• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Rising India Summit: ಮನ್‌ಕಿ ಬಾತ್‌ ಕುರಿತ ಪುಸ್ತಕ ಹೊರತಂದ ನ್ಯೂಸ್‌18 ನೆಟ್‌ವರ್ಕ್‌ಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

Rising India Summit: ಮನ್‌ಕಿ ಬಾತ್‌ ಕುರಿತ ಪುಸ್ತಕ ಹೊರತಂದ ನ್ಯೂಸ್‌18 ನೆಟ್‌ವರ್ಕ್‌ಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

Voice of India Modi and His Transformative Mann ki Baat

Voice of India Modi and His Transformative Mann ki Baat

ಎರಡು ದಿನಗಳ ಕಾಲ ನಡೆದ ನಾಯಕತ್ವ ಸಮ್ಮೇಳನ ರೈಸಿಂಗ್ ಇಂಡಿಯಾ ಸಮ್ಮಿಟ್ 2023ರ ಕೊನೆಯ ದಿನ ಉಪ ರಾಷ್ಟ್ರಪತಿ ಜಗದೀಪ್ ಧನಕರ್‌ ನ್ಯೂಸ್‌ 18 ನೆಟ್‌ವರ್ಕ್‌ನ ಕಾಫಿ ಟೇಬಲ್ ಪುಸ್ತಕ 'ವಾಯ್ಸ್ ಆಫ್ ಇಂಡಿಯಾ-ಮೋದಿ ಮತ್ತು ಅವರ ಪರಿವರ್ತನೀಯ ಮನ್ ಕಿ ಬಾತ್' ಅಪರೂಪದ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು.

ಮುಂದೆ ಓದಿ ...
 • News18 Kannada
 • 3-MIN READ
 • Last Updated :
 • New Delhi, India
 • Share this:

ನವದೆಹಲಿ: ನ್ಯೂಸ್‌ 18 ನೆಟ್‌ವರ್ಕ್‌ನ ಕಾಫಿ ಟೇಬಲ್ ಪುಸ್ತಕ 'ವಾಯ್ಸ್ ಆಫ್ ಇಂಡಿಯಾ-ಮೋದಿ ಮತ್ತು ಅವರ ಪರಿವರ್ತನೀಯ ಮನ್ ಕಿ ಬಾತ್' ಪುಸ್ತಕಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ಮನ್‌ ಕಿ ಬಾತ್ ಕಾರ್ಯಕ್ರಮದ ಸುಂದರವಾದ ಭಾಗವೆಂದರೆ ಅದು ತಳಮಟ್ಟದಲ್ಲಿ ಜನರನ್ನು ತಲುಪಿರುವುದು. ಈ ಕಾರ್ಯಕ್ರಮ ನೂರು ಸಂಚಿಕೆಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಸಿಎನ್‌ಎನ್‌ ನ್ಯೂಸ್‌ 18 ಇಂತಹದೊಂದು ಪ್ರಯತ್ನವನ್ನು ಮಾಡಿರುವುದು ಅಭಿನಂದನೀಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ರೇಡಿಯೋ ಕಾರ್ಯಕ್ರಮ ಮನ್‌ ಕಿ ಬಾತ್‌ನ ವಿವಿಧ ಆವೃತ್ತಿಗಳಲ್ಲಿ ಉಲ್ಲೇಖಿಸಿದ ವ್ಯಕ್ತಿಗಳ ಬಗ್ಗೆ ಈ ಪುಸ್ತಕವು ವಿವರಿಸುತ್ತದೆ.


ಇದನ್ನೂ ಓದಿ: Rising India Summit: ರೈಸಿಂಗ್ ಇಂಡಿಯಾ ಶೃಂಗಸಭೆ 2023, ಪೂನಾವಾಲಾ ಫಿನ್‍ಕಾರ್ಪ್ ಲಿಮಿಟೆಡ್‍ನೊಂದಿಗೆ ಕೈ ಜೋಡಿಸಿದ ನ್ಯೂಸ್ 18 ನೆಟ್‍ವರ್ಕ್


ಮೋದಿಯವರ ರೇಡಿಯೋ ಪ್ರಸಾರವಾದ 'ಮನ್ ಕಿ ಬಾತ್' ತನ್ನ 100 ನೇ ಆವೃತ್ತಿಯನ್ನು ಏಪ್ರಿಲ್ 30 ರಂದು ಪೂರ್ಣಗೊಳಿಸಿದೆ. 'MyGov' 100 ನೇ ಸಂಚಿಕೆಯನ್ನು ಹೇಗೆ ಆಚರಿಸಬೇಕು ಎಂಬುದರ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ನಾಗರಿಕರನ್ನು ಆಹ್ವಾನಿಸಿತ್ತು. ಇದಕ್ಕೆ ಅರ್ಜಿ ಸಲ್ಲಿಕೆಗೆ ಏಪ್ರಿಲ್ 27 ಕೊನೆಯ ದಿನಾಂಕ ಆಗಿತ್ತು. ಅಕ್ಟೋಬರ್ 3, 2014 ರಂದು ವಿಜಯದಶಮಿಯ ಸಂದರ್ಭದಲ್ಲಿ ಪ್ರಾರಂಭವಾದ ಪ್ರತಿಷ್ಠಿತ ಮನ್ ಕಿ ಬಾತ್ ಕಾರ್ಯಕ್ರಮವು ಇಲ್ಲಿಯವರೆಗೆ ತನ್ನ 100 ಆವೃತ್ತಿಗಳನ್ನು ಯಶಸ್ವಿಯಾಗಿದೆ ಪೂರ್ಣಗೊಳಿಸಿದೆ.


ಈ ವರ್ಷದ ಶೃಂಗಸಭೆಯ ವಿಷಯವು ‘ದಿ ಹೀರೋಸ್ ಆಫ್ ರೈಸಿಂಗ್ ಇಂಡಿಯಾ’ ಅನ್ನು ಕೇಂದ್ರೀಕರಿಸಿತ್ತು. ಕಾರ್ಯಕ್ರಮದಲ್ಲಿ ಅಸಾಮಾನ್ಯ ಸಾಮಾಜಿಕ ಪರಿಣಾಮವನ್ನು ಬೀರಿದ ಸಾಮಾನ್ಯ ಜನರು ನೀಡಿದ ಅಸಾಧಾರಣ ಕೊಡುಗೆಗಳನ್ನು ಗೌರವಿಸಲಾಯಿತು.


ಇದನ್ನೂ ಓದಿ: Rising India Summit: ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಯುಪಿಎ ಸರ್ಕಾರ ನನ್ನ ಮೇಲೆ ಒತ್ತಡ ಹೇರಿತ್ತು: ಅಮಿತ್ ಶಾ


ಎರಡು ದಿನಗಳ ಕಾಲ ನಡೆದ ನಾಯಕತ್ವ ಸಮ್ಮೇಳನ ರೈಸಿಂಗ್ ಇಂಡಿಯಾ ಸಮ್ಮಿಟ್ 2023ರ ಕೊನೆಯ ದಿನ ಉಪ ರಾಷ್ಟ್ರಪತಿ ಜಗದೀಪ್ ಧನಕರ್‌ ಈ ಅಪರೂಪದ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು. ಬಳಿಕ ಈ ಬಗ್ಗೆ ಮಾತನಾಡಿದ ಉಪ ರಾಷ್ಟ್ರಪತಿ ಜಗದೀಪ್ ಧನಕರ್‌, ನಮ್ಮ ವೀರರಿಗೆ ಗೌರವ ಸಲ್ಲಿಸುವ ಸಂಕೇತವಾಗಿ ನಮ್ಮ ಇತಿಹಾಸದಲ್ಲಿ ನಮ್ಮನ್ನು ಹೆಮ್ಮೆ ಪಡುವಂತೆ ಮಾಡಲು ಮತ್ತು ಹೆಮ್ಮೆಯ ಭಾರತೀಯರಾಗಿರಲು ಪ್ರತಿಜ್ಞೆ ಮಾಡೋಣ. ರಾಷ್ಟ್ರೀಯ ಹಿತಾಸಕ್ತಿಗಿಂತ ಹೆಚ್ಚೇನೂ ಇರಲು ಸಾಧ್ಯವಿಲ್ಲ. ಕಾಫಿ ಟೇಬಲ್‌ನ ಥೀಮ್ ತುಂಬಾ ಸೂಕ್ತವಾಗಿದೆ ಎಂದು ಹೇಳಿದರು.


ಅಲ್ಲದೇ, ಈ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಧೈರ್ಯ ತೋರಿದ ನ್ಯೂಸ್ 18 ನೆಟ್‌ವರ್ಕ್‌ನ ಗ್ರೂಪ್ ಎಡಿಟರ್ ರಾಹುಲ್ ಜೋಶಿ ಅವರ ಧೈರ್ಯಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ.  ‘ಮನ್ ಕಿ ಬಾತ್’ ಜನರ ಹಂತಕ್ಕೆ  ಎಲ್ಲೂ ಅಡೆತಡೆ ಇಲ್ಲದೆ ಯಶಸ್ವಿಯಾಗಿ  ತಲುಪಿದೆ. ನಾವು ವಿಶ್ವದ ಅತ್ಯಂತ ಕ್ರಿಯಾತ್ಮಕ ಪ್ರಜಾಪ್ರಭುತ್ವ, ಮತ್ತು ಅದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್‌ ಹೇಳಿದರು.

First published: