HOME » NEWS » National-international » PM NARENDRA MODI ON MAKING UNION TERRITORY BELIEVE CHANGE IS FOR GOOD SESR

ಜಮ್ಮು ಮತ್ತು ಕಾಶ್ಮೀರದಿಂದ ಪಾಠ ಕಲಿಯಿರಿ; ತಮ್ಮ ದೆಹಲಿ ಟೀಕಾಕಾರರಿಗೆ ಕುಟುಕಿದ ಪ್ರಧಾನಿ

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಜಾಪ್ರಭುತ್ವದ ಬೇರುಗಳನ್ನು ಬಲಪಡಿಸಿವೆ ಎಂದ ಪ್ರಧಾನಿ ಚುನಾವಣೆಯಲ್ಲಿ ಮತದಾನ ಮಾಡಿದ ಮತದಾರರಿಗೆ ಅಭಿನಂದನೆಗಳನ್ನು ತಿಳಿಸಿದರು.

news18-kannada
Updated:December 26, 2020, 3:47 PM IST
ಜಮ್ಮು ಮತ್ತು ಕಾಶ್ಮೀರದಿಂದ ಪಾಠ ಕಲಿಯಿರಿ; ತಮ್ಮ ದೆಹಲಿ ಟೀಕಾಕಾರರಿಗೆ ಕುಟುಕಿದ ಪ್ರಧಾನಿ
ನರೇಂದ್ರ ಮೋದಿ
  • Share this:
ನವದೆಹಲಿ (ಡಿ. 26):  ಜಮ್ಮು ಮತ್ತು ಕಾಶ್ಮೀರದ ಎಲ್ಲಾ ನಿವಾಸಿಗಳಿಗೆ ಆಯುಷ್ಮಾನ್​ ಭಾರತ್​ ಪ್ರಧಾನ್​ ಮಂತ್ರಿ ಜನ ಆರೋಗ್ಯ ಯೋಜನಾ(AB-PMJAY) ಸೆಹತ್​ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಿದರು. ವಿಡಿಯೋ ಕಾನ್ಫರೆನ್ಸ್​ ಮೂಲಕ ಅವರು ಈ ಯೋಜನೆಯನ್ನು ಕಣಿವೆ ರಾಜ್ಯದ ಜನರ ಆರೋಗ್ಯದ ದೃಷ್ಟಿಯಿಂದ ಜಾರಿಗೆ ತಂದಿದ್ದಾರೆ. ಈ ಯೋಜನೆ ಜಮ್ಮು-ಕಾಶ್ಮೀರದ ಪ್ರತಿ ಕುಟುಂಬಕ್ಕೆ 5 ಲಕ್ಷ ರೂಪಾಯಿವರೆಗೆ ಹಣಕಾಸಿನ ನೆರವು ಒದಗಿಸಲಿದೆ. ಕೇಂದ್ರಾಡಳಿತ ಪ್ರದೇಶದ 15 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಈ ಯೋಜನೆಯಿಂದ ಲಾಭ ಪಡೆಯಲಿದ್ದು, ಜನರು ದೇಶದ ಯಾವುದೇ ಮೂಲೆಯಿಂದ ಈ ಆಯುಷ್ಮಾನ್ ಕಾರ್ಡ್ ಬಳಸಬಹುದಾಗಿದೆ. ಇನ್ನು ಇದೇ ವೇಳೆ ಜಮ್ಮು ಕಾಶ್ಮೀರದ ಡಿಸಿಸಿ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದಕ್ಕೆ ಜನರಿಗೆ ಧನ್ಯವಾದ ತಿಳಿಸಿದರು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದ ಮಾಡಿದರ ಪರಿಣಾಮ ಪ್ರಜಾಪ್ರಭುತ್ವ ಬಲಪಡಿಸಲು ಸಾಧ್ಯವಾಯಿತು ಎಂದರು. ಈ ಮೂಲಕ ಪ್ರಜಾಪ್ರಭುತ್ವ ಕುರಿತು ತಿಳಿಹೇಳಿದ ವಿಪಕ್ಷ ನಾಯಕರಿಗೆ ತಿರುಗೇಟು ನೀಡಿದರು.

ದೆಹಲಿಯಲ್ಲಿ ನನ್ನನ್ನು ಟೀಕಿಸುವ, ನನ್ನ ವಿರುದ್ಧ ಆಕ್ರಮಣಕಾರಿ ಭಾಷಣಮಾಡುವ ಜನರಿದ್ದಾರೆ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಯಶಸ್ವಿ ಚುನಾವಣೆ ನಡೆಸಿರುವುದನ್ನು ನೋಡಬೇಕು. ನನಗೆ ಪ್ರಜಾಪ್ರಭುತ್ವದ ಕುರಿತು ಉಪದೇಶ ನೀಡುವವರು ಇದನ್ನು ಗಮನಿಸಬೇಕು ಎಂದು ಪರೋಕ್ಷವಾಗಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಿರುದ್ಧ ಹರಿಹಾಯ್ದರು.

2018ರಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಬೇಕು ಎಂದು ಸರ್ವೋಚ್ಛ ನ್ಯಾಯಾಲಯ ತಿಳಿಸಿದೆ. ಆದರೆ, ಪುದುಚೇರಿಯಲ್ಲಿ ಆಡಳಿತ ನಡೆಸುವ ಪಕ್ಷ ಸುಪ್ರೀಂ ಕೋರ್ಟ್​ ಆದೇಶಿದರೂ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸದಂತೆ ತಡೆದಿದ್ದಾರೆ. ನಾವು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಂಡ ವರ್ಷದೊಳಗೆ ಪಂಚಾಯತ್​ ಮಟ್ಟದ ಚುನಾವಣೆ ನಡೆಸಿದ್ದೇವೆ. ಕೆಲವು ರಾಜಕೀಯ ನಾಯಕರು ಕೇವಲ ಉಪನ್ಯಾಸ ನೀಡುತ್ತಾರೆ ಎಂದು ಕುಟುಕಿದರು.

ಇದನ್ನು ಓದಿ: Farmers Protest: ದೆಹಲಿ ಗಡಿಯಲ್ಲಿ ತಿಂಗಳು ಪೂರೈಸಿದ ರೈತರ ಅನಿರ್ದಾಷ್ಟವಧಿ ಧರಣಿ

ಜಮ್ಮು ಮತ್ತು ಕಾಶ್ಮೀರದಲ್ಲಿ ಮಾಜಿ ಪ್ರಧಾನಿ ದಿವಂಗತ ಅಟಲ್​ ಬಿಹಾರಿ ವಾಜಪೇಯಿ ಅವರ ಮೂರು ಮಂತ್ರಗಳ ಆಧಾರದ ಮೇಲೆ ಅಭಿವೃದ್ಧಿ ಕಾರ್ಯಗಳನ್ನು ನಾವು ಕೈಗೊಂಡಿದ್ದೇವೆ ಎಂದರು

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಜಾಪ್ರಭುತ್ವದ ಬೇರುಗಳನ್ನು ಬಲಪಡಿಸಿವೆ ಎಂದ ಪ್ರಧಾನಿ ಚುನಾವಣೆಯಲ್ಲಿ ಮತದಾನ ಮಾಡಿದ ಮತದಾರರಿಗೆ ಅಭಿನಂದನೆಗಳನ್ನು ತಿಳಿಸಿದರು.
Published by: Seema R
First published: December 26, 2020, 3:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories