ಭಾರತದ ‘ಜನತಾ ಕರ್ಫ್ಯೂ’ ಇಡೀ ವಿಶ್ವಕ್ಕೆ ನೀಡಿತ್ತು ಪ್ರೇರಣೆ: ಮನ್ ಕೀ ಬಾತ್​ನಲ್ಲಿ ಪ್ರಧಾನಿ ಹೇಳಿಕೆ

ಕೊರೋನಾ ಲಸಿಕೆ ಪಡೆಯಲು ನಾವು ಬಹಳ ಪರಿಶ್ರಮಪಟ್ಟಿದ್ದೇವೆ. ಈಗ ನಮ್ಮ ದೇಶ ವಿಶ್ವದ ಅತಿದೊಡ್ಡ ವ್ಯಾಕ್ಸಿನೇಶನ್ ಯೋಜನೆ ನಡೆಸುತ್ತಿದ್ದೇವೆ ಎಂದು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ತಿಳಿಸಿದ್ದಾರೆ.

ನರೇಂದ್ರ ಮೋದಿ

ನರೇಂದ್ರ ಮೋದಿ

 • News18
 • Last Updated :
 • Share this:
  ನವದೆಹಲಿ(ಮಾ. 28): ಕಳೆದ ವರ್ಷ ಭಾರತದಲ್ಲಿ ಪ್ರಾಯೋಗಿಕವಾಗಿ ನಡೆಸಿದ ಜನತಾ ಕರ್ಫ್ಯೂ ಶಿಸ್ತಿಗೆ ಒಂದು ಅದ್ಭುತ ನಿದರ್ಶನವಾಗಿತ್ತು. ಜನರು ಸ್ವಯಂಪ್ರೇರಣೆಯಿಂದ ಪಾಲ್ಗೊಂಡಿದ್ದ ಜನತಾ ಕರ್ಫ್ಯೂ ಇಡೀ ವಿಶ್ವಕ್ಕೆ ಪ್ರೇರಣಾದಾಯಕವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. 75ನೇ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನ ನಡೆಯುತ್ತಿರುವ ಸಂಗತಿಯನ್ನು ಸ್ಮರಿಸಿದರು.

  “ಕೊರೋನಾ ವಾರಿಯರ್ಸ್​ಗೆ ನಾವು ಪ್ರೀತಿ ಹಾಗೂ ಗೌರವ ತೋರಿಸಿದ್ದೇವೆ. ಕೊರೊನಾ ವ್ಯಾಕ್ಸಿನ್ ಪಡೆಯಲು ನಾವು ಬಹಳ ಶ್ರಮಿಸಿದ್ದೇವೆ. ಈಗ ನಾವು ವಿಶ್ವದ ಅತಿದೊಡ್ಡ ವ್ಯಾಕ್ಸಿನ್ ಪ್ರೋಗ್ರಾಮ್ ನಡೆಸುತ್ತಿದ್ದೇವೆ. ಇವತ್ತು ಉತ್ತರ ಪ್ರದೇಶದ ಜವುನ್​ಪುರ್​ನಲ್ಲಿ 109 ವರ್ಷದ ವೃದ್ಧೆಯೊಬ್ಬರು ಲಸಿಕೆ ಹಾಕಿಸಿಕೊಂಡಿದ್ದಾರೆ. ಹಾಗೆಯೇ, ದೆಹಲಿಯಲ್ಲಿ 107 ವರ್ಷದ ವೃದ್ಧರೊಬ್ಬರಿಗೆ ವ್ಯಾಕ್ಸಿನ್ ಹಾಕಲಾಗಿದೆ” ಎಂದು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹೇಳಿದರು.

  ಇದನ್ನೂ ಓದಿ: Crime News - ಬೆಂಗಳೂರಿನಲ್ಲಿ ಬಾರ್ ಡ್ಯಾನ್ಸರ್ ಹತ್ಯೆ; ಪರಿಚಯಸ್ಥರಿಂದಲೇ ಕೊಲೆ ಶಂಕೆ

  “ಸ್ವಾತಂತ್ರ್ಯ ಹೋರಾಟದಲ್ಲಿ ಈ ದೇಶಕ್ಕಾಗಿ ತ್ಯಾಗ ಮಾಡುವುದು ತಮ್ಮ ಕರ್ತವ್ಯ ಎಂದು ಪರಿಗಣಿಸಿದ ಸ್ವಾತಂತ್ರ್ಯ ಹೋರಾಟಗಾರರು ಅಗಾಧ ಸಂಕಷ್ಟಗಳನ್ನ ಎದುರಿಸಿದರು. ಈ ಅದ್ಭುತ ಜನರು ಮಾಡಿದ ತ್ಯಾಗ ಮತ್ತು ಬಲಿದಾನಗಳು ಈಗಲೂ ನಮಗೆ ಕರ್ತವ್ಯ ನಿಭಾಯಿಸಲು ಪ್ರೇರಣೆಯಾಗಿವೆ” ಎಂದು ತಿಳಿಸಿದರು.

  ರೈತರ ಕುರಿತು ಮಾತನಾಡಿದ ಪ್ರಧಾನಿ ಮೋದಿ, “ಬಹಳಷ್ಟು ಜನರು ಈಗ ಜೇನು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ದಾರ್ಜೀಲಿಂಗ್​ನ ಗುರದಮ್ ಗ್ರಾಮಸ್ಥರು ಜೇನು ಕೃಷಿ ನಡೆಸುತ್ತಿದ್ದಾರೆ. ಇವರ ಜೇನಿಗೆ ಇವತ್ತು ಬಹಳಷ್ಟು ಬೇಡಿಕೆ ಇದೆ. ಇದು ಅವರ ಆದಾಯದ ಹೆಚ್ಚಳಕ್ಕೆ ಕಾರಣವಾಗಿದೆ. ಸ್ವಾವಂಬಲೆ ಭಾರತದ ಅಭಿಯಾನಕ್ಕೆ ಅವರೂ ಸಹಾಯವಾಗಿದ್ದಾರೆ” ಎಂದವರು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.

  ಇದನ್ನೂ ಓದಿ: Coronavirus | ಇಂದಿನಿಂದ ಮಹಾರಾಷ್ಟ್ರದಲ್ಲಿ ರಾತ್ರಿ 8ರಿಂದ ಬೆಳಗ್ಗೆ 7ರವರೆಗೆ ನೈಟ್ ಕರ್ಫ್ಯೂ ಜಾರಿ; ನಿಯಮ ಮೀರಿದರೆ ದಂಡ!

  “ಕೊಯಮತ್ತೂರಿನ ಬಸ್ ಕಂಡಕ್ಟರ್ ಮಾರಿಮುತ್ತು ಯೋಗನಾಥನ್ ಅವರು ತಮ್ಮ ಬಸ್​ನಲ್ಲಿ ಪ್ರಯಾಣಿಸುವ ಜನರಿಗೆ ಟಿಕೆಟ್ ಜೊತೆ ಉಚಿತವಾಗಿ ಸಸ್ಯಗಳನ್ನ ನೀಡುತ್ತಿದ್ದಾರೆ. ತಮ್ಮ ಬಹುಪಾಲು ಆದಾಯವನ್ನೂ ಇದಕ್ಕೇ ವ್ಯಯಿಸುತ್ತಾರೆ. ಇವರ ಈ ಪ್ರಯತ್ನಕ್ಕೆ ನಾನು ಅಭಿನಂದಿಸುತ್ತೇನೆ” ಎಂದರು.

  “ಯುಗಾದಿ, ಪುತ್ತಾಂಡು, ಗುಡಿ ಪಡವಾ ಅಥವಾ ಬಿಹು, ನವರೇಹ ಅಥವಾ ಪೋಯಿಲಾ ಬೋಯಿಸಾಖ್ ಅಥವಾ ಬೈಸಾಕಿಯಾಗಲೀ ಇಡೀ ದೇಶವೇ ಉತ್ಸಾಹ, ಹೊಸ ಅಪೇಕ್ಷೆಗಳ ಬಣ್ಣದೋಕುಳಿಯಲ್ಲಿ ಮೀಯುತ್ತಾರೆ. ಈ ಸಮಯದಲ್ಲಿ ಕೇರಳವು ವಿಶುವನ್ನು ಆಚರಿಸುತ್ತದೆ” ಎಂದು ಮನ್ ಕೀ ಬಾತ್ ರೇಡಿಯೋ ಪ್ರೋಗ್ರಾಮ್​ನಲ್ಲಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಈ ಹಬ್ಬಗಳಿಗೆ ಶುಭಕೋರಿದರು.
  Published by:Vijayasarthy SN
  First published: