'The Kashmir Files' ಚಿತ್ರದಲ್ಲಿ ಹಲವಾರು ವರ್ಷಗಳಿಂದ ಹೂತಿಟ್ಟ ಸತ್ಯ ತೋರಿಸಲಾಗಿದೆ; ಪ್ರಧಾನಿ ಮೋದಿ

ಕಾಶ್ಮೀರದಲ್ಲಿ ವರ್ಷಗಳಿಂದ ಮುಚ್ಚಿಟ್ಟಿದ್ದ ಸತ್ಯವನ್ನು ಚಿತ್ರ ತೋರಿಸಿದೆ. ಆದರೆ, ಕೆಲವರು ಈ ಚಿತ್ರವನ್ನು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ವಿಮರ್ಶಕರ ವಿರುದ್ಧ ಕಿಡಿಕಾರಿದರು.

ಪ್ರಧಾನಿ ಮೋದಿ

ಪ್ರಧಾನಿ ಮೋದಿ

 • Share this:
  ಬಾಲಿವುಡ್​ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ನಿರ್ದೇಶಿಸಿರುವ 'ದಿ ಕಾಶ್ಮೀರ್ ಫೈಲ್ಸ್​' ( The Kashmir Files)  ಚಿತ್ರಕ್ಕೆ ದೇಶದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಚಿತ್ರಕ್ಕೆ ಖುದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಕೂಡ ಪ್ರಶಂಸೆ ವ್ಯಕ್ತಪಡಿಸಿ, ಇಂದು ಮಾತನಾಡಿದ್ದಾರೆ, ಇಂದು ಬಿಜೆಪಿ ಸಂಸದೀಯ ಸಭೆಯಲ್ಲಿ (BJP Parliamentary Party Meeting) ಮಾತನಾಡಿರುವ ಅವರು, ಇಂತಹ ಸಿನಿಮಾಗಳು ಹೆಚ್ಚು ಹೆಚ್ಚು ಬರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಶ್ಮೀರದಲ್ಲಿ ವರ್ಷಗಳಿಂದ ಮುಚ್ಚಿಟ್ಟಿದ್ದ ಸತ್ಯವನ್ನು ಚಿತ್ರ ತೋರಿಸಿದೆ. ಆದರೆ, ಕೆಲವರು ಈ ಚಿತ್ರವನ್ನು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ವಿಮರ್ಶಕರ ವಿರುದ್ಧ ಕಿಡಿಕಾರಿದರು.

  ಚಿತ್ರವನ್ನು ಅಪಖ್ಯಾತಿಗೊಳಿಸುವ ಹುನ್ನಾರ

  ಸತ್ಯ ಮತ್ತು ಕಲೆಯ ಆಧಾರದ ಮೇಲೆ ಚಲನಚಿತ್ರವನ್ನು ವಿಮರ್ಶಿಸುವ ಬದಲು, ಅದನ್ನು ಅಪಖ್ಯಾತಿಗೊಳಿಸುವ ಹುನ್ನಾರ ನಡೆದಿದೆ. ಕೇವಲ ಚಲನಚಿತ್ರವಲ್ಲ. ಸತ್ಯವನ್ನು ಸರಿಯಾದ ರೀತಿಯಲ್ಲಿ ಹೊರತರುವುದರಿಂದ ರಾಷ್ಟ್ರಕ್ಕೆ ಪ್ರಯೋಜನಕಾರಿ ಎಂಬುದು ನನ್ನ ನಂಬಿಕೆ. ಇದರಲ್ಲಿ ಹಲವರು ಅಂಶಗಳನ್ನು ಹೊಂದಿರುತ್ತವೆ. ಇದರಲ್ಲಿ ಕೆಲವರು ಒಂದು ಮುಖ ನೋಡಿದರೆ, ಮತ್ತೆ ಕೆಲವರು ಮತ್ತೊಂದು ಮುಖ ನೋಡುತ್ತಾರೆ ಎಂದು ತಿಳಿಸಿದರು.

  ಇದನ್ನು ಓದಿ: ಸಂಸತ್​​ಗೆ PM Modi ಆಗಮಿಸುತ್ತಿದ್ದಂತೆ ‘ಮೋದಿ..ಮೋದಿ..’ ಘೋಷಣೆ: ಕಾಂಗ್ರೆಸ್ಸಿಗರಿಗೆ ಇರಿಸುಮುರಿಸು!

  1990ರ ದಶಕದಲ್ಲಿ ಪಾಕಿಸ್ತಾನದ ಬೆಂಬಲಿತ ಭಯೋತ್ಪಾದಕರಿಂದ ಹೇಗೆ ಸಮುದಾಯದ ಜನರನ್ನು ವ್ಯವಸ್ಥಿತವಾಗಿ ಹತ್ಯೆ ಮಾಡಿದ ನಂತರ ಕಾಶ್ಮೀರಿ ಹಿಂದೂಗಳು ರಾಜ್ಯದಿಂದ ವಲಸೆ ಕಳುಹಿಸಲಾಯಿತು. ಹೇಗೆ ಕಾಶ್ಮೀರಿ ಪಂಡಿತರು ತಮ್ಮ ಮೂಲ ನೆಲೆ ತೊರೆದು ಬಂದರು ಎಂಬ ಕಥಾವಸ್ತುವನ್ನು ಚಿತ್ರ ಹೊಂದಿದೆ.

  ಹಲವು ರಾಜ್ಯಗಳಲ್ಲಿ ತೆರಿಗೆ ವಿನಾಯ್ತಿ

  ಎಲ್ಲೆಡೆ ಮೆಚ್ಚುಗೆ ಪಡೆಯುತ್ತಿರುವ ದಿ ಕಾಶ್ಮೀರ್​ ಫೈಲ್ಸ್​ ಚಿತ್ರಕ್ಕೆ ಈಗಾಗಲೇ, ಮಧ್ಯಪ್ರದೇಶ, ಗುಜರಾತ್​​, ತ್ರಿಪುರ, ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳು ತೆರಿಗೆ ವಿನಾಯ್ತಿ ಘೋಷಿಸಿದೆ.
  ಇನ್ನು ಮಧ್ಯಪ್ರದೇಶದಲ್ಲಿ ಚಿತ್ರ ವೀಕ್ಷಣೆಗೆ ಪೊಲೀಸ್​ ಸಿಬ್ಬಂದಿಗಳಿಗೆ ಒಂದು ದಿನ ರಜೆ ಘೋಷಣೆ ಮಾಡಲಾಗಿದೆ. ಇನ್ನು ಗೋವಾ ಸಿಎಂ ಪ್ರಮೋದ್​ ಸಾವಂತ್​ ಈ ಚಿತ್ರವನ್ನು ಸಾಧ್ಯವಾದಷ್ಟು ನಿರಂತರ ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದರು.

  ಇದನ್ನು ಓದಿ: ಮಂತ್ರಿ ಮಾಲ್​ನಲ್ಲಿ 'The Kashmir Files' ಸಿನಿಮಾ ವೀಕ್ಷಣೆಗೆ ವ್ಯವಸ್ಥೆ; ಆಡಳಿತ, ವಿಪಕ್ಷ ನಾಯಕರಿಗೆ Speaker​ ಆಹ್ವಾನ

  ಕರ್ನಾಟಕದಲ್ಲೂ ತೆರಿಗೆ ವಿನಾಯಿತಿ

  ಇನ್ನ ಕರ್ನಾಟಕದಲ್ಲೂ ಈ ಸಿನಿಮಾ ವೀಕ್ಷಣೆ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ಇನ್ನು ವಿಧಾನಸಭಾ ಸದಸ್ಯರಿಗೆ ಇಂದು ಈ ಚಿತ್ರ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಈ ಸಂಬಂಧ ನಿನ್ನೆ ಸದನದಲ್ಲಿ ಮಾತನಾಡಿರುವ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಇಂತಹ ಸಧಭಿರುಚಿಯ ಚಿತ್ರಗಳನ್ಜು ಒಟ್ಟಿಗೆ ಕುಳಿತು ನಾವೆಲ್ಲರೂ ನೋಡೋಣ ಎಂದು ಆಡಳಿತ ಮತ್ತು ವಿಪಕ್ಷ ನಾಯಕರಿಗೆ ಆಹ್ವಾನ ನೀಡಿದ್ದಾರೆ. ಅಲ್ಲದೇ, ಈ ಸಂಬಂಧ ಇಂದು ಮಂತ್ರಿ ಮಾಲ್​ನಲ್ಲಿ ಸಂಜೆ ವಿಶೇಷ ಪ್ರದರ್ಶನ ಏರ್ಪಡು ಮಾಡಲಾಗಿದೆ.

   ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಕಥೆಯೇನು?

   ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾ 1990ರ ದಶಕದಲ್ಲಿ ಕಾಶ್ಮೀರದಲ್ಲಿ ನಡೆದ ಪಂಡಿತರ ಕುಟುಂಬಗಳ ಮೇಲಿನ ದೌರ್ಜನ್ಯದ ಕಥೆ ಹೊಂದಿದೆ. ಪುಷ್ಕರ್ ನಾಥ್ ಪಂಡಿತ್‌ ಎಂಬ ಕಾಶ್ಮೀರಿ ಪಂಡಿತರ ಪಾತ್ರದ ಸುತ್ತ ಕಥೆ ಸುತ್ತುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ವಿಶ್ವವಿದ್ಯಾನಿಲಯವೊಂದರಲ್ಲಿ ಕಲಿಯುತ್ತಿರುವ ಪುಷ್ಕರ್ ನಾಥ್ ಪಂಡಿತ್‌ ಮೊಮ್ಮಗ ಕೃಷ್ಣ ಪಂಡಿತ್‌ಗೆ ತನ್ನ ಕುಟುಂಬದ ಇತಿಹಾಸವನ್ನು ತಿಳಿಸುತ್ತ ಸಾಗುವ ಕಥೆ ಇದು.  ಕಾಶ್ಮೀರಿ ಪಂಡಿತರಿಗೆ 'ಮತಾಂತರವಾಗಿ, ಓಡಿ ಹೋಗಿ ಅಥವಾ ಸಾಯಿರಿ..' ಎಂದು ಭಯೋತ್ಪಾದಕರು ಬೆದರಿಕೆ ಹಾಕುತ್ತಾರೆ. ನಂತರ ನಡೆದ ಕಾಶ್ಮೀರಿ ಪಂಡಿತ ಕುಟುಂಬಗಳ ಹತ್ಯಾಕಾಂಡವನ್ನು ಸವಿಸ್ತಾರವಾಗಿ ತೋರಿಸಲಾಗಿದೆ.
  Published by:Seema R
  First published: