‘ಮಗಳ ಮದುವೆಗೆ ಬನ್ನಿ‘ ಎಂದ ಆಟೋ ಡ್ರೈವರ್​​​ ಆಹ್ವಾನಕ್ಕೆ ಪ್ರಧಾನಿ ಮೋದಿ ಮಾಡಿದ್ದೇನು?

ಇನ್ನು, ಸದ್ಯದಲ್ಲೇ ಪ್ರಧಾನಿ ನರೇಂದ್ರ ಮೋದಿ ಉತ್ತರಪ್ರದೇಶಕ್ಕೆ ಆಗಮಿಸಲಿದ್ದಾರೆ. ಅವರನ್ನು ಭೇಟಿ ಮಾಡಲು ಉತ್ಸುಕರಾಗಿದ್ದೇವೆ. ಮೋದಿಯವರನ್ನು ಭೇಟಿ ಮಾಡಿ ನಮ್ಮ ಕುಟುಂಬದ ಸಮಸ್ಯೆಗಳನ್ನು ಹೇಳಿಕೊಳ್ಳಬೇಕಿದೆ ಎಂದರು ಕೇವತ್​​ ಪತ್ನಿ.

news18-kannada
Updated:February 16, 2020, 8:10 PM IST
‘ಮಗಳ ಮದುವೆಗೆ ಬನ್ನಿ‘ ಎಂದ ಆಟೋ ಡ್ರೈವರ್​​​ ಆಹ್ವಾನಕ್ಕೆ ಪ್ರಧಾನಿ ಮೋದಿ ಮಾಡಿದ್ದೇನು?
ಪ್ರಧಾನಿ ನರೇಂದ್ರ ಮೋದಿ
  • Share this:
ನವದೆಹಲಿ(ಫೆ.16): ಆಟೋ ಡ್ರೈವರ್​​ ಮಗಳ ಮದುವೆಗೆ ಪ್ರಧಾನಿ ನರೇಂದ್ರ ಮೋದಿಯವರು ಶುಭಾಶಯ ಕೋರಿದ ಅಪರೂಪದ ಘಟನೆಯೊಂದು ನಡೆದಿದೆ. ವಾರಣಾಸಿ ಮೂಲದ ಆಟೋ ಚಾಲಕ ಮಂಗಲ್​ ಕೇವತ್​ ಎಂಬವರ ಮಗಳ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿ ಅಭಿನಂದನಾ ಪತ್ರ ಕಳುಹಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರಿಗೆ ತನ್ನ ಮಗಳ ಮದುವೆ ಬನ್ನಿ ಎಂದು ವಾರಣಾಸಿಯ ದೊಮ್ರಿ ಎಂಬ ಗ್ರಾಮದ ನಿವಾಸಿ ಮಂಗಲ್ ಕೇವತ್ ಆಹ್ವಾನ ನೀಡಿದ್ದರು. ಫೆಬ್ರವರಿ 12ನೇ ತಾರೀಕಿನಂದು ಮದುವೆ ನಡೆಯಲಿದೆ. ತಾವು ವಿವಾಹಕ್ಕೆ ಬರಬೇಕೆಂದು ಪ್ರಧಾನಿ ಕಚೇರಿಗೆ ಆಹ್ವಾನ ಪತ್ರಿಕೆ ಕಳುಹಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು ಮದುವೇ ದಿನದಂದೇ ಆಟೋ ಡ್ರೈವರ್​​ ಮಗಳ ಮದುವೆಗೆ ಶುಭಾಶಯ ಕೋರಿ ಪತ್ರ ಕಳುಹಿಸಿದ್ಧಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಆಟೋ ಚಾಲಕ ಕೇವತ್​​, ಮಗಳ ಮದುವೆಗೆ ಬರುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮೊದಲ ಕರೆಯೋಲೆ ಕಳುಹಿಸಿದೆವು. ನಂತರ ನಾವೇ ಖುದ್ದಾಗಿ ಇನ್ನೊಂದು ಆಹ್ವಾನ ಪತ್ರಿಕೆಯನ್ನು ಪ್ರಧಾನಮಂತ್ರಿ ಕಚೇರಿಗೆ ನೀಡಿದ್ದೆವು. ಆದರೀಗ, ಪ್ರಧಾನಿ ನನ್ನ ಮಗಳ ಮದುವೆ ಶುಭಾಶಯ ಕೋರಿ ಪತ್ರ ಬರೆದಿದ್ದಾರೆ. ಇದು ನಮಗೆ ಬಹಳ ಸಂತಸ ತಂದಿದೆ ಎಂದಿದ್ಧಾರೆ.ಇನ್ನು, ಸದ್ಯದಲ್ಲೇ ಪ್ರಧಾನಿ ನರೇಂದ್ರ ಮೋದಿ ಉತ್ತರಪ್ರದೇಶಕ್ಕೆ ಆಗಮಿಸಲಿದ್ದಾರೆ. ಅವರನ್ನು ಭೇಟಿ ಮಾಡಲು ಉತ್ಸುಕರಾಗಿದ್ದೇವೆ. ಮೋದಿಯವರನ್ನು ಭೇಟಿ ಮಾಡಿ ನಮ್ಮ ಕುಟುಂಬದ ಸಮಸ್ಯೆಗಳನ್ನು ಹೇಳಿಕೊಳ್ಳಬೇಕಿದೆ ಎಂದರು ಕೇವತ್​​ ಪತ್ನಿ.
First published: February 16, 2020, 8:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading