• Home
  • »
  • News
  • »
  • national-international
  • »
  • Rajasthan: ಮೋದಿ ರಾಜಸ್ಥಾನಕ್ಕೆ ತಲುಪಿದ ಬೆನ್ನಲ್ಲೇ ಆ ಎರಡು ಬೇಡಿಕೆ ಇಟ್ಟ ಗೆಹ್ಲೋಟ್: ಸಿಎಂ ಮನವಿ ಈಡೇರಿಸ್ತಾರಾ ಪಿಎಂ?

Rajasthan: ಮೋದಿ ರಾಜಸ್ಥಾನಕ್ಕೆ ತಲುಪಿದ ಬೆನ್ನಲ್ಲೇ ಆ ಎರಡು ಬೇಡಿಕೆ ಇಟ್ಟ ಗೆಹ್ಲೋಟ್: ಸಿಎಂ ಮನವಿ ಈಡೇರಿಸ್ತಾರಾ ಪಿಎಂ?

ಸಿಎಂ ಮನವಿ ಈಡೇರಿಸ್ತಾರಾ ಪಿಎಂ?

ಸಿಎಂ ಮನವಿ ಈಡೇರಿಸ್ತಾರಾ ಪಿಎಂ?

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಅಂದರೆ ಇಂದು (ಪಿಎಂ ನರೇಂದ್ರ ಮೋದಿ) ರಾಜಸ್ಥಾನದ ಬುಡಕಟ್ಟು ಪ್ರಾಬಲ್ಯದ ಬನ್ಸ್ವಾರಾ ಜಿಲ್ಲೆಯ ಮಂಗರ್ ಧಾಮ್ ತಲುಪಿದರು. ಪ್ರಧಾನಿ ನರೇಂದ್ರ ಮೋದಿಯವರ ಈ ಭೇಟಿಯ ಸಂದರ್ಭದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಎರಡು ಬೇಡಿಕೆಗಳನ್ನು ಈಡೇರಿಸುವಂತೆ ಪ್ರಧಾನಿಯನ್ನು ಒತ್ತಾಯಿಸಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Rajasthan, India
  • Share this:

ಜೈಪುರ(ನ.01): ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಮಂಗಳವಾರ ಅಂದರೆ ಇಂದು ರಾಜಸ್ಥಾನದ (Rajasthan) ಬುಡಕಟ್ಟು ಜನಾಂಗದ ಪ್ರಾಬಲ್ಯದ ಬನ್ಸ್ವಾರಾ ಜಿಲ್ಲೆಯ ಮಂಗರ್ ಧಾಮ್ ತಲುಪಿದರು. ಅವರು ಮಂಗರ್ ಧಾಮ್‌ನಲ್ಲಿ ಭಿಲ್ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಗೋವಿಂದ ಗುರುಗಳಿಗೆ ನಮನ ಸಲ್ಲಿಸಿದರು. ಇದರೊಂದಿಗೆ ಅವರು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಸೇರಿದಂತೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಾರ್ವಜನಿಕ ಕಾರ್ಯಕ್ರಮವಾದ ಮಂಗರ್ ಧಾಮ್‌ನ ಗೌರವ್ ಯಾತ್ರೆಯಲ್ಲಿ ಭಾಗವಹಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ಈ ಭೇಟಿಯ ಸಂದರ್ಭದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಎರಡು ಬೇಡಿಕೆಗಳನ್ನು ಈಡೇರಿಸುವಂತೆ ಪ್ರಧಾನಿಯನ್ನು ಒತ್ತಾಯಿಸಿದ್ದಾರೆ.


ಹೌದು ಸಿಎಂ ಗೆಹ್ಲೋಟ್​ ಮೋದಿ ಎದುರಿಟ್ಟಿರುವ ಬೇಡಿಕೆಗಳಲ್ಲಿ ಮೊದಲನೆಯದು, ಮಂಗರ್ ಅನ್ನು ರಾಷ್ಟ್ರೀಯ ಪರಂಪರೆ ಎಂದು ಘೋಷಿಸುವುದು ಮತ್ತು ಎರಡನೆಯದಾಗಿ, ರತ್ಲಾಮ್‌ಗೆ ಸಂಬಂಧಿಸಿದ ಸ್ಥಗಿತಗೊಂಡಿರುವ ರೈಲ್ವೆ ಯೋಜನೆಯನ್ನು ಮರುಪ್ರಾರಂಭಿಸುವುದು.


ಇದನ್ನೂ ಓದಿ: Narendra Modi: ಒಂದು ರ‍್ಯಾಲಿಯಿಂದ ಮೂರು ರಾಜ್ಯಗಳ ವೋಟ್​ಬ್ಯಾಂಕ್​ ಮೇಲೆ ಬಿಜೆಪಿ ಕಣ್ಣು!


ಇದೇ ವೇಳೆ ರಾಜಸ್ಥಾನದ ಮಂಗರ್ ಧಾಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಭಾಯಿ ಪಟೇಲ್ ಕೂಡ ಉಪಸ್ಥಿತರಿದ್ದರು.


ತಮ್ಮ ಮತ್ತು ಅಶೋಕ್ ಗೆಹ್ಲೋಟ್ ಅವರೊಂದಿಗಿನ ಉತ್ತಮ ಸಂಬಂಧವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, "ಅಶೋಕ್ ಗೆಹ್ಲೋಟ್ ಜಿ ಮತ್ತು ನಾನು ಮುಖ್ಯಮಂತ್ರಿಯಾಗಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರು ಅತ್ಯಂತ ಹಿರಿಯ ಮುಖ್ಯಮಂತ್ರಿಗಳಾಗಿದ್ದರು, ಇಂದಿಗೂ ವೇದಿಕೆಯ ಮೇಲೆ ಕುಳಿತಿರುವ ಎಲ್ಲಾ ಮುಖ್ಯಮಂತ್ರಿಗಳಲ್ಲಿ ಅಶೋಕ್ ಜಿ ಅವರು ಹಿರಿಯ ಮುಖ್ಯಮಂತ್ರಿಗಳಲ್ಲಿ ಒಬ್ಬರು. ಮಂಗರ್ ಧಾಮಕ್ಕೆ ಮತ್ತೊಮ್ಮೆ ಬಂದು ಹುತಾತ್ಮರಾದ ಆದಿವಾಸಿಗಳ ಮುಂದೆ ತಲೆಬಾಗುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದರು.


ಇದನ್ನೂ ಓದಿ: ISIS Terrorist: ಭಾರತದ ಮಹಾನಾಯಕನ ಹತ್ಯೆಗೆ ಸ್ಕೆಚ್, ರಷ್ಯಾದಲ್ಲಿ ಐಸಿಸ್ ಬಾಂಬರ್ ಅರೆಸ್ಟ್!


ಮಂಗರ್ ಧಾಮಕ್ಕೆ ಭಾರತ ಸ್ವಾತಂತ್ರ್ಯ ಪೂರ್ವದ ಇತಿಹಾಸವಿದೆ. ಬ್ರಿಟಿಷರ ಆಳ್ವಿಕೆಯಲ್ಲಿ ಬುಡಕಟ್ಟು ನಾಯಕ ಮತ್ತು ಸಮಾಜ ಸೇವಕ ಗೋವಿಂದ ಗುರುವಿನ 1500 ಬೆಂಬಲಿಗರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು, ಇದು 109 ವರ್ಷಗಳ ಹಿಂದಿನ ಕಥೆ. ಗೋವಿಂದ ಗುರುಗಳಿಂದ ಪ್ರೇರಿತರಾದ ಬುಡಕಟ್ಟು ಸಮಾಜದ ಜನರು ಬ್ರಿಟಿಷರ ದಬ್ಬಾಳಿಕೆಯ ನೀತಿಗಳ ವಿರುದ್ಧ 'ಭಗತ್ ಆಂದೋಲನ'ವನ್ನು ಪ್ರಾರಂಭಿಸಿದರು, ಜೊತೆಗೆ ಜೀತದ ಕಾರ್ಮಿಕರ ವಿರುದ್ಧ ಧ್ವನಿ ಎತ್ತಿದ್ದರು.


ಆದಿವಾಸಿಗಳ ಪವಿತ್ರ ಧಾಮ


ಬನ್ಸ್ವಾರಾ ಜಿಲ್ಲೆಯ ಮಂಗರ್ ಧಾಮವನ್ನು ಆದಿವಾಸಿಗಳು ಪವಿತ್ರ ಧಾಮ ಎಂದು ಪರಿಗಣಿಸುತ್ತಾರೆ. 10 ವರ್ಷಗಳ ಹಿಂದೆ ಸಿಎಂ ಆಗಿದ್ದಾಗ ಪ್ರಧಾನಿ ಮೋದಿ ಇಲ್ಲಿಗೆ ಬಂದಿದ್ದರು. ರಾಜಸ್ಥಾನ, ಗುಜರಾತ್ ಮತ್ತು ಮಧ್ಯಪ್ರದೇಶದ ಗಡಿಯಲ್ಲಿರುವ ಆದಿವಾಸಿಗಳ ದೊಡ್ಡ ನಂಬಿಕೆಯ ಕೇಂದ್ರವಾದ ಮಂಗರ್ 3 ರಾಜ್ಯಗಳ ಬುಡಕಟ್ಟು ಪ್ರದೇಶಗಳನ್ನು ಒಗ್ಗೂಡಿಸುತ್ತದೆ. ಈ ಕಾರಣಕ್ಕಾಗಿಯೇ ಇಲ್ಲಿ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿದ್ದು, ಮಧ್ಯಪ್ರದೇಶದ ದೃಷ್ಟಿಯಿಂದಲೂ ಈ ಕಾರ್ಯಕ್ರಮ ಮಹತ್ವದ್ದಾಗಿದೆ.


ಮುಂದಿನ ವರ್ಷ ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 2018ರಲ್ಲಿ ಬುಡಕಟ್ಟು ಪ್ರದೇಶದಲ್ಲಿ ದುರ್ಬಲವಾಗಿದ್ದ ಬಿಜೆಪಿ ತನ್ನ ಬಲವರ್ಧನೆಗೆ ನಿರಂತರ ಪ್ರಯತ್ನ ನಡೆಸುತ್ತಿದೆ. ಇದೇ ಕಾರಣಕ್ಕೆ ಬಿಜೆಪಿಯು ಆದಿವಾಸಿಗಳನ್ನು ಬೆಳೆಸುವ ನಿಟ್ಟಿನಲ್ಲಿ ಇದುವರೆಗೆ ಹಲವು ದೊಡ್ಡ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದೀಗ ಮಂಗರಧಾಮದಲ್ಲಿ ಬೃಹತ್ ಕಾರ್ಯಕ್ರಮ ಮಾಡಿ ರಾಜ್ಯದ ಆದಿವಾಸಿಗಳಿಗೆ ದೊಡ್ಡ ಸಂದೇಶ ನೀಡಲು ಸಿದ್ಧತೆ ನಡೆಸಲಾಗಿದೆ.

Published by:Precilla Olivia Dias
First published: