Donald Trump India Visit: ಅಮೆರಿಕದ ಹೂಡಿಕೆಗೆ ಭಾರತ ಉತ್ತಮ ಸ್ಥಳ ಮತ್ತು ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟ; ನರೇಂದ್ರ ಮೋದಿ

ಡಿಜಿಟಲ್ ಆರ್ಥಿಕತೆ ಬೆಳೆಯುತ್ತಿರುವ ಇಂದಿನ ದಿನಗಳಲ್ಲಿ ಅಮೆರಿಕದ ತಂತ್ರಜ್ಞಾನ ಅಭಿವೃದ್ಧಿ ಹಾಗೂ ಭಾರತದ ಕೌಶಲ್ಯ ಒಂದಾದರೆ ಎರಡೂ ದೇಶ ಇದರಿಂದ ಉತ್ತಮ ಲಾಭ ಪಡೆಯಲಿವೆ. ಈ ನಿಟ್ಟಿನಲ್ಲಿ ಡಿಜಟಲ್ ವಿಭಾಗದಲ್ಲಿ ಅಮೆರಿಕ ಬಂಡವಾಳ ಹೂಡಲು ಭಾರತ ಸೂಕ್ತ ದೇಶ ಹಾಗೂ ಇದಕ್ಕೆ ಪೂರಕ ವಾತಾವರಣವನ್ನು ನಮ್ಮ ಸರ್ಕಾರ ಸಿದ್ಧಪಡಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆಶ್ವಾಸನೆ ನೀಡಿದ್ದಾರೆ.

news18-kannada
Updated:February 24, 2020, 4:14 PM IST
Donald Trump India Visit: ಅಮೆರಿಕದ ಹೂಡಿಕೆಗೆ ಭಾರತ ಉತ್ತಮ ಸ್ಥಳ ಮತ್ತು ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟ; ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
  • Share this:
ಅಹಮದಾಬಾದ್ (ಫೆಬ್ರವರಿ 24); ಡಿಜಿಟಲ್ ಆರ್ಥಿಕತೆ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರುವ ಇಂದಿನ ದಿನಗಳಲ್ಲಿ ಅಮೆರಿಕ ಬಂಡವಾಳ ಹೂಡಿಕೆಗೆ ಭಾರತ ಸೂಕ್ತ ದೇಶ. ಅಮೆರಿಕ ಇಲ್ಲಿ ಬಂಡವಾಳ ಹೂಡಲು ಉತ್ತಮ ವಾತಾವರಣ ನಿರ್ಮಿಸಿಕೊಡಲಾಗುವುದು ಅಲ್ಲದೆ, ವಿಶ್ವಶಾಂತಿಗಾಗಿ ಭಾರತ ಮತ್ತು ಅಮೆರಿಕ ಭಯೋತ್ಪಾದನೆ ವಿರುದ್ಧ ಜಂಟಿಯಾಗಿ ಹೋರಾಟ ನಡೆಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಗುಜರಾತ್ ರಾಜಧಾನಿ ಅಹಮದಾಬಾದ್​ನ ಮೊಟೇರಾ ಸ್ಟೇಡಿಯಂ ನಲ್ಲಿ ಆಯೋಜಿಸಲಾಗಿದ್ದ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, “ಅಮೆರಿಕ ಭಾರತದ ಅತಿದೊಡ್ಡ ರಫ್ತು ಪಾಲುದಾರ ದೇಶ. ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಇಂದಿನ ಈ ಭೇಟಿ ಎರಡೂ ದೇಶಗಳ ನಡುವಿನ ವ್ಯಾಪಾರ ಸಂಬಂಧವನ್ನು ಮತ್ತಷ್ಟು ಉತ್ತಮಗೊಳಿಸಲಿದೆ.

ಅಲ್ಲದೆ, ಡಿಜಿಟಲ್ ಆರ್ಥಿಕತೆ ಬೆಳೆಯುತ್ತಿರುವ ಇಂದಿನ ದಿನಗಳಲ್ಲಿ ಅಮೆರಿಕದ ತಂತ್ರಜ್ಞಾನ ಅಭಿವೃದ್ಧಿ ಹಾಗೂ ಭಾರತದ ಕೌಶಲ್ಯ ಒಂದಾದರೆ ಎರಡೂ ದೇಶ ಇದರಿಂದ ಉತ್ತಮ ಲಾಭ ಪಡೆಯಲಿವೆ. ಈ ನಿಟ್ಟಿನಲ್ಲಿ ಡಿಜಟಲ್ ವಿಭಾಗದಲ್ಲಿ ಅಮೆರಿಕ ಬಂಡವಾಳ ಹೂಡಲು ಭಾರತ ಸೂಕ್ತ ದೇಶ ಹಾಗೂ ಇದಕ್ಕೆ ಪೂರಕ ವಾತಾವರಣವನ್ನು ನಮ್ಮ ಸರ್ಕಾರ ಸಿದ್ಧಪಡಿಸಲಿದೆ” ಎಂದು ಅವರು ಆಶ್ವಾಸನೆ ನೀಡಿದ್ದಾರೆ.

"ದೇಶದ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಭಾರತ ಅಮೆರಿಕ ಜೊತೆಗೆ 3 ಬಿಲಿಯನ್ ಡಾಲರ್ ರಕ್ಷಣಾ ಒಪ್ಪಂದ ಮಾಡಿಕೊಳ್ಳಲಿದೆ. ಮತ್ತಷ್ಟು ರಕ್ಷಣಾ ಸಾಮಗ್ರಿಗಳನ್ನು ಖರೀದಿ ಮಾಡುವ ಮೂಲಕ ಭಾರತ ರಕ್ಷಣಾ ವ್ಯವಸ್ಥೆಯನ್ನು ವಿಶ್ವ ದರ್ಜೆಗೆ ಏರಿಸಲಾಗುವುದು. ಅಲ್ಲದೆ, ಇಂದು ವಿಶ್ವಕ್ಕೆ ಬೆದರಿಕೆ ಒಡ್ಡಿರುವ ಭಯೋತ್ಪಾದನೆ ವಿರುದ್ಧ ಅಮೆರಿಕ ಮತ್ತು ಭಾರತ ಜಂಟಿಯಾಗಿ ಸಮರ ಸಾರಿದ್ದು, ಶಾಂತಿ ಪಾಲನೆಗಾಗಿ ಎರಡೂ ರಾಷ್ಟ್ರ ಶ್ರಮಿಸಲಿವೆ” ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಇದನ್ನೂ ಓದಿ: Donald Trump India Visit Live: ಭಾರತದೊಂದಿಗೆ 3 ಬಿಲಿಯನ್ ಡಾಲರ್ ರಕ್ಷಣಾ ಒಪ್ಪಂದ; ಟ್ರಂಪ್ ಘೋಷಣೆ
First published:February 24, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading