ಪ್ರಧಾನಿ ಮೋದಿಯಿಂದ ಲಕ್ಷ ಕೋಟಿ ಕೃಷಿ ಸೌಕರ್ಯ ನಿಧಿ; ಪಿಎಂ ಕಿಸಾನ್ ಯೋಜನೆಯ 6ನೇ ಕಂತಿನ ಹಣ ಬಿಡುಗಡೆ

ಪಿಎಂ ಕಿಸಾನ್ ಯೋಜನೆಗೆ ನೊಂದಾಯಿತಗೊಂಡಿರುವ 8.55 ಕೋಟಿ ರೈತರಿಗೆ ಇವತ್ತು ತಲಾ 2 ಸಾವಿರ ರೂ ಬಿಡುಗಡೆ ಮಾಡಲಾಗಿದೆ. 1 ಲಕ್ಷ ರೂ ಮೊತ್ತದ ಕೃಷಿ ಸೌಕರ್ಯ ನಿಧಿಗೆ ಚಾಲನೆ ನೀಡಲಾಗಿದೆ.

news18
Updated:August 9, 2020, 2:08 PM IST
ಪ್ರಧಾನಿ ಮೋದಿಯಿಂದ ಲಕ್ಷ ಕೋಟಿ ಕೃಷಿ ಸೌಕರ್ಯ ನಿಧಿ; ಪಿಎಂ ಕಿಸಾನ್ ಯೋಜನೆಯ 6ನೇ ಕಂತಿನ ಹಣ ಬಿಡುಗಡೆ
ನರೇಂದ್ರ ಮೋದಿ
  • News18
  • Last Updated: August 9, 2020, 2:08 PM IST
  • Share this:
ನವದೆಹಲಿ(ಆ. 09): ಸ್ವಾವಲಂಬಿ ಭಾರತ ನಿರ್ಮಾಣದ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಕೃಷಿ ಸೌಕರ್ಯ ನಿಧಿಗೆ 1 ಲಕ್ಷ ಕೋಟಿ ರೂ ಬಿಡುಗಡೆ ಮಾಡಿದ್ದಾರೆ. ಹಾಗೆಯೇ, ಪಿಎಂ ಕಿಸಾನ್ ಯೋಜನೆಯ ಆರನೇ ಕಂತಿನ ಹಣವಾಗಿ 17,100 ಕೋಟಿ ರೂಪಾಯಿ ಹಣವನ್ನೂ ಬಿಡುಗಡೆ ಮಾಡಿದ್ದಾರೆ. ಇವತ್ತು ವಿಡಿಯೋ ಕಾನ್ಫೆರೆನ್ಸ್​ನಲ್ಲಿ ಕೃಷಿ ಸೌಕರ್ಯ ನಿಧಿಯ ಉದ್ಘಾಟನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ಕೃಷಿ ಸಚಿವಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು. ಇವತ್ತು ಪ್ರಧಾನಿ ಬಿಡುಗಡೆ ಮಾಡಿದ ಹಣವು ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ರೂ ಉತ್ತೇಜನಾ ಪ್ಯಾಕೇಜ್​ನ ಭಾಗವಾಗಿದೆ.

ಕೃಷಿ ಕ್ಷೇತ್ರದ ಉದ್ಯಮಿಗಳು, ಸ್ಟಾರ್ಟಪ್​ಗಳು, ರೈತ ಸಂಸ್ಥೆಗಳ ಉತ್ತೇಜನಕ್ಕೆಂದು ಕೃಷಿ ಸೌಕರ್ಯ ನಿಧಿಯನ್ನು ಸ್ಥಾಪಿಸಲಾಗಿದೆ. ಕಟಾವು ನಂತರದ ಬೆಳೆ ನಿರ್ವಹಣೆಯ ಸೌಕರ್ಯ ಯೋಜನೆಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಉದ್ದೇಶದ ಈ ನಿಧಿಯ ಸೌಲಭ್ಯ 10 ವರ್ಷಗಳವರೆಗೆಂದು ಮೀಸಲಾಗಿರಿಸಲಾಗಿದೆ.

ಕೃಷಿ ಪತ್ತಿನ ಸಹಕಾರ ಸಂಘಗಳು, ರೈತ ಸಹೂಹಗಳು, ಕೃಷಿ ಬೆಳೆಗಾರರ ಸಂಘಗಳು, ಕೃಷಿ ಉದ್ಯಮಗಳು, ಸ್ಟಾರ್ಟಪ್​ಗಳು, ಕೃಷಿ ತಂತ್ರಜ್ಞಾನ ಸಂಸ್ಥೆಗಳಿಗೆ ಸಾಲ ಸೌಲಭ್ಯ ಸಿಗಲಿದೆ. ವಿವಿಧ ಹಣಕಾಸು ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಾಲ ನೀಡಲಾಗುತ್ತದೆ. ನಾಲ್ಕು ವರ್ಷಗಳಲ್ಲಿ ಸಾಲಗಳ ವಿತರಣೆಯಾಗಲಿದೆ. ಮೊದಲಿಗೆ ಈ ವರ್ಷ 10 ಸಾವಿರ ಕೋಟಿ ರೂ ಹಾಗೂ ಮಂದಿನ ಮೂರು ವರ್ಷಗಳಲ್ಲಿ ಉಳಿದ 90 ಸಾವಿರ ಕೋಟಿ ರೂ ಮೊತ್ತದ ಸಾಲಗಳು ವಿಲೇವಾರಿಯಾಗಲಿವೆ. ದೇಶದ 12 ಸರ್ಕಾರಿ ಬ್ಯಾಂಕುಗಳ ಪೈಕಿ 11 ಬ್ಯಾಂಕುಗಳು ಕೃಷಿ ಇಲಾಖೆಯೊಂದಿಗೆ ಈ ಒಪ್ಪಂದಕ್ಕೆ ಸಹಿ ಹಾಕಿವೆ. ಸಾಲ ಪಡೆಯುವ ಸಂಸ್ಥೆಗಳು ಸಾಲ ಮರುಪಾವತಿಗೆ 6 ತಿಂಗಳಿಂದ 2 ವರ್ಷಗಳವರೆಗೆ ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿ: Rajnath Singh: ಚೀನಾದ 101 ರಕ್ಷಣಾ ಉತ್ಪನ್ನಗಳ ಆಮದಿಗೆ ನಿರ್ಬಂಧ; ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ

ಇದೇ ವೇಳೆ, ಪಿಎಂ ಕಿಸಾನ್ ಯೋಜನೆಗೆ 6ನೇ ಕಂತಿನ ಹಣದ ಮೊತ್ತವಾದ 17,100 ಕೋಟಿ ರೂಪಾಯಿಯನ್ನು ಪ್ರಧಾನಿ ಮೋದಿ ಇದೇ ವೇಳೆ ಬಿಡುಗಡೆ ಮಾಡಿದ್ದಾರೆ. ಈ ಯೋಜನೆಗೆ 8.55 ಕೋಟಿ ರೈತರು ಫಲಾನುಭವಿಗಳಾಗಿದ್ದಾರೆ. ಕೃಷಿ ಜಮೀನು ಹೊಂದಿರುವ ಎಲ್ಲಾ ರೈತರು ಈ ಯೋಜನೆಯ ಫಲ ಪಡೆಯಬಹುದಾಗಿದೆ. ಫ್ರತಿ ಫಲಾನುಭವಿ ರೈತರ ಖಾತೆಗೆ ಈ ಹಣ ವರ್ಗಾವಣೆಯಾಗುತ್ತದೆ.

ಪಿಎಂ ಕಿಸಾನ್ ಯೋಜನೆಯಲ್ಲಿ ನೊಂದಾವಣಿಯಾಗಿರುವ ಎಲ್ಲಾ ರೈತರಿಗೂ ವಾರ್ಷಿಕವಾಗಿ 3 ಕಂತುಗಳಲ್ಲಿ 6 ಸಾವಿರ ರೂ ನೀಡಲಾಗುತ್ತದೆ. ಈ ಏಳನೇ ಕಂತಿನಲ್ಲಿ ಪ್ರತೀ ರೈತರ ನೊಂದಾಯಿತ ಖಾತೆಗೆ 2 ಸಾವಿರ ರೂ ಸಂದಾಯವಾಗಿದೆ.

ಇವತ್ತು ನಡೆದ ವಿಡಿಯೋ ಕಾನ್ಫೆರೆನ್ಸ್​ನಲ್ಲಿ ಪ್ರಧಾನಿ ಮೋದಿ ಅವರು ಕರ್ನಾಟಕದ ರೈತರೊಂದಿಗೆ ಸಂವಾದ ನಡೆಸಿದ್ದು ವಿಶೇಷ. ಹಾಸನದ ಉಗನೆ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರ ಕಾರ್ಯಗಳನ್ನ ಆಲಿಸಿ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.
Published by: Vijayasarthy SN
First published: August 9, 2020, 1:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading