ಬಿಡುಗಡೆಯಾದಾಗ ಬೊಮ್ಮಾಯಿ ಗೃಹ ಸಚಿವರಾಗಿದ್ದರು ಎಂದರು.

    1.20 ಲಕ್ಷ ಬಿಟ್ ಕಾಯಿನ್ ಕದ್ದಿರುವುದಾಗಿ ಶ್ರೀಕಿ ಹೇಳಿದ್ದಾನೆ. ಒಂದು ಬಿಟ್ ಕಾಯಿನ್ ಗೆ 51 ಲಕ್ಷ ರೂಪಾಯಿ ಇದೆ. ಶ್ರೀಕಿ ಡಾರ್ಕ್ ವೆಬ್ ಹ್ಯಾಕ್ ಮಾಡಿರುವ ಮಾಹಿತಿ ಇದೆ. ಬೆಂಗಳೂರು ಪೊಲೀಸರು ಶ್ರೀಕಿ ಬಳಿ 31 ಬಿಟ್​ ಕಾಯಿನ್ ವಶಕ್ಕೆ ಪಡೆದಿದ್ದರು. 9 ಕೋಟಿ ಮೌಲ್ಯದ ಆ ಬಿಟ್ ಕಾಯಿನ್ ಎಲ್ಲಿಗೆ ಹೋದವು?. ಇದನ್ನ ಬೆಂಗಳೂರು ಪೊಲೀಸರೇ ಹೇಳಿದ್ದಾರೆ. ಆನಂತರ ಇಲ್ಲ ಎಂದಿದ್ದಾರೆ. 24 ವ್ಯಾಲೆಟ್ ಗಳಿಂದ ಬಿಟ್ ಕಾಯಿನ್ ಗಳ ವರ್ಗಾವಣೆ ಆಗಿದೆ. ಕದ್ದಿರುವ ಬಿಟ್ ಕಾಯಿನ್ ಗಳ ವರ್ಗಾವಣೆ ಮಾಡಲಾಗಿದೆ. 7 ಕೋಟಿ ಮಿಲಿಯನ್ ಡಾಲರ್ ಮೌಲ್ಯದ ಬಿಟ್ ಕಾಯಿನ್ ಹಗರಣ ಇದು. 2 ದಿನದಲ್ಲಿ 5,200 ಕೋಟಿ ರೂ. ಮೌಲ್ಯದ ಬಿಟ್ ಕಾಯಿನ್ ವರ್ಗಾವಣೆ ಮಾಡಲಾಗಿದೆ.ಈ ಎರಡು ದಿನ ಅಂದರೆ 2020 ಡಿಸೆಂಬರ್ 1 ಮತ್ತು ಏಪ್ರಿಲ್ - 2021 ಬೆಂಗಳೂರು ಪೊಲೀಸರ ವಶದಲ್ಲಿದ್ದ. ಸಿಎಂ ಬಸವರಾಜ ಬೊಮ್ಮಾಯಿಗೆ ಪ್ರಧಾನಿ ಮೋದಿ 'ಬಿಟ್ ಕಾಯಿನ್ ಬಗ್ಗೆ ಚಿಂತಿಸಬೇಡಿ' ಎಂದಿದ್ದಾರಂತೆ. ಸಿಎಂ ಬಸವರಾಜ ಬೊಮ್ಮಾಯಿ ಅವರೇ ಹೀಗೆ ಹೇಳಿದ್ದಾರೆ. ಹಾಗಾದರೆ ಬಿಟ್ ಕಾಯಿನ್ ಹಗರಣದ ನಾಯಕ, ಕಳನಾಯಕ ಯಾರು? ಈ ಬಗ್ಗೆ ಇಂಟರ್ ಪೋಲ್ ಗೆ ಯಾಕೆ ತಿಳಿಸಿಲ್ಲ? ಎಂದು ಬಿಜೆಪಿಯನ್ನು ಪ್ರಶ್ನೆ ಮಾಡಿದರು.

    ಶ್ರೀಕಿ ಬಂಧನ ಮಾಡಿ‌ ಬಿಡುಗಡೆ ಮಾಡುವವರೆಗೆ ಕರ್ನಾಟಕ ಬಿಜೆಪಿ ಸರ್ಕಾರ ಸುಮ್ಮನಿದ್ದದ್ದು ಏಕೆ? ಬಿಟ್ ಕಾಯಿನ್ ಹಗರಣದ ಹಣ ಭಯೋತ್ಪಾದನೆಗೂ ಬಳಕೆಯಾಗಿರಬಹುದು. ಈ ಬಗ್ಗೆ ಎನ್ ಐ ಎ ಅಥವಾ ಆರ್ ಬಿಐಗೆ ಏಕೆ ತಿಳಿಸಿಲ್ಲ. ಬಿಜೆಪಿ ಸರ್ಕಾರ ಬಿಟ್ ಕಾಯಿನ್ ಹಗರಣದ ತನಿಖೆ ನಡೆಸಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ಹಾಲಿ ಜಡ್ಜ್ ಮೇಲ್ವಿಚಾರಣೆಯಲ್ಲಿ SIT ರಚಿಸಿ ತನಿಖೆ ಆಗಬೇಕು. ಆಗ ಮಾತ್ರ ಸತ್ಯ ಹೊರ ಬರಲು ಸಾಧ್ಯ. ಪ್ರಧಾನಿ ಮೋದಿ ಅಮೇರಿಕಾಕ್ಕೆ ತೆರಳಿದ್ದಾಗ ಈ ಬಗ್ಗೆ ಪ್ರಸ್ತಾಪವಾಗಿದೆ. ಇದರಿಂದ ಅವರು ಮುಜುಗರ ಅನುಭವಿಸಬೇಕಾಯಿತು. ಇತ್ತೀಚೆಗೆ ಇಡಿ ಎಂದರೆ ಎಲೆಕ್ಷನ್ ಡಿಪಾರ್ಟ್ಮೆಂಟ್. ಅದು ಬಿಜೆಪಿಯ ಎಲೆಕ್ಷನ್ ಡಿಪಾರ್ಟ್‌ಮೆಂಟ್ ಆಗಿದೆ.15 ಫೆಬ್ರವರಿ 2021ರಲ್ಲಿ ಇಡಿ ಕೇಳಿದೆ. ಆದರೂ ಮಾಹಿತಿ ನೀಡಿಲ್ಲ. ಬಹಳ ದಿನಗಳ ಬಳಿಕ ಕೇವಲ 1 ಕೇಸಿನ ಬಗ್ಗೆ ಇಡಿಗೆ ಮಾಹಿತಿ ನೀಡಲಾಗಿದೆ. ಇದು ಕೇವಲ ಇಡಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇದು ಇಂಟರ್ ಪೋಲ್, ಎಎನ್ ಐ, ಆರ್ ಬಿಐಗೆ ಕೂಡ ಸಂಬಂಧಿಸಿದ್ದು ಎಂದು ಸುರ್ಜೆವಾಲಾ ಅವರು ಹೇಳಿದರು.

    ಇದನ್ನು ಓದಿ: ಕಸ್ಟಡಿಯಲ್ಲಿದ್ದಾಗ ಮಗನಿಗೆ ಡ್ರಗ್ಸ್ ನೀಡಿದ್ದಾರೆಂದು Hacker Sriki ತಂದೆ ಆರೋಪ; ಮಹತ್ವದ ದಾಖಲೆ ಬಯಲು

    ಶ್ರೀಕಿ ಕಸ್ಢಡಿಯಲ್ಲಿದ್ದಾಗಲೇ ಬಿಟ್ ಕಾಯಿನ್ ವರ್ಗಾವಣೆ ಆಗಿದೆ. ಕಾಂಗ್ರೆಸ್ ನಾಯಕರಿದ್ದರೆ ಅವರನ್ನು ಶಿಕ್ಷಿಸಲಿಲ್ಲ ಏಕೆ?. ಅವರ ಮೇಲೆ ಕ್ರಮ ಕೈಗೊಳ್ಳಬೇಕಿತ್ತು. ಕಾಂಗ್ರೆಸ್ ನವರಿಗೆ ಗೊತ್ತಿತ್ತು ಎನ್ನೋದು ಬೇರೆ. ಬಿಜೆಪಿಯವರೇ ಹಗರಣ ಮಾಡಿದ್ದಾರೆ ಎನ್ನುವುದು ಬೇರೆ. ಪ್ರಧಾನಿ ಮೋದಿ ಬಿಟ್ ಕಾಯಿನ್ ಹಗರಣದ ಬಗ್ಗೆ ಪ್ರತಿಕ್ರಿಯೆ ನೀಡಬೇಕು. ಪ್ರಧಾನಿ ಮೋದಿ ಪ್ರತಿಕ್ರಿಯೆ ಬಳಿಕ ಕಾಂಗ್ರೆಸ್ ಮುಂದಿನದನ್ನು ನಿರ್ಧರಿಸಲಿದೆ ಎಂದು ತಿಳಿಸಿದರು.
    Published by:HR Ramesh
    First published: