• Home
  • »
  • News
  • »
  • national-international
  • »
  • ಸಿಡಿಎಸ್​​ ಬಿಪಿನ್​ ರಾವತ್​ಗೆ ಅಂತಿಮ ಗೌರವ ಸಲ್ಲಿಸಿದ ಪ್ರಧಾನಿ ಮೋದಿ

ಸಿಡಿಎಸ್​​ ಬಿಪಿನ್​ ರಾವತ್​ಗೆ ಅಂತಿಮ ಗೌರವ ಸಲ್ಲಿಸಿದ ಪ್ರಧಾನಿ ಮೋದಿ

ಅಂತಿಮ ಗೌರವ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ

ಅಂತಿಮ ಗೌರವ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ

ದೆಹಲಿಗೆ ಬಂದಿಳಿದ ಪಾರ್ಥಿವ ಶರೀರಗಳಿಗೆ ಪ್ರಧಾನಿ ಮೋದಿ (PM Modi), ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಎನ್ಎಸ್ಎ ಅಜಿತ್ ದೋವಲ್ ಅಂತಿಮ ನಮನ ಸಲ್ಲಿಸಿದರು.

  • Share this:

    ತಮಿಳುನಾಡಿನ ಕುನೂರಿನಲ್ಲಿ ಬುಧವಾರ ನಡೆದ IAF Mi-17V5 ಹೆಲಿಕಾಪ್ಟರ್ ಪತನದಲ್ಲಿ ಸಿಡಿಎಸ್​ ಜನರಲ್ ಬಿಪಿನ್ ರಾವತ್ (Gen Bipin Rawat ) ಮತ್ತು ಅವರ ಪತ್ನಿ ಮಧುಲಿಕಾ ಸೇರಿದಂತೆ ಸಾವನ್ನಪ್ಪಿದ 13 ಮಂದಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾತ್ರಿ ಅಂತಿಮ ಗೌರವ (Last Tribute by PM Modi) ಸಲ್ಲಿಸಿದರು. C130-J ಸೂಪರ್ ಹರ್ಕ್ಯುಲಸ್ ವಿಮಾನದ ಮೂಲಕ ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಸಿಡಿಎಸ್​ ಸೇರಿದಂತೆ 13 ಜನರ ಮೃತ ದೇಹದ ಪೆಟ್ಟಿಗೆ ತರಲಾಯಿತು. ಇದಕ್ಕೆ ಮುನ್ನ ತಮಿಳುನಾಡಿನಲ್ಲೂ ಮೃತರಿಗೆ ಗೌರವ ನಮನ ಸಲ್ಲಿಸಲಾಯಿತು.


    ದೆಹಲಿಗೆ ಬಂದಿಳಿದ ಪಾರ್ಥಿವ ಶರೀರಗಳಿಗೆ ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಎನ್ಎಸ್ಎ ಅಜಿತ್ ದೋವಲ್ ಅಂತಿಮ ನಮನ ಸಲ್ಲಿಸಿದರು. ಈ ವೇಳೆ ವಾಯುಸೇನೆ, ನೌಕಾಪಡೆ ಮತ್ತು ಭೂಸೇನೆಯ ಮುಖ್ಯಸ್ಥರು ಉಪಸ್ಥಿತರಿದ್ದರು. ಇದೇ ವೇಳೆ ಮೂರು ಸೇನಾ ಮುಖ್ಯಸ್ಥರು ಅಂತಿಮ ನಮನ ಸಲ್ಲಿಸಿದರು. ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಮತ್ತು ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರು ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಇತರರಿಗೆ ಅಂತಿಮ ನಮನ ಸಲ್ಲಿಸಿದರು.



    ಮೂರು ಶವಗಳ ಗುರುತು ಮಾತ್ರ ಪತ್ತೆ


    ಅಪಘಾತದಲ್ಲಿ ಸಾವನ್ನಪ್ಪಿದ 13 ಶವಗಳನ್ನು ಡಿಎನ್​ಎ ಮೂಲಕ ಪತ್ತೆ ಹಚ್ಚುವ ಕಾರ್ಯ ನಡೆಸಲಾಗಿದದು, ಇದರಲ್ಲಿ ಜನರಲ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಬ್ರಿಗೇಡಿಯರ್ ಎಲ್ಎಸ್ ಲಿಡ್ಡರ್ ಶವವನ್ನು ಮಾತ್ರ ಗುರುತಿಸಲಾಗಿದೆ. ಅವರ ಪಾರ್ಥಿವ ಶರೀರವನ್ನು ಅಂತಿಮ ವಿಧಿವಿಧಾನಗಳಿಗಾಗಿ ಕುಟುಂಬಸ್ಥರಿಗೆ ನೀಡಲಾಗುವುದು. ಇನ್ನುಳಿದ 10 ಮಂದಿಯನ್ನು ಗುರುತಿಸುವವರೆಗೆ ಅವರನ್ನು ಸೇನಾ ಮೂಲ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗುವುದು.


    ನಾಳೆ ಅಂತ್ಯಕ್ರಿಯೆ


    ಜನರಲ್​ ಮತ್ತು ಅವರ ಹೆಂಡತಿ ಅವರ ಶವವನ್ನು ಅವರ ಮನೆಯಲ್ಲಿ ನಾಳೆ ಅಂದರೆ ಶುಕ್ತವಾ ಬೆಳಿಗ್ಗೆ 11 ಗಂಟೆವರೆಗೆ ಅಂತಿಮ ದರ್ಶನಕ್ಕೆ ಇಡಲಾಗುವುದು. ಅವರ ದೆಹಲಿಯ ಮನೆಯಲ್ಲಿ ಕುಟುಂಬ, ಸ್ನೇಹಿತರು ಮತ್ತು ಸಾರ್ವಜನಿಕರಿಗೆ ಅಂತಿಮ ನಮನ ಸಲ್ಲಿಸಿದ ಬಳಿಕ, ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನಡೆಸಲಾಗುವುದು. ದೆಹಲಿಯ ಬ್ರಾರ್ ಸ್ಕ್ವೇರ್ ಚಿತಾಗಾರ ಸಂಜೆ 4 ಗಂಟೆಗೆ ಅಂತ್ಯಕ್ರಿಯೆಯನ್ನು ನಿಗದಿಪಡಿಸಲಾಗಿದೆ. ಇದೇ ಚಿತಾಗಾರದಲ್ಲಿ ಬ್ರಿಗೇಡಿಯರ್ ಲಿಡ್ಡರ್ ಅವರ ಅಂತ್ಯಕ್ರಿಯೆಯು ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ.


    ಇದನ್ನು ಓದಿ: ಯಾರಾಗ್ತಾರೆ ಮುಂದಿನ CDS? ಮೋದಿ ಸರಕಾರಕ್ಕೀರುವ ಸವಾಲುಗಳೇನು?


    ತಮಿಳುನಾಡಿನಲ್ಲೂ ಅಂತಿಮ ಗೌರವ


    ನಿನ್ನೆ ಅಪಘಾತದಲ್ಲಿ ಸಾವನ್ನಪ್ಪಿದ ಸೇನಾ ಅಧಿಕಾರಿಗಳು ಸೇರಿದಂತೆ 13 ಜನರ ಮೃತ ಶರೀರವನ್ನು ಹೊತ್ತು ಸಾಗುತ್ತಿದ್ದ ವಾಹನ ಇಂದು ಬೆಳಗ್ಗೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಳ್ಯಂ ಬಳಿ ಸಣ್ಣ ಅಪಘಾತಕ್ಕೆ ಗುರಿಯಾಯಿತು. ಬಳಿಕ ಮೃತ ಶರೀರಗಳನ್ನು ಕೊಯಮತ್ತೂರಿನ ಸುಲೂರ್ ಏರ್ ಫೋರ್ಸ್ ಬೇಸ್‌ನಿಂದ ದೆಹಲಿಗೆ ರವಾನೆ ಮಾಡಲಾಯಿತು


    ಇದನ್ನು ಓದಿ: ಹೆಲಿಕಾಪ್ಟರ್​ ಪತನದಲ್ಲಿ ಬದುಕುಳಿದಿದ್ದು ಕೇವಲ ಪೈಲಟ್​; ಹೇಗೆ ಸಾಧ್ಯ ಆಯಿತು ಗೊತ್ತಾ?


    ಭಾರತೀಯ ವಾಯುಪಡೆಯ Mi-17V5 ಹೆಲಿಕಾಪ್ಟರ್ (Mi-17V5 Helicopter) ಬುಧವಾರ ಮಧ್ಯಾಹ್ನ ತಮಿಳುನಾಡಿನ ಕುನೂರ್  ಬಳಿ ಅಪಘಾತಕ್ಕೀಡಾಗಿದೆ. ಈ ಹೆಲಿಕಾಪ್ಟರ್​ನಲ್ಲಿ ಸೇನಾಪಡೆಗಳ ಮುಖ್ಯಸ್ಥ ಸಿಡಿಎಸ್ ಬಿಪಿನ್ ರಾವತ್ ಸಿಬ್ಬಂದಿ ಮತ್ತು ಕುಟುಂಬ ಸದಸ್ಯರು ಸೇರಿ 14 ಮಂದಿ ಪ್ರಯಾಣಿಸುತ್ತಿದ್ದರು. ಸೇನಾ ಹೆಲಿಕಾಪ್ಟರ್ ಪತನದ ಬಳಿಕ ಬೆಂಕಿಗಾಹುತಿಯಾಗಿದ್ದು, ಇದರಲ್ಲಿ ಪೈಲಟ್​ ಗ್ರೂಪ್​​ ಕಮಾಂಡರ್​ ವರುಣ್​ ಸಿಂಗ್​ ಮಾತ್ರ ಬದುಕಿ ಉಳಿದಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಅವರ ಸ್ಥಿತಿ ಸ್ಥಿರವಾಗಿದ್ದು, ಅವರಿಗೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿದೆ.  ಇನ್ನು ಈ ಸೇನಾ ಹೆಲಿಕ್ಯಾಪ್ಟರ್​ ಅಪಘಾತಕ್ಕೆ ಕಾರಣಏನು ಎಂದು ತಿಳಿದು ಬಂದಿಲ್ಲ. ಈ ಸಂಬಂಧ ಪರಿಶೀಲಿಸಲು ತನಿಖೆಗೆ ಆದೇಶಿಸಲಾಗಿದೆ.

    Published by:Seema R
    First published: