PM Modi Security Scare: ಪಿಎಂ ಮೋದಿ ಭದ್ರತಾ ಲೋಪ; ಪ್ರಧಾನಿ ಹೆಲಿಕಾಪ್ಟರ್ ಬಳಿ ಕಪ್ಪು ಬಲೂನು ಹಾರಾಟ

ರಾಜ್ಯ ವಿಭಜನೆಯ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಅನುಷ್ಠಾನಗೊಳಿಸದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ರಾಜೀವ್ ರತನ್ ಪ್ರತಿಭಟನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ನರೇಂದ್ರ ಮೋದಿ

ನರೇಂದ್ರ ಮೋದಿ

 • Share this:
  ಆಂಧ್ರಪ್ರದೇಶದಲ್ಲಿ ಇಂದು (ಜುಲೈ 4)  ಪ್ರಧಾನಿ ನರೇಂದ್ರ ಮೋದಿ ಅವರ ಸುರಕ್ಷತೆಯಲ್ಲಿ ಭದ್ರತಾ ಲೋಪ (PM Security Scare) ಜರುಗಿದೆ. ವಿಜಯವಾಡದಲ್ಲಿ ಪ್ರಧಾನಿ ಮೋದಿಯವರ ಹೆಲಿಕಾಪ್ಟರ್ ಹತ್ತಿರದಲ್ಲೇ ಕಪ್ಪು ಬಲೂನುಗಳು ಹಾರುತ್ತಿರುವುದು ಕಂಡುಬಂದಿದೆ. ಆಂದ್ರಪ್ರದೇಶದ ಗನ್ನವರಂ ವಿಮಾನ ನಿಲ್ದಾಣದ ಬಳಿಯ ಕೇಸರಪಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi Security Scare) ಅವರ ಹೆಲಿಕಾಪ್ಟರ್ ಟೇಕಾಫ್ ಆದ ಕೂಡಲೇ ಕಪ್ಪು ಬಲೂನ್‌ಗಳು ಹಾರಿದ್ದರಿಂದ ಭದ್ರತಾ ಲೋಪ ಸಂಭವಿಸಿದೆ ಎಂದು ವರದಿಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಲಿಕಾಪ್ಟರ್ ಹತ್ತಿರ ಬಲೂನ್‌ಗಳು ಹಾರಿವೆ. ಘಟನೆ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ರಾಜ್ಯ ವಿಭಜನೆಯ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಅನುಷ್ಠಾನಗೊಳಿಸದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ರಾಜೀವ್ ರತನ್ ಪ್ರತಿಭಟನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

  ಸದ್ಯ ಸೆರೆಸಿಕ್ಕಿರುವ ದೃಶ್ಯಗಳಲ್ಲಿ  ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿಯವರ ಹೆಲಿಕಾಪ್ಟರ್ ಟೇಕಾಫ್ ಆಗುತ್ತಿದ್ದಂತೆ ಮೇಲ್ಛಾವಣಿಯ ಮೇಲೆ ಕಪ್ಪು ಬಲೂನ್‌ಗಳನ್ನು ಹಿಡಿದಿರುವುದನ್ನು ಕಾಣಬಹುದು ಎಂದು ಆಂಧ್ರ ಪ್ರದೇಶ ಪೊಲೀಸರು ತಿಳಿಸಿದ್ದಾರೆ. ಅಲ್ಲದೇ 'ಮೋದಿ ಗೋ ಬ್ಯಾಕ್' ಘೋಷಣೆಗಳನ್ನು ಸಹ ಪ್ರತಿಭಟನೆಕಾರರು ಕೂಗಿದ್ದಾರೆ.  ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪದ ಕುರಿತು ಸೂಕ್ತ ತನಿಖೆ ನಡೆಸಲಾಗುತ್ತಿದೆ.

  ಯಾವುದೇ ಹಾನಿ ಸಂಭವಿಸಿಲ್ಲ
  ಬಲೂನ್‌ಗಳ ಸಮೀಪದಲ್ಲಿ ಚಾಪರ್ ಹಾದುಹೋಗುವುದನ್ನು ಕಾಣಬಹುದು. ಆದರೆ, ಯಾವುದೇ ಹಾನಿ ಸಂಭವಿಸಿಲ್ಲ. ಆದರೆ ಈ ಘಟನೆಯಿಂದ ಪ್ರಧಾನಿಯವರ ಭದ್ರತೆಯಲ್ಲಿ ದೊಡ್ಡ ಲೋಪವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.

  ಅಲ್ಲೂರಿ ಸೀತಾರಾಮ ರಾಜು ಅವರ 125 ನೇ ಜನ್ಮದಿನದಂದು
  ಅಲ್ಲೂರಿ ಸೀತಾರಾಮ ರಾಜು ಅವರ 125 ನೇ ಜನ್ಮದಿನದಂದು ಪ್ರಧಾನಿ ಮೋದಿ ಆಂಧ್ರಪ್ರದೇಶಕ್ಕೆ ಭೇಟಿ ನೀಡಿದ ದಿನದಂದೇ ಈ ಭದ್ರತಾ ಲೋಪ ಸಂಭವಿಸಿದೆ. ಹೀಗಾಗಿ ಈ ಭದ್ರತಾ ಲೋಪ ಗಂಭೀರ ಸ್ವರೂಪ ಪಡೆದಿದೆ. 

  15 ಟನ್ ತೂಕದ ಪ್ರತಿಮೆ
  ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರ 125 ನೇ ಜನ್ಮದಿನದಂದು ಸೋಮವಾರ, ಪ್ರಧಾನಿ ಮೋದಿ ಅವರ 30 ಅಡಿ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಭೀಮಾವರಂನ ಎಎಸ್‌ಆರ್ ನಗರದಲ್ಲಿರುವ ಮುನ್ಸಿಪಲ್ ಪಾರ್ಕ್‌ನಲ್ಲಿ ಕ್ಷತ್ರಿಯ ಸೇವಾ ಸಮಿತಿಯಿಂದ 3 ಕೋಟಿ ರೂಪಾಯಿ ವೆಚ್ಚದಲ್ಲಿ 15 ಟನ್ ತೂಕದ ಪ್ರತಿಮೆಯನ್ನು ನಿರ್ಮಿಸಲಾಗಿದೆ. 

  ಇದನ್ನೂ ಓದಿ: Maharashtra Floor Test: ಸದನದಲ್ಲಿ ಸುಲಭವಾಗಿ ಬಹುಮತ ಸಾಬೀತುಪಡಿಸಿದ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ

  ಈ ಸಂದರ್ಭದಲ್ಲಿ ಆಂಧ್ರಪ್ರದೇಶದ ರಾಜ್ಯಪಾಲ ಬಿಸ್ವ ಭೂಷಣ ಹರಿಚಂದನ್, ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ, ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ, ಮಾಜಿ ಕೇಂದ್ರ ಸಚಿವ ಮತ್ತು ಚಲನಚಿತ್ರ ನಟ ಕೆ ಚಿರಂಜೀವಿ ಮತ್ತಿತರರು ಉಪಸ್ಥಿತರಿದ್ದರು. ರಾಜು ಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು.

  ಯಾರಿವರು ಅಲ್ಲೂರಿ ಸೀತಾರಾಮ ರಾಜು?
  ಅಲ್ಲೂರಿ ಅವರ ಸೋದರಳಿಯ ಅಲ್ಲೂರಿ ಶ್ರೀರಾಮರಾಜು ಮತ್ತು ಅಲ್ಲೂರಿನ ಆಪ್ತ ಲೆಫ್ಟಿನೆಂಟ್ ಮಲ್ಲು ದೊರ ಅವರ ಪುತ್ರ ಬೋಡಿ ದೊರ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸನ್ಮಾನಿಸಿದ್ದಾರೆ. 'ಮಾನ್ಯಂ ವೀರು'  ಅಥವಾ ಕಾಡಿನ ವೀರ ಎಂದು ಕರೆಯಲ್ಪಡುವ ಸೀತಾರಾಮ ರಾಜು, ಅವರ ಉಪನಾಮ ಅಲ್ಲೂರಿನಿಂದ ಉಲ್ಲೇಖಿಸಲಾಗುತ್ತದೆ, ಜುಲೈ 4, 1897 ರಂದು ಅಂದಿನ ವಿಶಾಖಪಟ್ಟಣಂ ಜಿಲ್ಲೆಯ ಪಾಂಡ್ರಂಗಿ ಗ್ರಾಮದಲ್ಲಿ ಜನಿಸಿದರು. 
  Published by:guruganesh bhat
  First published: