ಟ್ವಿಟರ್​ನಲ್ಲಿ ಹೊಸ ದಾಖಲೆ ಬರೆದ ಪ್ರಧಾನಿ ನರೇಂದ್ರ ಮೋದಿ

ದೇಶದ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬರಾದ ಮೋದಿ, ಈ ಮೂಲಕ ಡೋನಾಲ್ಡ್​ ಟ್ರಂಪ್​ ಬಳಿಕ ಅಧಿಕ ಹೆಚ್ಚು  ಬೆಂಬಲಿಗರನ್ನು ಹೊಂದಿರುವ ವಿಶ್ವದ ನಾಯಕರಲ್ಲಿ ಒಬ್ಬರಾಗಿದ್ದಾರೆ. ಅಷ್ಟೇ ಅಲ್ಲದೇ ಮೋದಿಯ ಈ ದಾಖಲೆಯ ಆಸುಪಾಸಿನಲ್ಲಿ ಭಾರತದ ಯಾವುದೇ ರಾಜಕಾರಣಿಗಳು ಇಲ್ಲ ಎಂಬುದು ಗಮನಾರ್ಹ.

Seema.R | news18-kannada
Updated:September 11, 2019, 11:23 AM IST
ಟ್ವಿಟರ್​ನಲ್ಲಿ ಹೊಸ ದಾಖಲೆ ಬರೆದ ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
  • Share this:
ನವದೆಹಲಿ (ಸೆ.11): ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ್ಯ ಕ್ರಿಯಾಶೀಲರಾಗಿರುವ ಪ್ರಧಾನಿ ಮೋದಿ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ತಮ್ಮ ಅಧಿಕೃತ ಖಾತೆಗೆ 5 ಕೋಟಿ ಬೆಂಬಲಿಗರನ್ನು ಹೊಂದುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ದೇಶದ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬರಾದ ಮೋದಿ, ಈ ಮೂಲಕ ಡೋನಾಲ್ಡ್​ ಟ್ರಂಪ್​ ಬಳಿಕ ಅಧಿಕ ಹೆಚ್ಚು  ಬೆಂಬಲಿಗರನ್ನು ಹೊಂದಿರುವ ವಿಶ್ವದ ನಾಯಕರಲ್ಲಿ ಒಬ್ಬರಾಗಿದ್ದಾರೆ. ಅಷ್ಟೇ ಅಲ್ಲದೇ ಮೋದಿಯ ಈ ದಾಖಲೆಯ ಆಸುಪಾಸಿನಲ್ಲಿ ಭಾರತದ ಯಾವುದೇ ರಾಜಕಾರಣಿಗಳು ಇಲ್ಲ ಎಂಬುದು ಗಮನಾರ್ಹ.

ತಮ್ಮ ಅಧಿಕೃತ ಖಾತೆಯಲ್ಲಿ 50 ಮಿಲಿಯನ್​ ಬೆಂಬಲಿಗರನ್ನು ಹಾಗೂ ತಮ್ಮ ಕಚೇರಿಯ ಖಾತೆಯಲ್ಲಿ 30 ಮಿಲಿಯನ್​ ಬೆಂಬಲಿಗರು ಅವರಿಗಿದ್ದಾರೆ.

modi twitter
ಮೋದಿ ಟ್ವಿಟರ್​​

ವಿಶ್ವದಲ್ಲಿಯೇ ಅತಿ ಹೆಚ್ಚು ಬೆಂಬಲಿಗರನ್ನು ಹೊಂದಿರುವ ರಾಜಕಾರಣಿಗಳ ಸಾಲಿನಲ್ಲಿ ಮೊದಲು ಅಮೆರಿಕ ಮಾಜಿ ಅಧ್ಯಕ್ಷ ಬರಾಕ್​ ಒಬಮಾ ಇದ್ದಾರೆ. ಇವರನ್ನು 108 ಮಿಲಿಯನ್​ ಜನರು ಫಾಲೋ ಮಾಡುತ್ತಿದ್ದಾರೆ. ಇದಾದ ಬಳಿಕ ಅಮೆರಿಕ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ 64 ಮಿಲಿಯನ್​ ಫಾಲೋವರ್ಸ್​ ಹೊಂದಿ ಎರಡನೇ ಸ್ಥಾನದಲ್ಲಿದ್ದರೆ, ಮೋದಿ ಮೂರನೇ ಸ್ಥಾನದಲ್ಲಿದ್ದಾರೆ.

ಇದನ್ನು ಓದಿ: ಆಂಧ್ರದಲ್ಲಿ ‘ಚಲೋ ಆತ್ಮಕೂರು’: ಚಂದ್ರಬಾಬು ನಾಯ್ಡು ಮತ್ತವರ ಮಗ ಸೇರಿ ಹಲವು ಟಿಡಿಪಿ ಮುಖಂಡರ ಗೃಹ ಬಂಧನ

ತಮ್ಮ ವಾಕ್​ಚಾತುರ್ಯದ ಮೂಲಕವೇ ಹೆಚ್ಚು ಖ್ಯಾತಿಗೊಂಡಿದ್ದಾರೆ. 2009ರಲ್ಲಿ ಗುಜರಾತ್​ ಸಿಎಂ ಆಗಿದ್ದ ಸಂದರ್ಭದಿಂದ ಅವರು ಈ ಸಾಮಾಜಿಕ ಜಾಲತಾಣವನ್ನು ಬಳಕೆ ಮಾಡುತ್ತಿದ್ದಾರೆ.ಕಳೆದ ವರ್ಷ ವಿಶ್ವದ ಪ್ರಮುಖ ಪ್ರಭಾವಿ ನಾಯಕರ ಸಮೀಕ್ಷೆಯಲ್ಲಿ ಇವರು ಮೂರನೇ ಸ್ಥಾನ ಪಡೆದಿದ್ದರು.

First published: September 11, 2019, 11:23 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading